Home / Breaking News / ನಾಳೆ ಬೆಳಿಗ್ಗೆ ಸುಮಾರು, 10 ಗಂಟೆಗೆ ಪಾಲಿಕೆ ಫಲಿತಾಂಶ ಕ್ಲಿಯರ್….!!!!

ನಾಳೆ ಬೆಳಿಗ್ಗೆ ಸುಮಾರು, 10 ಗಂಟೆಗೆ ಪಾಲಿಕೆ ಫಲಿತಾಂಶ ಕ್ಲಿಯರ್….!!!!

ಬೆಳಗಾವಿ- ಕಳೆದ ಮೂರು ವಾರಗಳಿಂದ ಪಕ್ಷದ ಟಿಕೆಟ್ ಗಾಗಿ ಗುದ್ದಾಡಿ,‌ನಂತರ ಒಂದು ವಾರ ವಾರ್ಡುಗಳಲ್ಲಿ ಸುತ್ತಾಡಿ,ಮತದಾರರನ್ನು ಓಲೈಸಿ ತಮ್ಮ ಅಸ್ತಿತ್ವಕ್ಕಾಗಿ ಶ್ರಮಿಸಿದ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಾಳೆ ಸೋಮವಾರ ಪ್ರಕಟವಾಗಲಿದೆ.

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಮತದಾನ ಶುಕ್ರವಾರ ಮುಗಿದಿದೆ.ನಾಳೆ ಸೋಮವಾರ ಫಲಿತಾಂಶ ಪ್ರಕಟವಾಗಲಿದೆ. ಬೆಳಗಾವಿಯ ಬಿ.ಕೆ ಮಾಡೆಲ್ ಹೈಸ್ಕೂಲಿನಲ್ಲಿ ಮತ ಎಣಿಕೆ ಕೇಂದ್ರ ತೆರೆಯಲಾಗಿದೆ.ತ್ವರಿತ ಗತಿಯ ಮತ ಏಣಿಕೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು,ನಾಳೆ ಸೋಮವಾರ ಸುಮಾರು ಹತ್ತು ಗಂಟೆಗೆ ಫಲಿತಾಂಶ ಸಂಪೂರ್ಣವಾಗಿ ಪ್ರಕಟವಾಗುವ ಸಾಧ್ಯತೆ ಇದೆ. 12 ಗಂಟೆ ಸುಮಾರಿಗೆ ಬೆಳಗಾವಿ ಮಹಾನಗರ ಪಾಲಿಕೆಯ 58 ವಾರ್ಡುಗಳ ಚುನಾಯಿತ ನಗರ ಸೇವಕರು ಪ್ರಮಾಣ ಪತ್ರ ಪಡೆದು ಫಲಿತಾಂಶದ ಪ್ರಕ್ರಿಯೆ ಬೆಳಿಗ್ಗೆ 7 ಗಂಟೆಗೆ ಆರಂಭವಾಗಿ ಮದ್ಯಾಹ್ನ 12 ಗಂಟೆಗೆ ಸಂಪೂರ್ಣವಾಗಿ ಮುಗಿಯುವ ಸಾಧ್ಯತೆಗಳಿವೆ.

ಬೆಳಗಾವಿಯ ಬಿ‌.ಕೆ ಮಾಡೆಲ್ ಹೈಸ್ಕೂಲ್ ನಲ್ಲಿ ಮತ ಏಣಿಕೆಗಾಗಿ ಹನ್ನೆರಡು ರೂಮ್ ಗಳಲ್ಲಿ ವ್ಯೆವಸ್ಥೆ ಮಾಡಲಾಗಿದೆ ಒಂದು ರೂಮ್ ನಲ್ಲಿ ಎರಡು ಟೇಬಲ್ ವ್ಯೆವಸ್ಥೆ ಮಾಡಲಾಗಿದ್ದು ಒಟ್ಟು 12 ರೂಮ್ ಗಳಲ್ಲಿ 24 ಟೇಬಲ್ ಗಳ ವ್ಯೆವಸ್ಥೆ ಮಾಡಲಾಗಿದ್ದು ಏಕಕಾಲದಲ್ಲಿ 24 ವಾರ್ಡುಗಳ ಮತ ಏಣಿಕೆ ಶುರುವಾಗಲಿದೆ‌.

ಒಂದು ವಾರ್ಡಿನಲ್ಲಿ ಮೂರ್ನಾಲ್ಕು ಬೂತ್ ಗಳಿವೆ‌. ಒಂದು ಟೇಬಲ್ ನಲ್ಲಿ ಒಂದು ವಾರ್ಡಿನ ಮತ ಏಣಿಕೆ ಪೂರ್ಣಗೊಳಿಸಲು ಅರ್ದ ಗಂಟೆ,ಹೀಗಾಗಿ ಹತ್ತು ಗಂಟೆ ಸುಮಾರಿಗೆ, 58 ವಾರ್ಡುಗಳ ಕ್ಲಿಯರ್ ಪಿಕ್ಚರ್ ಗೊತ್ತಾಗಲಿದೆ.

58 ವಾರ್ಡ್‌ಗಳಲ್ಲಿ ಒಟ್ಟು 385 ಅಭ್ಯರ್ಥಿಗಳು ಸ್ಪರ್ದಿಸಿದ್ದಾರೆ‌.ಬಿಜೆಪಿ- 55, ಕಾಂಗ್ರೆಸ್ – 45, ಎಂಇಎಸ್- 21, ಜೆಡಿಎಸ್-11, ಆಮ್ ಆದ್ಮಿ – 27, MIM- 7, ಉತ್ತಮ ಪ್ರಜಾಕೀಯ -1
SDPI- 1, ಪಕ್ಷೇತರರು- 217 ಒಟ್ಟು 385 ಅಭ್ಯರ್ಥಿಗಳ ಭವಿಷ್ಯ ನಾಳೆ ಬೆಳಿಗ್ಗೆ ಸುಮಾರು ಹತ್ತು ಗಂಟೆಗೆ ಪ್ರಕಟವಾಗಲಿದೆ.

Check Also

ಬೆಳಗಾವಿ ಜಿಲ್ಲೆಯ ನಾಲ್ಕು ಪ್ರಮುಖ ದೇವಸ್ಥಾನಗಳು ಓಪನ್..

ಬೆಳಗಾವಿ- ಕೋವಿಡ್ ಹಿನ್ನೆಲೆ ಬಂದ್ ಆಗಿದ್ದ 4 ಪ್ರಮುಖ ದೇವಸ್ಥಾನಗಳು ಇಂದು ಓಪನ್ ಮಾಡಲು ಬೆಳಗಾವಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. …

Leave a Reply

Your email address will not be published. Required fields are marked *