ಮರ್ಕಜ್ ಧಾರ್ಮಿಕ ಸಭೆ: ಜಿಲ್ಲೆಯ ೬೨ ಜನರಲ್ಲಿ ಸೋಂಕಿನ ಲಕ್ಷಣಗಳಿಲ್ಲ: ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಬೆಳಗಾವಿ, ಏ.೧(ಕರ್ನಾಟಕ ವಾರ್ತೆ): ದೆಹಲಿಯ ಮರ್ಕಜ್ ಧಾರ್ಮಿಕ ಸಭೆಗೆ ಹೋಗಿಬಂದಿರುವ ಬೆಳಗಾವಿ ಜಿಲ್ಲೆಯ ೬೨ ಜನರ ಮಾಹಿತಿ ಲಭಿಸಿದೆ. ಯಾರಿಗೂ ಸೋಂಕಿನ ಲಕ್ಷಣಗಳಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ. ೬೨ ಜನರ ಪೈಕಿ ಡಯಾಬಿಟಿಸ್, ಅಸ್ಥಮಾ, ಹೈಪರ್ ಟೆನ್ಷನ್ ಹೊಂದಿರುವ ಐವತ್ತಕ್ಕೂ ಅಧಿಕ ವಯೋಮಾನದ ೨೭ ಜನರನ್ನು ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ಆಸ್ಪತ್ರೆಗೆ ಕರೆತಂದು ಗಂಟಲು …
Read More »ಬೆಳಗಾವಿಯ, ಬಿಟಿ ಪಾಟೀಲ ಪರಿವಾರ…ಪಿಎಂ ನಿಧಿಗೆ ಕೋಟಿ ರೂ ಪರಿಹಾರ….!!!
ಬೆಳಗಾವಿ- ಬೆಳಗಾವಿಯ ಪ್ಯಾಟ್ಸನ್ ಗ್ರೂಪ್ ಯಾರಿಗೆ ತಾನೇ ಗೊತ್ತಿಲ್ಲ, ಬಿಟಿ ಪಾಟೀಲ ಸಾರಥ್ಯದ ಈ ಗ್ರೂಪ್ ಈಗ ದೇಶದ ಗಮನ ಸೆಳೆದಿದೆ. ಬೆಳಗಾವಿಯ ಪ್ಯಾಟ್ಸನ್ ಗ್ರೂಪ್ ನ ಬಾಳಾಸಾಹೇಬ್ ಪಾಟೀಲ್ (ಬಿ.ಟಿ. ಪಾಟೀಲ) ಒಂದು ಕೋಟಿ ರೂ ಅನುದಾನವನ್ನು ಪ್ರಧಾನಂತ್ರಿಗಳ ಕೊರೋನಾ ಪರಿಹಾರ ನಿಧಿಗೆ ನೀಡುವ ಮೂಲಕ ಬೆಳಗಾವಿಯ ಗೌರವ ರಾಷ್ಟ್ರ ಮಟ್ಟದಲ್ಲಿ ಹೆಚ್ಚಿಸಿ ಮಾನವೀಯತೆ ಮೆರೆದಿದ್ದಾರೆ. ಉತ್ತರ ಕರ್ನಾಟಕದಲ್ಲಿಯೇ ವ್ಯೆಯಕ್ತಿಕವಾಗಿ ಒಂದು ಕೋಟಿ ,ಅತೀ ಹೆಚ್ಚು ಧನ …
Read More »ದಿಲ್ಲಿಯಿಂದ ಬೆಳಗಾವಿ ಹಳ್ಳಿಗೆ ಹಬ್ಬಿದ ಆತಂಕ….ಈ ಹಳ್ಳಿ ಈಗ ಸಂಪೂರ್ಣ ಲಾಕ್ ಡೌನ್….!!!
ಬೆಳಗಾವಿ-ದೆಹಲಿಯ ನಿಜಾಮುದ್ದೀನ್ ಜಮಾತ್ ಮಸೀದಿ ಧರ್ಮಸಭೆಯ ಎಫೆಕ್ಟ್‌ಗೆ ಈಗ ಬೆಳಗಾವಿ ಜಿಲ್ಲೆಯ ಹಳ್ಳಿಯೊಂದರ ಮೇಲೂ ಆಗಿದ್ದು ಈ ಹಳ್ಳಿ ಈಗ ಸಂಪೂರ್ಣವಾಗಿ ಲಾಕ್ ಡೌನ್ ಆಗಿದೆ. ದೆಹಲಿಯ ಜಮಾತ್‌ನಲ್ಲಿ ಭಾಗವಹಿಸಿ ಬಂದವನ ಜತೆ ಶಿಂಧಿಕುರಬೇಟನ 10 ಜನರು ಪ್ರಯಾಣಿಸಿದ ಮಾಹಿತಿ ಗ್ರಾಮದಲ್ಲಿ ಹರಿದಾಡುತ್ತಿದ್ದಂತೆಯೇಶಿಂಧಿಕುರಬೇಟ ಗ್ರಾಮದಲ್ಲಿ ಆ 10 ಜನರಿಗೂ ಸಾಮೂಹಿಕ ಕ್ವಾರಂಟೈನ್ ಮಾಡಲಾಗಿದೆ. ಶಿಂಧಿಕುರಬೇಟನ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ 10 ಜನರಿಗೆ ಸಾಮೂಹಿಕ ಕ್ವಾರಂಟೈನ್ ಮಾಡಲಾಗಿದೆ. ನಿನ್ನೆ ಮಧ್ಯರಾತ್ರಿ 1 …
Read More »ಬೆಳಗಾವಿಗೆ ಬಂದವರು ಇಂಡೋನೆಷಿಯಾದವರು….!!!
ಬೆಳಗಾವಿ- ದೇಶಾದ್ಯಂತ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಈ ವರೆಗೆ ಯಾವುದೇ ಕೊರೊನಾ ಸೊಂಕಿತ ವ್ಯಕ್ತಿಗಳು ಪತ್ತೆಯಾಗಿಲ್ಲ. ಆದರೇ ಬೆಳಗಾವಿಗೆ ಬಂದಿರುವ ಇಂಡಿನೇಷಿಯಾದ ತಬಲಿಗ್ ಜಮಾತ್ ನ 10 ಜನ ಧರ್ಮ ಪ್ರಚಾರರನ್ನು ಮುನ್ನೆಚ್ಚೆರಿಕೆ ಕ್ರಮವಾಗಿ ಕ್ವಾರಂಟೈನ್ ಮಾಡಲಾಗಿದೆ. ಇಂಡೋನೇಶಿಯಾದಿಂದ ದೆಹಲಿಗೆ ಬಂದು ದೆಹಲಿಯ ಬಂಗ್ಲೆವಾಲಿ ಮಸೀದಿಯ ನಿಜಾಮುದ್ದಿನ್ ಮರಕಜ್ ನಲ್ಲಿ ನಡೆದ ಧರ್ಮ ಸಭೆಯಲ್ಲಿ ಪಾಲ್ಗೊಂಡಿದ್ದರು. ನಂತರ ಬಂಗ್ಲೆವಾಲಿ ಮಸೀದಿಯ ಧಾರ್ಮಿಕ …
Read More »ಶೆರೆ ಅಂಗಡಿ ಚಾಲೂ ಮಾಡ್ರಿ ಅಂತ ಜನ ನನಗೆ ಫೋನ್ ಮಾಡಾಕತಾರ್ರೀ….
ಶೆರೆ ಅಂಗಡಿ ಚಾಲೂ ಮಾಡ್ರಿ ಅಂತ ಜನ ನನಗೆ ಫೋನ್ ಮಾಡಾಕತಾರ್ರೀ…. ಎರಡು ದಿನ ಆಯ್ತು ಜನ ನನಗ ಫೋನ್ ಮಾಡಿ ಶೆರೆ ಅಂಗಡಿ ಚಾಲೂ ಮಾಡ್ರಿ ಅಂತ ನನಗ ಪೋನ್ ಮಾಡಾಕತಾರ…ನಮ್ಮ ಜನಕ್ಕೆ ಸಮಾಧಾನ, ಇಲ್ಲ ಜನ ತಾಳ್ಮೆ ಕಳೆದುಕೊಳ್ಳಬಾರದು ಎಂದು ಬೆಳಗಾವಿಯಲ್ಲಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಪತ್ರಿಕಾಗೋಷ್ಠಿ ಯಲ್ಲಿ ಹಾಸ್ಯ ಚಟಾಕಿ ಹಾರಿಸಿ,ನಕ್ಕಿದ್ದೇ ನಕ್ಕಿದ್ದು… *ಕೋವಿಡ್-19 ನಿಯಂತ್ರಣ: ಬೆಳಗಾವಿಯಲ್ಲಿ ಸಚಿವ ಜಗದೀಶ ಶೆಟ್ಟರ …
Read More »ಆಹಾರ ಸಾಮುಗ್ರಿಗಳನ್ನು ನೇರವಾಗಿ ವಿತರಣೆ ಮಾಡುವಂತಿಲ್ಲ
ಆಹಾರ ಸಾಮಗ್ರಿಗಳ ನೇರ ವಿತರಣೆಗೆ ನಿರ್ಬಂಧ ————————————————————— ಆಹಾರ ಸಾಮಗ್ರಿ ಮಹಾನಗರ ಪಾಲಿಕೆಗೆ ಸಲ್ಲಿಸಲು ಸಂಘ-ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ಮನವಿ ಬೆಳಗಾವಿ,-ಕೋವಿಡ್-೧೯ ತಡೆಗಟ್ಟುವಿಕೆ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಈ ಸಂದರ್ಭದಲ್ಲಿ ಸಂಘ-ಸಂಸ್ಥೆಗಳು ಸಿದ್ಧಪಡಿಸಿದ ಆಹಾರ ಅಥವಾ ಆಹಾರ ಸಾಮಗ್ರಿಗಳನ್ನು ಸಾರ್ವಜನಿಕರಿಗೆ ನೇರವಾಗಿ ವಿತರಿಸುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಈ ನಿರ್ಬಂಧ ವಿಧಿಸಲಾಗಿರುತ್ತದೆ. ಆಹಾರ ಸಾಮಗ್ರಿಗಳನ್ನು ವಿತರಿಸಲು ಬಯಸುವ ಸಂಘ-ಸಂಸ್ಥೆಗಳು ಮಹಾನಗರ …
Read More »ಅಸಂಘಟಿತ ಕಾರ್ಮಿಕರಿಗೆ ಸ್ಯಾನಿಟೈಸರ್, ಮಾಸ್ಕ್ ಖರೀದಿಗೆ ೮ ಲಕ್ಷ ಅನುದಾನ
ಬೆಳಗಾವಿ,-ಕೋವಿಡ್-೧೯ ಹಿನ್ನೆಲೆಯಲ್ಲಿ ಜಿಲ್ಲೆಯ ಕಟ್ಟಡ ಕಾರ್ಮಿಕರು ಹಾಗೂ ಅಸಂಘಟಿತ ವಲಯದ ಕಾರ್ಮಿಕರಿಗೆ ಸ್ಯಾನಿಟೈಸರ್, ಮಾಸ್ಕ್ ಖರೀದಿಸಲು ಕಾರ್ಮಿಕ ಇಲಾಖೆಯ ವತಿಯಿಂದ ರೆಡ್ ಕ್ರಾಸ್ ಸಂಸ್ಥೆಗೆ ಎಂಟು ಲಕ್ಷ ರೂಪಾಯಿ ಚೆಕ್ ನೀಡಲಾಯಿತು. ಶಾಸಕ ಅನಿಲ್ ಬೆನಕೆ ಹಾಗೂ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರ ಸಮ್ಮುಖದಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ (ಮಾ.೩೧) ರೆಡ್ ಕ್ರಾಸ್ ಸಂಸ್ಥೆಗೆ ಚೆಕ್ ನೀಡಲಾಯಿತು. ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ …
Read More »ಬೆಳಗಾವಿಯ ಹತ್ತು ಜನ ದೆಹಲಿಯ ನಿಜಾಮುದ್ದೀನ್ ಗೆ ಹೋಗಿದ್ರು…ಅವರೆಲ್ಲ ಈಗ ಹೋಮ್ ಕೊರಂಟೈನ್ ದಲ್ಲಿ….
ದೆಹಲಿಯ ನಿಜಾಮುದ್ದೀನ್ ಮರಕಜ್ ಗೆ ಹೋಗಿ ಬಂದವರು ಬೆಳಗಾವಿಯಲ್ಲೂ ಇದ್ದಾರೆ…. ಬೆಳಗಾವಿ- ದೆಹಲಿಯ ತಬಲೀಗ್ ಜಮಾತಿನ ನಿಜಾಮುದ್ದೀನ್ ಮರಕಜ್ ಗೆ ಬೆಳಗಾವಿಯ ಹತ್ತು ಜನ ಹೋಗಿ ,ಬೆಳಗಾವಿಗೆ ಬಂದಿದ್ದು ಈ ಹತ್ತು ಜನರನ್ನು ಹೋಮ್ ಕೋರಂಟೈನ್ ನಲ್ಲಿ ಇಡಲಾಗಿದೆ ಎಂದು ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ತಿಳಿಸಿದ್ದಾರೆ ದೆಹಲಿಗೆ ಹೋಗಿ ಬೆಳಗಾವಿಗೆ ಬಂದಿರುವ ಹತ್ತು ಜನರನ್ನು ಹೋಮ್ ಕೊರಂಟೈನ್ ನಲ್ಲಿ ಇಟ್ಟು ಹದಿನಾಲ್ಕು ದಿನ ಕಳೆದಿದೆ.ಆದರೂ ಇವರಲ್ಲಿ ಕೊರೋನಾ ಸೊಂಕಿನ ಲಕ್ಷಣ ಕಂಡು …
Read More »ಲಾಕ್ ಡೌನ್ ಉಲ್ಲಂಘಿಸಿದ 66 ಜನರ ವಿರುದ್ಧ ಎಫ್. ಆಯ್. ಆರ್.
ಬೆಳಗಾವಿ- *ಬೆಳಗಾವಿ ಜಿಲ್ಲೆಯಲ್ಲಿ ಲಾಕ್‌ಡೌನ್ ಉಲ್ಲಂಘಿಸಿದ 496 ವಾಹನಗಳ ಸೀಜ್* ಮಾಡಲಾಗಿದ್ದು, ಈವರೆಗೆ ಬೆಳಗಾವಿ ಜಿಲ್ಲೆಯಲ್ಲಿ 66 ಎಫ್ಐಆರ್ ಪ್ರಕರಣಗಳು ದಾಖಲಾಗಿವೆ ಎಂದು ಬೆಳಗಾವಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ,ನಿಂಬರಗಿ ತಿಳಿಸಿದ್ದಾರೆ. ಲಾಕ್‌ಡೌನ್ ಉಲ್ಲಂಘಿಸಿದ 66 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಜಿಲ್ಲೆಯಲ್ಲಿ ಕಟ್ಡು ನಿಟ್ಟಾಗಿ ಲಾಕ್ ಡೌನ್ ಮಾಡಿದ್ದೇವೆ ಎಂದು ಬೆಳಗಾವಿ ಎಸ್‌ಪಿ ಲಕ್ಷ್ಮಣ್ ನಿಂಬರಗಿ ಹೇಳಿದರು. ಯಾರೂ ಸಹ ಲಾಕ್‌ಡೌನ್ ಆದೇಶ ಉಲ್ಲಂಘಿಸಬಾರದು ಲಾಕ್‌ಡೌನ್ ಆದೇಶ ಉಲ್ಲಂಘಿಸಿದವರ …
Read More »ರೇಲ್ವೆ ಬೋಗಿಗಳನ್ನು ಆಸ್ಪತ್ರೆ ಮಾಡ್ತಾರಂತೆ,ರೈಲು ಮಂತ್ರಿ ಸುರೇಶ ಅಂಗಡಿ…!!
ಬೆಳಗಾವಿ- ಬೆಳಗಾವಿಯ ಉದ್ಯಮಿಗಳ ಜೊತೆ ಕೇಂದ್ರ ಸಚಿವ ಸುರೇಶ್ ಅಂಗಡಿ ಸಭೆ ನಡೆಸಿದರು ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದ ಅವರು ಕಾರ್ಮಿಕರ ಸಂಬಳ ಪಾವತಿಗೆ ವ್ಯವಸ್ಥೆ ಮಾಡಲು ಉದ್ಯಮಿಗಳ ಜೊತೆ ಸಮಾಲೋಚನೆ ನಡೆಸಿದರು. ಕಾರ್ಮಿಕರಿಗೆ ಪಾಸ್ ಕೊಟ್ಟು ಸಂಬಳ ಪಾವತಿ ಮಾಡುವ ನಿಟ್ಟಿನಲ್ಲಿ ಚರ್ಚೆ ನಡೆಯಿತು ಬರುವ ಒಂದು ವಾರದಲ್ಲಿ ಕಾರ್ಮಿಕರಿಗೆ ಸಂಬಳ ಕೊಡಿಸುವ ಕುರಿತು ಕೇಂದ್ರ ರೈಲು ಸಚಿವ ಸುರೇಶ್ ಅಂಗಡಿ ಉದ್ಯಮಿಗಳಿಗೆ ಮನವರಿಕೆ ಮಾಡಿದರು.ನಂತರ …
Read More »