ಬೆಳಗಾವಿ-ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಉಡುಗೊರೆ ಗಳ ಹಂಚಿಕೆ,ಬಾಡೂಟ,ಜೋರಾಗಿಯೇ ನಡೆದಿತ್ತು,ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಇಬ್ಬರು ಆಪ್ತರ ಮೇಲೆ ಕೇಸ್ ದಾಖಲಾಗಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಂತಿ ಬಸ್ತವಾಡದಲ್ಲಿ ನಡೆದ ರಾಜಕೀಯ ಕಾರ್ಯಕ್ರಮದಲ್ಲಿ ಮೂರು ಸಾವಿರ ಜನರಿಗೆ ಬಾಡೂಟ ಮಾಡಿಸಿದ ದೂರು ಬಂದ ಹಿನ್ನಲೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ನಾಗೇಶ್ ಮನ್ನೋಳಕರ,ಹಾಗು ರಮೇಶ್ ಜಾರಕಿಹೊಳಿ ಅವರ ಆಪ್ತ ನಾಗೇಂದ್ರ ಬಾಳಪ್ಪ …
Read More »ಬೆಳಗಾವಿಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ ಜನ ಸೇರಿಸುವ ಟಾಸ್ಕ್!!
ಬೆಳಗಾವಿ-ಬೆಳಗಾವಿಯಿಂದಲೇ ಚುನಾವಣಾ ರಣಕಹಳೆ ಮೊಳಗಿಸಲು ಕಾಂಗ್ರೆಸ್ ನಿರ್ಧರಿಸಿದೆ. ಮಾರ್ಚ್ 20 ರಂದು ರಾಹುಲ್ ಗಾಂಧಿ ಬೆಳಗಾವಿಗೆ ಆಗಮಿಸಲಿದ್ದು ಈ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನ ಸೇರಿಸಲು ಕಾಂಗ್ರೆಸ್ ನಾಯಕರು ಮಾಸ್ಟರ್ ಪ್ಲ್ಯಾನ್ ರೂಪಿಸಿದೆ. ಮಾರ್ಚ್ 20ರಂದು ಬೆಳಗಾವಿಯಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ‘ಯುವ ಕ್ರಾಂತಿ’ ರ‌್ಯಾಲಿಯಿಂದಲೇ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಪರ್ವ ಶುರುವಾಗಲಿದೆ.ಕಿತ್ತೂರು ಕರ್ನಾಟಕದ ಕೇಂದ್ರ ಸ್ಥಾನ ಬೆಳಗಾವಿಯಿಂದಲೇ ರಾಹುಲ್ ಗಾಂಧಿ ಪ್ರಚಾರ ಶುರುವಾಗುತ್ತಿರುವುದು ವಿಶೇಷವಾಗಿದೆ. ಬೆಳಗಾವಿಯಲ್ಲಿ ನಡೆಯಲಿರುವ. ಕಾಂಗ್ರೆಸ್ …
Read More »ಬೆಳಗಾವಿ ಜಿಲ್ಲೆಯ 11,600 ಜನರಿಗೆ ಹಕ್ಕುಪತ್ರ ವಿತರಣೆ
ಕಾನೂನು ತೊಡಕು ಪರಿಹರಿಸಿ ಎಲ್ಲರಿಗೂ ಹಕ್ಕುಪತ್ರ: ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ಬೆಳಗಾವಿ, -ಅನೇಕ ಕಾನೂನು ತೊಡಕುಗಳನ್ನು ಪರಿಹರಿಸಿ ಲಂಬಾಣಿ ತಾಂಡ, ಗೊಲ್ಲರಹಟ್ಟಿ, ಕುರುಬರಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲಾಗಿದೆ. ಅದೇ ರೀತಿ ಕಾಡಂಚಿನಲ್ಲಿ ಹಾಗೂ ಖಾಸಗಿ ಜಾಗೆಯಲ್ಲಿ ಇರುವ ಜನರಿಗೂ ಹಕ್ಕುಪತ್ರವನ್ನು ನೀಡಲು ಸರಕಾರ ಬದ್ಧವಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು. ರಾಮದುರ್ಗ ತಾಲ್ಲೂಕಿನ ಬಟಕುರ್ಕಿಯಲ್ಲಿ ಬುಧವಾರ(ಮಾ.15) ನಡೆದ ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಹಕ್ಕುಪತ್ರ ವಿತರಣಾ ಸಮಾವೇಶ, ಅನುಷ್ಠಾನ …
Read More »ಪರ್ಮಿಶನ್ ಇಲ್ಲದೇ, ಬ್ಯಾನರ್, ಪೋಸ್ಟರ್ ಗಳನ್ನು ಅಂಟಿಸುವಂತಿಲ್ಲ!
ಮತದಾರರಿಗೆ ಆಮಿಷ: ತೀವ್ರ ನಿಗಾವಹಿಸಲು ಸೂಚನೆ ಬೆಳಗಾವಿ, ಮಾ.14-ಆಯಾ ಸ್ಥಳೀಯ ಸಂಸ್ಥೆಗಳ ಪರವಾನಿಗೆ ಪಡೆಯದೇ ಯಾವುದೇ ರೀತಿಯ ಬ್ಯಾನರ್, ಪೋಸ್ಟರ್ ಗಳನ್ನು ಅಂಟಿಸುವಂತಿಲ್ಲ; ಆದ್ದರಿಂದ ಪರವಾನಿಗೆ ಪಡೆಯದೇ ಬ್ಯಾನರ್ ಮತ್ತು ಪೋಸ್ಟರ್ ಗಳು ಕಂಡುಬಂದರೆ ಅವುಗಳನ್ನು ಅಂಟಿಸಿದವರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು. ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ …
Read More »ಮಾ. 20 ರಂದು ಬೆಳಗಾವಿಗೆ ರಾಹುಲ್ ಗಾಂಧಿ ಬೆಳಗಾವಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾ. ೨೦ ರಂದು ಬೆಳಗಾವಿಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮಾ. ೧೬ ರಂದು ಬೆಳಗ್ಗೆ ೧೦ ಗಂಟೆಗೆ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಬೆಳಗಾವಿ ವಿಭಾಗದ ಪಕ್ಷದಮುಖಂಡರ ಪೂರ್ವಭಾವಿ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಚಿಕ್ಕೋಡಿ, ಬೆಳಗಾವಿ ನಗರ, ಬೆಳಗಾವಿ ಗ್ರಾಮಾಂತರ, ಹುಬ್ಬಳ್ಳಿ ನಗರ, ಧಾರವಾಡ ಗ್ರಾಮಾಂತರ, ಬಾಗಲಕೋಟೆ, ವಿಜಯಪುರ, ಗದಗ ಮತ್ತು ಹಾವೇರಿ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಅಧ್ಯಕ್ಷರು, …
Read More »ಶಾಸಕ ಅನೀಲ ಬೆನಕೆ ಪ್ರಯತ್ನ, ಬೆಳಗಾವಿಗೆ ಬಂತು ಭಂಪರ್ ಲಾಟರಿ!
ಅಂಬೇಡ್ಕರ್ ಉದ್ಯಾನದಲ್ಲಿ ಸ್ಟಡಿ ಸೆಂಟರ್ ನಿರ್ಮಾಣ: ಶಾಸಕಾ ಅನಿಲ ಬೆನಕೆ ಬೆಳಗಾವಿ: ಶಾಸಕ ಅನಿಲ ಬೆನಕೆ ಅವರ ವಿಷೇಶವಾದ ಪ್ರಯತ್ನದಿಂದ 1.30 ಕೋಟಿ ರೂಪಾಯಿ ಅನುದಾನ ಬಿಡುಗಡೆ ಆಗಿದ್ದು, ವಿದ್ಯಾರ್ಥಿಗಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಗ್ರಂಥಾಲಯ ಸೇರಿದಂತೆ ಕೋಚಿಂಗ್ ಸೆಂಟರ್ ಗಳ ನಿರ್ಮಾಣ ಆಗಲಿದೆ. ಇಂದು ಬೆಳಗಾವಿ ಮಹಾನಗರ ಮಾಲಿಕೆಯಲ್ಲಿ ಬೆಳಗಾವಿ ಉತ್ತರ ಮತ ಕ್ಷೇತ್ರದ ಶಾಸಕರಾದ ಅನಿಲ ಬೆನಕೆ, ಪಾಲಕೆ ಕಮಿಷನರ್ ರುದ್ರೇಶ ಗಾಳಿ ಸೇರಿದಂತೆ ಅನೇಕ ದಲಿತ …
Read More »ಗುರುವಾರ ಬೆಳಗಾವಿಗೆ ಇಬ್ಬರು ಫೈರ್ ಬ್ರ್ಯಾಂಡ್!
ಬೆಳಗಾವಿ- ಗುರುವಾರ ದಿನಾಂಕ 16 ರಂದು ಬೆಳಗಾವಿಗೆ ಇಬ್ಬರು ದಿಗ್ಗಜರು ಅಗಮಿಸುತ್ತಿದ್ದು ಅಂದು ಬೆಳಗಾವಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಬದುಕು ಹೋರಾಟ,ಶೌರ್ಯ ಸಹಾಸದ ಇತಿಹಾಸ ಬಿಂಬಿಸುವ ಶಿವಚರಿತ್ರೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಅವರು ತಮ್ಮ ಕ್ಷೇತ್ರದ ಛತ್ರಪತಿ ಶಿವಾಜಿ ಉದ್ಯಾನವನದ ಆವರಣದಲ್ಲಿ ನಿರ್ಮಿಸಿರುವ ಶಿವಚರಿತ್ರೆ ಗುರುವಾರ ಸಂಜೆ 5-30 ಕ್ಕೆ ಉದ್ಘಾಟನೆ ಆಗಲಿದೆ.ಕೇಂದ್ರ ಸಚಿವೆ ಸ್ಮೃತಿ ಇರಾಣಿ,ಮಾಜಿ ಕೇಂದ್ರ ಸಚಿವ ಬಸನಗೌಡ ಯತ್ನಾಳ …
Read More »ಕುಕ್ಕರ್ ಸೀರೆ ಹಂಚಬಾರ್ದು, ಬಾಡೂಟ ಪಾರ್ಟಿ ಮಾಡಬಾರ್ದು!!
ವಿಧಾನಸಭೆ ಚುನಾವಣೆ: ಉಚಿತ ಕೂಪನ್ ನಿರ್ಬಂಧ ಬಾಡೂಟ, ಉಡುಗೊರೆ ಹಂಚಿಕೆ ಕಂಡುಬಂದರೆ ಕಠಿಣ ಕ್ರಮ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಎಚ್ಚರಿಕೆ ಬೆಳಗಾವಿ, -ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲಿರುವ ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ದುಡ್ಡು, ಕುಕ್ಕರ್, ಗೃಹಬಳಕೆಯ ಪಾತ್ರೆಗಳು, ಸೀರೆ, ಉಚಿತ ಕೂಪನ್ ಸೇರಿದಂತೆ ಯಾವುದೇ ರೀತಿಯ ಉಡುಗೊರೆ ಹಂಚುವುದಕ್ಕೆ ಚುನಾವಣಾ ಆಯೋಗ ನಿರ್ಬಂಧ ವಿಧಿಸಿರುತ್ತದೆ. ಆದ್ದರಿಂದ ಜಿಲ್ಲೆಯಲ್ಲಿ ಈ ರೀತಿಯ ಚಟುವಟಿಕೆಗಳು ಕಂಡುಬಂದರೆ ಕಟ್ಟುನಿಟ್ಟಿನ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ …
Read More »ಇಲೆಕ್ಷನ್ ಬಂದಾಗ ಡಾ.ರವಿ ಪಾಟೀಲ ಅವರಿಂದ ನಾಟಕ!
ಬೆಳಗಾವಿ- ವಿಧಾನಸಭೆಯ ಚುನಾವಣೆ ಸಮೀಪ ಬಂದಾಗ,ಬೆಳಗಾವಿಯಲ್ಲಿ ಬಿಜೆಪಿ ಮುಖಂಡ ಡಾ.ರವಿ ಪಾಟೀಲ ಅವರು ಪ್ರದರ್ಶಿಸಿದ ನಾಟಕ ಬೆಳಗಾವಿ ಜಿಲ್ಲೆಯ ಜನರ ಗಮನ ಸೆಳೆದಿದೆ. ಅದು ಎಂಎಲ್ಎ ಇಲೆಕ್ಷನ್ ಇರಲಿ,ಅಥವಾ ಎಂಪಿ ಇಲೆಕ್ಷನ್ ಇರಲಿ ಯಾವುದೇ ಇಲೆಕ್ಷನ್ ಬಂದ್ರೂ ಸಹ ಎಲ್ಲ ಇಲೆಕ್ಷನ್ ಗಳಲ್ಲಿ ಡಾ.ರವಿ ಪಾಟೀಲ ಅವರು ಬಿಜೆಪಿ ಟಿಕೆಟ್ ಕೇಳ್ತಾರೆ, ಕೊನೆಯ ಹಂತದವರೆಗೂ ಡಾ.ರವಿ ಪಾಟೀಲ ಅವರೇ ಪ್ರಬಲ ಆಕಾಂಕ್ಷಿಯಾಗಿರ್ತಾರೆ.ಇಲೆಕ್ಷನ್ ಬಂದಾಗ ಡಾ. ರವಿ ಪಾಟೀಲ ಫುಲ್ ಆ್ಯಕ್ಟೀವ್ …
Read More »ನಾನೂ ಸಹ ಶಶಿಕಲಾ ಜೊಲ್ಲೆ ಪರವಾಗಿ ನಿಲ್ತೇನಿ ಎಂದ ರಮೇಶ್ ಜಾರಕಿಹೊಳಿ,!
ಬೆಳಗಾವಿ-ಭಿನ್ನಮತ ಬಹಿರಂಗ ಬೆನ್ನಲ್ಲೇ ಬಿಜೆಪಿ ನಾಯಕರಿಂದ ಜಂಟಿ ಪತ್ರಿಕಾಗೋಷ್ಢಿ ನಡೆದಿದೆ.ಬೆಳಗಾವಿ ಜಿಲ್ಲೆಯಕಾಗವಾಡ ಮತಕ್ಷೇತ್ರದ ಐನಾಪುರದಲ್ಲಿ ಬೆಳಗಾವಿಯ ಬಿಜೆಪಿ ನಾಯಕರು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ರಮೇಶ್ ಜಾರಕಿಹೊಳಿ,ಲಕ್ಷ್ಮಣ ಸವದಿ, ಸಚಿವೆ ಶಶಿಕಲಾ ಜೊಲ್ಲೆ ಜಂಟಿ ಸುದ್ದಿಗೋಷ್ಠಿ, ನಡೆಸಿ ನಾವೆಲ್ಲರೂ ಒಂದಾಗಿದ್ದೇವೆ ಎನ್ನುವ ಸಂದೇಶ ಸಾರಿದ್ದಾರೆ.ಬಿಜೆಪಿ ನಾಯಕರ ಮಧ್ಯೆ ಹೊಂದಾಣಿಕೆ ಕೊರತೆ ವಿಚಾರ,ನಮ್ಮಲ್ಲಿ ಒಗ್ಗಟ್ಟಿಲ್ಲ ಎಂದು ಬಿಂಬಿಸೋರು ಬಹಳ ಜನ ಇದ್ದಾರೆ,,ಅದನ್ಯಾವುದನ್ನೂ ನೀವು ತೆಲೆಗೆ ಹಾಕಿಕೊಳ್ಳಬೇಡಿ,೧೫ ಸ್ಥಾನಗಳಲ್ಲಿ ನಾವು ಗೆಲ್ಲುವ ಪ್ರಯತ್ನ ಮಾಡುತ್ತೆವೆ …
Read More »