Breaking News
Home / Breaking News / ಬೆಳಗಾವಿ ಅಧಿವೇಶನದಲ್ಲಿ ತೃತೀಯ ಲಿಂಗಕ್ಕೆ ವಿಶೇಷ ಗೌರವ ಮೋನಿಷಾಗೆ ಸರ್ಕಾರಿ ನೌಕರಿ…..!!!!

ಬೆಳಗಾವಿ ಅಧಿವೇಶನದಲ್ಲಿ ತೃತೀಯ ಲಿಂಗಕ್ಕೆ ವಿಶೇಷ ಗೌರವ ಮೋನಿಷಾಗೆ ಸರ್ಕಾರಿ ನೌಕರಿ…..!!!!

ಬೆಳಗಾವಿ

ಡಿ ಗ್ರೂಪ್ ಖಾಯಂ ನೌಕರರಾಗಿ ತೃತೀಯ ಲಿಂಗದ ಮೋನಿಷಾ ಎಂಬುವರನ್ನು ವಿಧಾನ ಮಂಡಳದ ಚಳಿಗಾಲದ ಅಧಿವೇಶನದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಖಾಯಂ ಸರಕಾರಿ ಹುದ್ದೆ ಪಡೆಯಲಿದ್ದಾರೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ‌ ಹೇಳಿದರು.
ಬುಧವಾರ ಸುವರ್ಣ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
೨೦೧೬ ವಿಧಾನ ಸೌಧದಲ್ಲಿ ಖಾಲಿ ಇದ್ದ ಗ್ರೂಪ್ ಡಿಗೆ ಅರ್ಜಿ ಹಾಕಿದ್ದ ತೃತೀಯ ಲಿಂಗದ ಮೋನಿಷಾ ಎಂಬುವರು ಅರ್ಜಿ ಹಾಕಿದ್ದರು. ಆದರೆ ಸರಕಾರದಿಂದ ತೃತೀಯ ಲಿಂಗದವರಿಗೆ ಯಾವುದೇ ಹುದ್ದೆಯಿಲ್ಲದ ಕಾರಣ ನಾವು. ಲಿಂಗತ್ವದ ಹೊಂದಾಣಿಕೆಯಾಗದ ಹಿನ್ನೆಲೆಯಲ್ಲಿ ಅವರಿಗೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಂಡಿದ್ದೇವು. ಮೋನಿಷಾ ಅವರು ನ್ಯಾಯಾಲಯಕ್ಕೆ‌‌‌ ಮೊರೆ ಹೋಗಿದ್ದರು. ನಂತರ ಅವರಿಗೆ ಸಭಾಪತಿ, ಮುಖ್ಯಮಂತ್ರಿಗಳು ವಿಶೇಷ ಆಸಕ್ತಿ ವಹಿಸಿ ಮಂಗಳ ಮುಖಿಯರು ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ತೃತೀಯ ಲಿಂಗದ ಮೋನಿಷಾ ಅವರಿಗೆ ಖಾಯಂ ನೌಕರಿ ನೀಡಲಾಗುತ್ತಿದೆ. ಇದು ಹೊಸ ಇತಿಹಾಸಕ್ಕೆ ಕಾರಣವಾಗಲಿದೆ ಎಂದರು.
ಡಿ.೧೦ರಿಂದ ೨೧ ರ ವರೆಗೆ ನಡೆಯುವ ಚಳಿಗಾಲ ಅಧಿವೇಶನ ಸಿದ್ದತೆಯ ಕುರಿತು ಚರ್ಚೆ ನಡೆಸಲಾಗಿದೆ.
ಇಲ್ಲಿ ಬರುವ ಶಾಸಕ, ಸಚಿವರು ಹಾಗೂ ಅಧಿಕಾರಿಗಳಿಗೆ ಮೂಲಭೂತ ಸೌಕರ್ಯದ ವ್ಯವಸ್ಥೆಯ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು.
ನಗರದಲ್ಲಿ ಜಾಹೀರಾತು ನಾಮ ಫಲಕಗಳನ್ನು ಅಳವಡಿಸದಂತೆ ಈಗಾಗಲೇ ರಾಜಕೀಯ ನಾಯಕರಿಗೆ ಸೂಚಿಸಲಾಗಿದೆ ಎಂದು ಹೇಳಿದರು.
೨೪೬ ಹೊಟೇಲ್ ೧೩೫೦ ಅಧಿಕಾರಿಗಳು ಸಿಬ್ಬಂದಿಗಳು ಆಗಮಿಸಲಿದ್ದಾರೆ. ಕಳೆದ ಬಾರಿಯಾದ ತೊಂದರೆಯಾಗಿದ್ದನ್ನು ಮನಗೊಂಡ ಎಲ್ಲ ಸೌಕರ್ಯವನ್ನು ಮಾಡಲಾಗಿದೆ.
ಅಧಿವೇಶನದ‌ ಸಂದರ್ಭದಲ್ಲಿ ಸಂಚಾರ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕೆಂದು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದು ಹೇಳಿದರು.
ಆಸ್ಪತ್ರೆ, ಊಟದ ವ್ಯವಸ್ಥೆ ಆಯಾ ಉತ್ತರ ಕನ್ನಡ, ಮೈಸೂರು ಹಾಗೂ ಉತ್ತರ ಕರ್ನಾಟಕದರಿಗೆ ಅನಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಉತ್ತರ ಕರ್ನಾಟಕದ ಬಗ್ಗೆ ಯಾವುದೇ ಶಾಸಕ‌ ಮಂತ್ರಿಗಳು ಪ್ರಶ್ನೆ ಮಾಡಿದರೆ ಅದಕ್ಕೆ ಚರ್ಚೆಗೆ ಅವಕಾಶ ನೀಡಲಾಗುವುದು. ಈಗಾಗಲೇ ಸದನದಲ್ಲಿ ಎಲ್ಲ ಶಾಸಕ, ಸಚಿವರು ಭಾಗಿಯಾಗಬೇಕು ಎಂದು ಸೂಚಿಸಲಾಗಿದೆ. ಆದ್ದರಿಂದ ಈ ಅಧಿವೇಶನದಲ್ಲಿ ಕಡ್ಡಾಯವಾಗಿ ಎಲ್ಲರೂ ಹಾಜರಾಗುತ್ತಾರೆ ಎಂದರು.
ಉತ್ತರ ಕರ್ನಾಟಕದಲ್ಲಿ ನಡೆಯುವ ಅಧಿವೇಶನದಲ್ಲಿ ನಿರ್ಲಕ್ಣ್ಯ ಮಾಡಬಾರದು. ಇದು ಪ್ರವಾಸ ಆಗಬಾರದು. ಈ ಭಾಗದ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲುವ ದೃಷ್ಠಿಯಿಂದ ಸದನದಲ್ಲಿ ಶಾಸಕ, ಸಚಿವರು ಭಾಗಿಯಾಗಬೇಕೆಂದು‌ ವಿನಂತಿಸಿದರು.
ಪ್ರಾದೇಶಿಕ ಆಯುಕ್ತ ಪಿ.ಎ.ಮೇಘನ್ನವರ,ಜಿಲ್ಲಾಧಿಕಾರಿ ‌ಡಾ.ಎಸ್.ಬಿ.ಬೊಮ್ಮನಹಳ್ಳಿ, ನಗರ ಪೊಲೀಸ್ ಆಯುಕ್ತ ಡಾ.ಡಿ.ಸಿ.ರಾಜಪ್ಪ, ಜಿಲ್ಲಾ ಪಂಚಾಯತ ಸಿಇಒ ರಾಮಚಂದ್ರನ್ ಆರ್. ಡಿಸಿಪಿ ಸೀಮಾ ಲಾಟ್ಕರ್ ಸೇರಿದಂತೆ ಹಾಜರಿದ್ದರು.

Check Also

ಮೇ 2 ರಂದು ಏಕನಾಥ, 3 ರಂದು ಅಮೀತ್ ಶಾ ಬೆಳಗಾವಿಗೆ….

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ರಂಗೇರಿದೆ, ಮತಬೇಟೆಗಾಗಿ ಮೇ 2 ರಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ಮೇ …

Leave a Reply

Your email address will not be published. Required fields are marked *