Breaking News
Home / Breaking News (page 260)

Breaking News

ಇನ್ಸುಲಿನ್ ತಗೊಂಡು ಸರ್ಕಾರಕ್ಕೆ ಇಂಜೆಕ್ಷನ್ ಕೊಟ್ಟ ಟಗರು….!

ಬೆಳಗಾವಿ- ಬೆಳಗಾವಿಗೆ ಇನ್ಸೂಲಿನ್ ಮರೆತು ಬಂದ ಮಾಜಿ ಸಿಎಂ ಸಿದ್ದರಾಮಯ್ಯ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಇನ್ಸುಲಿನ್ ಗಾಗಿ ಗಂಟೆಗಳ ಕಾಲ ಕಾಯ್ದು ಕುಳಿತ ಘಟನೆ ನಡೆಯಿತು. ಮಧುಮೇಹ ಕಾಯಿಲೆಗಾಗಿ ಇನ್ಸುಲಿನ್ ತಗೆದುಕೊಳ್ಳುತ್ತಿರುವ ಸಿದ್ದರಾಮಯ್ಯ ಇಂದು ಬೆಳಿಗ್ಗೆ ಇನ್ಸುಲಿನ್ ಮರೆತು ಬೆಳಗಾವಿಗೆ ಬಂದಿದ್ದರು. ಇನ್ಸುಲಿನ್‌ಗಾಗಿ ಒಂದು ಗಂಟೆ ಕಾಯಬೇಕಾಯಿತು. ಬೆಳಗಾವಿ ನಗರದಿಂದ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಇನ್ಸುಲಿನ್ ತಂದು ಕೊಟ್ಟ ಬಳಿಕ ಸಿದ್ರಾಮಯ್ಯ ವಿಮಾನ ನಿಲ್ಧಾಣದಿಂದ ಹೊರಕ್ಕೆ ಬಂದರು.ಸಿದ್ದರಾಮಯ್ಯ ಗೆ ಇನ್ಸುಲಿನ್ …

Read More »

ಗಣೇಶ ಹುಕ್ಕೇರಿ,ಅಣ್ಣಾಸಾಬ ಜೊಲ್ಲೆ ನಡುವೆ ಬಿಗ್ ಫೈಟ್….!!!

ಬೆಳಗಾವಿ-ಬೆಳಗಾವಿ ಜಿಲ್ಲೆಯ ಪ್ರತಿಷ್ಠಿತ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ಚುನಾವಣೆ ನಡೆಯಲಿದೆ,ನಿರ್ದೇಶಕರ ಸ್ಥಾನಕ್ಕೆ ಅಕ್ಟೋಬರ್ 22 ರಿಂದ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದೆ‌ ಬೆಳಗಾವಿ ಜಿಲ್ಲೆಯ ಹತ್ತು ತಾಲ್ಲೂಕುಗಳಿಂದ ತಲಾ ಒಬ್ಬರು ನಿರ್ದೇಶಕರು ಚುನಾಯಿತರಾಗುತ್ತಾರೆ,ಚಿಕ್ಕೋಡಿ ತಾಲ್ಲೂಕಿನಿಂದ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಲು,ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ,ಮತ್ತು ಶಾಸಕ ಗಣೇಶ್ ಹುಕ್ಕೇರಿ ನಡುವೆ ಬಿಗ್ ಫೈಟ್ ನಡೆಯಲಿದೆ. ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಡಿಸಿಸಿ ಬ್ಯಾಂಕಿನ ಹಾಲಿ ನಿರ್ದೇಶಕರಾಗಿದ್ದಾರೆ, ಈ ಸ್ಥಾನ ಗಿಟ್ಟಿಸಿಕೊಳ್ಳಲು …

Read More »

ಆತ ಹೋಗಿದ್ದು ಕುರಿ ಮೇಯಿಸಲು ಆದ್ರೆ, ಅಲ್ಲಿ ಆಗಿದ್ದೇ ಬೇರೆ…..

ಬೆಳಗಾವಿ- ಕುರಿ ಮೇಯಿಸಲು ಹೋಗಿದ್ದ ಯುವಕನೊಬ್ಬ ಕೃಷಿ ಹೊಂಡದಲ್ಲಿ ಕಾಲು ಜಾರಿ ನೀರು ಪಾಲಾದ ಘಟನೆ ಸುಳಗಾ,(ಹಿಂಡಲಗಾ) ಗ್ರಾಮದಲ್ಲಿ ನಡೆದಿದೆ. ಕುರಿ ಮೇಯಿಸಲು ತೆರಳಿದ್ದ 32 ವರ್ಷದ ಯುವಕ ವಿಠ್ಠಲ ಅನಗೋಳಕರ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ಈಜಲು ಬಾರದೇ ಇರುವದರಿಂದ ಕೃಷಿ ಹೊಂಡದಲ್ಲೇ ಮೃತಪಟ್ಟಿದ್ದಾನೆ. ಕಾಕತಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

Read More »

ಮೊತ್ತೊಬ್ಬರ ಹೆಸರಿನಲ್ಲಿ ಪೋಲೀಸ್ ಎಕ್ಸಾಮ್ ಬರೆಯುತ್ತಿದ್ದ. ಓರ್ವನ ಬಂಧನ….

ಬೆಳಗಾವಿ- ಇಂದು ಬೆಳಗಾವಿಯಲ್ಲಿ DAR /CAR ಪೋಲೀಸ್ ಕಾನ್ಸಟೇಬಲ್ ಹುದ್ದೆ ನೇಮಕಾತಿಗಾಗಿ,ಪರೀಕ್ಷೆ ನಡೆಯುತ್ತಿದೆ ಬೇರೆಯವರ ಹೆಸರಿನಲ್ಲಿ ಪರೀಕ್ಷೆ ಬರೆಯುತ್ತಿದ್ದ ಓರ್ವ ನಕಲಿ ಅಭ್ಯರ್ಥಿ ಖಾಕಿ ಬಲೆಗೆ ಬಿದ್ದಿದ್ದಾರೆ. ಬೆಳಗಾವಿಯ ಪರೀಕ್ಷಾ ಕೇಂದ್ರಗಳಲ್ಲಿ ಮತ್ತೊಬ್ಬರ ಹೆಸರಿನಲ್ಲಿ ಪರೀಕ್ಷೆ ಬರೆಯುತ್ತಿರುವಾಗ,ಪರೀಕ್ಷಾ ಮೇಲ್ವೀಚಾರಕರ ಕೈಗೆ ಸಿಕ್ಕಿರುವ ಓರ್ವನನ್ನು ಬಂಧಿಸಿರುವ ಪೋಲೀಸರು ವಿಚಾರಣೆ ನಡೆಸಿದ್ದಾರೆ

Read More »

ಸಹೋದರ ಚನ್ನರಾಜ್ ಡಿಸಿಸಿ ಬ್ಯಾಂಕ್ ಇಲೆಕ್ಷನ್ ಗೆ ನಿಲ್ಲೋದಿಲ್ಲ

ಬೆಳಗಾವಿ- ನಮಗೆ ಮಾಡಲು ಬೇರೆ ಕೆಲಸ ಇದೆ ಹೀಗಾಗಿ ಸಹೋದರ ಚನ್ನರಾಜ್ ಹಟ್ಟಿಹೊಳಿ ಡಿಸಿಸಿ ಬ್ಯಾಂಕ್ ಇಲೆಕ್ಷನ್ ಗೆ ನಿಲ್ಲುವದಿಲ್ಲ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದ್ದಾರೆ ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಹಸಿದವರಿಗೆ ಊಟ ಕೊಡುವುದು ಕಾಂಗ್ರೆಸ್ ಕಾನ್ಸೆಪ್ಟ್ಕಾ ರ್ಯಕರ್ತರಿಗೆ ಮಾತ್ರ ಕ್ಯಾಂಟೀನ್ ಅಲ್ಲ, ಎಲ್ಲಾ ಸಾರ್ವಜನಿಕರಿಗೂ ಅನುಕೂಲ ಆಗುತ್ತೆ,ಬೆಳಗಾವಿ ಕಾಂಗ್ರೆಸ್ ಕಚೇರಿಯಲ್ಲಿ ಸುಸಜ್ಜಿತ, ಹೈಜೆನಿಕ್ ಕ್ಯಾಂಟೀನ್ ಉದ್ಘಾಟನೆ ಮಾಡ್ತಿದೀವಿಬೆಳಗಾವಿಯಲ್ಲಿ ಕೆಪಿಸಿಸಿ ವಕ್ತಾರೆ ಲಕ್ಷ್ಮೀ …

Read More »

ಬಳಗಾನೂರ ಗ್ರಾಮದಲ್ಲಿ,ರಾಯಣ್ಣ,ಮತ್ತು ಚನ್ನಮ್ಮ ಅಭಿಮಾನಿಗಳ ನಡುವೆ ಗಲಾಟೆ….

ಬೆಳಗಾವಿ- ವೀರರಾಣಿ ಕಿತ್ತೂರು ಚನ್ನಮ್ಮ,ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ,ಇಬ್ಬರೂ ಒಟ್ಟಾಗಿ ಬ್ರಿಟೀಷರ ವಿರುದ್ಧ ಹೋರಾಡಿದರು ಅವರ,ಧೈರ್ಯ ಮತ್ತು ಸಹಾಸ ದೇಶಕ್ಕೆ ಸ್ಪೂರ್ತಿಯಾಗಿದೆ,ಆದ್ರೆ ಇವತ್ತು ರಾಯಣ್ಣ, ಮತ್ತು ಚನ್ನಮ್ಮನ ಅಭಿಮಾನಿಗಳು ಪರಸ್ಪರ ಸಂಘರ್ಷಕ್ಕೆ ಇಳಿದಿರುವದು ಅತ್ಯಂತ ದು:ಖದ ಸಂಗತಿಯಾಗಿದೆ ರಾಯಣ್ಣ ಮತ್ತು ಚನ್ನಮ್ಮನ ಮೂರ್ತಿ ಪ್ರತಿಷ್ಠಾಪನೆಯ ಕುರಿತು,ಗದಗ ತಾಲ್ಲೂಕಿನ ಬಳಗಾನೂರ ಗ್ರಾಮದಲ್ಲಿ,ಹಾಲುಮತ ಸಮಾಜ ಮತ್ತು ಪಂಚಮಸಾಲಿ ಸಮಾಜದ ನಡುವೆ ದೊಡ್ಡ ಸಂಘರ್ಷವೇ ನಡೆಯುತ್ತಿದೆ. ಕಳೆದ ನಾಲ್ಕೈದು ವರ್ಷಗಳಿಂದ ನಡೆತುತ್ತಿರುವ ಈ ಸಂಘರ್ಷ ನಿನ್ನೆ …

Read More »

ಮಣಗುತ್ತಿ ಗ್ರಾಮದಲ್ಲಿ ಮೂರ್ತಿ ವಿವಾದಕ್ಕೆ ಟೋಟಲ್ ಬ್ರೇಕ್…

ಬೆಳಗಾವಿ: ಮಣಗುತ್ತಿ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಹಾಗೂ ವಾಲ್ಮೀಕಿ ಮಹರ್ಷಿ ಮೂರ್ತಿ ಪ್ರತಿಷ್ಠಾಪನೆ ಅಡಿಗಲ್ಲು ಕಾರ್ಯಕ್ರಮವನ್ನು ಶಾಸಕ ಸತೀಶ್ ಜಾರಕಿಹೊಳಿ ಶನಿವಾರ ನೆರವೇಸಿದರು. ಶಿವಾಜಿ ಪ್ರತಿಮೆ ಸ್ಥಾಪನೆ ವಿವಾದಕ್ಕೆ ಇಡಾಗಿದ್ದ ಮಣಗುತ್ತಿ ಗ್ರಾಮದಲ್ಲಿ, ಮೂರು ಗ್ರಾಮಗಳ ಗ್ರಾಮಸ್ಥರ ಮುಖಂಡರೊಂದಿಗೆ ಚರ್ಚಿಸಿ, ಒಮ್ಮತ ಅಭಿಪ್ರಾಯದಿಂದ ಮೂರ್ತಿ ಪ್ರತಿಷ್ಠಾಪನೆ ಅಡಿಗಲ್ಲು ಸಮಾರಂಭವನ್ನು ನಡೆಯಿತು. ಇದೇ ವೇಳೆ ಮಾತನಾಡಿದ ಅವರು, ಗ್ರಾಮದ ಹಿತದೃಷ್ಟಿಯಿಂದ ಧರ್ಮದಲ್ಲಿ ರಾಜಕೀಯ ಮಾಡುವುದು ಬೇಡ. ಎಲ್ಲರೂ ಗ್ರಾಮದ ಅಭಿವೃದ್ಧಿಗೆ …

Read More »

ಟ್ರಾಕ್ಟರ್ ಡಿಕ್ಕಿ ಬೈಕ್ ಮೇಲೆ ತೆರಳುತ್ತಿದ್ದ ಹಸುಗೂಸು, ದಂಪತಿ ದುರ್ಮರಣ

ಬೆಳಗಾವಿ-ಟ್ರಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಮೇಲೆ ತೆರಳುತ್ತಿದ್ದ ಹಸುಗೂಸು, ದಂಪತಿ ಸಾವನ್ನೊಪ್ಪಿದ್ದಾರೆ. 5 ತಿಂಗಳ ಹಸುಗೂಸು ಸೇರಿ ಮೂವರು ಸ್ಥಳದಲ್ಲೆ ಮೃತಪಟ್ಟಿದ್ದು ಸಂಗನಕೇರಿ ಗ್ರಾಮದ ಬಳಿ ಭೀಕರ ರಸ್ತೆ ಅಪಾಘಾತ ಸಂಭವಿಸಿದೆ.ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಸಂಗನಕೇರಿ ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ಮೃತರು ಹಿಡಕಲ್ ಗ್ರಾಮದ ನಿವಾಸಿಗಳೆಂದು ಪೊಲೀಸರ ಮಾಹಿತಿ ನೀಡಿದ್ದು, ಮೃತರ ಹೆಸರು ಇನ್ನೂ ಪತ್ತೆಯಾಗಿಲ್ಲ, ಸ್ಥಳಕ್ಕೆ ಘಟಪ್ರಭಾ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಘಟಪ್ರಭಾ ಪೊಲೀಸ್ …

Read More »

ಕರಾಳ ದಿನಾಚರಣೆಗೆ ಕನ್ನಡ ಸಂಘಟನೆಗಳ ಆಕ್ಷೇಪ

ಬೆಳಗಾವಿ – ಕರಾಳ ದಿನಾಚರಣೆಗೆ ಅನುಮತಿ ನೀಡುವದಾದರೆ,ರಾಜ್ಯೋತ್ಸವದ ಸಭೆ ಕರೆಯಬೇಡಿ,ಕರಾಳ ದಿನಾಚರಣೆಗೆ ಅನುಮತಿ ನೀಡುವದಿಲ್ಲ ಅಂತಾ ರಾತ್ರೋ ರಾತ್ರಿ ಅನುಮತಿ ಕೊಡ್ತೀರಾ,ಈ ಬಗ್ಗೆ ಜಿಲ್ಲಾಡಳಿತ ನಿಲುವು ತಿಳಿಸಿ ಆಮೇಲೆ ಸಭೆ ನಡೆಸಿ ಎಂದು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಪಟ್ಟು ಹಿಡಿದರು. ಸರಳ, ಸಾಂಕೇತಿಕ ರಾಜ್ಯೋತ್ಸವ: ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಕೋವಿಡ್ -19 ಹಿನ್ನೆಲೆಯಲ್ಲಿ ಈ ಬಾರಿ ಕರ್ನಾಟಕ ರಾಜ್ಯೋತ್ಸವವನ್ನು ಸರಳ ಹಾಗೂ ಸಾಂಕೇತಿಕವಾಗಿ ಆಚರಣೆ ಮಾಡಲಾಗುವುದು. ರಾಜ್ಯೋತ್ಸವದಲ್ಲಿ ಪೋಲಿಸ್ ಪರೇಡ್ …

Read More »

ಕರಾಳ ದಿನಕ್ಕಾಗಿ ಮತ್ತೆ ಕ್ಯಾತೆ ತೆಗೆದ ಕಂಗಾಲ್ ಕಂಪನಿ…..!!!

ಬೆಳಗಾವಿ- ಸೋತರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ,ಬೆಳಗಾವಿಯಲ್ಲಿ ಅಸ್ತಿತ್ವ ಕಳೆದುಕೊಂಡು,ಸಮಾಧಿ ಯಾಗಿರುವ ಮಹಾರಾಷ್ಟ್ರ ಏಕೀಕರಣ ಸಮೀತಿ ಈ ವರ್ಷ ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸಲು ಅನುಮತಿ ನೀಡುವಂತೆ ಮತ್ತೆ ಕ್ಯಾತೆ ತೆಗೆದಿದೆ. ರಾಜ್ಯದಲ್ಲಿ ಕೋವೀಡ್ ಇದೆ,ಈ ವರ್ಷ,ದಸರಾ ಉತ್ಸವ,ಕಿತ್ತೂರು ಉತ್ಸವ ಸರಳವಾಗಿ ಆಚರಿಸಲು ಸರ್ಕಾರ ನಿರ್ಧರಿದೆ.ಜೊತೆಗೆ ರಾಜ್ಯೋತ್ಸವವನ್ನು ಅತ್ಯಂತ ಸರಳವಾಗಿ ಆಚರಿಸಲು ಸರ್ಕಾರ ನಿರ್ಧರಿಸಿದ ಬೆನ್ನಲ್ಲಿಯೇ ನಿನ್ನೆ ಶುಕ್ರವಾರ ಎಂ ಈ ಎಸ್ ಮುಖಂಡರು ದೀಪಕ ದಳವಿ ಅವರ ನೇತ್ರತ್ವದಲ್ಲಿ …

Read More »