Breaking News

Breaking News

ಜಾಗೆ ಹ್ಯಾಂಡ್ ಓವರ್, ರಸ್ತೆ ಹ್ಯಾಂಗ್ ಓವರ್,….!!

ಜಾಗೆ ಹ್ಯಾಂಡ್ ಓವರ್, ರಸ್ತೆ ಹ್ಯಾಂಗ್ ಓವರ್,….!! ಬೆಳಗಾವಿ – ಮಾನ್ಯ ಉಚ್ಛ ನ್ಯಾಯಾಲಯದ ನಿರ್ದೇಶನದಂತೆ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರು ,ಸ್ಮಾರ್ಟ್ ಸಿಟಿ ಎಂ‌ಡಿ, ಮತ್ತು ಬೆಳಗಾವಿ ಉಪ ವಿಭಾಗಾಧಿಕಾರಿಗಳ ಸಮ್ಮುಖದಲ್ಲಿ ಬೆಳಗಾವಿಯ ಶಿವಸೃಷ್ಠಿ ಎದುರಿನ ರಸ್ತೆ ಅಗಲೀಕರಣದಲ್ಲಿ ಭೂಸ್ವಾಧೀನ ಮಾಡಿಕೊಳ್ಳದೇ ಆಕ್ರಮವಾಗಿ ನಿರ್ಮಿಸಿದ ರಸ್ತೆಯ ಜಾಗವನ್ನು ಭೂ ಮಾಲೀಕರ ಕುಟುಂಬದವರಿಗೆ ಹಸ್ತಾಂತರ ಮಾಡುವ ಮೂಲಕ ಅಧಿಕಾರಿಗಳು ಇಂದು ಬೆಳ್ಳಂ ಬೆಳಗ್ಗೆ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಿದ್ದಾರೆ. ಇಂದು …

Read More »

ಯುಥ್ ಕಾಂಗ್ರೆಸ್ ಇಲೆಕ್ಷನ್ ಬೆಳಗಾವಿಯಲ್ಲಿ ಬಿಗ್ ಫೈಟ್……!!

ಬೆಳಗಾವಿ- ರಾಜ್ಯಾದ್ಯಂತ ಯುಥ್ ಕಾಂಗ್ರೆಸ್ ಇಲೆಕ್ಷನ್ ನಡೆಯುತ್ತಿದೆ‌.ಬೆಳಗಾವಿ ಜಿಲ್ಲೆಯಲ್ಲಿ ತುರುಸಿನ ಸ್ಪರ್ಧೆ ಏರ್ಪಟ್ಟಿದೆ. ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಯುಥ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಬೈಲಹೊಂಗಲದ ಕಾರ್ತಿಕ್ ಪಾಟೀಲ ಯರಗಟ್ಟಿಯ ಅಲ್ತಾಫ್ ಮುಲ್ಲಾ ನಡುವೆ ಬಿಗ್ ಪೈಟ್ ನಡೆಯುತ್ತಿದೆ. ಬೈಲಹೊಂಗಲದ ಕಾರ್ತಿಕ್ ಪಾಟೀಲ ಎರಡು ಬಾರಿ ಬೆಳಗಾವಿ ಜಿಲ್ಲಾ ಯುಥ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು ಈಗ ಮೂರನೇಯ ಬಾರಿಗೆ ಆಯ್ಕೆ ಬಯಸಿ ಸ್ಪರ್ದೆ ಮಾಡಿದ್ದಾರೆ ಯರಗಟ್ಟಿಯ ಅಲ್ತಾಫ್ ಮುಲ್ಲಾ ಕಾರ್ತಿಕ್ ಪಾಟೀಲರ ಪ್ರತಿಸ್ಪರ್ದಿಯಾಗಿದ್ದು …

Read More »

ಅಧಿಕಾರಿಗಳ ವಿರುದ್ಧ ಹಕ್ಕು ಚುತಿ ಮಂಡನೆ ಶೆಟ್ಟರ್ ಎಚ್ಚರಿಕೆ…..!!

ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳ ಚಾಲನೆ ನೀಡುವ ಕಾರ್ಯಕ್ರಮಕ್ಕೆ ತಮ್ಮನ್ನು ಅಹ್ವಾನಿಸಿಲ್ಲ,ಈ ಕುರಿತು ಸಂಸತ್ತಿನಲ್ಲಿ ಹಕ್ಕುಚುತಿ ಮಂಡನೆ ಮಾಡುವದಾಗಿ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಎಚ್ಚರಿಕೆ ನೀಡಿದ್ದಾರೆ. ಬೆಳಗಾವಿಯಲ್ಲಿ ‌ಸಂಸದ ಜಗದೀಶ್ ಶೆಟ್ಟರ್ ಮಾದ್ಯಮಗಳ ಜೊತೆ ಮಾತನಾಡಿ ಹಕ್ಕುಚುತಿ ಮಾಡಿದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕೆಲವು ಗ್ರಾಮಗಳಲ್ಲಿ ನಮ್ಮನ್ನು ಬಿಟ್ಟು ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ.ಈ ರೀತಿ ಅನೇಕ ಗ್ರಾಮಗಳಲ್ಲಿ ಆಗುತ್ತಿದೆ.ಅಭಿವೃದ್ಧಿ ಪೂಕರವಾದ ವ್ಯಕ್ತಿ ನಾನು …

Read More »

ಡಿಸ್ಕೋ ಡ್ಯಾನ್ಸ್ ಗಲಾಟೆ, ಮೂವರಿಗೆ ಚೂರಿ ಇರಿತ,

ಬೆಳಗಾವಿ-ಬೆಳಗಾವಿಯಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಡಿಜೆ ತಾಳಕ್ಕೆ ಕುಣಿಯುವಾಗ ನಡೆದ ಗಲಾಟೆಯಲ್ಲಿ ಮೂವರಿಗೆ ಚೂರಿ ಇರಿತವಾದ ಘಟನೆ ನಡೆದಿದೆ. ಚೂರಿ ಇರಿತದಿಂದ ಮೂವರು ಯುವಕರು ಗಾಯಗೊಂಡಿದ್ದು, ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಘಟನೆಬೆಳಗಾವಿ ನಗರದ ಚೆನ್ನಮ್ಮ ವೃತ್ತದ ಬಳಿ ಮೆರವಣಿಗೆ ಸಾಗುವ ಸಂಧರ್ಭದಲ್ಲಿ ನಡೆದಿದೆ.ಡ್ಯಾನ್ಸ್ ಮಾಡುವ ವೇಳೆ ಕಾಲು ತಾಗಿದ್ದಕ್ಕೆ ಕಿರಿಕ್. ಆಗಿದೆ, ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ.ಈ ಗಲಾಟೆಯಲ್ಲಿ ಮೂವರು ಹಾಸ್ಟೆಲ್ ವಿದ್ಯಾರ್ಥಿಗಳ ಮೇಲೆ …

Read More »

ನಾನು ಗಟ್ಟಿಯಾಗಿದ್ದೇನೆ ಎಂದು ಹೊರಗಡೆ ಇದ್ದೇನೆ- ರಮೇಶ್ ಜಾರಕಿಹೊಳಿ

ಅಥಣಿ-ಬಿಜೆಪಿ ಶಾಸಕ ಮುನಿರತ್ನ ಅರೆಸ್ಟ್ ವಿಚಾರಅಥಣಿಯಲ್ಲಿ ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು,ದಲಿತರಿಗೆ ಒಕ್ಕಲಿಗರಿಗೆ ಬೈದರಿಯುವದು ಇನ್ನೂ ಪ್ರೂವಾಗಿಲ್ಲ.ಇದನ್ನು ಸಿಡಿ ಶಿವು ಮಾಡಿದ್ದಾನೆ, ಅವನ ವಿರೋಧಿಗಳನ್ನು ಎಲ್ಲರನ್ನೂ ಜೈಲಿಗೆ ಹಾಕುತ್ತಾನೆ.ಹೆಸರು ಹೇಳದೆ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ರಮೇಶ್ ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾನು ಒಬ್ಬ ಗಟ್ಟಿ ಇದ್ದೇನೆ ಎಂದು ಹೊರಗಡೆ ಇದ್ದೇನೆ.ಸಿಡಿ ಶಿವು ಉಳಿದ ರಾಜಕೀಯ ವೈರಿಗಳನ್ನು ಜೈಲಿಗೆ ಹಾಕಿದ್ದಾನೆ.ನಾನು ಉಮೇಶ್ ಕತ್ತಿ ಜಾತಿ ಬಗ್ಗೆ ಪರಸ್ಪರ ನಿಂದನೆ ಮಾಡುತ್ತಿದ್ದೇವು. …

Read More »

ಪೋಲಿಸ್ ಠಾಣೆ ಮುಂದೆಯೇ ಕುಡುಕನ ಹೈಡ್ರಾಮಾ….!!

ಬೆಳಗಾವಿ-ಪೋಲಿಸ್ ಠಾಣೆ ಮುಂದೆಯೇ ಕುಡುಕನ ಹೈಡ್ರಾಮಾ ನಡೆಸಿದ ಘಟನೆ,ಬೆಳಗಾವಿ ನಗರದ ಟಿಳಕವಾಡಿ ಪೋಲಿಸ್ ಠಾಣೆ ಮುಂದೆ ನಡೆದಿದೆ. ಕುಡುಕ ಅವಾಂತರ ಮಾಡಿದ ವಿಡಿಯೋ ಈಗ ಸೋಶಿಯಲ್ ಮೀಡಿಯಾದ ಬ್ರೇಕ್ ಫಾಸ್ಟ್ ಆಗಿದೆ. ಪೋಲಿಸ್ ಠಾಣೆ ಗೇಟ್ ಮುಂದೆ ಕುಡುಕನ ರಾದಾಂತಕ್ಕೆ ಪೊಲೀಸ್ ಸಿಬ್ಬಂದಿಗಳು ಹೈರಾಣಾದ ಪ್ರಸಂಗ ನಡೆದಿದೆ. ಕುಡಿದು ಮತ್ತಿನಲ್ಲಿ ಪೋಲಿಸರ ಜೊತೆಗೆ ವಾಗ್ವಾದಕ್ಕೀಳಿದ ಮದ್ಯಪಾನಿ,ಅವ್ಯಾಚ್ಛ ಶಬ್ದಗಳಿಂದಲೇ ಮಹಿಳಾ ಪೋಲಿಸ್ ಸಿಬ್ಬಂದಿಗಳಿಗೂ ನಿಂದಿಸಿದ್ದಾನೆ.ಮಗನ ವಿರುದ್ಧ ಕಂಪ್ಲೀಟ್ ತೆಗೆದುಕೊಳ್ಳಲು ಹಿಂದೇಟು ಹಾಕಿದ್ದಕ್ಕೆ …

Read More »

ಪಿಜಿ-ನೀಟ್ ದೇಶಕ್ಕೆ 9ನೇ RANK ಗಳಿಸಿದ ಬೆಳಗಾವಿಯ ಡಾ.ಶರಣಪ್ಪ

  ಬೆಳಗಾವಿ ಬಿಮ್ಸ್ ಮುಕುಟಕ್ಕೆ ಮತ್ತೊಂದು ಗರಿ ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್)ಯ ವೈದ್ಯಕೀಯ ವಿದ್ಯಾರ್ಥಿ ರಾಷ್ಟ್ತಮಟ್ಟದ ಪಿ.ಜಿ. ನೀಟ್ ಪರೀಕ್ಷೆಯಲ್ಲಿ ಒಂಬತ್ತನೇ ರ‌್ಯಾಂಕ್ ಗಳಿಸುವ ಮೂಲಕ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಬಿಮ್ಸ್ ಸಾಧನೆ ಗುರುತಿಸುವಂತಾಗಿದೆ. ಬಿಮ್ಸ್ ನ ಎಂ.ಬಿ.ಬಿ.ಎಸ್ ವಿದ್ಯಾರ್ಥಿಯಾಗಿರುವ ಡಾ. ಶರಣಪ್ಪ ಶೀನಪ್ಪನವರ ಪಿ.ಜಿ. ನೀಟ್ ಪರೀಕ್ಷೆಯಲ್ಲಿ ಒಂಬತ್ತನೇ ರ‌್ಯಾಂಕ್ ಗಳಿಸುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸುವುದರ‌ ಜತೆಗೆ ಸಂಸ್ಥೆಗೆ ಕೀರ್ತಿಯನ್ನು ತಂದಿರುತ್ತಾರೆ. ಬಿಮ್ಸ್ ಸಂಸ್ಥೆಯು …

Read More »

20 ಕೋಟಿ ರೂ ಪರಿಹಾರ ನೀಡುವ ಪ್ರಕರಣಕ್ಕೆ ಹೊಸ ಟ್ವೀಸ್ಟ್ , …

ಅವರೂ ಒಪ್ಪಿಕೊಂಡರು ಇವರೂ ಒಪ್ಪಿಕೊಂಡರು…!! ಬೆಳಗಾವಿ- ಬೆಳಗಾವಿ ನಗರದ ರಸ್ತೆಯೊಂದರ ಅಗಲೀಕರಣದಲ್ಲಿ ಭೂಮಿ ಕಳೆದುಕೊಂಡಿದ್ದ ಭೂಮಿ ಮಾಲೀಕರಿಗೆ 20 ಕೋಟಿ ರೂ ಪರಿಹಾರ ನೀಡುವ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಪಡೆದಿದೆ‌. ಜಾಗೆಯನ್ನು ವಾಪಸ್ ಕೊಡಲು, ಪಾಲಿಕೆ ಒಪ್ಪಿಕೊಂಡಿದ್ದು,ಜಾಗೆ ವಾಪಸ್ ಪಡೆಯಲು ಭೂ ಮಾಲೀಕರೂ ಒಪ್ಪಿಕೊಂಡ ಬೆಳವಣಿಗೆ ನಿನ್ನೆಯ ದಿನ ಹೈಕೋರ್ಟ್ ನಲ್ಲಿ ನಡೆದಿದೆ. ಸ್ಮಾರ್ಟ್ ಸಿಟಿ ರಸ್ತೆ ನಿರ್ಮಾಣದಿಂದ ಪಾಲಿಕೆಗೆ ಸಂಕಷ್ಟ ಎದುರಾಗಿತ್ತು ಈ ಪ್ರಕರಣ ರಾಜ್ಯಮಟ್ಟದಲ್ಲಿ ಸುದ್ದಿ ಮಾಡಿತ್ತು.ಈ …

Read More »

ಜೇಬಿನಲ್ಲಿ ಪಟಾಕಿ ಸಿಡಿದು ಯುವಕನಿಗೆ ಗಂಭೀರ ಗಾಯ…..!!

ಬೆಳಗಾವಿ-ಬೆಳಗಾವಿಯಲ್ಲಿ ಗಣೇಶ ಚತುರ್ಥಿ ಹಿನ್ನಲ ಪಟಾಕಿ ಸಿಡಿದು ಯುವಕನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆಬೆಳಗಾವಿ ನಗರದಲ್ಲಿ ನಡೆದಿದೆ. ಬೆಳಗಾವಿಯರಾಮನಗರದಲ್ಲಿ ಈ ಘಟನೆ ನಡೆದಿದೆ.ಗಣೇಶ ಹಬ್ಬದ ನಿಮಿತ್ಯ ಪಟಾಕಿ ಹಾರಿಸುವ ವೇಳೆ ಈ ಘಟನೆ ನಡೆದಿದೆ.ಹನುಮಂತ ಗಾಡಿವಡ್ಡರ (12) ಗಾಯಗೊಂಡ ಯುವಕನಾಗಿದ್ದಾನೆ. *ಪಟಾಕಿಗೆ ಬೆಂಕಿ ಹಚ್ಚಿ ಒಗೆದಿದ್ದ ವ್ಯಕ್ತಿ ಬೆಂಕಿ ಹತ್ತಿಲ್ಲಾ ಎಂದು ಜೇಬಿಗೆ ಹಾಕಿಕೊಂಡಿದ್ದ,ಜೇಬಿಗೆ ಹಾಕಿಕ್ಕೊಳ್ಳುತ್ತಿದ್ದಂತೆ ಜೇಬಿನಲ್ಲೆ ಪಟಾಕಿ ಸಿಡಿದು ಗಂಭೀರ ಗಾಯಗೊಂಡಿದ್ದಾನೆ.ಜೇಬಿನಲ್ಲಿ ಪಟಾಕಿ ಸಿಡಿದು ಮರ್ಮಾಂಗಕ್ಕೂ ಸಂಪೂರ್ಣ ಗಾಯವಾಗಿದೆ. ಬೆಳಗಾವಿ …

Read More »

ಅವರು ಶುರು ಮಾಡಿದ್ದಾರೆ.ನೀವೂ ಅದನ್ನೇ ಮಾಡೋದು ಒಳ್ಳೆಯದು…!!!

ಬೆಂಗಳೂರು-ಕನ್ನಡ ಉಳಿಯಬೇಕು ಬೆಳೆಯಬೇಕು,ಡಾಕ್ಟರ್ ಬರೆದಿದ್ದು ರೋಗಿಗೆ ತಿಳಿಯಬೇಕು ತಪಾಸಣೆ ಮಾಡಿದ ಬಳಿಕ ಡಾಕ್ಟರ್ ಸಾಹೇಬ್ರು ಔಷಧಿ ಬರೆದು ಕೊಡ್ತಾರೆ ಅದು ಔಷಧಿ ಅಂಗಡಿಯವನಿಗೆ ಮಾತ್ರ ಅರ್ಥ ಆಗುತ್ತೆ ರಾಜ್ಯದ ಇಬ್ಬರು ವೈದ್ಯರು ಈಗ ಕನ್ನಡದಲ್ಲೇ ಔಷಧಿ ಚೀಟಿ ಬರೆಯುವ ಸಂಪ್ರದಾಯ ಶುರು ಮಾಡಿದ್ದಾರೆ.ಇದನ್ನು ರಾಜ್ಯದ ಎಲ್ಲ ವೈದ್ಯರು ಮಾಡಿದ್ರೆ ಅವರೂ ಸಹ ಕನ್ನಡ ಉಳಿಸುವ ಕಾಯಕ ಮಾಡಿದಂತಾಗುತ್ತದೆ. ಭಾಷೆ ಉಳಿಯಲು ಅಥವಾ ಅಳಿಯಲು ನಾವೇ ಕಾರಣರಾಗುತ್ತೇವೆ. ಹೌದು ಒಂದು ಭಾಷೆಯ …

Read More »