Breaking News

LOCAL NEWS

ಸುವರ್ಣಸೌಧ ಖಾಲಿ…ಖಾಲಿ..ಇಲಿ,ಹೆಗ್ಗಣಗಳು ಜ್ವಾಲಿ..ಜ್ವಾಲಿ…!

ಬೆಳಗಾವಿ- ಉತ್ತರ ಕರ್ನಾಟಕದ ಶಕ್ಕಿಯ ಸೌಧ,ಸುವರ್ಣ ವಿಧಾನ ಸೌಧ ವರ್ಷವಿಡಿ ಖಾಲಿ ಇರುವದರಿಂದ ಇಲಿ ಹೆಗ್ಗಣಗಳು ಇದನ್ನು ಹೈಜ್ಯಾಕ್ ಮಾಡಿಕೊಂಡಿದ್ದು ಇವುಗಳ ಕಾಟ ವಿಪರೀತವಾಗಿದೆ ಇದು ಲೋಕೋಪಯೋಗಿ ಇಲಾಖೆಗೆ ಕಿರಿಕಿರಿಯಾಗಿದೆ ಅಧಿವೇಶನದ ಸಂಧರ್ಭದಲ್ಲಿ ಮಂತ್ರಿಗಳ ಎದುರಲ್ಲಿ ಇಲಿ ಹೆಗ್ಗಣಗಳು ಸುಳಿದಾಡಿದರೆ ಫಜೀತಿ ಆಗಬಹುದಲ್ಲ ಎಂದು ಹೆದರಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹೆಗ್ಗಣಗಳ ಹುತ್ತುಗಳನ್ನು ಮುಚ್ಚುವ ಕಾರ್ಯಾಚರಣೆ ಆರಂಭಿಸಿದ್ದಾರೆ ಬೆಳಗಾವಿಯಲ್ಲಿ ಐದು ನೂರು ಕೋಟಿ ಖರ್ಚು ಮಾಡಿ ಸುವರ್ಣ ಸೌಧ ನಿರ್ಮಿಸಲಾಗಿದೆ …

Read More »

ಆನೆ ತುಳಿತಕ್ಕೆ ಓರ್ವನ ಬಲಿ

ಬೆಳಗಾವಿ-ಆನೆ ತುಳಿತ ಬೊಮ್ಮನಕೊಪ್ಪ ಗ್ರಾಮದ ವಾಸುದೇವ ಮಿರಾಸಿ ನಾಗರಗಾಳಿ ಕಾಡಿನಲ್ಲಿ ಸಾವೊನ್ನೊಪ್ಪಿದ ಘಟನೆ ನಡೆದಿದೆ ನಾಗರಗಾಳಿ ಗ್ರಾಮದ ಗದ್ದೆಗಳಿಗೆ ನುಗ್ಗಿದ ಆನೆಗಳ ಹಿಂಡನ್ನು ಓಡಿಸುವಾಗ ಈ ಘಟನೆ ನಡೆದಿದ್ದು ಈ ಘಟನೆಯಲ್ಲಿ ಇಬ್ಬರು ವನ ಪಾಲಕರೂ ನಾಪತ್ತೆಯಾಗಿದ್ದಾರೆ ಎಂಬ ವಿಷಯ ನಾಗರಗಾಳಿ ಗ್ರಾಮಸ್ಥರನ್ನು ಕಾಡುತ್ತಿದ್ದು ಇದು ಕೇವಲ ವದಂತಿ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರಿಗೆ ಸಮಾಧಾನ ಹೇಳುತ್ತಿದ್ದಾರೆ ಡಿಸಿಎಫ್ ಬಿ. ವಿ. ಪಾಟೀಲ ಸ್ಥಳಕ್ಕೆ ದೌಡಾಯಿಸಿದ್ದಾರೆ

Read More »

ಆನೆ ಹಿಂಡು ಓಡಿಸಲು ಕಾಡಿಗೆ ನುಸುಳಿದ ಇಬ್ಬರು ವನಪಾಲಕರ ನಾಪತ್ತೆ

ಬೆಳಗಾವಿ-ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ನಾಗರಗಾಳಿ ಗ್ರಾಮಕ್ಕೆ ನುಗ್ಗಿದ ಆನೆಗಳ ಹಿಂಡನ್ನು  ಪಟಾಕಿ ಸಿಡಿಸುತ್ತ ಢೋಲು ಬಾರಿಸುತ್ತ ಕಾಡಿಗೆ ನುಗ್ಗಿದ ಿಬ್ಬರು ವನಪಾಲಕರು ನಾಪತ್ತೆಯಾಗಿದ್ದಾರೆ ಶುಕ್ರವಾರ ಮಧ್ಯಾಹ್ನ ಆನೆಗಳ ಹಿಂಡು ನಾಗರಗಾಳಿ ಗ್ರಾದ ಗದ್ದೆಗೆಗಳಿಗೆ ಲಗ್ಗೆ ಇಟ್ಟಿತ್ತು ಈ ಆನೆಗಳ ಹಿಂಡನ್ನು ಮರಳಿ ಕಾಡಿಗೆ ಓಡಿಸಲು ಗ್ರಾಮಸ್ಥರು ವನಪಾಲಕರ ಸಹಾಯದೊಂದಿಗೆ ಪಟಾಕಿ ಸಿಡಿಸುತ್ತ ಢೋಲು ಬಾರಿಸುತ್ತ ಕಾಡಿಗೆ ನುಗ್ಗಿದರು ಗ್ರಾಮಸಥರು ಅರ್ಧ ದಾರಿಯಿಂದ ಗ್ರಾಮಕ್ಕೆ ವಾಪಸ್ ಆಗಿದ್ದು ಆನೆ ಹಿಂಡನ್ನು ಹಿಂಬಾಲಿಸಿ ಕಾಡಿನೊಳಗೆ …

Read More »

ಬೆಳಗಾವಿ ಪೇಟೆಗೆ ಹಬ್ಬದ ರಂಗು… ಎಲ್ಲರಿಗೂ ಖರೀಧಿಯ ಗುಂಗು…!

ಬೆಳಗಾವಿ-ಬೆಳಗಾವಿ ನಗರದ ಪೇಟೆಗೆ ಬೆಳಕಿನ ಹಬ್ಬ ದೀಪಾವಳಿಯ ರಂಗು ಏರಿದೇ.ಹೊಸ ಬಟ್ಟೆ ಸೇರಿದಂತೆ ಹೊಸ ಹೊಸ ಸಾಮುಗ್ರಿಗಳನ್ನು ಖರೀಧಿಸಲು ಜನ ಬೇಳಗಾವಿ ಪೇಟೆಗೆ ದೌಡಾಯಿಸುತ್ತಿದ್ದಾರೆ ದೀಪಾವಳಿ ಹಬ್ಬದ ನಿಮಿತ್ಯ ಹೊಸ ಬಟ್ಟೆ ಖರೀಧಿ ಜೋರಾಗಿಯೇ ನಡೆದಿದಿ ಇನ್ನು ಕೆಲವರು ಆಕಾಶ ಬುಟ್ಟಿ ,ಪಣತಿ, ಹಾಗು ಅಲಂಕಾರಿಕ ವಸ್ತುಗಳು ,ಪೂಜಾ ಸಾಮುಗ್ರಿಗಳ ಖರೀಧಿಯಲ್ಲಿ ನಿರತರಾಗಿದ್ದಾರೆ ಬೆಳಗಾವಿಯ ಗೋಲ್ಡ ಅಂಗಡಿಗಳಲ್ಲಿ ಫುಲ್ ರಶ್.. ಜೊತೆಗೆ ಬೆಳಗಾವಿ ನಗರದ ಬಟ್ಟೆ ಅಂಗಡಿಗಳಲ್ಲಿ ವಿಶೇಷ ರಿಯಾಯತಿಗಳನ್ನು …

Read More »

ಕಂಗ್ರಾಳಿ ಗ್ರಾಮದಲ್ಲಿ ಹಳದಿ ಕುಂಕುಮ ಕಾರ್ಯಕ್ರಮ

ಬೆಳಗಾವಿ-ಬೆಳಗಾವಿ ಗಡಿ ಭಾಗದಲ್ಲಿ ನಡೆಯುವ ಹಳದಿ ಕುಂಕುಮ ಕಾರ್ಯಕ್ರಮ ಸಮಂಧ ಬೆಳೆಸುವ ಕಾರ್ಯಕ್ರಮವಾಗಿದ್ದು ಈ ಅಪರೂಪದ ಕಾರ್ಯಕ್ರಮದಿಂದ ಮಹಿಳಾ ಸಬಲೀಕರಣ ,ಮಾಡಲು ಸಾಧ್ಯವಿದೆ ಈ ಕಾರ್ಯಕ್ರಮ ಮಹಿಳಾ ಶಕ್ತಿಯನ್ನು ಒಗ್ಗೂಡಿಸಲು ಪೂರಕವಾಗಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ ಅಭಿಪ್ರಾಯ ವ್ಯೆಕ್ತಪಡಿಸಿದ್ದಾರೆ ಬೆಳಗಾವಿ ಸಮೀಪದ ಬಿ ಕೆ ಕಂಗ್ರಾಳಿ ಗ್ರಾಮದÀ ವಿಠ್ಠಲ ಮಂದಿರದಲ್ಲಿ ಹಳದಿ ಕುಂಕುಮ ಕಾರ್ಯಕ್ರಮದಲ್ಲಿ ಸುಮಾರು 500ಕ್ಕೂ ಹೆಚ್ಚು ಮಹಿಳೆಯರಿಗೆ ಹಳದಿ ಕುಂಕುಮ …

Read More »

ಕಲ್ಲಪ್ಪ ಹಂಡಿಬಾಗ್ ಸಹೋದರ ಪೋಲೀಸ್ ಪೇದೆ ಯಲ್ಲಪ್ಪ ನೇಣಿಗೆ ಶರಣು

ಬೆಳಗಾವಿ- ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಮಾಡಿಕೊಂಡು ದುಖ ಮಾಸುವ ಮೊದಲೇ ಆತನ ಸಹೋಧರ ಕುಲಗೋಡ ಠಾಣೆಯ ಪೇದೆ ಯಲ್ಲಪ್ಪ ಕಿತ್ತೂರ ಉತ್ಸವದ ಬಂದೋಬಸ್ತಿ ಮುಗಿಸಿಕೊಂಡು ಮನೆಗೆ ಹೋಗಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ನಡೆದಿದೆ ಕಲ್ಲಪ್ಪ ಹಂಡಿಬಾಗ್ ಸಹೋದರ ಆತ್ಮಹತ್ಯೆ. ಗೋಕಾಕ್ ತಾಲೂಕಿನ ಕುಲಗೋಡು ಗ್ರಾಮದಲ್ಲಿ ಘಟನೆ. ಪೇದೆ ಯಲ್ಲಪ್ಪ ಹಂಡಿಬಾಗ್ ನೇಣು‌ ಬಿಗಿದುಕೊಂಡು ಆತ್ಮಹತ್ಯೆ. ಕುಲಗೋಡು ಠಾಣೆಯಲ್ಲಿ ಪೇದೆಯಾಗಿದ್ದ ಯಲ್ಲಪ್ಪ. ಘಟನೆಗೆ …

Read More »

ನಾಡ ವಿರೋಧಿ ಎಂಈಎಸ್ ಕಂಗಾಲು..ಮಹಾರಾಷ್ಟ್ರ ಸರ್ಕಾರದ ದುಂಬಾಲು..!

ಬೆಳಗಾವಿ- ಗಡಿ ಭಾಗದ ಬೆಳಗಾವಿಯಲ್ಲಿ ನಾಡ ವಿರೋಧಿ ಮಹಾರಾಷ್ಟ್ರ ಏಕೀಕರಣ ಸಮೀತಿಯ ಬಂಡವಾಳ ಈಗ ಬಯಲಾಗಿದೆ ಬೆಳಗಾವಿ ನಗರದಲ್ಲಿ ಸಂಪೂರ್ಣವಾಗಿ ಅಸ್ತಿತ್ವ ಕಳೆದುಕೊಂಡಿರುವ ನಾಡ ವಿರೋಧಿಗಳ ಕರಾಳ ದಿನಾಚರಣೆಯ ಸೈಕಲ್ ರ್ಯಾಲಿಗೆ ಜನ ಸೇರದೇ ಕಂಗಾಲಾಗಿರುವ ಎಂಈಎಸ್ ಈಗ ಮಹಾರಾಷ್ಟ್ರದ ಕೊಲ್ಲಾಪೂರದಲ್ಲಿ ನಡೆದ ಮರಾಠಾ ಮೀಸಲಾತಿಯ ಮೌನ ಹೋರಾಟದ ನಕಲು ಮಾಡಲು ಷಡ್ಯಂತ್ರ ನಡೆಸಿದೆ ಬೆಳಗಾವಿಯ ಎಂಈಎಸ್ ನಾಯಕರು ಬುಧವಾರ ರಾತ್ರಿ ಮಹಾರಾಷ್ಟ್ರದ ಮುಂಬೈಗೆ ಪ್ರಯಾಣ ಬೆಳೆಸಲಿದ್ದು ಗುರುವಾರ ಮಹಾರಾಷ್ಟ್ರದ ಮುಖ್ಯಮಂತ್ರಿಗಳನ್ನು ಭೇಟಿಯಾಗಿ …

Read More »

ಕಿತ್ತೂರು ಉತ್ಸವಕ್ಕೆ ಸಂಬ್ರಮದ ತೆರೆ

ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಭದ್ರ ಬುನಾದಿ ಹಾಕಿದ ಕಿತ್ತೂರು ಚನ್ನಮ್ಮನವರ ದೇಶಾಭಿಮಾನ ಹಾಗೂ ಹೋರಾಟದ ಕಿಚ್ಚನ್ನು ಇಂದಿನ ಯುವಪೀಳಿಗೆಗೆ ತಲುಪಿಸುವ ಅಗತ್ಯವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮನು ಬಳಿಗಾರ ಪ್ರತಿಪಾದಿಸಿದರು. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಶ್ರಯದಲ್ಲಿ ಕಿತ್ತೂರು ಕೋಟೆ ಆವರಣದಲ್ಲಿ ಏರ್ಪಡಿಸಲಾಗಿದ್ದ ‘ಕಿತ್ತೂರು ಉತ್ಸವ-2016’ರ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ನುಡಿಗಳನ್ನಾಡಿದರು. ಬ್ರಿಟಿಷ್‍ರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಚನ್ನಮ್ಮ ದೇಶದ ಸ್ವಾತಂತ್ರ್ಯ ಚಳವಳಿಯ ಬೆಳ್ಳಿಚುಕ್ಕಿಯಾಗಿ …

Read More »

ಕಿತ್ತೂರಿನ ಕಣದಲ್ಲಿ ಕುಸ್ತಿ ಕಾದಾಟ..ಡಾವ್ ಹೊಡೆದ ಪೈಲವಾನನ ಮೇಲಾಟ.!

ಬೆಳಗಾವಿ – ಕಿತ್ತೂರು ಉತ್ಸವದ ಅಂಗವಾಗಿ ಕ್ರಾಂತಿಯ ನೆಲ ಕಿತ್ತೂರಿನಲ್ಲಿ ಕುಸ್ತಿ ಕಾದಾಟ ಆರಂಛವಾಗಿದೆ ಗಟ್ಟಿ ಪೈಲವಾನರು ಕುಸ್ತಿ ಕಣದಲ್ಲಿ ಇಳಿದಿದ್ದು ಕುಸ್ತಿ ಕದನ ಜೋರಾಗಿ ನಡೆದಿದೆ ಶಾಸಕ ಡಿಬಿ ಇನಾಮದಾರ ಅವರು ಕುಸ್ತಿ ಕಾದಾಟಕ್ಕೆ ಚಾಲನೆ ನೀಡಿದರು ಜಿಲ್ಲಾಧಿಕಾರಿ ಎನ್ ಜೈರಾಮ ಬೆಳಗಾವಿ ಪಾಲಿಕೆ ಆಯುಕ್ತ ಶಶಿಧರ ಕುರೇರ ಪ್ರೀತಂ ನರಸಲಾಪೂರೆ ಮೊದಲಾದವರು ಉಪಸ್ಥಿತರಿದ್ದರು ಆರಂಭದಲ್ಲಿ ಬೆಳಗಾವಿ ಜಿಲ್ಲೆಯ ಪೈಲವಾನರು ಅಖಾಡಾದಲ್ಲಿ ತಮ್ಮ ಡಾವ್ ತೋರಿಸಿದರು ಇದಾದ ಬಳಿಕ …

Read More »

ಕಿತ್ತೂರಿನಲ್ಲಿ ಮೂರ್ತಿಗಳು ರೆಡಿ..ಮುಸುಕು ತೆಗೆದು ಬಿಡಿ..!

ಬೆಳಗಾವಿ- ಕಿತ್ತೂರು ಉತ್ಸವಕ್ಕೆ ಚನ್ನಮ್ಮಾಜಿಯ ಭಕ್ತ ಸಾಗರವೇ ಹರಿದು ಬರುತ್ತಿದೆ ಚನ್ನಮ್ಮಾಜಿ ಸಂಸ್ಥಾನದ ಖಡ್ಗ ಇತ್ಯಾದಿಗಳನ್ನು ನೋಡಲು ಬಂದವರಿಗೆ ತೀವ್ರ ನಿರಾಸೆಯಾಗಿದೆ. ಉತ್ಸವದ ಸಂದರ್ಭದಲ್ಲೂ ಕಿತ್ತೂರಿನ ಮ್ಯೂಸಿಯಂ ಗೆ ದೊಡ್ಡ ಬೀಗ ಹಾಕಲಾಗಿದೆ. ಮ್ಯೂಸಿಯಂನ ದ್ವಾರಬಾಗಿಲಲ್ಲಿ ಎರಡು ಮುಸುಕುಧಾರಿ ಮೂರ್ತಿಗಳಿವೆ ಕಿತ್ತೂರಿನಲ್ಲಿ ಕ್ರಾಂತಿ ಮಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗು ಅಮಟೂರ ಬಾಳಪ್ಪನವರ ಮೂರ್ತಿಗಳು ಕಳೆದ ಒಂದೂವರೆ ವರ್ಷದಿಂದ ಮುಸುಕಿನಲ್ಲಿವೆ ಮೂರ್ತಿಗಳು ರೆಡಿ..ಮುಸುಕು ತೆಗೆದು ಬಿಡಿ ಅಂತ ರಾಯಣ್ಣನ ಅಭಮಾನಿಗಳು …

Read More »
Sahifa Theme License is not validated, Go to the theme options page to validate the license, You need a single license for each domain name.