Breaking News

LOCAL NEWS

ರಾಜಕಾರಣದಲ್ಲಿ ವಾಗ್ವಾದ ಆಗೋದು ಕಾಮನ್, ಅದನ್ನೇ ವೈರತ್ವ ಅಂದುಕೊಂಡ್ರೆ ಮುರ್ಖತನ

.ಬೆಳಗಾವಿ- ಡಿಕೆಶಿ ಬೆಳಗಾವಿಯಲ್ಲಿ ಹಸ್ತಕ್ಷೇಪ ಮಾಡುವುದು ತಪ್ಪು. ನಾನು ಬೆಂಗಳೂರಿನಲ್ಲಿ ಹಸ್ತಕ್ಷೇಪ ಮಾಡೋದು ತಪ್ಪು.ಡಿಕೆಶಿ ಇರಲಿ ರಮೇಶ ಜಾರಕಿಹೊಳಿ ಇರಲಿ ನಮ್ಮ ಜಿಲ್ಲೆ ನಾವ್ ನೋಡ್ಕೋಬೇಕು ಎಂದು ಬೆಳಗಾವಿಯಲ್ಲಿ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ ನಗರದ ಸರ್ಕ್ಯುಟ್ ಹೌಸ್ ನಲ್ಲಿ ಅವರನ್ನು ಭೇಟಿಯಾದ ಮಾದ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ನಮ್ಮ ಸಮಸ್ಯೆ ಇದ್ದಾಗ ನಾವು ಕರೆದರೆ ಬರಲಿ ಅವರಾಗಿ ಹಸ್ತಕ್ಷೇಪ ಮಾಡಲು ನಾವು ಬಿಡಲ್ಲ. ಡಿಕೆಶಿ ಇರಲಿ ಯಾರೇ …

Read More »

ಬೇಡಿಕೆ ಈಡೇರಿಸದೇ ಉತ್ತರ ಕರ್ನಾಟಕಕ್ಕೆ ಕಾಲಿಡಬೇಡಿ. ಸಿಎಂ ಗೆ ಎಚ್ಚರಿಕೆ

ಬೆಳಗಾವಿ- ಐದು ದಿನಗಳ  ಸಿಎಂ ಕುಮಾರಸ್ವಾಮಿಗೆ ಉತ್ತರ ಕರ್ನಾಟಕ ಪ್ರವಾಸಕ್ಕೆ ಬೆಳಗಾವಿಯಲ್ಲಿ ವಿರೋಧ ವ್ಯಕ್ತವಾಗಿದೆ. ಉತ್ತರ ಕರ್ನಾಟಕ ಹೋರಾಟ ಸಮಿತಿಯಿಂದ ಸಿಎಂಗೆ ಎಚ್ಚರಿಕೆ ನೀಡಿದ್ದಾರೆ.ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಉತ್ತರ ಕರ್ನಾಟಕ ಹೋರಾಟ ಸಮಿತಿ ಮುಖಂಡರಾದ ನಾಗೇಶ ಗೋಲಶೆಟ್ಟಿ, ಅಡಿವೇಶ ಇಟಗಿ ಈ ಎಚ್ಚರಿಕೆ ನೀಡಿದ್ದು, ಸುವರ್ಣ ವಿಧಾನ ಸೌಧಕ್ಕೆ ಕಚೇರಿ ಸ್ಥಳಾಂತರಿಸದೆ ಉತ್ತರಕ್ಕೆ ಕಾಲಿಡಬೇಡಿ. ಎಂದು ಸಮೀತಿ ಎಚ್ಚರಿಕೆ ನೀಡಿದೆ ಮಠಾಧೀಶರ ನೇತ್ರತ್ವದಲ್ಲಿ ನಡೆದ ಹೋರಾಟದ ಸಂದರ್ಭದಲ್ಲಿ ಸಿಎಂ ಭರವಸೆ …

Read More »

ಪಕ್ಷದ ಒಳತಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧ- ಲಕ್ಷ್ಮೀ ಹೆಬ್ಬಾಳಕರ

ಬೆಳಗಾವಿ- ಮುಂಬರುವ ಲೋಕಸಭೆ ಚುನಾವಣೆ ಅಭ್ಯ ರ್ಥಿ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭವಿದೆ ಹೈಕಮಾಂಡ್ ಪಕ್ಷದ ಅಭ್ಯರ್ಥಿಯ ಆಯ್ಕೆ ಸ್ವಾತಂತ್ರ್ಯ ನೀಡಿದೆ ಸ್ಥಳೀಯ ಮುಖಂಡರ ಜತೆಗೆ ಇರೋ ಭಿನ್ನಾಭಿಪ್ರಾಯ ಇಲ್ಲಿಗೆ ಸಿಮೀತ ಈ ಜಗಳ ಲೋಕಸಭೆ ಚುನಾವಣೆ, ಪಕ್ಷದ ಸಂಘಟನೆ ಮೇಲೆ ಪರಿಣಾಮ ಬೀರುವದಿಲ್ಲ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅಭಿಪ್ರಾಯ ವ್ಯೆಕ್ತಪಡಿಸಿದ್ದಾರೆ ಪಕ್ಷದ ಒಳಿತಿಗಾಗಿ ತಗ್ಗಿ, ಬಗ್ಗಿ ನಡೆಯಲು ನಾನು ಸಿದ್ಧ …

Read More »

ಬೆಳಗಾವಿಯ ಉಜ್ವಲ ನಗರದಲ್ಲಿ ಗುಂಪು ಘರ್ಷಣೆ ಮಾಜಿ ನಗರಸೇವಕನಿಗೆ ಚೂರಿ ಇರಿತ

ಬೆಳಗಾವಿ- ಬೆಳಗಾವಿ ನಗರದ ಉಜ್ವಲ ನಗರದಲ್ಲಿ ಎರಡು ಗುಂಪುಗಳ ನಡುವೆ ಗುಂಪು ಘರ್ಷಣೆ ನಡೆದಿದ್ದು ಮಾಜಿ ನಗರಸೇವಕನಿಗೆ ಚೂರಿ ಇರಿತವಾದ ಘಟನೆ ಈಗ ಸಂಜೆ ನಡೆದಿದೆ ಉಜ್ವಲ ನಗರದಲ್ಲಿರುವ ಮಾಜಿ ನಗರಸೇವಕನ ಅಡ್ಡೆಯ ಹತ್ತಿರ ಈ ಘರ್ಷಣೆ ನಡೆದಿದ್ದು ಒಂದು ಗುಂಪು ಇನ್ನೊಂದು ಗುಂಪಿನ ಮೇಲೆ ದಾಳಿ ಮಾಡಿದ್ದು ಘರ್ಷಣೆಯಲ್ಲಿ ಮಾಜಿ ನಗರಸೇವಕರಾದ ಫಿರ್ದೋಸ್ ದರ್ಗಾ  ಗಾಯಗೊಂಡಿದ್ದು ಕೆ ಎಲ್ ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈ ಗಲಾಟೆಯಲ್ಲಿ ಹಾಲಿ …

Read More »

ಕತ್ತಿ ಸಹೋದರರ ಭದ್ರಕೋಟೆಗೆ ಕಾಂಗ್ರೆಸ್ ಲಗ್ಗೆ ಪ್ರಕಾಶ ಹುಕ್ಕೇರಿ ತವರಿನಲ್ಲಿ” ಕೈ”‘ ಕೊಟ್ಟ ಮತದಾರ

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ನಡೆದ ಸ್ಥಳೀಯ ಸಂಘ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸಮಬಲದ ಹೋರಾಟ ನಡೆದಿರುವದು ಸ್ಪಷ್ಟ ವಾಗಿದೆ ಹುಕ್ಕೇರಿ ಪುರಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಲಭಿಸಿದ್ದು ಸಂಕೇಶ್ವರ ಪುರಸಭೆ ಅತಂತ್ರ ವಾಗಿದ್ದು ಕತ್ತಿ ಸಹೋದರರ ಭದ್ರ ಕೋಟೆಗೆ ಲಗ್ಗೆ ಹಾಕಿದೆ ಸಂಕೇಶ್ವರದಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬ ನಿರ್ಣಾಯಕ ನಾಗಿದ್ದು ಪಕ್ಷೇತರ ಅಭ್ಯರ್ಥಿಯನ್ನು ಒಲಿಸಿ ಕೊಳ್ಳಲು ಕಸರತ್ತು ಆರಂಭವಾಗಿದೆ ಸಂಸದ ಪ್ರಕಾಶ …

Read More »

ನಾಪತ್ತೆಯಾದ ಯುವಕನ ಶವ ತಿಲ್ಲಾರಿ ಘಾಟಿನಲ್ಲಿ ಪತ್ತೆ

ಬೆಳಗಾವಿ- ಅಗಸ್ಟ10 ರಂದು ನಾಪತ್ತೆಯಾದ ಯುವಕನ ಶವ ಇಂದು ತಿಲ್ಲಾರಿ ಘಾಟ ಬಳಿ ಪತ್ತೆಯಾಗಿದ್ದು ತಿಳಕವಾಡಿ ಪೋಲೀಸರು ಸ್ಥಳಕ್ಕೆ ಧಾವಿಸಿದ್ದಾರೆ ಯಳ್ಳೂರ ರಸ್ತೆಯ ಅನ್ನಪೂರ್ಣೇಶ್ವರಿ ನಗರದ ನಿವಾಸಿ 27 ವರ್ಷದ ರಾಹುಲ್ ಶರಣಪ್ಪ ದಿವಟಗಿ ಎಂಬ ಯುವಕ ಅಗಸ್ಟ 10 ರಂದು ನಾಪತ್ತೆಯಾಗಿದ್ದ ಅದೇ ದಿನ ಆತನ ಅಪಹರಣ ನಡೆದಿತ್ತು ಎಂದು ಹೇಳಲಾಗಿದ್ದು ಡಿಳಕವಾಡಿ ಪೋಲೀಸರು ಮಿಸ್ಸಿಂಗ್ ಕಂಪ್ಲೇಂಟ್ ದಾಖಲು ಮಾಡಿಕೊಂಡು ಅಷ್ಡೊಂದು ಸಿರೀಯಸ್ ಆಗಿ ತೆಗೆದುಕೊಂಡಿರಲಿಲ್ಲ ಎಂದು ಹೇಳಲಾಗಿದೆ …

Read More »

ಸಂಕೇಶ್ವರದಲ್ಲಿ ಅಚ್ವರಿ ….ಹುಕ್ಕೇರಿಯಲ್ಲಿ ಕಾಂಗ್ರೆಸ್ ಗೆಲುವು ಭರ್ಜರಿ…!!!

ಬೆಳಗಾವಿ- ಜಿಲ್ಲೆಯ ಕತ್ತಿ ಸಹೋದರರ ಸಾಮ್ರಾಜ್ಯದಲ್ಲಿ ಅಚ್ಚರಿ ಫಲಿತಾಂಶ ಹೊರಬಿದ್ದಿದೆ ಹುಕ್ಕೆರಿಯಲ್ಲಿ ಕಾಂಗ್ರೆಸ್ 12 ಸ್ಥಾನಗಳನ್ನು ಗೆಲ್ಲೋದರ ಮೂಲಕ ಕೇಕೆ ಹಾಕಿದೆ ಹುಕ್ಕೇರಿಯಲ್ಲಿ ಕಾಂಗ್ರೆಸ್ 12 ಬಿಜೆಪಿ 8 ಮೂವರು ಪಕ್ಷೇತರ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ ಸಂಕೇಶ್ವರದಲ್ಲಿ ಬಿಜೆಪಿ 11 ಹಾಗು ಕಾಂಗ್ರೆಸ್ 11 ಸ್ಥಾನಪಡೆದು ಸಮಬಲದಲ್ಲಿದ್ದರೆ ಇಲ್ಲಿ ಓರ್ವ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದು ಪಕ್ಷೇತರ ಅಭ್ಯರ್ಥಿಯೇ ಇಲ್ಲಿ ನಿರ್ಣಾಯಕ

Read More »

ಬೈಲಹೊಂಗಲದಲ್ಲಿ ಕೈ..,…ಮೂಡಲಗಿಯಲ್ಲಿ ಬಾಲಚಂದ್ರಗೆ ಜೈ….!!!!

ಬೆಳಗಾವಿ-ಸ್ಥಳೀಯ ಸಂಘ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ ಬೈಲಹೊಂಗಲ ಪುರಸಭೆಯಲ್ಲಿ ಕಾಂಗ್ರೆಸ್ 17 ಸ್ಥಾನಗಳನ್ನು ಗೆಲ್ಲುವ ಮೂಲಕ ಬಹುಮತ ಸಾಧಿಸಿದ್ದು ಮೂಡಲಗಿಯಲ್ಲಿ ಮತದಾರ ಬಾಲಚಂದ್ರ ಜಾರಕಿಹೊಳಿಯವರಿಗೆ ಜೈ ಎಂದಿದ್ದಾನೆ ಬೈಲಹೊಂಗಲದಲ್ಲಿ ಕಾಂಗ್ರೆಸ್ 17 ಸ್ಥಾನಗಳನ್ನು ಗೆದ್ದಿತು ಇಲ್ಲಿ ಬಿಜೆಪಿ 7 ಸ್ಥಾನಗಳನ್ನು ಗೆದ್ದಿದೆ ಮೂಡಲಗಿಯಲ್ಲಿ ಬಿಜೆಪಿ ಬಹುಮತ ಸಾಧಿಸಿದೆ ಇಲ್ಲಿ ಜೆಪಿ 12 ಜೆಡಿಎಸ್ 8 ಪಕ್ಷೇತರ ಮೂವರು ಅಭ್ಯರ್ಥಿಗಳು ವಿಜಯಶಾಲಿಗಳಾಗಿದ್ದು ಬಿಜೆಪಿ ಸ್ಪಷ್ಟ ಬಹುಮತ ಸಾಧಿಸಿದೆ ಗೋಕಾಕ್ ನಗರಸಭೆ …

Read More »

ಕಾಂಗ್ರೆಸ್ ಪಕ್ಷ ಕೆಡವಲು ನಾಲ್ಕು ವರ್ಷ ಜೈಲಿಗೆ ಹೋಗಿದ್ದೆ – ಜನಾರ್ದನ್ ರೆಡ್ಡಿ

ಬೆಳಗಾವಿ-ಜಿಲ್ಲೆಯ ಸವದತ್ತಿಯಲ್ಲಿ ಗಾಲಿ ಜನಾರ್ದನ್ ರೆಡ್ಡಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಕಾಂಗ್ರಸ್ ಪಕ್ಷ ಕೆಡವಲು ನಾನು ನಾಲ್ಕು ವರ್ಷ ಜೈಲಿಗೆ ಹೋಗಿದ್ದೆನೆ ಸವದತ್ತಿ ಮಾಜಿ ಶಾಸಕ ವಂಕರೆಡ್ಡಿ ಅವರು ಕಾಂಗ್ರೆಸ್ ಪಕ್ಷ ಬೆಳೆಸಲು ಅವರು ೮ ವರ್ಷ ಜೈಲಿಗೆ ಹೋಗಿದ್ದರು ನಾನು ಅದೇ ಕಾಂಗ್ರೆಸ್ ಪಕ್ಷವನ್ನ ಕೆಡವಲು‌ ನಾಲ್ಕು ವರ್ಷ ಜೈಲಿಗೆ ಹೋಗಿದ್ದೆನೆ ಎಂದು ಜನಾರ್ದನ್ ರೆಡ್ಡಿ ಹೇಳಿಕೆ ನೀಡಿದ್ದಾರೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿ ಗ್ರಾಮದ ಸಂತ …

Read More »

ಬೆಳಗಾವಿಯಲ್ಲಿ ಮಲಪ್ರಭಾಗೆ ಅದ್ಧೂರಿ ಸ್ವಾಗತ

ಬೆಳಗಾವಿ ಕ್ರೀಡಾ ಶಾಲೆಯ ವಿದ್ಯಾರ್ಥಿನಿ ಮಲಪ್ರಭಾ ಜಾಧವ ಏಷ್ಯನ್ ಗೇಮ್ಸ ನಲ್ಲಿ ಕಂಚಿನ ಪದಕ ತರುವ ಮೂಲಕ ಬೆಳಗಾವಿಗೆ ಕೀರ್ತಿ ತಂದಿದ್ದು ಇಂದು ಬೆಳಗಾವಿಯಲ್ಲಿ ಮಲಪ್ರಭಾಗೆ ಅದ್ದೂರಿಯಿಂದ ಬರಮಾಡಿಕೊಳ್ಳಲಾಯಿತು ನಗರ ಪೋಲೀಸ್ ಆಯುಕ್ತ ರಾಜಪ್ಪ ಅವರು ಮಲಪ್ರಭಾಗೆ ಮೈಸೂರು ಪೇಟಾ ಹಾಕಿ ಜಿಲ್ಲಾಡಳಿತದ ಪರವಾಗಿ ಸತ್ಕರಿಸಿ ಗೌರವಿಸಿದರು ಸನ್ಮಾನ ಸ್ವಿಕರಿಸಿ ಮಾತನಾಡಿದ ಮಲಪ್ರಭಾ ಬೆಳಗಾವಿಯಲ್ಲಿನ ಜುಡೋ ಕ್ರೀಡಾಪಟುಗಳಿಗಾಗಿ ಅಕಾಡೆಮಿಯ ನಿರ್ಮಿಸಿ ಪ್ರೋತ್ಸಹ ನೀಡಬೇಕೆಂದು ಇಂಡೋನೇಶಿಯಾದ ಜಾಕಾತರ್ತಾದಲ್ಲಿ 18ನೇ ಏಶಿಯನ್ ಗೇಮ್ಸ್ …

Read More »