Breaking News

Breaking News

ಬೆಳಗಾವಿಗೆ ಎರಡು ಕೋಟಿ ಕೊಡಲು ಸಹಿ ಹಾಕಿದ ಸಿಎಂ ಬೊಮ್ಮಾಯಿ…

ಬೆಳಗಾವಿ-ಬೆಳಗಾವಿಯ ನ್ಯಾಯಾಲಯದ ಆವರಣದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು,ನ್ಯಾಯಾಲಯದ ಕಟ್ಟಡಗಳನ್ನು ನವೀಕರಿಸಲು ಸರ್ಕಾರ ವಿಶೇಷ ಅನುದಾನ ನೀಡುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಶಾಸಕರ ನಿಯೋಗ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿತು. ಬೆಳಗಾವಿ ಬಾರ್ ಅಸೋಸಿಯೇಷನ್ ಹಾಗೂ ಕೋರ್ಟ್ ಆವರಣದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಹಾಗೂ ಕಟ್ಟಡಗಳನ್ನು ನವೀಕರಿಸಿ ಸುಸಜ್ಜಿತವಾಗಿ ನಿರ್ಮಿಸಲು ರೂ. 02.00 ಕೋಟಿಗಳ ವಿಶೇಷ ಅನುದಾನವನ್ನು ಮಂಜೂರು ಮಾಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಬೆಳಗಾವಿ ಜಿಲ್ಲೆಯ …

Read More »

ಕಿರಣ ಜಾಧವ ಅವರ ತಂದೆ,ಹಿರಿಯ ಪತ್ರಿಕಾ ವಿತರಕ ಮಾರುತಿರಾವ್ ಇನ್ನಿಲ್ಲ…

ಬೆಳಗಾವಿ- ಬೆಳಗಾವಿ ಮಹಾನಗರದಲ್ಲಿ ಹಲವಾರು ದಶಕಗಳ ಕಾಲ ಪತ್ರಿಕಾ ವಿತರಕರಾಗಿ ಕಾರ್ಯನಿರ್ವಹಿಸಿದ ಮಾರುತಿರಾವ್ ಚನ್ನಪ್ಪಾ ಜಾಧವ ಅವರು ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ. ಬೆಳಗಾವಿಯ ಬಿಜೆಪಿ ಮುಖಂಡ ಕಿರಣ ಜಾಧವ ಅವರ ತಂದೆ ಆಗಿರುವ ಮಾರುತಿರಾವ್ ಜಾದವ್ ಅವರು 82 ನೇಯ ವಯಸ್ಸಿನಲ್ಲಿ ಅಗಲಿದ್ದು ಅವರ ಅಂತ್ಯಸಂಸ್ಕಾರ ಇಂದು ಮಧ್ಯಾಹ್ನ 12-00 ಗಂಟೆಗೆ ಸದಾಶಿವ ನಗರದ ಸ್ಮಶಾನದಲ್ಲಿ ನೆರವೇರಲಿದೆ. ಮೃತರಿಗೆ ಬಿಜೆಪಿ ಮುಖಂಡ ಕಿರಣ ಜಾಧವ ಸೇರಿದಂತೆ ಇಬ್ಬರು ಗಂಡು …

Read More »

ಡಿಸಿಗೆ ದೂರು ನೀಡಿದ್ದಕ್ಕೆ ವ್ಯಕ್ತಿಯ ಮೇಲೆ ಹಲ್ಲೆ,ಮನೆಯ ಮೇಲೆ ಕಲ್ಲು ತೂರಾಟ..

ಬೆಳಗಾವಿ-ಗ್ರಾಮದಲ್ಲಿ ನಡೆದ ಬ್ರಷ್ಟಾಚಾರದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ ಮಾರನೇಯ ದಿನವೇ ದೂರು ನೀಡಿದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ,ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಇಂದು ಬೆಳಿಗ್ಗೆ ಬೆಳಗಾವಿ ಸಮೀಪದ ಬೋಡಕೇನಟ್ಟಿ ಗ್ರಾಮದಲ್ಲಿ ನಡೆದಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷ, ಮಾಜಿ ಸದಸ್ಯರು ಮತ್ತು ಬೆಂಬಲಿಗರ ಸೇರಿ ದೂರು ನೀಡಿದ ವ್ಯೆಕ್ತಿಯ ಮೇಲೆ ಗೂಂಡಾಗಿರಿ ಮಾಡಿ,ಆತನಿಗೆ ಮನಬಂದಂತೆ ಥಳಿಸಿದ ಘಟನೆ ಬೆಳಗಾವಿ ತಾಲೂಕಿನ ಬೋಡಕೇನಟ್ಟಿ ಗ್ರಾಮದಲ್ಲಿ ನಡೆದಿದೆ. ನಿನ್ನೆ …

Read More »

ರಮೇಶ್ ಜಾರಕಿಹೊಳಿ ಇವತ್ತು ಮಾಡಿದ್ದು ರಾಜ್ಯಕ್ಕೆ ಮಾದರಿ…..

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಇವತ್ತು ಗೋಕಾಕಿನಲ್ಲಿ ಸರ್ವ ಸಮಾಜಗಳ ಮುಖಂಡರ ಸಭೆ ಕರೆದ್ರು ಈ ಸಭೆಯಲ್ಲಿ ಪೋಲೀಸ್ ಅಧಿಕಾರಿಗಳೂ ಸಹ ಭಾಗವಹಿಸಿದ್ದರು.ಹಿಜಾಬ್ ಕುರಿತು ವಿವಾದ ಬೇಡ,ಭಾರತದಲ್ಲಿ ಸಂವಿಧಾನವೇ ಅಂತಿಮ ಈ ಕುರಿತು ನ್ಯಾಯಾಲಯದ ಆದೇಶವನ್ನು ಒಪ್ಪಬೇಕು,ಈ ಕುರಿತು ವಿವಾದ ಬೇಡ.ಎಲ್ಲರೂ ಶಾಂತಿ ಕಾಪಾಡಬೇಕು ಎನ್ನುವ ಖಡಕ್ ಸಂದೇಶ ನೀಡಿದ್ರು. ಈ ರೀತಿ ಸಭೆ ಕರೆದು ಶಾಸಕರೊಬ್ಬರು ಶಾಂತಿಯ ಸಂದೇಶ ನೀಡಿದ್ದು ರಾಜ್ಯಕ್ಕೆ ಮಾದರಿ… ಸಭೆಯ ವಿವರ…. ಗೋಕಾಕ: …

Read More »

ಪತ್ರಕರ್ತರಿಗೆ ಹೈಟೆಕ್ ಕಾಲೋನಿ ನಿರ್ಮಾಣ: ಶಾಸಕ ಅಭಯ್ ಪಾಟೀಲ ಭರವಸೆ

ಮಾಧ್ಯಮ ಪ್ರತಿನಿಧಿಗಳಿಗೆ ಆರೋಗ್ಯ ವಿಮಾ ಕಾರ್ಡ್ ವಿತರಣೆ ಪತ್ರಕರ್ತರಿಗೆ ಹೈಟೆಕ್ ಕಾಲೋನಿ ನಿರ್ಮಾಣ: ಶಾಸಕ ಅಭಯ್ ಪಾಟೀಲ ಭರವಸೆ ಬೆಳಗಾವಿ, ಫೆ.13(ಕರ್ನಾಟಕ ವಾರ್ತೆ): ಮುಂದಿನ ಮೂರು ತಿಂಗಳಿನಲ್ಲಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ(ಬುಡಾ)ದ ನೂತನ ವಸತಿ ಯೋಜನೆಯಲ್ಲಿ ನೂರಕ್ಕೂ ಅಧಿಕ ಪತ್ರಕರ್ತರಿಗೆ ನಿವೇಶನ ಒದಗಿಸಲು ನಿರ್ಧರಿಸಲಾಗಿದ್ದು, ಬುಡಾ ನಿವೇಶನದಲ್ಲಿ ಪತ್ರಕರ್ತರಿಗೆ ಪ್ರತ್ಯೇಕ ಹಾಗೂ ಹೈಟೆಕ್ ಕಾಲೋನಿ ನಿರ್ಮಿಸಲಾಗುವುದು ಎಂದು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ್ ಪಾಟೀಲ ಭರವಸೆ ನೀಡಿದರು. ಮಹಾನಗರ …

Read More »

ಸರ್ ಬಜೆಟ್ ನಲ್ಲಿ ಬೆಳಗಾವಿಗೆ ಇವೆಲ್ಲಾ ಕೆಲ್ಸಾ ಆಗಬೇಕ್ರೀ…!!!

ಬೆಳಗಾವಿ:ಬೆಳಗಾವಿ ಜಿಲ್ಲಾ ಮಟ್ಟದ ಕಚೇರಿಗಳನ್ನು ಒಂದೇ ಕಟ್ಟಡದಲ್ಲಿ ಸ್ಥಾಪಿಸಲು ಅನುಕೂಲವಾಗಲು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿಯೇ ಬಹುಮಹಡಿ ಕಟ್ಟಡವನ್ನು ನಿರ್ಮಿಸಬೇಕು.ಬೆಳಗಾವಿ ಮಹಾನಗರದ ಸಂಚಾರ ದಟ್ಟಣೆಗೆ ಪರಿಹಾರೋಪಯವಾಗಿ ರಸ್ತೆ ಮೇಲ್ಸೇತುವೆಯನ್ನು ನಿರ್ಮಿಸಬೇಕು ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಮತ್ತು ಹಿರಿಯ ಸಾಹಿತಿಗಳನ್ನೊಳಗೊಂಡ ನಿಯೋಗವು ಇಂದು ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರನ್ನು ಆಗ್ರಹಿಸಿತು. ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ನಿಯೋಗವು ಖ್ಯಾತ ರಂಗಭೂಮಿ ಕಲಾವಿದ …

Read More »

ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿದ ತಾಯಿ…

ಬೆಳಗಾವಿ- ಬೆಳಗಾವಿಯ ಹಿಂಡಲಗಾ ಗಣಪತಿ ಮಂದಿರದ ಎದರಲ್ಲಿನ ಕೆರೆಯಲ್ಲಿ ಇವತ್ತು ಮಧ್ಯಾಹ್ನ ತಾಯಿ ತನ್ನ ಇಬ್ಬರು ಮಕ್ಕಳೊಂದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮಹಿಳೆ ತಮ್ಮಿಬ್ಬರು ಮಕ್ಕಳೊಂದಿಗೆ ಹೊರವಲಯದ ಹಿಂಡಲಗಾ ಗಣಪತಿ ಕೆರೆಗೆ ಹಾರಿ ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ. ತಾಯಿ, ಮಗುವಿನ ಮೃತದೇಹ ಪತ್ತೆಯಾಗಿದ್ದು, ಇನ್ನೊಬ್ಬ ಮಗುವಿನ ಶೋಧ ಕಾರ್ಯ ಕತ್ತಲಾಗುವವರೆಗೂ ಮುಂದುವರೆದಿದೆ. ಇಲ್ಲಿನ ಸಹ್ಯಾದ್ರಿ ನಗರದ ಕೃಷಾ ಮನೀಶ ಕೇಶವಾಣಿ (36) …

Read More »

ಬೆಳಗಾವಿಗೆ ಮತ್ತೆ ಎಂಟ್ರಿ ಹೊಡೆದ ಖತರ್ನಾಕ್ ಇರಾಣಿ ಗ್ಯಾಂಗ್

ಬೆಳಗಾವಿ- ಸರಗಳ್ಳತನ ನಡೆಸಿ ಬೆಳಗಾವಿ ಮಹಾನಗರದ ಜನತೆಯ ನಿದ್ದೆಗೆಡಿಸಿದ್ದ ಖತರ್ನಾಕ್ ಇರಾಣಿ ಗ್ಯಾಂಗ್ ಏಳು ವರ್ಷದ ಬಳಿಕ ಬೆಳಗಾವಿಗೆ ಮತ್ತೆ ಎಂಟ್ರಿ ಹೊಡೆದಿದೆ. 2015 ರಲ್ಲಿ ಬೆಳಗಾವಿಯ ರಾಮತೀರ್ಥ ನಗರದ ಬಳಿ ಸಿಪಿಐ ಗಡ್ಡೇಕರ ಅವರು ಇರಾಣಿ ಗ್ಯಾಂಗ್ ಮೇಲೆ ಫೈರಿಂಗ್ ನಡೆಸಿ ಇರಾಣಿ ಗ್ಯಾಂಗ್ ಗೆ ನಡುಕ ಹುಟ್ಟಿಸಿದ್ದರು. ಆದ್ರೆ 7 ವರ್ಷಗಳಿಂದ ಬೆಳಗಾವಿ ನಗರವನ್ನೇ ಮರೆತಿದ್ದ ಇರಾಣಿ ಗ್ಯಾಂಗ್ ಕಳೆದ ಒಂದು ವಾರದಿಂದ ಬೆಳಗಾವಿ ನಗರಕ್ಕೆ ಕಾಲಿಟ್ಟಿದೆ. …

Read More »

ಅಯೂಬ್ ಖಾನ್ ವಿರುದ್ಧ ದೂರು ದಾಖಲಿಸಲು ಮನವಿ

ಅಥಣಿಯ ಜೈನ ಸಮಿತಿ ವತಿಯಿಂದ ಗೊಮಟೇಶ್ವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಅಯೂಬ್ ಖಾನ್ ವಿರುದ್ಧ ದೂರು ದಾಖಲಿಸಲು ಮನವಿ ಅಥಣಿ- ಜೈನ ಧರ್ಮ ಹಾಗೂ ಗೊಮಟೇಶ್ವರ ಮೂರ್ತಿಯ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟ ಆಯೂಬ್ ಖಾನ್ ಇತನ ಮೇಲೆ ಕಾನೂನು ಕ್ರಮ ಜರುಗಿಸುವ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹಾಗೂ ಮುಖ್ಯಮಂತ್ರಿಗಳಿಗೆ ತಹಶೀಲ್ದಾರ ಮೂಲಕ ಕಾನೂನು ಕ್ರಮ ಕೈಗೊಳ್ಳುವಂತೆ ಅಥಣಿಯ 1008 ಆದಿನಾಥ ದಿಗಂಬರ ಜೈನ …

Read More »

ಸ್ಮಾಯಿಲ್ ನಲ್ಲೇ ಸಿಗ್ನಲ್… ಗೋವಾದಲ್ಲಿ‌ ಕಮಾಲ್….!!!

ಪಣಜಿ-ಗೋವಾದಲ್ಲಿ ಇವತ್ತು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಕೇಂದ್ರದ ಗೃಹ ಸಚಿವ ಅಮೀತ್ ಶಾ ಅವರನ್ನು ನಮಸ್ಕರಿಸಿದಾಗ ನಗುಮುಖದಿಂದಲೇ ಆತ್ಮೀಯವಾಗಿ ಮಾತನಾಡಿದ ಅಮೀತ್ ಶಾ ಸಾಹುಕಾರ್ ಗೆ ಮಂತ್ರಿಯಾಗುವ ಸಿಗ್ನಲ್ ಸ್ಮಾಯಿಲ್ ನಲ್ಲೇ ಕೊಟ್ಟಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಇಂದು ಗೋವಾದಲ್ಲಿ ರಮೇಶ ಜಾರಕಿಹೊಳಿ ಸ್ವಾಗತಿಸಿದ್ದಾರೆ. ಗೋವಾ ರಾಜ್ಯದ ಚುನಾವಣೆ ಪ್ರಚಾರಕ್ಕಾಗಿ ದೆಹಲಿಯಿಂದ ಆಗಮಿಸಿದರು. ಈ ವೇಳೆ ನಗುಮುಖದಿಂದಲೇ ಶಾ ರಮೇಶ ಜಾರಕಿಹೊಳಿ …

Read More »