Breaking News
Home / Breaking News (page 220)

Breaking News

ಬೆಳಗಾವಿಯಲ್ಲಿ ಪರೇಡ್ ಮಾಡಲು ಗೌಡ್ರು 300 ಟ್ರ್ಯಾಕ್ಟರ್ ತರ್ತಾರಂತೆ…..!!

ಬೆಳಗಾವಿ- ದಿಲ್ಲಿ ಬಾಳ ದೂರ ಐತಿ ಅದಕ್ಕೆ ನಾವು ಬೆಳಗಾವಿಯಲ್ಲೇ ಪರೇಡ್ ಮಾಡ್ತೀವಿ,ಬೆಳಗಾವಿಗೆ ಪರೇಡ್ ಮಾಡಲು 300 ಕ್ಕೂ ಹೆಚ್ಚು ಟ್ರ್ಯಾಕ್ಟರ್ ಬರ್ತಾವ್ ಎಂದು ರೈತ ಮುಖಂಡ ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಹೇಳಿದ್ದಾರೆ. ಬೆಳಗಾವಿ ಸುದ್ಧಿ ಡಾಟ್ ಕಾಮ್ ಜೊತೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆ ಖಂಡಿಸಿ ನಾಳೆ ಬೆಳಗಾವಿಯಲ್ಲಿ ಟ್ರ್ಯಾಕ್ಟರ್ ಪರೇಡ್ ಮಾಡುತ್ತೇವೆ,ಕೇವಲ ದೆಹಲಿಯಲ್ಲಿ ಅಷ್ಟೇ ಅಲ್ಲ,ಬೆಳಗಾವಿಯಲ್ಲೂ ಪರೇಡ್ ನಡೆಯಲಿದೆ ಎಂದರು …

Read More »

ಇಂದಿನಿಂದ ಬೆಳಗಾವಿ- ನಾಸೀಕ್ ನಡುವೆ ನೇರ ವಿಮಾನ ಸೇವೆ…

ಬೆಳಗಾವಿ:ಎರಡನೇ ವಾರ್ಷಿಕೋತ್ಸವ ಸಂಭ್ರಮದಲ್ಲಿರುವ ಸ್ಟಾರ್ ಏರ್ಲೈನ್ಸ್ ಸಂಸ್ಥೆ ಇಂದಿನಿಂದ ಬೆಳಗಾವಿ-ನಾಸಿಕ್ ಮಾರ್ಗ ಮಧ್ಯೆ ನೇರ ವಿಮಾನ ಸೇವೆ ಆರಂಭಿಸಲಾಗುತ್ತಿದೆ ಎಂದು ಸ್ಟಾರ್ ಏರ್ಲೈನ್ಸ್ ನಿರ್ದೇಶಕ ಶ್ರೇಣಿಕ್ ಘೋಡಾವತ್ ತಿಳಿಸಿದರು. ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ‌ ನೀಡಿದ ಅವರು,‌ ಇಂದಿನಿಂದಲೇ ವಿಮಾನ ಸೇವೆ ಆರಂಭವಾಗಲಿದೆ. ಉಡಾನ್ ಯೋಜನೆಯಡಿ ಸ್ಟಾರ್ ಏರ್ಲೈನ್ಸ್ ತನ್ನ ಸೇವೆ ವಿಸ್ತರಿಸುತ್ತಿದೆ ಎಂದರು. ಸ್ಟಾರ್ ಏರ್ಲೈನ್ಸ್ ಈಗಾಗಲೇ ಅಹ್ಮದಾಬಾದ್, ಅಜ್ಮೀರ್, ಬೆಂಗಳೂರು, ದೆಹಲಿ, ಬೆಳಗಾವಿ, ಹುಬ್ಬಳ್ಳಿ, ತಿರುಪತಿ, ಇಂದೋರ್, ಕಲಬುರ್ಗಿ, …

Read More »

ಮಗನ ಮದುವೆ ಮುಗಿಸಿ ನಾಲ್ಕು ದಿನ ಆಗಿತ್ತು…ಡ್ಯುಟಿ 30 ದಿನ ಮಾತ್ರ ಬಾಕಿ ಇತ್ತು….

ಬೆಳಗಾವಿ- ನಾಲ್ಕು ದಿನದ ಹಿಂದೆಯಷ್ಟೇ ಮಗನ ಮದುವೆ ಮಾಡಿದ ತಾಯಿ ಇಂದು ಮಗ,ಮತ್ತು ಸೊಸೆಯ ಜೊತೆ,ಇಂದು ಯಲ್ಲಮ್ಮನ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದು ಮರಳಿ ಮನೆಗೆ ಬರುವಾಗ ವಿಧಿಯ ಅಟ್ಟಹಾಸ ಎಂತಹದ್ದು ನೋಡಿ ಎಲ್ಲರನ್ನೂ ಬಾರದ ಲೋಕಕ್ಕೆ ಕಳುಹಿಸಿತು… ಬೆಳಗಾವಿಯ ಮಹಿಳಾ ಪೋಲೀಸ್ ಠಾಣೆಯಲ್ಲಿ ಸಬ್ ಇನೆಸ್ಪೆಕ್ಟರ್ ಎಂದು ಕರ್ತವ್ಯ ನಿಭಾಯಿಸುತ್ತಿದ್ದ,ಲಕ್ಷ್ಮೀ ನೆಲವಡೆ ಅವರು ನಿವೃತ್ತಿಯಾಗಲು ಕೇವಲ ಒಂದು ತಿಂಗಳು ಮಾತ್ರ ಬಾಕಿ ಉಳಿದಿತ್ತು ಜನೇವರಿ 21 ರಂದು ಮಗ …

Read More »

ಬಸ್ ಕಾರು ಮುಖಾಮುಖಿ,ಬೆಳಗಾವಿಯ ನಾಲ್ಕು ಜನರ ಸಾವು…

ಬೆಳಗಾವಿ- ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯ ಚಚಡಿ – ಗೋಂತಮಾರ ಕ್ರಾಸ್ ಬಳಿ ಕೆಎಸ್ಆರ್ಟಿಸಿ ಬಸ್ ಮತ್ತು ಕಾರಿನ ನಡುವೆ ಮುಖಾ ಮುಖಿ ಡಿಕ್ಕಿಯಾಗಿದ್ದು, ಬೆಳಗಾವಿ ನಗರದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.. ಬಸ್ ಮತ್ತು ಕಾರು ಮುಖಾಮುಖಿ ಡಿಕ್ಕಿಯಾದ ಕಾರಣ ಕಾರು ಬಸ್ಸಿನ ಕೆಳಗೆ ಜಿಬ್ಬಿಯಾಗಿತ್ತು,ತಕ್ಷಣ ಮುರುಗೋಡ ಪೋಲೀಸರು ಕ್ರೇನ್ ತರಿಸಿ ಬಸ್ಸಿನಿಂದ ಕಾರನ್ನು ಬೇರ್ಪಡಿಸಿದ ಬಳಿಕ ನಾಲ್ವರು ಮೃತಪಟ್ಟಿರುವ ವಿಷಯ ಗೊತ್ತಾಗಿದೆ. ಬೆಳಗಾವಿಯ ಸಹ್ಯಾದ್ರಿ ನಗರದ …

Read More »

ಫೈರೀಂಗ್ ಮಾಡಿ ಅಂಗಡಿ ಲೂಟಿ ಮಾಡುವ ಯತ್ನ ವಿಫಲ….

ಬೆಳಗಾವಿ-ಬೆಳಗಾವಿಯಲ್ಲಿ ಶುಕ್ರವಾರ ರಾತ್ರಿ ಬೆಳಗಾವಿ ನಗರದ ಮುಖ್ಯ ಮಾರುಕಟ್ಟೆ ಪ್ರದೇಶದ ಅಂಗಡಿಯೊಂದರ ಮಾಲೀಕನ ಮೇಲೆ ಗುಂಡು ಹಾರಿಸಿ,ಹಣ ಲೂಟಿ ಮಾಡುವ ಪ್ರಯತ್ನ ನಡೆಸಿರುವ ಗಂಭೀರ ಪ್ರಕರಣ ಬೆಳಗಾವಿಯ ಮಾರ್ಕೆಟ್ ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ. ಶುಕ್ರವಾರ ರಾತ್ರಿ ಬೆಳಗಾವಿಯ ಮಠಗಲ್ಲಿಯ ಹೋಲ್ ಸೇಲ್ ಸ್ಟೇಶನರಿ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು ಶನಿವಾರ ರಾತ್ರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೈಕ್ ಮೇಲೆ ಆಗಮಿಸಿದ ಇಬ್ಬರು ದರೋಡೆಕೋರರು,ಅಂಗಡಿಗೆ ಹೋಗಿ ಒಬ್ಬ ಬಿಸ್ಕೀಟ್ ಖರೀಧಿ …

Read More »

ಬೆಳಗಾವಿ ಕಡೆ,ಬೆಂಗಳೂರು ನಾಯಕರ ಪಡೆ….!!

ಬೆಳಗಾವಿ- ಬೆಳಗಾವಿಯಲ್ಲಿ ಶಿವಸೇನೆ,ಮತ್ತು ಎಂಈಎಸ್ ಕಿರಿಕ್ ಹೆಚ್ಚಾಗುತ್ತಿದ್ದಂತೆಯೇ,ಬೆಂಗಳೂರಿನ ಕನ್ನಡ ಸಂಘಟನೆಗಳ ನಾಯಕರು ಈಗ ಬೆಳಗಾವಿಯತ್ತ ಮುಖ ಮಾಡಿದ್ದು,ದಿನಕ್ಕೊಂದು ಕನ್ನಡ ಸಂಘಟನೆ ಬೆಳಗಾವಿಗೆ ಆಗಮಿಸಿ ಕನ್ನಡಿಗರ ಬೆಂಬಲಕ್ಕೆ ನಿಲ್ಲುತ್ತಿವೆ. ಇಂದು ಕನ್ನಡದ ರಣಧೀರ ವಾಟಾಳ್ ನಾಗರಾಜ್ ಅವರು ಹಲವಾರು ವರ್ಷಗಳ ಬಳಿಕ,ಹಿರೇಬಾಗೇವಾಡಿ ಟೋಲ್ ದಾಟಿ ಬೆಳಗಾವಿಯ ಚನ್ನಮ್ಮ ಸರ್ಕಲ್ ಗೆ ಆಗಮಿಸಿ,ಹೋರಾಟ ಮಾಡಿ,ಎಂಈಎಸ್ ಮತ್ತು ಶಿವಸೇನೆಯ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ವಾಟಾಳ್ …

Read More »

ಕುಂದಾನಗರಿ ಬೆಳಗಾವಿಗೆ ಗ್ಯಾಲರಿಗಳ ಗರಿ….!!

ಬೆಳಗಾವಿ-ಬೆಳಗಾವಿ ಮಹಾನಗರ ಅಭಿವೃದ್ಧಿಯ ಪಥದಲ್ಲಿ ಸಾಗಿದೆ,ಮಹಾನಗರದ ಎಲ್ಲೆಡೆ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗಿರುವ ಸಂಧರ್ಭದಲ್ಲಿ ಬೆಳಗಾವಿಯಲ್ಲಿ ಮಹತ್ವದ ಎರಡು ಯೋಜನೆಗಳಿಗೆ ಚಾಲನೆ ಸಿಕ್ಕಿದೆ. ಬೆಳಗಾವಿಯ ಮಿಸ್ಟರ್ ಡೆವಲಪ್ಮೆಂಟ್ ಎಂದೇ ಕರೆಯಲ್ಪಡುವ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಬೆಳಗಾವಿ ನಗರದ ವ್ಯಾಕ್ಸೀನ್ ಡಿಪೋದಲ್ಲಿ,ಸಿವಿಲ್ ಏವಿಯೇಶನ್ ಗ್ಯಾಲರಿ ಮತ್ತು ಅತ್ಯಾಧುನಿಕವಾದ ಆರ್ಟ್ ಗ್ಯಾಲರಿ ನಿರ್ಮಾಣಕ್ಕೆ ಪೂಜೆ ನೇರವೇರಿಸು ಮೂಲಕ ಚಾಲನೆ ನೀಡಿದ್ದಾರೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ಬೆಳಗಾವಿಯಲ್ಲಿ ಸಿವಿಲ್ ಏವಿಯೇಶನ್ …

Read More »

ಮಹಾರಾಷ್ಟ್ರದ 8 ಜನ ಶಿವಸೇನೆ ನಾಯಕರ ವಿರುದ್ಧ ಕೇಸ್

ಬೆಳಗಾವಿ-ಕರ್ನಾಟಕದ ಗಡಿಯಲ್ಲಿ ನುಗ್ಗಿ ಪುಂಡಾಟಿಕೆ ಪ್ರದರ್ಶಿಸಲು ಮುಂದಾಗಿದ್ದ ಮಹಾರಾಷ್ಟ್ರದ 8 ಜನ ಶಿವಸೇನೆ ನಾಯಕರ ವಿರುದ್ಧ ಬೆಳಗಾವಿಯ ಕಾಕತಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಶಿವಸೇನೆ ಅದ್ಯಕ್ಷ ವಿಜಯ ದೇವಣೆ ಸೇರಿದಂತೆ ಒಟ್ಟು 8 ಜನ ಶಿವಸೇನೆಯ ನಾಯಕರ ವಿರುದ್ಧ ಪ್ರಕರಣ ದಾಖಲಾಗಿದ್ದು,ಬೆಳಗಾವಿಗೆ ಬಂದು ಪುಂಡಾಟಿಕೆ ಮಾಡಿ ಹೋದರೆ ಯಾರೂ ಏನೂ ಮಾಡುವದಿಲ್ಲ ಎಂದು ತಿಳಿದುಕೊಂಡಿದ್ದ ಶಿವಸೇನೆಯ ನಾಯಕರಿಗೆ ಬೆಳಗಾವಿ ಪೋಲೀಸರು ಶಾಕ್ ಕೊಟ್ಟಿದ್ದಾರೆ. 1986 …

Read More »

ನಾಳೆ ಬೆಳಗಾವಿಯಲ್ಲಿ ಬಿಜೆಪಿಯ ಮಹತ್ವದ ಸಭೆ…

ಬೆಳಗಾವಿ- ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್,ನಾಳೆ ಬೆಳಗಾವಿ ನಗರಕ್ಕೆ ಆಗಮಿಸಲಿದ್ದು ,ಬಿಜೆಪಿ ನಾಯಕರ ಮಹತ್ವದ ಸಭೆ ನಡೆಯಲಿದೆ. ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ,ಉಮೇಶ ಕತ್ತಿ ಅವರ ಪ್ರವಾಸದ ಪಟ್ಟಿಯಲ್ಲಿ ನಾಳೆ ನಳೀನ್ ಕುಮಾರ್ ಕಟೀಲು ಅವರು ಮದ್ಯಾಹ್ನ 3-30 ಕ್ಕೆ ನಗರದ ಸಂಕಮ್ ಹೊಟೇಲ್ ನಲ್ಲಿ ಸಭೆ ನಡೆಸಲಿದ್ದು ಈ ಸಭೆಯಲ್ಲಿ ಉಮೇಶ್ ಕತ್ತಿ ಅವರು ಭಾಗವಹಿಸುತ್ತಾರೆ ಎಂದು ತಿಳಿಸಲಾಗಿದೆ. ಬೆಳಗಾವಿ ಬಿಜೆಪಿ ನಾಯಕರ ಸಭೆಯಲ್ಲಿ ಲೋಕಸಭಾ …

Read More »

ಆಸ್ತಿ ವಿವಾದ,4 ವರ್ಷದ ಬಾಲಕನ ಕೊಲೆ..

ಬೆಳಗಾವಿ- ಆಸ್ತಿ ವಿವಾದಕ್ಕೆ ಸಮಂಧಿಸಿದಂತೆ 4 ವರ್ಷದ ಬಾಲಕನನ್ಮೇ ಕೊಲೆ ಮಾಡಿದ ಘಟನೆ ಸವದತ್ತಿ ತಾಲ್ಲೂಕಿನ ಹಾರುಗೊಪ್ಪ ಗ್ರಾಮದಲ್ಲಿ ನಡೆದಿದೆ. ನಾಲ್ಕು ವರ್ಷದ, ಮಾರುತಿ ವಿರೇಶ್ ಸಂಕಣ್ಣವರ ಎಂಬ ಪುಟ್ಟ ಬಾಲಕನನ್ನು ಹತ್ಯೆ ಮಾಡಲಾಗಿದೆ. ಈರಪ್ಪ ಬಸಪ್ಪ ಸಂಕಣ್ಣವರ 35 ವರ್ಷ, ಈತನೇ ,ಕೊಲೆ ಪ್ರಕರಣದ ಮುಖ್ಯ ಆರೋಪಿ ಎಂದು ತಿಳಿದು ಬಂದಿದ್ದು ,ಮುರಗೋಡ ಪೋಲೀಸರು ತನಿಖೆ‌ ,ನಡೆಸಿದ್ದಾರೆ.

Read More »