Breaking News

LOCAL NEWS

ಹುದಲಿ ಸಕ್ಕರೆ ಕಾರ್ಖಾನೆಯ ಬಾಯಲರ್ ಪ್ರದೀಪನ

ಬೆಳಗಾವಿ-ರಾಜಕಾರಣದಲ್ಲಿ ಸಾಧನೆ ಮಾಡಿದ ಸಾಮಾಜಿಕ ಕ್ರಾಂತಿಯ ಹರಿಕಾರ ಸತೀಶ ಜಾರಕಿಹೊಳಿ ಅವರು ಸಕ್ಕರೆ ಉದ್ಯಮದಲ್ಲಿಯೂ ಸದ್ದಿಲ್ಲದೇ ಸಾಧನೆ ಮಾಡುತ್ತಿದ್ದಾರೆ ಸತೀಶ ಶುಗರ್ಸ ಹೆಸರಿನಲ್ಲಿ ಸಕ್ಕರೆ ಉದ್ಯಮಕ್ಕೆ ಕಾಲಿಟ್ಟ ಸತೀಶ ಜಾರಕಿಹೊಳಿ ಈ ಕ್ಷೇತ್ರದಲ್ಲಿ ತಮ್ಮ ಕದಂಬ ಬಾಹುಗಳನ್ನು ಚಾಚುವಲ್ಲಿ ಯಶಸ್ವಿಯಾಗಿದ್ದಾರೆ ಬೆಳಗಾವಿ ನಗರಕ್ಕೆ ಹೊಂದಿಕೊಂಡಿರುವ ಮಹಾತ್ಮಾ ಗಾಂಧೀಜಿ ಅವರು ಪಾದಸ್ಪರ್ಷ ಮಾಡಿದ ಗ್ರಾಮದಲ್ಲಿ ಸತಿಶ ಜಾರಕಿಹೊಳಿ ಅವರು ಅತ್ಯಾಧುನಿಕ ಸಕ್ಕರೆ ಕಾರ್ಖಾನೆ ನಿರ್ಮಾಣ ಮಾಡಿದ್ದು ದಸರಾ ಹಬ್ಬದ ದಿನ ಕಾರ್ಖಾನೆಯ …

Read More »

ಮುಸ್ಲಿಂ ಮನೆತನವಿಲ್ಲ! ಆದರೂ ಹಿಂದೂ ಬಾಂಧವರಿಂದಲೇ ಮಸೀದಿ ನಿರ್ಮಾಣ

ಬೆಳಗಾವಿ: ಇದೊಂದು ಕುಗ್ರಾಮ.  ಆದರೂ, ಭಾವೈಕ್ಯತೆ ಎಂದರೆ ಹೇಗಿರಬೇಕು ಎಂಬುದನ್ನು ಈ ಗ್ರಾಮಸ್ಥರಿಂದ ಕಲಿಯಬೇಕು. ಈ ಗ್ರಾಮದಲ್ಲಿ ಒಂದೇ ಒಂದು ಮುಸ್ಲಿಂ ಮನೆತನ ನೆಲೆಸಿಲ್ಲ.  ಆದರೂ,  ಗ್ರಾಮದ ಹಿಂದೂ ಬಾಂಧವರೇ ಹಣ ಸಂಗ್ರಹಿಸಿ ಮಸೀದಿ ನಿರ್ಮಿಸುವ ಜತೆಗೆ, ಅದೇ ಮಸೀದಿಯಲ್ಲಿ ಪ್ರತಿವರ್ಷ ಮೊಹರಂ ಆಚರಿಸಸುವ ಮೂಲಕ ರಾಷ್ಟ್ರದ ಗಮನ ಸೆಳೆದಿದ್ದಾರೆ. ಹೀಗೆ ಭಾವೈಕ್ಯತೆ ಸಾರುತ್ತಿರುವುದು ಯಾವ ಗ್ರಾಮ ಗೊತ್ತೇ? ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಯಲ್ಲಮ್ಮನಗುಡ್ಡದಿಂದ ಐದೇ ಕಿ.ಮೀ. …

Read More »

ನಿಪ್ಪಾಣಿ,ಚಿಕ್ಕೋಡಿಗೆ ಹೈಟೆಕ್ ಬಸ್ ನಿಲ್ದಾಣ ಬೆಳಗಾವಿಗೆ ಬರೀ ಆಶ್ವಾಸನ

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ನಿಪ್ಪಾಣಿ ಪಟ್ಟಣ ಹಾಗೂ ಚಿಕ್ಕೋಡಿ ಪಟ್ಟಣದಲ್ಲಿ ನಿರ್ಮಿಸಿರುವ ಹೈಟೆಕ್ ಬಸ್ ನಿಲ್ದಾಣದಗಳನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಉದ್ಘಾಟಿಸಿದರು . ಮೊದಲು ನಿಪ್ಪಾಣಿ ಪಟ್ಟಣದ ಬಸ್ ನಿಲ್ದಾಣ ಉದ್ಘಾಟಿಸಿದ ನಂತರ ಚಿಕ್ಕೋಡಿ ಕರ್ನಾಟಕ ರಾಜ್ಯ ಸಾರಿಗೆ ಬಸ್ ನಿಲ್ದಾಣವನ್ನು ಉದ್ಘಾಟಿಸಲಾಯಿತು. ಚಿಕ್ಕೋಡಿಯಲ್ಲಿ ನಡೆದ ಸರಕಾರಿ ಸಮಾರಂಭವನ್ನು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದ ಪ್ರಕಾಶ ಹುಕ್ಕೇರಿ ಪಕ್ಷದ ಸಮಾರಂಭವನ್ನಾಗಿ ಬಳಿಸಿಕೊಂಡರು. ಇದೇ ವೇದಿಕೆಯಲ್ಲಿ ತಮ್ಮ …

Read More »

ಉಪ ಕಾಲುವೆ ಒಡೆದು ಗದ್ದೆಗೆ ನುಗ್ಗಿದ ನೀರು ಅಪಾರ ಬೆಳೆ ಹಾನಿ

  ಬೆಳಗಾವಿ: ಅಥಣಿ ತಾಲೂಕು ಸಪ್ತಸಾಗರ ಗ್ರಾಮ ಕೊರೆದು ಹೋಗುವ ಘಟಪ್ರಭಾ ಎಡದಂಡೆ ಕಾಲುವೆ ಸೋರಿ ತಡರಾತ್ರಿ ಹೊಲಗಳಲ್ಲಿ ನುಗ್ಗಿದೆ. ಕುಡಚಿ ಉಪವಿಭಾಗದಿಂದ ಬರುವ ಜಿಎಲ್ ಬಿಸಿ ಮುಖ್ಯ ಕಾಲುವೆಯ ಉಪಕಾಲುವೆ ರಾಯಭಾಗ ತಾಲೂಕು ಹಾರೂಗೆರೆಯಿಂದ ಅಥಣಿ ತಾಲೂಕಿನ ಸಪ್ತಸಾಗರ, ತೀರ್ಥ ಗ್ರಾಮ ಸೀಳಿಕೊಂಡು ಕೃಷ್ಣಾ ತಟ ಸೇರುತ್ತದೆ. ಈ ಉಪಕಾಲುವೆ ತನ್ನ ಹರಿವಿನ ಸಪ್ತಸಾಗರ ಗ್ರಾಮದ ೧೮ಕೀಮಿ ಬಳಿ ಒಡೆದು ಫಲವತ್ತಾದ ಹೊಲಗಳಿಗೆ ನುಗ್ಗಿ ಹಾನಿ ಮಾಡಿದೆ. ಸರಾಗ …

Read More »

ಹಳ್ಳಿ ಮಕ್ಕಳ ಜೊತೆ ಹೆಬ್ಬಾಳಕರ ಬೆಸುಗೆ.. ಸರ್ಕಾರಿ ಶಾಲೆಗೆ ಪ್ರೋಜೆಕ್ಟರ್ ಕೊಡುಗೆ..

ಬೆಳಗಾವಿ-ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಲಕ್ಷ್ಮೀ ತಾಯಿ ಫೌಂಡೇಶನ್ ಸದ್ದಿಲ್ಲದೆ ಅನೇಕ ಸಮಾಜ ಸೇವಾಕಾರ್ಯಗಳನ್ನು ಮಾಡುತ್ತಿದೆ ಬೆಳಗಾವಿ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಯಾದಾಗ ಟ್ಯಾಂಕರ್ ಮೂಲಕ ನೀರು ಪೂರೈಸಿ ಜನರ ಮೆಚ್ಚುಗೆಗೆ ಪಾತ್ರವಾಗಿದ್ದ ಫೌಂಡೇಶನ್, ಈಗ ಸರ್ಕಾರಿ ಶಾಲೆಗಳ ಮಕ್ಕಳಿಗೆ ಹೈಟೆಕ್ ಸೌಲಭ್ಯಗಳನ್ನು ನೀಡಲು ಮುಂದಾಗಿದೆ ಖಾಸಗಿ ಶಾಲೆಗಳ ಮಕ್ಕಳಿಗೆ ಸಿಗುವ ಸೌಲಭ್ಯಗಳು ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೂ ದೊರೆಯಬೇಕು ಎನ್ನುವ ಸಂಕಲ್ಪದೊಂದಿಗೆ ಸರ್ಕಾರಿ ಶಾಲೆಗಳತ್ತ ಗಮನ ಹರಿಸಿರುವ ಲಕ್ಷ್ಮೀ ಹೆಬ್ಬಾಳಕರ …

Read More »

ಬೆಳಗಾವಿ ಡಿಸಿಸಿ ಬ್ಯಾಂಕ ಕಟ್ಟಡ ಡೆಮಾಲೀಶ್ ಮಾಡಲು ನಿರ್ಧಾರ

ಬೆಳಗಾವಿ-ಜಿಲ್ಲೆಯ ರೈತರ ಹೆಮ್ಮೆಯಾಗಿರುವ ಬೆಳಗಾವಿ ಡಿಸಿಸಿ ಬ್ಯಾಂಕ ಶತಮಾನೋತ್ಸವದ ಸಂಬ್ರಮದಲ್ಲಿದೆ ಶತಮಾನ ಕಂಡಿರುವ ಬ್ಯಾಂಕಿನ ಹಳೆಯ ಕಟ್ಟಡವನ್ನು ಡೆಮಾಲಿಶ್ ಮಾಡಿ ಹೊಸ ಕಟ್ಟಡ ನಿಮಾಣ ಮಾಡಲು ಬ್ಯಾಂಕಿನ ಆಡಳಿತ ಮಂಡಳಿ ಮಹತ್ವದ ನಿರ್ಣಯ ಕೈಗೊಂಡಿದೆ ಇತ್ತಿಚಿಗೆ ನಡೆದ ಬ್ಯಾಂಕಿನ ಆಡಳಿತ ಮಂಡಳಿಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು ಹಳೆಯ ಕಟ್ಟಡ ಡೆಮಾಲಿಶ್ ಮಾಡಿ ಇದೇ ಸ್ಥಳದಲ್ಲಿ 30 ಕೋಟಿ ರೂ ವೆಚ್ಚದಲ್ಲಿ ಏಳು ಅಂತಸ್ತಿನ ಆಕರ್ಷಕ ಕಟ್ಟಡ ಕಟ್ಟಲು ನಿರ್ಧರಿಸಲಾಗಿದೆ …

Read More »

ಸಂಜಯ ಪಾಟೀಲರಿಂದ ಹಿಟ್ಲರ್ ನಡೆ ಶಂಕರಗೌಡಾ ಆರೋಪ

ಬೆಳಗಾವಿ-ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಶಾಸಕ ಸಂಜಯ ಪಾಟೀಲ ಬೆಳಗಾವಿ ತಾಲೂಕಾ ಪಂಚಾಯತಿಯಿ ಆಡಳಿತದಲ್ಲಿ ಹಸ್ತ ಕ್ಷೇಪ ಮಾಡುತ್ತಿದ್ದು ಅವರು ಹಿಟ್ಲರ್ ನಂತೆ ನಡೆದು ಜಿಲ್ಲಾ ಪಂಚಾಯತಿ ಹಾಗೂ ತಾಲೂಕಾ ಪಂಚಾಯತಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕಾಮಗಾರಿಗಳನ್ನು ಉದ್ಘಾಟಿಸಿ ಶಿಷ್ಟಾಚಾರವನ್ನು ಉಲ್ಲಂಘಿಸಿದ್ದಾರೆ ಎಂದು ಬೆಳಗಾವಿ ತಾಲೂಕಾ ಪಂಚಾಯತಿ ಅಧ್ಯಕ್ಷ ಶಂಕರಗೌಡಾ ಪಾಟೀಲ ಆರೋಪಿಸಿದ್ದಾರೆ ಅವರು ಶನಿವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಶಾಸಕ ಸಂಜಯ ಪಾಟೀಲ ತಮ್ಮ ಅನುದಾನವನ್ನು ಅವರ …

Read More »

ರೈತರನ್ನು ರಂಜಿಸುವ ಕಾರ್ಯಕ್ರಮಗಳು ನಿರಂತರವಾಗಿರಲಿ-ಹೆಬ್ಬಾಳಕರ

ಬೆಳಗಾವಿ -ವರ್ಷವಿಡಿ ಅನ್ನದಾತ ಹೊಲದಲ್ಲಿ ಶ್ರಮಿಸುತ್ತಾನೆ ಶ್ರಮಿಕನಿಗೆ ವಿಶ್ರಾಂತಿ ಇಲ್ಲ. ಹಿರಿಯರು ಶ್ರಮಿಕನಾಗಿರುವ ಅನದನದಾತನ ಮನರಂಜನೆಗಾಗಿ ಜೋಡೆತ್ತಿನ ಶರತ್ತು ಟಗರಿನ ಕಾಳಗ ಸೇರಿದಂತೆಅನೇಕ ಗ್ರಾಮೀಣ ಕ್ರಿಡೆಗಳನ್ನು ಸಮಾಜಕ್ಕೆ ಪರಿಚಯಿಸಿದ್ದಾರೆ ಕ್ರಿಡೆಗಳಿಗೆ ಪ್ರೋತ್ಸಾಹ ಸಿಗಬೇಕು ದೇಸಿ ಕ್ರಿಡೆಗಳು ಆರೊಗ್ಯವನ್ನು ಸದೃಡಗೊಳಿಸುವ ಜೊತೆಗೆ ಮಾನಸಿಕ ನೆಮ್ಮದಿ ನೀಡುತ್ತವೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅದ್ಯಕ್ಷೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ ಅಭಿಪ್ರಾಯ ಪಟ್ಟಿದ್ದಾರೆ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಬಡಸ ಕೆಎಚ್ ಗ್ರಾಮದಲ್ಲಿ ಮಹóರ್ಷಿ ವಾಲ್ಮೀಕಿ …

Read More »

ಕಾವೇರಿಗೆ ವಿಶೇಷ ಅಧಿವೇಶನ,ಮಹಾದಾಯಿಗೆ ಬರೀ ಆಶ್ವಾಸನ..!

ಬೆಳಗಾವಿ-ಕಾವೇರಿ ನದಿ ನೀರಿನ ಹಂಚಿಕೆ ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ರಾಜ್ಯ ಸರ್ಕಾರ 5ಂದು ವಿಶೇಷ ಅಧಿವೇಶನ ಕರೆದಿರುವದು ಸ್ವಾಗತಾರ್ಹ ಸಂಗತಿಯಾಗಿದೆ ಕಾವೇರಿ ವಿಷಯದಲ್ಲಿ ತುರ್ತಾಗಿ ಮೂರ್ನಾಲ್ಕು ಬಾರಿ ಸಚಿವ ಸಂಪುಟದ ಸಭೆಗಳನ್ನು ನಡೆಸಿ ಸರ್ವ ಪಕ್ಷಗಳ ಸಭೆಗಳನ್ನು ಕರೆದು ಚರ್ಚೆ ನಡೆಸಿರುವ ಸರ್ಕಾರ ಮಹಾದಾಯಿ ವಿಷಯದಲ್ಲಿ ಮಾತ್ರ ನಿರ್ಲಕ್ಷ್ಯ ಮಾಡುತ್ತಿದೆ ಅನ್ನೋದು ಸಾಭೀತಾಗಿದೆ ಕೆಲವು ಬುದ್ದಿ ಜೀವಿಗಳು,ಚಿಂತಕರು ಸಾಹಿತಿಗಳು ಕನ್ನಡಪರ ಹೋರಾಟಗಾರರು ಉತ್ತರ ಕರ್ನಾಟಕ ದಕ್ಷಿಣ ಕರ್ನಾಟಕ ಎಂದು …

Read More »

ಸಂಗೊಳ್ಳಿ ರಾಯಣ್ಣರ ಹುಟ್ಟೂರಲ್ಲಿ “ಶೌರ್ಯ ಆಕಾಡೆಮಿ” ಸ್ಥಾಪನೆ : ಸಿಎಂ

ಬೆಂಗಳೂರು : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಹುಟ್ಟೂರಾದ ಬೆಳಗಾವಿ ಜಿಲ್ಲೆ, ಬೈಲಹೊಂಗಲ ತಾಲೂಕಿನ ಸಂಗೊಳ್ಳಿಯಲ್ಲಿ “ಶೌರ್ಯ ಆಕಾಡೆಮಿ” ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ನಡೆದ ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಶೌರ್ಯ ಅಕಾಡೆಮಿಯು ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮಾದರಿಯಲ್ಲಿ ಕಾರ್ಯ ನಿರ್ವಹಿಸಲಿದೆ. ಅಕಾಡೆಮಿ ಸ್ಥಾಪನೆಗೆ ಬೇಕಾದ 100 ಎಕರೆ ಜಮೀನಿನ ಸ್ವಾಧೀನಕ್ಕೆ ಅಗತ್ಯ ಕ್ರಮ …

Read More »
Sahifa Theme License is not validated, Go to the theme options page to validate the license, You need a single license for each domain name.