ಬೆಳಗಾವಿ- ಈಗ ಶಾಲೆಗೆ ದಸರಾ ರಜೆ ಹೀಗಾಗಿ ಶಾಲಾ ಮಕ್ಕಳು ಮನೆಯಲ್ಲಿ ಇರುವದು ಸಹಜ, ಮನೆ ಕೆಲಸಕ್ಕೆ ತೆರಳುತ್ತಿದ್ದ ತಾಯಿ ತನ್ನ ಜೊತೆ ಮಗನನ್ನು ಕರೆದುಕೊಂಡು ಹೋಗಿದ್ದಳು, ಆದ್ರೆ ಅಲ್ಲಿ ಯಡವಟ್ಟಾಗಿ ಬಾಲಕನ ಜೀವ ಉಳಿಯಲ್ಲಿಲ್ಲ. ಬೆಳಗಾವಿ ಉಜ್ವಲ ನಗರದ ನಿವಾಸಿ ದಫೇದಾರ್ ಎಂಬ ಮಹಿಳೆ ಮನೆ ಕೆಲಸಕ್ಕೆ ಅಶೋಕ ನಗರಕ್ಕೆ ಹೋಗುವಾಗ ಜೊತೆಗೆ ತನ್ನ ಮಗ ಅರಮಾನ್ ನನ್ನು ಕರೆದುಕೊಂಡು ಹೋಗಿದ್ದಳು,ತಾಯಿ ಮನೆ ಕೆಲಸದಲ್ಲಿ ತೊಡಗಿರುವಾಗ ಮಗ ಟೆರಿಸ್ …
Read More »ಅಕ್ಟೋಬರ್ 15 ಪ್ರಭಾಕರ ಕೋರೆ ಅವರಿಗೆ ಸ್ಪೇಷಲ್ ಡೇ…!!
ಇದೇ ತಿಂಗಳು ದಿ. 15 ರಂದು ಡಾ. ಪ್ರಭಾಕರ ಕೋರೆ ಅವರ 75ನೇ ಜನ್ಮ ದಿನಾಚರಣೆಯ ಅಮೃತ ಮಹೋತ್ಸವದಂಗವಾಗಿ ಪೂರ್ವಭಾವಿ ಸಭೆಯನ್ನು ಗ್ರಾಮೀಣ ಮುಖಂಡರೊಂದಿಗೆ ಇಂದು ಲಿಂಗರಾಜ ಕಾಲೇಜಿನ ಸಭಾಭವನದಲ್ಲಿ ಏರ್ಪಡಿಸಲಾಗಿತ್ತು. ಮಾಜಿ ಶಾಸಕರು ಹಾಗೂ ಕೆಎಲ್ಇ ಸಂಸ್ಥೆಯ ನಿರ್ದೇಶಕರಾದ ಮಹಾಂತೇಶ ಕವಟಗಿಮಠ ಅವರು ಮಾತನಾಡಿ, ಈ ನಾಡಿನಲ್ಲಿ ಶೈಕ್ಷಣಿಕ ಕ್ರಾಂತಿಯೊಂದಿಗೆ ಹಿಂದುಳಿದ ಜನರಲ್ಲಿ ಶಿಕ್ಷಣದ ಅರಿವು ಮೂಡಿಸುತ್ತ, ಅವರ ಜೀವನದಲ್ಲಿ ಬೆಳಕಾಗಿ ಪರಿಣಮಿಸಿದ ಡಾ. ಪ್ರಭಾಕರ ಕೋರೆ ಅವರು …
Read More »ನಿಂತ ಲಾರಿಗೆ ಗುದ್ದಿದ ಕಾರು ಓರ್ವನ ಸಾವು,ನಾಲ್ವರಿಗೆ ಗಂಭೀರ ಗಾಯ…
ಬೆಳಗಾವಿ: ಬೆಳಂಬೆಳಗ್ಗೆ ಯರಗಟ್ಟಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಲಾರಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು ಕಾರಿನಲ್ಲಿದ್ದ ತಂದೆ-ಮಗ ಸೇರಿ ನಾಲ್ವರಿಗೆ ಗಂಭೀರ ಗಾಯಗಳಾದ ಘಟನೆ ಪಟ್ಟಣದಲ್ಲಿ ನಡೆದಿದೆ. ರಾಮದುರ್ಗ ತಾಲೂಕಿನ ಹುಲಕುಂದ ಗ್ರಾಮದ ರಂಗಪ್ಪ ಗುರುಸಿದ್ದಪ್ಪ ಪಾಟೀಲ (30) ಸಾವನ್ನಪ್ಪಿದವರು.ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದ ಭೀರೇಶ್ವರ ಬ್ಯಾಂಕ್ ಎದುರಿನ ರಸ್ತೆ ಪಕ್ಕದಲ್ಲಿ ಮೃತ ಲಾರಿ ಚಾಲಕ ಲಾರಿಯನ್ನು ಸೈಡ್ ಗೆ ಹಾಕಿ ಲಾರಿಯಲ್ಲಿದ್ದ ಸರಕಿಗೆ ಹಗ್ಗ ಕಟ್ಟಿ ಪ್ಯಾಕ್ …
Read More »ಈತನ ಬಳಿ ಸಿಕ್ಕಿದ್ದು ಒಂದಲ್ಲ,ಎರಡಲ್ಲ,ಬರೊಬ್ಬರಿ 51 ಎಟಿಎಂ ಕಾರ್ಡ್…..!!
ಬೆಳಗಾವಿ- ಆತ ಖಿಲಾಡಿ,ಎಟಿಎಂ ಹತ್ತಿರ ಸುತ್ತಾಡಿ,ಮಹಿಳೆಯರಿಗೆ,ವೃದ್ಧರಿಗೆ ಸಹಾಯ ಮಾಡುವದಾಗಿ ನಂಬಿಸಿ,ಎಟಿಎಂ ಬದಲಾಯಿಸಿ ಹಣ ದೋಚುತ್ತಿದ್ದ ವಂಚಕನನ್ನು ಚಿಕ್ಕೋಡಿ ಪೋಲೀಸರು ಬಂಧಿಸಿದ್ದಾರೆ. ಅಮೂಲ ದಿಲೀಪ್ ಸಖಟೆ (30) ಈತ ಮೂಲತಃ ಮಹಾರಾಷ್ಟ್ರದ ಕೊಲ್ಹಾಪೂರದ ನಿವಾಸಿಯಾಗಿದ್ದು,ಚಿಕ್ಕೋಡಿಯ ಹಾಲಟ್ಟಿ ಗ್ರಾಮದ ವಿಜಯಾ ರಾನಪ್ಪ ಢಾಲೆ ಎಂಬ ಮಹಿಳೆಗೆ ಎಟಿಎಂ ನಿಂದ ಹಣ ತಗೆಯಲು ಸಹಾಯ ಮಾಡುವದಾಗಿ ಹೇಳಿ 37 ,500 ರೂ ಹಣ ಡ್ರಾ ಮಾಡಿ, ದೋಚಿಕೊಂಡು ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿದ …
Read More »ಯಾವಾಗಲೂ ನಾವು ನಿಮ್ಮ ಜೊತೆಗಿದ್ದೇವೆ.- ಬಾಲಚಂದ್ರ ಜಾರಕಿಹೊಳಿ
ಪಂಚಮಸಾಲಿ ಸಮಾಜದ 2ಎ ಮೀಸಲಾತಿಗೆ ಸಂಪೂರ್ಣ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಕೊಟ್ಟ ಬಾಲಚಂದ್ರ ಜಾರಕಿಹೊಳಿ *ಮೂಡಲಗಿ*: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. …
Read More »ಹಿಂದಿನ ಸರ್ಕಾರ ಕೆಡವಿದ ರಮೇಶ ಜಾರಕಿಹೊಳಿಗೆ ಈ ಸರ್ಕಾರ ಕೆಡುವುದು ದೊಡ್ಡ ಮಾತಲ್ಲ.
ಬೆಳಗಾವಿ-ಮುಂದಿನ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಗೆ ರಮೇಶ ಜಾತಕಿಹೊಳಿ ನೇತೃತ್ವ ಎಂಬ ಕಟೀಲ್ ಹೇಳಿಕೆ ವಿಚಾರವಾಗಿ ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.ಯಡಿಯೂರಪ್ಪನವರಿಗೆ ಕೊಡ್ತಿಲ್ಲ, ಇನ್ನೂ ರಮೇಶ ಜಾರಕಿಹೊಳಿ ಯಾವ ಲೆಕ್ಕ? ಎಂದು ಸತೀಶ್ ಪ್ರಶ್ನಿಸಿದ್ದಾರೆ. ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮಾದ್ಯಮಗಳ ಜೊತೆ ಮಾತನಾಡಿದ್ದು,ಪಕ್ಷ ಕಟ್ಟಿದ ಯಡಿಯೂರಪ್ಪನವರನ್ನೇ ಅವರನೇ ಸೈಡ್ಲೈನ್ ಮಾಡಿದ್ದಾರೆ.ಬಿಜೆಪಿ ನಾಯಕರು ರಮೇಶ ಜಾರಕಿಹೋಳಿ ಮೂಗಿಗೆ ತುಪ್ಪ ಸವರುವ ಕೆಲಸಮಾಡುತ್ತಿದ್ದಾರೆ.ಮಂತ್ರಿಗಾಗಿ ಕಾಯ್ದು ಕುಳಿತ ರಮೇಶ್ …
Read More »ಮಹಾನವಮಿಯ ದಿನ ಬೈಕ್ ಟಾಯರ್ ಢುಮ್, ಇಬ್ವರ ಲೈಫು ಖಲ್ಲಾಸ್…
ಬೆಳಗಾವಿ- ಚಲಿಸುತ್ತಿದ್ದ ಬೈಕ್ ಟಾಯರ್ ಪಂಕ್ಚರ್ ಆಗಿ,ನಿಯಂತ್ರಣ ತಪ್ಪಿ ಬೈಕ್ ಅಪಘಾತಕ್ಕೀಡಾಗಿ ಇಬ್ಬರು ಮೈತ ಪಟ್ಟರೆ ಇಬ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ನಿಪ್ಪಾಣಿ ಬಳಿ ರಾಷ್ಟ್ರೀಯ ಹೆದ್ದಾರಿಯ ಮೇಲೆ ನಡೆದಿದೆ.ಸವದತ್ತಿ ತಾಲ್ಲೂಕಿನ ಮುಗಳಿಹಾಳ ಗ್ರಾಮದ ಇಪ್ಪತ್ತೈದು ವರ್ಷದ ಲಕ್ಷ್ಮೀ ಆನಂದ ಕೊಪ್ಪದ,ರಾಮದುರ್ಗ ತಾಲ್ಲೂಕಿನ ಕಟಕೋಳ ಗ್ರಾಮದ ಹದಿಮೂರು ವರ್ಷದ ಭಾಗ್ಯಶ್ರೀ ವಕಮಿ ಮೃತ ದುರ್ದೈವಿಗಳಾಗಿದ್ದಾರೆ. ಬೈಕ್ ಚಲಾಯಿಸುತ್ತಿದ್ದ ಹಣಮಂತ ಸಕ್ರೀ,ಮತ್ತು ಮಾರುತಿ ರಮೇಶ್ ಚುನಾಮದಾರ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು,ಅವರನ್ನು …
Read More »ಸವದತ್ತಿ ಯಲ್ಲಮ್ಮ ದೇವಿಯ ದರ್ಶನಕ್ಕಾಗಿ ಹರಿದು ಬಂದ ಭಕ್ತಸಾಗರ…!!
ಬೆಳಗಾವಿ-ಏಳುಕೊಳ್ಳದ ನಾಡುಯಲ್ಲಮ್ಮನಗುಡ್ಡದಲ್ಲಿ ಮಂಗಳವಾರ ಈ ಜೈಕಾರ ಮುಗಿಲು ಮುಟ್ಟಿತ್ತು. ಭಕ್ತಾಧಿಗಳು ಮಹಾನವಮಿ ಸಂಭ್ರಮದಲ್ಲಿ ಮಿಂದೆದ್ದಿದ್ದರು. ನವರಾತ್ರಿ ಅಂಗವಾಗಿ ಯಲ್ಲಮ್ಮನ ದರ್ಸನಕ್ಕಾಗಿ ಅಮ್ಮನ ಸನ್ನಿಧಿಗೆ ಕರ್ನಾಟಕ, ಮಹಾರಾಷ್ಟ್ರ ಸೇರಿ ವಿವಿಧ ರಾಜ್ಯಗಳಿಂದ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ಸುಡು ಬಿಸಿಲಲ್ಲೂ ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದುಕೊಂಡರು. ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಅಂಗವಾಗಿ ಮಂಗಳವಾರ ಬೆಳಗ್ಗೆ ಆಯುಧ ಪೂಜೆ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಸಕಲ …
Read More »ದನದ ಕೊಟ್ಟಿಗೆ ಕುಸಿದು ಜೋಡೆತ್ತು ಸ್ಥಳದಲ್ಲೇ ಸಾವು….
ಬೆಳಗಾವಿ-ಮಳೆಯ ಅರ್ಭಟಕ್ಕೆ ಅತ್ಯಂತ ಹಳೇಯದಾದ ಮಣ್ಣಿನ ಮನೆಗಳು ದನದ ಕೊಟ್ಟಿಗೆಗಳು ಕುಸಿದು ಬೀಳುತ್ತಲೇ ಇದ್ದು ಈಗಾಗಲೇ ಹತ್ತು ಹಲವು ಜೀವಗಳು ಇದಕ್ಕೆ ಬಲಿಯಾಗಿವೆ. ದನದಕೊಟ್ಟಿಗೆ ಕುಸಿದು ಬಿದ್ದು ಜೋಡೆತ್ತು ಸ್ಥಳದಲ್ಲೇ ಸಾವನ್ನೊಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ನಡೆದಿದೆ.ಪ್ರಭು ನಗರದ ನಿವಾಸಿ ಸಾಬವ್ವ ಹುಡೇದಗೆ ಸೇರಿದ ಜೋಡೆತ್ತುಗಳು ಮೃತಪಟ್ಟಿವೆ. ಕಳೆದ ರಾತ್ರಿ ಏಕಾಏಕಿ ದನದ ಕೊಟ್ಟಿಗೆ ಕುಸಿದು ಬಿದ್ದು ಘಟನೆ. ಸ್ಥಳಕ್ಕೆ ಕೃಷಿ ಇಲಾಖೆ ಅಧಿಕಾರಿಗಳು, ಪೊಲೀಸರ ಭೇಟಿ …
Read More »ಇವರಿಬ್ಬರು ಮಾಡಿದ್ದಾದರೂ ಏನು ಗೊತ್ತಾ…??
ನಂದಗಡ & ಖಾನಾಪುರ ಠಾಣೆಯ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ನಂದಗಡ ಪೊಲೀಸರು ಇಬ್ಬರು ಆರೊಪಿತರನ್ನು ಬಂಧಿಸಿದ್ದಾರೆ. ಅಳನಾವರದ ಯಲ್ಲಪ್ಪ ಬಿಸಿಕೇರಿಯ ದುರ್ಗಪ್ಪ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೋಲೀಸರು57 ಗ್ರಾಂ ಬಂಗಾರ, 310 ಗ್ರಾಂ ಬೆಳ್ಳಿ ಆಭರಣಗಳು, 55 ಸಾವಿರ ನಗದು ಹಣವನ್ನು & ಕಳ್ಳತನಕ್ಕೆ ಬಳಸಿದ ಮೊಟಾರ ಬೈಕನ್ನು ವಶಪಡಿಸಿಕೊಂಡಿದ್ದಾರೆ ಇಬ್ಬರು ಆರೋಪಿಗಳು ನಂದಗಡ ಖಾನಾಪೂರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮನೆ ಕಳ್ಳತನ ಮಾಡುತ್ತಿದ್ದರು.
Read More »