Breaking News

ಮಹಾನಗರ ಪಾಲಿಕೆ ಚುನಾವಣೆಗೆ ಬೆಳಗಾವಿ ಸಜ್ಜು

ಬೆಳಗಾವಿ-ನಾಳೆ ಶುಕ್ರವಾರ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಮತದಾನ,ಬೆಳ್ಳಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದ್ದು ಮತದಾನಕ್ಕೆ ಬೆಳಗಾವಿ ಮಹಾನಗರ ಸಜ್ಜಾಗಿದೆ.

ಒಟ್ಟು 58 ವಾರ್ಡ್ ಗಳಿಗೆ ನಡೆಯಲಿರುವ ಮತದಾನ.  58 ವಾರ್ಡ್‌ಗಳಿಗೆ ಒಟ್ಟು 385 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಬಿಜೆಪಿ- 55, ಕಾಂಗ್ರೆಸ್ – 45, ಎಂಇಎಸ್- 21, ಜೆಡಿಎಸ್-11, ಆಮ್ ಆದ್ಮಿ – 27, MIM- 7, ಉತ್ತಮ ಪ್ರಜಾಕೀಯ -1
SDPI- 1, ಪಕ್ಷೇತರರು- 217 ಅಭ್ಯರ್ಥಿಗಳು ಕಣದಲ್ಲಿದ್ದು ಇವರೆಲ್ಲರ ಭವಿಷ್ಯ ನಾಳೆ ಮತಯಂತ್ರದಲ್ಲಿ ಭದ್ರವಾಗಲಿದೆ.

4,28,364 ಒಟ್ಟು ಮತದಾರರಿದ್ದಾರೆ.
ಪುರುಷ ಮತದಾರರು-2,13,526
ಮಹಿಳಾ ಮತದಾರರು- 2,14,834
ಒಟ್ಟು 415 ಮತಗಟ್ಟೆ ಗಳನ್ನು ತೆರೆಯಲಾಗಿದೆ.
415 ಮತಗಟ್ಟೆಗಳಿಗೆ 457 ತಂಡ ರಚನೆ ಮಾಡಲಾಗಿದೆ. 1828 ಚುನಾವಣೆ ಸಿಬ್ಬಂದಿಗಳು ಕಾರ್ಯ ನಿರ್ವಹಣೆ ಮಾಡಲಿದ್ದು
ಬಿ ಕೆ ಮಾಡೆಲ್ ಮೈದಾನದಲ್ಲಿ ಮತಪೆಟ್ಟಿಗೆ ವಿತರಣೆ ಕಾರ್ಯ ಇಂದು ನಡೆಯಿತು.
ಸಿಬ್ಬಂದಿಗೆ ತರಬೇತಿ ನೀಡಿ, ಮತ ಯಂತ್ರ, ಸಾಮಗ್ರಿ ನೀಡಿದ ಅಧಿಕಾರಿಗಳು. ಚುನಾವಣೆ ಸಿಬ್ಬಂದಿ ಮತಗಟ್ಟೆ ತಲುಪಲು ಬಸ್ ವ್ಯವಸ್ಥೆ ಮಾಡಲಾಗಿತ್ತು.

29 ಬಸ್, 36 ಮಿನಿ ಬಸ್ ಹಾಗೂ 16 ಜೀಪ್ ವ್ಯವಸ್ಥೆ ಮಾಡಲಾಗಿತ್ತು,ಸಿಬ್ಬಂದಿ ಗಳು ಸಂಜೆ ಹೊತ್ತಿಗೆ ಮತಗಟ್ಟೆಗಳಿಗೆ ತೆರಳಿದರು.

Check Also

ಬೆಳಗಾವಿ ಜಿಲ್ಲಾಧಿಕಾರಿಗಳ ಇದೊಂದು ಕಾರ್ಯ ಶ್ಲಾಘನೀಯ

ಬೆಳಗಾವಿ- ಬೆಳಗಾವಿ ಜಿಲ್ಲಾಧಿಕಾರಿ ಮಹ್ಮದ್ ರೋಷನ್ ಅವರು ಮಾಡಿರುವ ಇದೊಂದು ಕಾರ್ಯ ಶ್ಲಾಘನೀಯ ಅದು ಏನಂದ್ರೆ ಸುವರ್ಣಸೌಧಕ್ಕೆ ಪಾಸ್ ಪಡೆದು …

Leave a Reply

Your email address will not be published. Required fields are marked *