ಬೆಳಗಾವಿ-ಕಾಂಗ್ರೆಸ್ಸಿಗೆ ಸ್ಟ್ಯಾಂಡ್ ಅದು ಬಸ್ ಸ್ಟ್ಯಾಂಡ್ ಆಗಿದೆ.ಅಲ್ಲಿ ಯಾರೋ ಹೊಕ್ತಾರೆ,ಬಸ್ಸಿನ ಜೊತೆ ಟಿಂಪೋಗಳು ಹೊಕ್ತಾವೆ,ಎಂದು ಬೆಳಗಾವಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಲೇವಡಿ ಮಾಡಿದ್ದಾರೆ. ರಾಜ್ಯದಲ್ಲಿ ನಡೆಯುವ ಮೂರು ಉಪಚುನಾವಣೆ ಬಿಜೆಪಿ ಐತಿಹಾಸಿಕ ಗೆಲವು ಸಾಧಿಸುತ್ತದೆ. ಬೆಳಾಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ದಾಖಲೆ ಗೆಲವು ಸಾಧಿಸಲಿದ್ದಾರೆ ಎಂದು ಜೋಶಿ ಭವಿಷ್ಯ ನುಡಿದರು. ಬೆಳಗಾವಿ ಉಪಚುನಾವಣೆಯಲ್ಲಿ ದೇಶದಲ್ಲಿ ನರೇಂದ್ರ ಮೋದಿ ಅಭಿವೃದ್ಧಿ ಕೆಲಸ.ಸುರೇಶ್ ಅಂಗಡಿ ಅಭಿವೃದ್ಧಿ ಕೆಲಸ …
Read More »ಭಾರತ ಮಾತೆಯನ್ನೇ ಮಾರಾಟಕ್ಕಿಟ್ಟು ಭಾರತ್ ಮಾತಾಕೀ ಜೈ ಅಂದ್ರೆ ಹೇಗೆ..??
ಬೆಳಗಾವಿ-ಮಾರ್ಚ್ 31ರಂದು ಬೆಳಗಾವಿಯಲ್ಲಿ ರೈತ ಮಹಾ ಪಂಚಾಯತ್ ಸಮಾವೇಶ ನಡೆಯಲಿದ್ದು ಈ ಸಮಾವೇಶದಲ್ಲಿ ಐವತ್ತು ಸಾವಿರಕ್ಕೂ ಹೆಚ್ಚು ರೈತರು ಸಮಾವೇಶ ಗೊಳ್ಳುತ್ತಾರೆ ಎಂದು ರೈತ ಮುಖಂಡರು ತಿಳಿಸಿದ್ದಾರೆ ಬೆಳಗಾವಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ರೈತ ಮುಖಂಡರು,ಕೇಂದ್ರ ಸರ್ಕಾರದ ವಿರುದ್ಶ ಆಕ್ರೋಶ ವ್ಯೆಕ್ತಪಡಿಸಿದರು ರೈತ ಮುಖಂಡ ಕೆ.ಟಿ.ಗಂಗಾಧರ ಮಾತನಾಡಿ ಭಾರತದ ಭೂಮಿಯೇ ಭಾರತ ಮಾತೆ,ಮೋದಿ ಸರ್ಕಾರ ಭಾರತ ಮಾತೆಯನ್ನೇ ಮಾರಾಟಕ್ಕಿಟ್ಟು ಭಾರತ್ ಮಾತಾಕೀ ಜೈ ಅಂದ್ರೆ ಹೇಗೆ? ಎಂದು ಬೆಳಗಾವಿಯಲ್ಲಿ ರೈತ …
Read More »ಬಿಜೆಪಿಯಲ್ಲಿ ಸರ್ವ ಮಂಗಳ,ಇವತ್ತಿನಿಂದ ಶ್ರೀ ಗಣೇಶ….!!!
ಬೆಳಗಾವಿ-ದಿ ಸುರೇಶ್ ಅಂಗಡಿ ಅವರ ಕುಟುಂಬಕ್ಕೆ ಅದೃಷ್ಠದ ಬಾಗಿಲು ತೆರೆದಿದೆ,ನಿನ್ನೆ ರಾತ್ರಿ ಬಿಜೆಪಿ ಹೈಕಮಾಂಡ್ ಸುರೇಶ್ ಅಂಗಡಿ ಅವರ ಪತ್ನಿ ಮಂಗಲಾ ಅಂಗಡಿ,ಅವರ ಹೆಸರು ಘೋಷಣೆ ಮಾಡುತ್ತಿದ್ದಂತೆ ಮಂಗಲಾ ಅಂಗಡಿ ಇವತ್ತು ಬೆಳ್ಳಂ ಬೆಳಿಗ್ಗೆ ಫೀಲ್ಡ್ ಗೆ ಇಳಿದಿದ್ದಾರೆ. ಮಂಗಲಾ ಅಂಗಡಿ,ಪುತ್ರಿ ಶ್ರದ್ಧಾ, ಮತ್ತು ಡಾ. ಸ್ಪೂರ್ತಿ ಸೇರಿದಂತೆ ಕುಟುಂಬಸ್ಥರು ಇವತ್ತು ಬೆಳಿಗ್ಗೆ ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿರುವ ಶ್ರೀ ಗಣೇಶ್ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚುನಾವಣಾ ಅಖಾಡಕ್ಕೆ …
Read More »ಬಿಜೆಪಿ ಅಭ್ಯರ್ಥಿಯಾಗಿ ಮಂಗಳಾ ಅಂಗಡಿ ಫೈನಲ್
ಬೆಳಗಾವಿ- ಕೊನೆಗೂ ಸುರೇಶ್ ಅಂಗಡಿ ಕುಟುಂಬಕ್ಕೆ ಅದೃಷ್ಠ ಒಲಿದು ಬಂದಿದ್ದು,ಸುರೇಶ್ ಅಂಗಡಿ ಅವರ ಪತ್ನಿ ಮಂಗಳಾ ಅಂಗಡಿ ಅವರಿಗೆ ಬಿಜೆಪಿ ಟಿಕೆಟ್ ಸಿಕ್ಕಿದೆ. ಬಿಜೆಪಿ ಹೈಕಮಾಂಡ್ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯನ್ನಾಗಿ ಮಂಗಳಾ ಅಂಗಡಿ ಅವರ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಿದೆ.
Read More »ಕಾಂಗ್ರೆಸ್ ಅಭ್ಯರ್ಥಿಯಾಗಿ ಜಾರಕಿಹೊಳಿ ಫೈನಲ್
ಬೆಂಗಳೂರು: ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಮಾ.29 (ಸೋಮವಾರ) ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರು ನಾಮಪತ್ರ ಸಲ್ಲಿಕೆ ವೇಳೆ ಸತೀಶ ಅವರೊಂದಿಗೆ ಹಾಜರಿರಲಿದ್ದಾರೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಹ ನಾಮಪತ್ರ ಸಲ್ಲಿಕೆ ವೇಳೆ ಭಾಗವಹಿಸುವ ಸಾಧ್ಯತೆ ಇದೆ.
Read More »ಬಿಜೆಪಿ ಅಭ್ಯರ್ಥಿ ಇವತ್ತೇ ಫೈನಲ್….!!!
ಬೆಳಗಾವಿ-ಬೆಳಗಾವಿ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರಾಗ್ತಾರೆ ಎನ್ನುವ ವಿಷಯ ಅತ್ಯಂತ ಕುತೂಹಲ ಕೆರಳಿಸಿದ್ದು ಇವತ್ತೇ ಬಿಜೆಪಿ ಅಭ್ಯರ್ಥಿ ಘೋಷಣೆಯಾಗುವ ಎಲ್ಲ ಸಾಧ್ಯತೆಗಳಿವೆ. ಬಿಜೆಪಿ ಅಭ್ಯರ್ಥಿ ಯಾರಾಗಬಹುದು,? ಬಿಜೆಪಿ ಟಿಕೆಟ್ ಯಾರಿಗೆ ಸಿಗಬಹುದು,ಎನ್ನುವದರ ಬಗ್ಗೆ ಈಗಾಗಲೆ ಅನೇಕ ಆಯಾಮಗಳಲ್ಲಿ ಚರ್ಚೆ,ವಿಶ್ಲೇಷಣೆಗಳು ನಡೆದು ಈ ವಿಚಾರದಲ್ಲಿ ಹಲವಾರು ಜನ ಆಕಾಂಕ್ಷಿಗಳ ಹೆಸರುಗಳು ಪ್ರಸ್ತಾಪ ಆಗಿವೆ.ಈ ಅಭ್ಯರ್ಥಿಯನ್ನು ಘೋಷಣೆ ಮಾಡುವ ಕುರಿತು ಕ್ಷಣಗಣನೆ ಶುರುವಾಗಿದ್ದು ಅಂತಿಮ ಕ್ಷಣಗಳಲ್ಲಿ ಯಾರು ಲಾಟರಿ ಹೊಡೆಯುತ್ತಾರೆ ಅನ್ನೋದನ್ನು …
Read More »ದೆಹಲಿಗೆ ಹೋಗಿಲ್ಲ,ಬೆಂಗಳೂರಿಗೆ ಹೋಗಿದ್ದೆ- ಶ್ರದ್ಧಾ ಅಂಗಡಿ
ಬೆಳಗಾವಿ-ಸುಮಾರು ಎರಡು ವಾರಗಳ ಕಾಲ ಬೆಂಗಳೂರಲ್ಲೇ ಇದ್ದುಕೊಂಡು ಬಿಜೆಪಿ ಟಿಕೆಟ್ ಗಾಗಿ ನಿರಂತರ ಪ್ರಯತ್ನ ನಡೆಸಿದ ಸುರೇಶ ಅಂಗಡಿ ಅವರ ಪುತ್ರಿ ಶ್ರದ್ದಾ ಅಂಗಡಿ ಇವತ್ತು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಿ,ಬೆಳಗಾವಿಗೆ ಮರಳಿದ್ದಾರೆ. ಇಂದು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಶ್ರದ್ಧಾ ಅಂಗಡಿ, ಬೆಳಗಾವಿ ಲೋಕಸಭಾ ಉಪಚುನಾವಣೆ ಹಿನ್ನಲೆ. ಹೈಕಮಾಂಡ್ ಟಿಕೆಟ್ ನೀಡಿದ್ರೇ ಸ್ಪರ್ಧೆ ಮಾಡುತ್ತೇವೆ. ಟಿಕೆಟ್ ವಿಚಾರದ ಕುರಿತು ವರಿಷ್ಠರ ಭೇಟಿಗೆ ಹೋಗಿದ್ದೆ ಎಂದು …
Read More »ಅಭ್ಯರ್ಥಿ ಯಾರು ಅನ್ನೋದು ಇನ್ನೂ ಡೌಟು..ಶುರು ಆಗಿಲ್ಲ ಬೈ ಇಲೆಕ್ಷನ್ ಫೈಟು…!!
ಬೆಳಗಾವಿ-ಏಪ್ರಿಲ್ 17ಕ್ಕೆ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ನಡೆಯಲಿದೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿ ಎರಡು ದಿನ ಕಳೆದರೂ,ಎರಡೂ ರಾಜಕೀಯ ಪಕ್ಷಗಳು ಇನ್ನುವರೆಗೆ ಅಭ್ಯರ್ಥಿಗಳ ಘೋಷಣೆ ಮಾಡದೇ ಇರುವದರಿಂದ ಉಪ ಕದನ ಇನ್ನುವರೆಗೆ ರಂಗೇರಿಲ್ಲ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಎಲ್ಲಾ ಗೊಂದಲವೇ ಗೊಂದಲ ಅಭ್ಯರ್ಥಿಗಳ. ಘೋಷಣೆ ವಿಳಂಬವಾಗುತ್ತಿದೆ ಹೀಗಾಗಿ,ಉಪಚುನಾವಣೆ ಕಾವು ಇಲ್ಲ,ರಾಷ್ಟ್ರೀಯ ಪಕ್ಷಗಳಿಗೆ ಅಭ್ಯರ್ಥಿ ಆಯ್ಕೆ ಸವಾಲ್ ಆಗಿದೆ.ಮೊ ದಲು ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಮಾಡ್ಲಿ ಅಂತ ಬಿಜೆಪಿ.ಬಿಜೆಪಿ ಅಭ್ಯರ್ಥಿ …
Read More »ಬೆಳಗಾವಿ ಬೈ ಇಲೆಕ್ಷನ್ ಬಿಜೆಪಿಯಿಂದ ಅಖಾಡಾಕ್ಕಿಳಿದ, ಸ್ವಾಮೀಜಿ…
ಬೆಳಗಾವಿ,- ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಮೊದಲ ದಿನವಾದ ಮಂಗಳವಾರ (ಮಾ.23) ಇಬ್ಬರು ಅಭ್ಯರ್ಥಿಗಳು ಒಟ್ಟು ನಾಲ್ಕು ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ವೆಂಕಟೇಶ್ವರ ಮಹಾಸ್ವಾಮೀಜಿ ಅವರು ಒಟ್ಟು ಮೂರು ನಾಮಪತ್ರಗಳನ್ನು ಸಲ್ಲಿಸಿದ್ದು, ಅದರಲ್ಲಿ ಎರಡು ಭಾರತೀಯ ಜನತಾ ಪಾರ್ಟಿ ಹಾಗೂ ಒಂದು ಹಿಂದುಸ್ತಾನ ಜನತಾ ಪಾರ್ಟಿಯಿಂದ ಸಲ್ಲಿಸಿರುತ್ತಾರೆ. ಪಕ್ಷೇತರ ಅಭ್ಯರ್ಥಿಯಾಗಿ ಶ್ರೀಕಾಂತ್ ಪಡಸಲಗಿ ಅವರು ನಾಮಪತ್ರವನ್ನು ಸಲ್ಲಿಸಿದರು.ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರು ನಾಮಪತ್ರಗಳನ್ನು …
Read More »ಕನ್ನಡದ ಯುವಕನಿಗೆ,ಮರಾಠಿ ಹೃದಯ..ಕೆಲ್ಇ ಆಸ್ಪತ್ರೆಯ ಮಹಾನ್ ಚಿಕಿತ್ಸೆ..
ಬೆಳಗಾವಿ-ಜನರ ಆರೋಗ್ಯ ಕಪಾಡುತ್ತ ಜೀವ ಉಳಿಸುವ ಮಹೊನ್ನತ ಕಾರ್ಯದಲ್ಲಿ ತೊಡಗಿರುವ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರವು ಯಶಸ್ಸಿನ ಗುರಿ ಮುಟ್ಟಿ, ದ್ವೀತೀಯ ಬರಿಗೆ ಹೃದಯ ಕಸಿ ಮಾಡುವದರ ಮೂಲಕ ಇನ್ನೊಬ್ಬರ ಬಾಳಿಗೆ ಸಂಜೀವಿನಿಯಾಗಿದೆ. 52 ವರ್ಷದ ವ್ಯಕ್ತಿಯ ಹೃದಯವು 17 ವರ್ಷದ ಯುವಕನ ದೇಹದಲ್ಲಿ ಮರುಜೋಡಣೆಗೊಂಡು ಮಿಡಿಯುತ್ತಿದೆ. ಹೃದಯ ಪಡೆದ ರೋಗಿಯ ಇತಿಹಾಸ : ಅತ್ಯಂತ ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿದ್ದ …
Read More »