Breaking News

Breaking News

ಕಾಮಗಾರಿಗಳನ್ನು ಬೇಗ,ಬೇಗ ಮುಗಿಸಿ- ಮಂಗಲಾ ಅಂಗಡಿ…

ಬೆಳಗಾವಿ- ಬೆಳಗಾವಿ ನಗರ ಮತ್ತು ಜಿಲ್ಲೆಯಲ್ಲಿ ನಡೆಯುತ್ತಿರುವ ವಿವಿಧ ರೈಲು ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ನಡೆಸುವಂತೆ ಬೆಳಗಾವಿ ಸಂಸದೆ ಮಂಗಲಾ ಅಂಗಡಿ ಅವರು ಇಂದು ದೆಹಲಿಯ ರೈಲು ಭವನದಲ್ಲಿ ಕೇಂದ್ರದ ರೈಲು ಮಂತ್ರಿಗಳನ್ನು ಭೇಟಿಯಾಗಿ ಮನವಿ ಮಾಡಿಕೊಂಡರು. ಬೆಳಗಾವಿಯ ತಿಲಕವಾಡಿಯ ರೇಲ್ವೆ ಮೂರನೇಯ ಗೇಟ್ ಬಳಿ ನಿರ್ಮಿಸುತ್ತಿರುವ ರೇಲ್ವೆ ಮೇಲ್ಸೆತುವೆ ಕಾಮಗಾರಿ ಏಕಪಥದ ಸೇತುವೆ ಕಾಮಗಾರಿ ಮುಕ್ತಾಯವಾಗಿದ್ದು ಇನ್ನೊಂದು ಪಥದ ಸೇತುವೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು.ಈ ಕಾಮಗಾರಿ ವಿಳಂಬದಿಂದ ನಗರದಲ್ಲಿ ವಾಹನ ಸಂಚಾರಕ್ಕೆ …

Read More »

ಸಕ್ಕರೆ ಕಾರ್ಖಾನೆಗಳಲ್ಲಿ ತೂಕದ ಯಂತ್ರ ಡಿಜಿಟಲೀಕರಣಕ್ಕೆ ಸೂಚನೆ

ಸುವರ್ಣ ವಿಧಾನಸೌಧ ನ.12: ಕಬ್ಬಿನ ತೂಕದಲ್ಲಿ ಆಗುತ್ತಿರುವ ಮೋಸವನ್ನು ನಿಯಂತ್ರಿಸಲು ರಾಜ್ಯದ ಸಕ್ಕರೆ ಕಾರ್ಖಾನೆಗಳಲ್ಲಿನ ತೂಕದ ಯಂತ್ರಗಳ ಡಿಜಿಟಲೀಕರಣಕ್ಕೆ ಸರ್ಕಾರ ಸೂಚನೇ ನೀಡಿದ್ದು, ಈ ಸಂಬAಧ ಕಾರ್ಖಾನೆಗಳ ಮಾಲಿಕರಿಗೆ ಹದಿನೈದು ದಿನಗಳ ಗಡುವು ನೀಡಲಾಗಿದೆ ಎಂದು ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವರಾದ ಕೆ.ಎಚ್.ಮುನಿಯಪ್ಪ ತಿಳಿಸಿದರು. ಕೊಠಡಿ ಸಂಖ್ಯೆ 354ರಲ್ಲಿ ಮಂಗಳವಾರ ಸಚಿವ ಶಿವಾನಂದ ಪಾಟೀಲ, ಶಾಸಕ ಲಕ್ಷö್ಮಣ ಸವದಿ ಸೇರಿದಂತೆ ಕಬ್ಬು ಬೆಳೆಯುವ ಪ್ರದೇಶಗಳ …

Read More »

ಖಾನಾಪೂರ–ಆಕ್ರಮ ತನಿಖೆಗೆ ಸರ್ಕಾರದ ಆದೇಶ…!!

ಖಾನಾಪೂರ-ಖಾನಾಪೂರದ ಭಾಗ್ಯಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಯನ್ನು ಲೀಜ್ ಮೇಲೆ ನಡೆಸುತ್ತಿರುವ ಖಾನಾಪೂರ ಶಾಸಕ ವಿಠ್ಠಲ ಹಲಗೇಕರ್ ಅವರಿಗೆ ಈಗ ಆಕ್ರಮ ವ್ಯವಹಾರದ ತನಿಖೆ ಎದುರಾಗಿದೆ ಸರ್ಕಾರ ಆಕ್ರಮ ತನಿಖೆಗೆ ಆದೇಶ ಹೊರಡಿಸಿದೆ. ಖಾನಾಪೂರದ ಭಾಗ್ಯಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಲೀಜ್ ಆಧಾರದ ಮೇಲೆ ಪಡೆದು ಈ ಕಾರ್ಖಾನೆಯಲ್ಲಿ ಸಹಕಾರಿ ಬ್ಯಾಂಕಿನ ಹಣ ತೊಡಗಿಸಿ,ನಂತರ ಕಾರ್ಖಾನೆಯಿಂದ ಈ ಹಣವನ್ನು ದುರುಪಯೋಗ ಮಾಡಿಕೊಂಡ ಆರೋಪವನ್ನು ಎದುರಿಸುತ್ತಿರುವ ಖಾನಾಪೂರ ಶಾಸಕ ವಿಠ್ಠಲ ಹಲಗೇಕರ್ …

Read More »

ಬೆಳಗಾವಿ ವಂದೇ ಭಾರತ, ರೈಲಿಗೆ ಟೆಕ್ನಿಕಲ್ ಪ್ರಾಬ್ಲಂ…!!

ಬೆಳಗಾವಿ-ಬೆಳಗಾವಿಯಿಂದ ಹುಬ್ಬಳ್ಳಿಗೆ ವಂದೇ ಭಾರತ ರೈಲು ಮಂಜುರಾಗಿದೆ ಎನ್ನುವ ಸುದ್ದಿ ಪ್ರಕಟವಾದಾಗ, ಈ ರೈಲು ಹುಬ್ಬಳ್ಳಿಯಿಂದ ಬೆಳಗಾವಿಯವರೆಗೆ ಪ್ರಾಯೋಗಿಕ ಸಂಚಾರ ನಡೆಸಿದಾಗ ಬೆಳಗಾವಿ ಜನರಿಗೆ ಹಂಡೆ ಹಾಲು ಕುಡಿದಷ್ಟು ಖುಷಿಯಾಗಿತ್ತು.ಆದ್ರೆ ಈ ಖುಷಿ ಈಗ ಮರೀಚಿಕೆಯಾಗಿದೆ. ಡಿಸೆಂಬರ್ 1ರಿಂದ ವಂದೇ ಭಾರತ ರೈಲು ಬೆಳಗಾವಿಯಿಂದ ಬೆಂಗಳೂರಿಗೆ ಸಂಚಾರ ಮಾಡಲಿದೆ ಎನ್ನುವ ಮಾಹಿತಿ ಇತ್ತು,ಆದ್ರೆ ಈ ರೈಲು ಸಂಚಾರಕ್ಕೆ ತಾಂತ್ರಿಕ ತೊಂದರೆ ಇದೆ ಎಂದು ರೈಲ್ವೆ ಬೋರ್ಡ್ ತಗಾದೆ ತೆಗೆದಿದೆ ಎಂದು …

Read More »

ಅಪಘಾತ :ಬೆಳಗಾವಿಯಲ್ಲಿ ಇಬ್ಬರ ಸಜೀವ ದಹನ..

ಬೆಳಗಾವಿ-ಟಿಪ್ಪರ್ ಮತ್ತು ಕಾರಿನ ಮಧ್ಯೆ ಬೀಕರ ರಸ್ತೆ ಅಪಘಾತ ಇಬ್ಬರ ಸಜೀವ ದಹನವಾದ ಘಟನೆಬೆ ಳಗಾವಿ ತಾಲೂಕಿನ ದೇವಗಿರಿ ಬಂಬರಗಾ ಕ್ರಾಸ್ ಬಳಿ ನಡೆದಿದೆ. ಮದುವೆ ಮುಗಿಸಿಕೊಂಡು ವಾಪಾಸ್ ಆಗುತ್ತಿದ್ದ ಕುಟುಂಬ,ರಾತ್ರಿ ಬಂಬರಗಾ ಗ್ರಾಮಕ್ಕೆ ಕಾರಿನಲ್ಲಿ ಹೊರಟ್ಟಿದ್ದ ನಾಲ್ವರು,ಬಂಬರಗಾ ಕ್ರಾಸ್ ಬಳಿ ಅಡ್ಡ ಬಂದ ಟಿಪ್ಪರ್‌ಗೆ ಕಾರು ಡಿಕ್ಕಿ.ಟಿಪ್ಪರ್ ನ ಡಿಸೇಲ್ ಟ್ಯಾಂಕ್ ಒಡೆದು ಹೊತ್ತಿ ಉರಿದ ಕಾರು, ಟಿಪ್ಪರ್.ಈ ವೇಳೆ ಕಾರಿನಲ್ಲಿದ್ದ ಇಬ್ಬರು ಸಜೀವ ದಹನವಾಗಿದ್ದಾರೆ. ಈ ದುರ್ಘಟನೆಯಲ್ಲಿ …

Read More »

ವಿರೋಧ ಪಕ್ಷದ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡ್ತೀವಿ- ಸಿಎಂ ಸಿದ್ರಾಮಯ್ಯ…

ಅಧಿವೇಶನ ಆರಂಭ… ಬೆಳಗಾವಿ, ಡಿಸೆಂಬರ್ 4: ಇಂದು ಬೆಳಗಾವಿಯಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನ ಪ್ರಾರಂಭವಾಗಲಿದ್ದು, ವಿರೋಧಪಕ್ಷದವರು ಕೇಳುವ ಪ್ರತಿಯೊಂದು ಪ್ರಶ್ನೆಗೂ ಉತ್ತರಿಸಲು ಸರ್ಕಾರ ಸಿದ್ಧವಿದೆ. ಈ ಅಧಿವೇಶನದಲ್ಲಿ ಉತ್ತರಕರ್ನಾಟಕದ ಸಮಸ್ಯೆಗಳತ್ತಲೂ ಗಮನಹರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಅವರು ಇಂದು ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. *ಗ್ಯಾರಂಟಿ ಯೋಜನೆಗಳೆಲ್ಲ ಬಡವರ ಕಾರ್ಯಕ್ರಮಗಳು :* ಪಂಚರಾಜ್ಯ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳಿಂದ ಅಪೇಕ್ಷಿತ ಯಶಸ್ಸು ಸಾಧ್ಯವಾಗದಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ತೆಲಂಗಾಣದಲ್ಲಿ …

Read More »

ಹೊರಗೆ ಲೈಟ್..ಒಳಗೆ ಫೈಟ್…ಎರಡು ವಾರ ಶಡ್ಯುಲ್ ಫುಲ್ ಟೈಟ್…!!

ರಸ್ತೆ ರಿಪೇರಿ,ಡಿವೈಡರ್ ಗಳಿಗೆ ಸುಣ್ಣ ಬಣ್ಣ, ಗಣ್ಯರಿಗೆ ಊಟ,ವಸತಿ ವ್ಯವಸ್ಥೆ ಮಾಡಿಕೊಂಡು ಚಳಿಗಾಲದ ಅಧಿವೇಶನಕ್ಕೆ ಕುಂದಾನಗರಿ ಬೆಳಗಾವಿಯ ಸುವರ್ಣಸೌಧ ಸಜ್ಜಾಗಿದೆ. ಸುವರ್ಣಸೌಧದ ದಶಮಾನೋತ್ಸವದ ಅಂಗವಾಗಿ ಸೌಧಕ್ಕೆ ಆತ್ಯಂತ ಆಕರ್ಷಕವಾದ ದೀಪಾಲಂಕಾರ ಮಾಡಲಾಗಿದ್ದು, ಹೊರಗಡೆ ಲೈಟೀಂಗ್ ನಾಳೆಯಿಂದ ವಿರೋಧಪಕ್ಷ ಮತ್ತು ಆಡಳಿತ ಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪಗಳ ಫೈಟೀಂಗ್ ನಡೆಯೋದು ಫಿಕ್ಸ್ ಆಗಿದ್ದು ಎರಡು ವಾರಗಳ ಕಾಲ ಬೆಳಗಾವಿಯ ಶೆಡ್ಯುಲ್ ಫುಲ್ ಟೈಟ್ ಆಗಿದೆ. ಡಿಸೆಂಬರ್ 4 ರಿಂದ ರಾಜ್ಯದ ಚಳಿಗಾಲ …

Read More »

ಮೊದಲ ಆಯ್ಕೆ ಪ್ರಕ್ರಿಯೆ ನಡೆದಿದ್ದು ಕ್ರಾಂತಿಯ ನೆಲ ಬೆಳಗಾವಿಯಲ್ಲಿ.

ಬೆಳಗಾವಿ-ಇತಿಹಾಸದಲ್ಲೇ ಮೊದಲ ಬಾರಿಗೆ ಅಗ್ನಿವೀರವಾಯುವಿನಲ್ಲಿ ಯುವತಿಯರ ಆಯ್ಕೆಯಾಗಿದೆ ಈ ಆಯ್ಕೆ ಪ್ರಕ್ರಿಯೆ ನಡೆದೊದ್ದು ಕ್ರಾಂತಿಯ ನೆಲ,ಐತಿಹಾಸಿಕ ಬೆಳಗಾವಿಲ್ಲಿ ಅನ್ನೋದು ಹೆಮ್ಮೆಯ ಸಂಗತಿಯಾಗಿದೆ. ಇಂದು ಮೊದಲ ಬ್ಯಾಚ್ ನ ನಿರ್ಗಮನ ಪಥಸಂಚಲನ ಬೆಳಗಾವಿಯ ಸಾಂಬ್ರಾದಲ್ಲಿ ನಡೆಯಿತು.ಮೊದಲ ಬಾರಿ ವಾಯುಸೇನೆಯಲ್ಲಿ ಅಗ್ನಿವೀರವಾಯು ಗೆ ಆಯ್ಕೆಯಾದ ಯುವತಿಯರು.ಮೊದಲ ಬ್ಯಾಚ್ ನಲ್ಲಿ 153 ಯುವತಿಯರ ಆಯ್ಕೆಯಾಗಿದ್ದಾರೆ.ಬೆಳಗಾವಿಯ ಏರ್ಮನ್ ಟ್ರೈನಿಂಗ್ ಸೆಂಟರ್ ನಲ್ಲಿ ತರಬೇತಿ ಪಡೆದ ಯುವತಿಯರು ಸೇನಾನಿಗಳಾಗಿದ್ದು ವಿಶೇಚ 22 ವಾರಗಳ ಕಾಲ ಯುವಕರ ಜತೆಗೆ …

Read More »

ಬೆಳಗಾವಿ ವಿಮಾನ ನಿಲ್ಧಾಣದಲ್ಲಿ ಹೊಸ ಟರ್ಮಿನಲ್…!!

ಬೆಳಗಾವಿ: ಬೆಳಗಾವಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ 357 ಕೋಟಿ ರೂಪಾಯಿ ವೆಚ್ಚದಲ್ಲಿ ಒಟ್ಟು 16,400 ಚದರ ಮೀಟರ್ ವಿಸ್ತೀರ್ಣದಲ್ಲಿ ನೂತನ ಟರ್ಮಿನಲ್ 2026 ರೊಳಗೆ ನಿರ್ಮಾಣವಾಗಲಿದೆ ಎಂದು ಸಂಸದೆ ಮಂಗಲಾ ಅಂಗಡಿ ಮತ್ತು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ. ಶನಿವಾರ ಡಿ-2 ರಂದು ಬೆಳಗಾವಿ ವಿಮಾನ ನಿಲ್ದಾಣ ಮೇಲ್ದರ್ಜೆಗೆ ಏರಿಸುವ ಯೋಜನೆಯ ಕುರಿತು ವಿಮಾನ ನಿಲ್ದಾಣ ಸಲಹಾ ಸಮಿತಿಯ ಜೊತೆ ಸಂಸದೆ ಮಂಗಲಾ ಅಂಗಡಿ ರಾಜ್ಯಸಭಾ ಸಂಸದ …

Read More »

ಸುರಂಗದಲ್ಲಿ ಕಾರ್ಮಿಕರನ್ನು, ಪತ್ತೆ ಹಚ್ಚಿದ್ದೇ ಬೆಳಗಾವಿಯ ಇಂಜಿನಿಯರ್ಸ್….!!

ಬೆಳಗಾವಿ-ದೇಶದ ಗಮನ ಸೆಳೆದಿದ್ದ ಬೃಹತ್ ಕಾರ್ಯಾಚರಣೆಯಲ್ಲಿ 41 ಕಾರ್ಮಿಕರ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು ಬೆಳಗಾವಿಯವರು ಅನ್ನೋದು ಹೆಮ್ಮೆಯ ಸಂಗತಿಯಾಗಿದೆ. ಉತ್ತರಖಾಂಡದ ಉತ್ತರಕಾಶಿಯಲ್ಲಿ ಸುರಂಗ ‌ಮಾರ್ಗದಲ್ಲಿ ಸಿಲುಕಿದ್ದ ಕಾರ್ಮಿಕರ ರಕ್ಷಣೆ ಕಾರ್ಯಾಚರಣೆಯಲ್ಲಿ,17 ದಿನಗಳ ಕಾಲ ನಿರಂತರವಾಗಿ ನಡೆದ ಕಾರ್ಯಾಚರಣೆಯಲ್ಲಿ 41 ಕಾರ್ಮಿಕರ ರಕ್ಷಣೆ ಮಾಡಲಾಗಿತ್ತು.ರಕ್ಷಣಾ ಕಾರ್ಯಾಚರಣೆಯಲ್ಲಿ ಬೆಳಗಾವಿ ಇಬ್ಬರು ಇಂಜನಿಯರ್ ಭಾಗಿಯಾಗಿದ್ದು ಸಂತಸದ ವಿಚಾರವಾಗಿದೆ. ಚೆನ್ನೈ ಮೂಲದ ಎಲ್‌ ಆ್ಯಂಡ್ ಟಿ ಕಂಪನಿಯ ಇಬ್ಬರು ಇಂಜಿನಿಯರ್‌ಗಳು ರೆಸ್ಕ್ಯೂ ಆಪರೇಶನ್‌ನಲ್ಲಿ ಭಾಗಿಯಾಗಿದ್ದರು.ಎಲ್‌ …

Read More »