ಬೆಳಗಾವಿ-ಚುನಾವಣೆ ಸಮೀಪಿಸುತ್ತಿದ್ದಂತೆ, ಬೆಳಗಾವಿ ಜಿಲ್ಲೆಯಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ.ಕಾಂಗ್ರೆಸ್ ಟಿಕೆಟ್ ಗಾಗಿ ಅನೇಕ ಘಟಾನುಘಟಿಗಳು ಅರ್ಜಿ ಹಾಕಿದ್ದು,ಗೋಕಾಕ್ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನೀಡುವಂತೆ ಹಿರಿಯ ಪತ್ರಕರ್ತರೊಬ್ಬರು ಅರ್ಜಿ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ. ಸುಮಾರು ಮೂರು ದಶಕಗಳ ಕಾಲ ಗೋಕಾಕ್ ತಾಲ್ಲೂಕಿನ ವರದಿಗಾರರಾಗಿ ಸೇವೆಗೈದಿರುವ ಚಂದ್ರಶೇಖರ ಕೊಣ್ಣೂರ, ಗೋಕಾಕ್ ತಾಲ್ಲೂಕಿನ ರಾಜಕಾರಣದ ಆಳ ಅಗಲ ಬಲ್ಲವರಾಗಿದ್ದು ಗ್ರಾಮ ಪಂಚಾಯತಿ ತಾಲ್ಲೂಕಾ ಪಂಚಾಯತಿ ಸದಸ್ಯರಾಗಿ ತಾಲ್ಲೂಕಿನ ಜನರ ಜೊತೆ ಉತ್ತಮ …
Read More »ಶ್ರೀರಾಮಸೇನೆ ಜಿಲ್ಲಾಧ್ಯಕ್ಷನ ಮೇಲೆ ಫೈರಿಂಗ್ ಮಾಡಿದ ಆರೋಪಿಗಳು ಇವರೇ…!!
ಬೆಳಗಾವಿ-ಬೆಳಗಾವಿ ಪಕ್ಕದ ಹಿಂಡಲಗಾ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದ ಗುಂಡಿನ ದಾಳಿ ಪ್ರಕರಣವನ್ನು ಭೇದಿಸುವ ಮೂಲಕ ಬೆಳಗಾವಿ ಪೋಲೀಸರು ಅನೇಕ ರಾಜಕೀಯ ಆಟಗಳಿಗೆ ಬ್ರೇಕ್ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಕುಂದಾನಗರಿಯಲ್ಲಿ ಕಂಟ್ರಿ ಪಿಸ್ತೂಲ್ ಮತ್ತೆ ಸದ್ದು ಮಾಡಿದೆ. ಸೂರ್ಯ ಮುಳುಗುವ ಹೊತ್ತಿನಲ್ಲೇ ಬೆಳಗಾವಿಯಲ್ಲಿ ಗುಂಡಿನ ಸದ್ದು ಮೊಳಗಿತ್ತು. ಹಿಂದೂ ಮುಖಂಡನ ಗುರಿಯಾಗಿಸಿಯೇ ನಿನ್ನೆ ಸಂಜೆ ಫೈರಿಂಗ್ ಮಾಡಲಾಗಿತ್ತು. ಇದು ದೊಡ್ಡಮಟ್ಟದ ಸುದ್ದಿಯಾಗಿ ಸದ್ದನ್ನೂ ಮಾಡಿತ್ತು. ಘಟನೆ ನಡೆಯುತ್ತಿದ್ದಂತೆ ಕಾರ್ಯ ಪ್ರವರ್ತರಾದ ಪೊಲೀಸರು …
Read More »ಫೈರೀಂಗ್ ಪ್ರಕರಣ ಮೂರು ಜನ ಆರೋಪಿಗಳ ಅರೆಸ್ಟ್
ಬೆಳಗಾವಿ-ಬೆಳಗಾವಿಯಲ್ಲಿ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತ್ಕರ್ ಮೇಲೆ ನಡೆದ ಫೈರಿಂಗ್ ಪ್ರಕರಣವನ್ನು ಬೆಳಗಾವಿ ಪೋಲೀಸರು ಯಶಸ್ವಿಯಾಗಿದ್ದಾರೆ. ಬೆಳಗಾವಿ ನಗರ ಪೋಲೀಸ್ ಆಯುಕ್ತರು ನಿನ್ನೆ ರಾತ್ರಿ ಘಟನೆ ನಡೆದ ತಕ್ಷಣ ನಾಲ್ಕು ತಂಡಗಳನ್ನು ರಚಿಸಿ ತನಿಖೆಗೆ ಸೂಚನೆ ನೀಡಿದ್ದರು.ಬೆಳಗಾವಿ ನಗರ ಪೊಲೀಸರ ಶೀಫ್ರ ಕಾರ್ಯಾಚರಣೆಯಿಂದಾಗಿ ಮೂರು ಜನ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ನಗರ ಪೋಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಅವರು ಪತ್ರಿಕಾ ಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಘಟನೆ …
Read More »ಬೆಳಗಾವಿಯಲ್ಲಿ ಧೂಳೆಬ್ಬಿಸಿದ ಬೆನಕೆ ಟ್ರೋಫಿ !
ಬೆಳಗಾವಿ :ಬೆಳಗಾವಿ ಉತ್ತರ ಮತಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಬೆನಕೆ ಅವರು ಏರ್ಪಡಿಸಿರುವ ಕ್ರಿಕೆಟ್ ಪಂದ್ಯಾವಳಿ ಇದೀಗ ಕ್ರಿಕೆಟ್ ಪ್ರೇಮಿಗಳಿಗೆ ರಸದೌತಣ ನೀಡಿದೆ. ಬೆಳಗಾವಿ ನಗರದ ಹೃದಯ ಭಾಗವಾದ ಸರ್ದಾರ್ ಹೈಸ್ಕೂಲ್ ಮೈದಾನದಲ್ಲಿ ಈ ಪ್ರತಿಷ್ಠಿತ ಪಂದ್ಯಾವಳಿ ನಡೆಯುತ್ತಿದೆ. ಕ್ರಿಕೆಟ್ ಪಂದ್ಯಾವಳಿಗೆ ‘ಅನಿಲ್ ಬೆನಕೆ ಟ್ರೋಫಿ’ ಎಂದು ಹೆಸರಿಸಲಾಗಿದೆ. ಪ್ರತಿಷ್ಠಿತ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವುದು ವಿಶೇಷ ಆಕರ್ಷಣೆಯಾಗಿದೆ. ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳಿಗೆ ವಿಶೇಷ ಬಹುಮಾನ ಘೋಷಣೆ ಮಾಡಲಾಗಿದೆ. ಅದರಲ್ಲೂ …
Read More »ಬೆಳಗಾವಿಯ, ಹಿಂದೂ ಸಂಘಟನೆಯ ನಾಯಕ ರವಿ ಕೋಕಿತ್ಕರ್ ಮೇಲೆ ಫೈರೀಂಗ್…
ಬೆಳಗಾವಿ- ಹಿಂದೂ ಸಂಘಟನೆಯ ನಾಯಕ ರವಿ ಕೋಕೀತ್ಕರ್ ಮೇಲೆ ದುಷ್ಕರ್ಮಿಗಳು ಫೈರೀಂಗ್ ಮಾಡಿದ ಘಟನೆ ಇಂದು ಸಂಜೆ ಹಿಂಡಲಗಾ ಗ್ರಾಮದಲ್ಲಿ ನಡೆದಿದೆ. ಇಂದು ಸಂಜೆ ಹಿಂದೂ ಸಂಘಟನೆಯ ನಾಯಕ, ಶ್ರೀರಾಮಸೇನೆಯ ಮಾಜಿ ಮುಖಂಡ ರವಿ ಕೋಕೀತ್ಕರ್ ಇಂದು ಸಂಜೆ ಕಾರಿನಲ್ಲಿ ತೆರಳುವಾಗ ದುಷ್ಕರ್ಮಿಗಳು ಫೈರಿಂಗ್ ಮಾಡಿದ್ದಾರೆ.ರವಿ ಕೋಕಿತ್ಕರ್ ಕುತ್ತಿಗೆಗೆ ಗುಂಡು ತಗಲಿದ್ದು ಅವರು ಪ್ರಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ರವಿ ಕೋಕೀತ್ಕರ್ ಸದ್ಯಕ್ಕೆ ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಅವರ …
Read More »ಕ್ರಾಂತಿವೀರ ರಾಯಣ್ಣನ ಊರಾಗ, ಸಂಗೊಳ್ಳಿ ಕೇಸರಿ”, “ಸಂಗೊಳ್ಳಿ ಕುಮಾರ್” ಗೆ ಅಖಾಡಾ ರೆಡಿ…!!
ಸಂಗೊಳ್ಳಿ ಉತ್ಸವ: ಸಂಗೊಳ್ಳಿ ಕೇಸರಿ ಪ್ರಶಸ್ತಿ —————————————————————— “ಹೆಚ್ಚಿನ ಪ್ರಚಾರಕ್ಕೆ ಕ್ರಮ; ರಾಜ್ಯಮಟ್ಟದ ಕುಸ್ತಿ ಸ್ಪರ್ಧೆ” ಬೆಳಗಾವಿ, ): ಪ್ರತಿವರ್ಷದಂತೆ ಜನವರಿ 12 ಹಾಗೂ 13 ರಂದು ನಡೆಯಲಿರುವ ಸಂಗೊಳ್ಳಿ ಉತ್ಸವದ ಸಂದರ್ಭದಲ್ಲಿ ಹೆಚ್ಚಿನ ರೀತಿಯಲ್ಲಿ ಪ್ರಚಾರಕಾರ್ಯ ಕೈಗೊಳ್ಳಲಾಗುವುದು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕರಾದ ಗುರುನಾಥ ಕಡಬೂರ ತಿಳಿಸಿದರು. ಸಂಗೊಳ್ಳಿ ಉತ್ಸವದ ಹಿನ್ನೆಲೆಯಲ್ಲಿ ಸಂಗೊಳ್ಳಿ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಶನಿವಾರ (ಜ.7) ನಡೆದ ಪ್ರಚಾರ …
Read More »ಬೆಳಗಾವಿಯಲ್ಲಿ ನಾಳೆ ಮಾಜಿ ಸೈನಿಕರ ಕಲ್ಯಾಣ ಸಂಘ ಉದ್ಘಾಟನೆ
ಬೆಳಗಾವಿ: ನಗರದ ರಾಮತೀರ್ಥ ನಗರದಲ್ಲಿ ಮಾಜಿ ಸೈನಿಕರ ಕಲ್ಯಾಣ ಸಂಘ ಸ್ಥಾಪನೆಗೊಂಡಿದ್ದು ಸಂಘದ ಉದ್ಘಾಟನಾ ಕಾರ್ಯಕ್ರಮ ಇಂದು ಭಾನುವಾರ ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ಕಣಬರಗಿ ರಸ್ತೆಯ ಸಂಕಲ್ಪ ಗಾರ್ಡನ್‌ನಲ್ಲಿ ಉದ್ಘಾಟನೆ ಸಮಾರಂಭ ನೆರವೇರಲಿದ್ದು ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದಾರೆ. ಮಾಜಿ ಸೈನಿಕರ ಕಲ್ಯಾಣ ಸಂಘದ ಉದ್ಘಾಟನೆಯನ್ನು ನಿವೃತ್ತ ಮೇಜರ್ ಜನರಲ್ ಕೆ.ಎನ್.ಮಿರ್ಜಿ ನೆರವೇರಿಸಲಿದ್ದು ಕಾರ್ಯಕ್ರಮ ಅಧ್ಯಕ್ಷತೆಯನ್ನು ಬೆಳಗಾವಿ ಉತ್ತರ ಬಿಜೆಪಿ ಶಾಸಕ ಅನಿಲ್ …
Read More »ಒಂದೂವರೆ ಕೋಟಿ ಸ್ವಂತ ಖರ್ಚು ಮಾಡಿ, ಮಠಕ್ಕೆ ಕಲ್ಯಾಣ ಮಂಟಪ ನಿರ್ಮಿಸಿದ ಪುಣ್ಯಾತ್ಮ ಯಾರು ಗೊತ್ತಾ ??
ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿ ಸಮುದಾಯ ಭವನ ನಿರ್ಮಿಸಿ ಪ್ರಚಾರ ಪಡೆಯುವ ಲೀಡರ್ ಗಳು ಸಾಕಷ್ಟು ಜನ ಇದ್ದಾರೆ, ಆದ್ರೆ, ಸ್ವಂತ ಖರ್ಚಿನಲ್ಲಿ ಒಂದೂವರೆ ಕೋಟಿ ರೂ ಖರ್ಚು ಮಾಡಿ,ಅರಭಾವಿ ಮಠಕ್ಕೆ ಕಲ್ಯಾಣ ಮಂಟಪ ಕಟ್ಟಿಸಿ ಅರಭಾವಿ ಶಾಸಕ ,ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಠದ ಭಕ್ತರ ಪ್ರೀತಿಗೆ ಪಾತ್ರರಾಗಿದ್ದಾರೆ. ಒಬ್ಬ ಜನ ಪ್ರತಿನಿಧಿ ಮನಸ್ಸು ಮಾಡಿದ್ರೆ ಏನೆಲ್ಲಾ ಮಾಡಬಹುದು ಎನ್ನುವದಕ್ಕೆ ಬಾಲಚಂದ್ರ ಜಾರಕಿಹೊಳಿ ಸ್ಪೂರ್ತಿಯಾಗಿದ್ದಾರೆ.ಅದಕ್ಕೆ ಗೋಕಾಕ ತಾಲ್ಲೂಕಿನ ಜನ …
Read More »ಲೀವರ್ ಫೇಲ್,ಆಪರೇಷನ್ ಸಕ್ಸೆಸ್, ಬೆಳಗಾವಿ ಕೆಎಲ್ಇ ಆಸ್ಪತ್ರೆಗೆ ಕೀರ್ತಿ…!!
ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಎರಡನೇ ಯಶಸ್ವಿ ಯಕೃತ್ತು ಕಸಿ ಬೆಳಗಾವಿ-ಅನೇಕ ವರ್ಷಗಳಿಂದ ಲೀವರ ವೈಫಲ್ಯದಿಂದ ಬಳಲುತ್ತ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ವ್ಯಕ್ತಿಯೋರ್ವನಿಗೆ ಲೀವರ ಕಸಿ ಮಾಡುವದರ ಮೂಲಕ ರೋಗಿಯನ್ನು ಪ್ರಾಣಾಪಾಯದಿಂದ ಪಾರು ಮಾಡುವದಲ್ಲದೇ, ಉತ್ತರ ಕರ್ನಾಟಕದಲ್ಲಿಯೇ ದ್ವಿತೀಯ ಯಶಸ್ವಿ ಯಕೃತ್ತಿನ ಕಸಿ ಮಾಡುವಲ್ಲಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ವೈದ್ಯರು ಯಶಸ್ವಿಯಾಗಿದ್ದಾರೆ. ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು …
Read More »ಹೊಸ ಇತಿಹಾಸ ನಿರ್ಮಿಸಲಿರುವ ಬೆಳಗಾವಿಯ ಸುವರ್ಣವಿಧಾನಸೌಧ…
ಯೋಗಥಾನ್-2023 ಪೂರ್ವಭಾವಿ ಸಭೆ ಸುವರ್ಣ ವಿಧಾನಸೌಧ ಆವರಣದಲ್ಲಿ ಜ.15 ರಂದು ಯೋಗಥಾನ್ ಬೆಳಗಾವಿ): ಇಲ್ಲಿನ ಸುವರ್ಣ ವಿಧಾನಸೌಧದ ಆವರಣದಲ್ಲಿ ಜನವರಿ 15 ರಂದು ಬೃಹತ್ ಯೋಗಥಾನ್-2023 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು. ಯೋಗಥಾನ್-2023 ಪೂರ್ವಸಿದ್ಧತೆ ಕುರಿತು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ (ಜ.6) ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಮುಂಚೆ 80 ಸಾವಿರ ಜನರನ್ನು ಸೇರಿಸುವ ಗುರಿ ಹೊಂದಲಾಗಿತ್ತು. ಇದೀಗ …
Read More »