Breaking News

LOCAL NEWS

ಮಾದ್ಯಮ ಮಿತ್ರರಿಗೂ ಎನರ್ಜಿ ಬರುವ ಗುಳಗಿ ಕೊಟ್ರು….!!

ಕೊರೊನಾ: ಮಾಧ್ಯಮ ಪ್ರತಿನಿಧಿಗಳಿಗೆ ರೋಗ ಪ್ರತಿಬಂಧಕ ಆರ್ಸೆನಿಕಮ್ ಆಲ್ಬಮ್ ಮಾತ್ರೆ ವಿತರಣೆ ಬೆಳಗಾವಿ, ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜನಜಾಗೃತಿ ಮೂಡಿಸುತ್ತಿರುವ ಮಾಧ್ಯಮ‌ ಪ್ರತಿನಿಧಿಗಳಿಗೆ ಹಾಗೂ ಅವರ ಕುಟುಂಬದವರಿಗೆ ಆಯುಷ್ ಇಲಾಖೆಯಿಂದ ಅನುಮೋದಿತ ರೋಗ ಪ್ರತಿಬಂಧಕ ಶಕ್ತಿ ಹೆಚ್ಚಿಸುವ ಆರ್ಸೆನಿಕಮ್ ಆಲ್ಬಮ್-30 ಎಂಬ ಮಾತ್ರೆಗಳನ್ನು ವಿತರಿಸಲಾಯಿತು. ಭರತೇಶ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ, ಶಿವಬಸವ ಜ್ಯೋತಿ ಹೋಮಿಯೋಪಥಿ ಮಹಾವಿದ್ಯಾಲಯ, ಎ.ಎಂ.ಶೇಖ್ ಹೋಮಿಯೋಪಥಿ ಮಹಾವಿದ್ಯಾಲಯ ಹಾಗೂ ಕೆ.ಎಲ್.ಇ.ಹೋಮಿಯೋಪಥಿ ಮಹಾವಿದ್ಯಾಲಯ, ಜಿಲ್ಲಾ ಆಯಷ್ ಇಲಾಖೆ, ಜಿಲ್ಲಾ …

Read More »

ತಾಯಿ ಅಂಜಲಿ ಖಾನಾಪೂರ ಕ್ಷೇತ್ರವೇ ಇವರ ಖರೇ ಖರೇ ಫ್ಯಾಮಿಲಿ…..!!!

ಬೆಳಗಾವಿ- ಆಗರ್ಭ ಶ್ರೀಮಂತ ಮನೆತನದಲ್ಲಿ ಹುಟ್ಟಿ ಬೆಳೆದು,MBBS ಪದವಿ ಪಡೆದು ಡಾಕ್ಟರ್ ಆಗಿ ನಂತರ, ಪೋಲೀಸ್ ಅಧಿಕಾರಿಯ ,ಶ್ರೀಮತಿಯಾಗಿ,ಮನೆಯಲ್ಲಿದ್ದುಕೊಂಡು ಎಂಜಾಯ್ ಮಾಡಬಹುದಿತ್ತು ಆದ್ರೆ ಆ ಅಂಜಲಿತಾಯಿ ಸ್ವಾರ್ಥಸುಖ ಬಯಸದೇ ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ಖಾನಾಪೂರ ಕ್ಷೇತ್ರದಲ್ಲಿ ಸೇವೆ ಮಾಡಿ ಅದೇ ಕ್ಷೇತ್ರದ ಶಾಸಕಿಯಾಗಿರುವ ಅಂಜಲಿತಾಯಿಯ ಸೇವೆ,ಅಮೋಘ ಅನನ್ಯ,ಅಪ್ರತಿಮ ಎನ್ನುವದರಲ್ಲಿ ಸಂಶಯವೇ ಇಲ್ಲ ಅಂಜಲಿ ನಿಂಬಾಳ್ಕರ್ ಖಾನಾಪೂರ ಕ್ಷೇತ್ರವೇ ನನ್ನ ಫ್ಯಾಮಿಲಿ ಎನ್ನುವ ರೀತಿಯಲ್ಲಿ ಕ್ಷೇತ್ರದ ಜನರಿಗೆ ಹತ್ತಿರವಾಗಿದ್ದಾರೆ.ನಾನು ನಿಮ್ಮವಳು ,ನಿಮ್ಮ ಮನೆಯ …

Read More »

ಇಂದು ರಾತ್ರಿ 8 ಗಂಟೆಗೆ ಪ್ರದಾನಿ ನರೇಂದ್ರ ಮೋದಿ ಭಾಷಣ

ಬೆಳಗಾವಿ- ಮೇ 17 ಕ್ಕೆ ದೇಶದಲ್ಲಿ ಲಾಕ್ ಡೌನ್ ಇರುವ ಹಿನ್ನೆಲೆಯಲ್ಲಿ ಇಂದು ರಾತ್ರಿ 8 ಗಂಟೆಗೆ ಪ್ರದಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಮೇ 17 ರ ನಂತರ ದೇಶದಲ್ಲಿ ಲಾಕ್ ಡೌನ್ ಮುಂದುವರೆಯುತ್ತಾ ? ಅಥವಾ ಸಡಲಿಕೆ ಆಗುತ್ತಾ ಎನ್ನುವದರ ಬಗ್ಗೆ ಪ್ರದಾನಿ ನರೇಂದ್ರ ಮೋದಿ ಮಾತನಾಡುವ ಸಾಧ್ಯತೆ ಇದೆ . ಇಂದು ರಾತ್ರಿ 8 ಗಂಟೆಗೆ ಪ್ರದಾನಿ ಮೋದಿ ಅವರು ನೀಡಲಿರುವ ಸಂದೇಶ ,ಮತ್ತು ಆದೇಶ …

Read More »

ಕೊಳವೆಬಾವಿಗೆ ಬಿದ್ದಿದ್ದ ರೈತನ ಮೃತದೇಹ ಹೊರತೆಗೆಯಲಾಗಿದೆ: ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ

  ಬೆಳಗಾವಿ,  ರಾಯಬಾಗ ತಾಲ್ಲೂಕಿನ ಸುಲ್ತಾನಪುರದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ ರೈತ ಲಕ್ಕಪ್ಪ ದೊಡಮನಿ ಅವರ ಮೃತದೇಹವನ್ನು ನಿರಂತರ ಕಾರ್ಯಾಚರಣೆ ಮೂಲಕ ಹೊರತೆಗೆಯಲಾಗಿದೆ. ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಸ್ವತಃ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ಘಟನೆಯ ಬಗ್ಗೆ ತನಿಖೆ ನಡೆದಿದ್ದು, ಆಕಸ್ಮಿಕವೋ ಅಥವಾ ಆತ್ಮಹತ್ಯೆಯೇ ಎಂಬುದು ತನಿಖೆಯ ಬಳಿಕ ಸ್ಪಷ್ಟವಾಗಲಿದೆ ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ತಿಳಿಸಿದ್ದಾರೆ. ಅಗ್ನಿಶಾಮಕ ದಳ, ಪೊಲೀಸ್ ಹಾಗೂ ಎನ್.ಡಿ.ಆರ್.ಎಫ್. ತಂಡಗಳು …

Read More »

ಯಾವ ಊರಲ್ಲಿ ಎಷ್ಟು ಜನ ಸೊಂಕಿತರು,ಎಷ್ಟು ಜನ ಡಿಸ್ಚಾರ್ಜ್ ವಿವರ ಇಲ್ಲಿದೆ

ಬೆಳಗಾವಿ ಜಿಲ್ಲೆಯಲ್ಲಿ 11-5-2020 ರವರೆಗೆ ಒಟ್ಟು 107 ಜನರು ಕೋವಿಡ್-19 ಸೋಂಕಿತರು ಪತ್ತೆಯಾಗಿರುತ್ತಾರೆ. ಸೋಂಕಿತರ ತಾಲ್ಲೂಕುವಾರು ಪ್ರಕರಣಗಳ ವಿವರ ಈ ಕೆಳಗಿನಂತಿದೆ. ——————————————————————– 1. ಬೆಳಗಾವಿ ತಾಲ್ಲೂಕು ಒಟ್ಟು- 58 * ಹಿರೇಬಾಗೇವಾಡಿ-48 * ಬೆಳಗುಂದಿ-1 * ಯಳ್ಳೂರ-1 * ಕ್ಯಾಂಪ್/ಕಸಾಯಿಗಲ್ಲಿ-5 * ಪೀರನವಾಡಿ- 1 * ಅಮನ್ ನಗರ-1 *ಆಝಾದ್ ಗಲ್ಲಿ-1 2. ರಾಯಬಾಗ ತಾಲ್ಲೂಕು * ಕುಡಚಿ-22 3. ಹುಕ್ಕೇರಿ ತಾಲ್ಲೂಕು * ಸಂಕೇಶ್ವರ-5 4. ನಿಪ್ಪಾಣಿ(ಕ್ವಾರಂಟೈನ್ …

Read More »

ಹೊಲದಲ್ಲಿ ಕೊರೆದ ಕೊಳವೆ ಬಾವಿಗೆ, ನೀರು ಬರಲಿಲ್ಲ ಅಂತಾ ಅದೇ ಕೊಳವೆ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ರೈತ…

ಬೆಳಗಾವಿ-ರಾಯಬಾಗ ತಾಲ್ಲೂಕಿನ ಸುಲ್ತಾನಪುರ್ ಗ್ರಾಮದಲ್ಲಿ ತನ್ನ ಹೊಲದಲ್ಲಿ ಕೊಳವೆ ಬಾವಿ ಕೊರೆದ ರೈತನೊಬ್ಬ ಕೊಳವೇ ಬಾಯಿಯಲ್ಲಿ ನೀರು ಬರಲಿಲ್ಲ ಅಂತಾ ಮನನೊಂದು ಅದೇ ಕೊಳವೆ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸ್ಥಳಕ್ಕೆ ರಾಯಬಾಗ ತಹಶಿಲ್ದಾರ ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ ಲಕ್ಕಪ್ಪ ದೊಡ್ಡಮನಿ ಎಂಬಾ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶವ ಹೊರ ತೆಗೆಯಲು ಜೆಸಿಬಿಯಿಂದ ಕೊಳವೆ ಬಾವಿ ಪಕ್ಕದಲ್ಲಿ ಗುಂಡಿ ಅಗೆದು ಶವ ಹೊರತೆಗೆಯಲು ಅಗ್ನಿಶಾಮಕ …

Read More »

ಮೇ 15 ರ ಬಳಿಕ ಬೆಳಗಾವಿ ನಗರದ ಕಂಟೈನ್ಮೇಂಟ್ ಝೋನ್ ಇರುವುದಿಲ್ಲ

ಕೋವಿಡ್-೧೯: ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಸಭೆ ———————————————————- ಗಡಿ ಪ್ರವೇಶಿಸುವ ಜನರನ್ನು ಅವರ ಜಿಲ್ಲೆಗಳಿಗೆ ಕಳುಹಿಸಲು ನಿರ್ದೇಶನ ಬೆಳಗಾವಿ,-ನೆರೆಯ ರಾಜ್ಯದಿಂದ ಬೆಳಗಾವಿ ಜಿಲ್ಲೆಗೆ ಆಗಮಿಸುವ ಜನರನ್ನು ತಪಾಸಣೆ ನಡೆಸಿದ ಬಳಿಕ ಅವರನ್ನು ಸಂಬಂಧಿಸಿದ ಜಿಲ್ಲೆಗಳಲ್ಲಿ ಕ್ವಾರಂಟೈನ್ ಮಾಡುವ ಅಗತ್ಯವಿದೆ ಎಂದು ಈಗಾಗಲೇ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರಲಾಗಿದೆ. ಆದ್ದರಿಂದ ಗಡಿ ಜಿಲ್ಲೆ ಬೆಳಗಾವಿಗೆ ಆಗಮಿಸುವ ಇತರೆ ಜಿಲ್ಲೆಯ ಜನರನ್ನು ಆಯಾ ಜಿಲ್ಲೆಯ ನೋಡಲ್ ಅಧಿಕಾರಿಗಳ ಮೂಲಕ ಕಳಿಸಿಕೊಡಬೇಕು …

Read More »

ಕೊರೋನಾ: ಎರಡನೇಯ ರಾಜಧಾನಿಗೆ ಎರಡನೇಯ ಸ್ಥಾನ….

ಇಂದು ಭಾನುವಾರದ ಸಂಜೆ ಹೆಲ್ತ್ ಬುಲಿಟೀನ್ ಬಿಡುಗಡೆಯಾಗಿದ್ದು ಬೆಳಗಾವಿ ಜಿಲ್ಲೆಯ ಯಾವುದೇ ಪಾಸಿಟೀವ್ ಕೇಸ್ ಪತ್ತೆಯಾಗಿಲ್ಲ. ಐ ಸಲ್ಯುಟ್ ಡಿಸಿ.,…ಬಿಗ್ ಸಲ್ಯುಟ್ ಟು ನಿಪ್ಪಾಣಿ ಪೋಲೀಸ್….!!!! ಬೆಳಗಾವಿ ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿಯವರ ಕ್ವಾರಂಟೈನ್ ಸಮಯ ಪ್ರಜ್ಞೆ ; ಪೊಲೀಸ್ ರ ಕರ್ತವ್ಯ ಪ್ರಜ್ಞೆ : ತಪ್ಪಿದ ಕೊರೊನಾ ಸ್ಪೋಟದ ಭಾರೀ ಅನಾಹುತ* ಇಂದು 22 ಜನ ಕೊರೊನಾ ಸೋಂಕಿತರ ಸಂಖ್ಯೆಯೇ ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಆಘಾತಕಾರಿ ಸಂಗತಿಯಾಗಿದೆ. ಆದರೆ, ಇದೇ …

Read More »

ಬೆಳಗಾವಿ ಜಿಲ್ಲೆಗೆ ಅಜ್ಮೇರ್ ಶಾಕ್ …ಅಜ್ಮೇರ್ ದಿಂದ ಬೆಳಗಾವಿಗೆ ಮರಳಿದ 22 ಜನರಿಗೆ ಸೊಂಕು

ಬೆಳಗಾವಿ- ಇಂದು ಭಾನುವಾರ ಬೆಳಗಾವಿ ಜಿಲ್ಲೆಯ ಜನ ಸಂಡೇ ಮೂಡ್ ನಲ್ಲಿರುವಾಗಲೇ ರಾಜ್ಯದ ಹೆಲ್ತ ಬುಲಿಟೀನ್ ದೊಡ್ಡ ಆಘಾತವೇ ನೀಡಿದೆ .ಇಂದು ಬಿಡುಗಡೆಯಾದ ಮಿಡ್ ಡೇ ಹೆಲ್ತ್ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಅಜ್ಮೇರದಿಂದ ಬೆಳಗಾವಿಗೆ ಮರಳಿಬಂದ 22 ಜನರಿಗೆ ಕೊರೋನಾ ಸೊಂಕು ಇರುವದು ದೃಡವಾಗಿದೆ ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ ನೂರರ ಗಡಿ ದಾಟಿ 107 ಕ್ಕೇ ಏರಿದೆ ಕೊರೋನಾ ವೈರಸ್ ಇಂದು ಬೆಳಗಾವಿ ಜಿಲ್ಲೆಯಲ್ಲಿ ಮಹಾ ದಾಳಿ …

Read More »

ಅಪರಿಚಿತ ವಾಹನ ಹಾಯ್ದು ಸವದತ್ತಿ ಠಾಣೆ ಎಎಸ್‌ಐ ದುರ್ಮರಣ

ಬೆಳಗಾವಿ-ಅಪರಿಚಿತ ವಾಹನ ಹಾಯ್ದು ಸವದತ್ತಿ ಠಾಣೆ ಎಎಸ್‌ಐ ಸ್ಥಳದಲ್ಲೇ ಸಾವನ್ನೊಪ್ಪಿದ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆ ಸವದತ್ತಿ ಠಾಣೆ ಎಎಸ್ಐ ಯಲ್ಲಪ್ಪ ತಳವಾರ(59) ಸಾವನ್ನೊಪ್ಪಿದ್ದಾರೆ. ಕೆಲಸ ಮುಗಿಸಿಕೊಂಡು ಮನೆಗೆ ವಾಪಸಾಗುತ್ತಿದ್ದರೆಂಬ ಮಾಹಿತಿ ಲಭ್ಯವಾಗಿದ್ದು ಘಟನಾ ಸ್ಥಳಕ್ಕೆ ಸವದತ್ತಿ ಠಾಣೆಯ ಪೋಲೀಸ್ ಅಧಿಕಾರಿಗಳು ತೆರಳಿ ತನಿಖೆ ಆರಂಭಿಸಿದ್ದಾರೆ. ಸವದತ್ತಿ ಪಟ್ಟಣದ ಹೊರ ವಲಯದಲ್ಲಿ ಅಪಘಾತ ನಡೆದಿದೆ ಎಂದು ತಿಳಿದು ಬಂದಿದೆ. ಮೃತ ಯಲ್ಲಪ್ಪ ತಳವಾರ್‌ ಬೈಲಹೊಂಗಲ ತಾಲೂಕಿನ ಅನಿಗೋಳ ನಿವಾಸಿ ಎನ್ನಲಾಗಿದೆ. …

Read More »