Breaking News

ಬೆಳಗಾವಿಗೆ ಸರ್ರನೇ ಬಂದು…ಭರ್ರನೇ ಹೋದರೂ, ಉಮಾಶ್ರೀ,ಹೇಳಿದ್ದೇನು ಗೊತ್ತಾ….!!

ಬೆಳಗಾವಿ-ಬೆಳಗಾವಿಗೆ ಮಾಜಿ ಸಚಿವೆ ಉಮಾಶ್ರೀ ಭೇಟಿ,ನೀಡಿ ಬೆಳಗಾವಿ ಜಿಲ್ಲೆಯಲ್ಲಿ ಮೂವರು ನೇಕಾರರ ಆತ್ಮಹತ್ಯೆ ಮಾಡಿಕೊಂಡಿದ್ದು , ಆತ್ಮಹತ್ಯೆ ಮಾಡಿಕೊಂಡ ನೇಕಾರರ ಮನೆಗಳಿಗೆ ಮಾಜಿ ಸಚಿವೆ ಉಮಾಶ್ರೀ ಭೇಟಿ ನೀಡಿ ಸಾಂತ್ವನ ಹೇಳಿದರು.

ಬೆಳಗಾವಿಯ ವಡಗಾವಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ನೇಕಾರ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳಿದ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಉಮಾಶ್ರೀ, ಸಿಎಂ ಮನಸ್ಸು ಮಾಡಿದ್ರೇ ತಕ್ಷಣ ಪರಿಹಾರ ಘೋಷಣೆ ಮಾಡಬಹುದು, ಜಿಎಸ್‌ಟಿ ಮತ್ತು ನೋಟ್ ಬ್ಯಾನ್ ನಿಂದ ನೇಕಾರರು ಸಂಕಷ್ಟಕ್ಕೆ ಸಿಲುಕಿದ್ದರು, ಇದೀಗ ಕೊರೊನಾ ಬಂದು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪೂರ್ವಭಾವಿ ಸಿದ್ದತೆ ಇಲ್ಲದೆ ಕೊರೊನಾ ಪರಿಸ್ಥಿತಿ ಎದುರಿಸಬೇಕಾಯಿತು ನೆರವಿಗೆ ಧಾವಿಸಬೇಕಾದ,ರಾಜ್ಯ, ಕೇಂದ್ರ ಸರ್ಕಾರಗಳು ನೇಕಾರರು ಹಾಗು ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿವೆ ಎಂದು ಉಮಾಶ್ರೀ ತೀವ್ರ ವಾಗ್ದಾಳಿ ನಡೆಸಿದರು.

ವಿಶ್ವ ಆರೋಗ್ಯ ಸಂಸ್ಥೆ ಹೇಳಿದ ಹಾಗೇ ಡಿಸೆಂಬರ್ ನಲ್ಲಿ ಲಾಕ್ ಡೌನ್ ಮಾಡಬೇಕಿತ್ತು, ಲಾಕ್‌ಡೌನ್ ಮುನ್ನವೂ ನೇಕಾರರ ಪರಿಸ್ಥಿತಿ ಏನೂ ಚೆನ್ನಾಗಿರಲಿಲ್ಲ, ಮಾಡಿದ ಸಾಲವನ್ನು ತೀರಿಸಲು ನೇಕಾರರಿಗೆ ಆಗುತ್ತಿಲ್ಲ, ಸಂಕಷ್ಟದಲ್ಲಿರುವ ನೇಕಾರರಿಗೆ ಸರ್ಕಾರ ಪರಿಹಾರ ಕೊಡದಿರುವುದು ಖೇದಕರ ಸಂಗತಿಯಾಗಿದ್ದು, ಮೃತ ನೇಕಾರರ ಕುಟುಂಬಕ್ಕೆ ಸರ್ಕಾರ ತಕ್ಷಣ ಪರಿಹಾರ ಕೊಡಬೇಕು ಎಂದು ಉಮಾಶ್ರೀ ಒತ್ತಾಯಿಸಿದರು.

ರೈತರು ಆತ್ಮಹತ್ಯೆ ಮಾಡಿಕೊಂಡಾಗ ನಮ್ಮ ಸರ್ಕಾರ 5 ಲಕ್ಷ ಪರಿಹಾರ ಕೊಟ್ಟಿತ್ತು, ಲೀಡ್ ಬ್ಯಾಂಕ್ ಮ್ಯಾನೇಜರ್ ಕರೆದು ಸಭೆ ನಡೆಸಬೇಕು, ನೇಕಾರರಿಂದ ಸಾಲ ವಸೂಲಿ ಮಾಡಬೇಡಿ ಅಂತಾ ತಾಕೀತು ಮಾಡಬೇಕು, ಆರ್ಥಿಕವಾಗಿ ಸಬಲೀಕರಣ ಆಗುವ ಪ್ಯಾಕೇಜ್ ಘೋಷಣೆ ಮಾಡಬೇಕು, ಎಂದು ಉಮಾಶ್ರೀ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಜನಪ್ರತಿನಿಧಿಗಳು ಸಹ ನೇಕಾರರ ಬಗ್ಗೆ ಗಮನ ಹರಿಸುತ್ತಿಲ್ಲ, ನೇಕಾರರ ಸಾಲಾಮನ್ನಾ ಘೋಷಣೆ ಮಾಡಿದರೂ ಘೋಷಣೆ ಒಂದು ಆದೇಶ ಇನ್ನೊಂದು ಆಗಿದೆ. ಪ್ರವಾಹ ಮತ್ತು ಕೊರೊನಾ ವಿಚಾರದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ, ಸರ್ಕಾರ ಜನರ ದಿಕ್ಕು ತಪ್ಪಿಸಿ ಮೋಸ ಮಾಡುತ್ತಿದೆ. ಮೂಗಿಗೆ ತುಪ್ಪ ಸವರುವ ರೀತಿ ಆದೇಶ ಮಾಡುವುದನ್ನು ಬಿಡಿ, ಯಡಿಯೂರಪ್ಪ ಅವರಿಗೆ ಕೈ ಮುಗಿದು ಮನವಿ ಮಾಡ್ತೀನಿ ಎಂದರು ಉಮಾಶ್ರೀ.

ಆತ್ಮಹತ್ಯೆ ಮಾಡಿಕೊಂಡ ಕುಟುಂಬಗಳ ನೆರವಿಗೆ ಬನ್ನಿ, ಸಂಕಷ್ಟದಲ್ಲಿರುವ ನೇಕಾರರ ಸಮಸ್ಯೆ ಬಗೆಹರಿಸಿ ಎಂದು ಉಮಾಶ್ರೀ ಮನವಿ ಮಾಡಿಕೊಂಡರು

Check Also

ಶ್ರೀ ಮಹಾಲಕ್ಷ್ಮೀ ಜಾತ್ರೆ, ಭಂಡಾರ ಇಲ್ಲ….,ಬ್ಯಾನರ್ ಕೂಡಾ ಬ್ಯಾನ್….!!!

ಬೆಳಗಾವಿ: ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಸಿದ್ಧಿ ಪಡೆದಿರುವ ಬೆಳಗಾವಿ ತಾಲೂಕಿನ ಸುಳೇಭಾವಿ ಗ್ರಾಮದ ಶ್ರೀ ಮಹಾಲಕ್ಷ್ಮೀ …

Leave a Reply

Your email address will not be published. Required fields are marked *