Breaking News
Home / Breaking News (page 10)

Breaking News

ಹೈದರಾಬಾದ್ ನಿಂದ ಬೆಳಗಾವಿಗೆ ಬರುತ್ತಿದ್ದ ಖಾಸಗಿ ಬಸ್ ಪಲ್ಟಿ : ಹಲವರು ಗಂಭೀರ

ಬೆಳಗಾವಿ :ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೇಮಗುಡ್ಡ ಬಳಿ ಖಾಸಗಿ ಬಸ್ ಪಲ್ಟಿಯಾಗಿ, 20ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. ಹೈದರಾಬಾದ್‌ನಿಂದ ಬೆಳಗಾವಿಗೆ ತೆರಳುತ್ತಿದ್ದ ಖಾಸಗಿ ಬಸ್‌ ಬೊಲೆರೊ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಭರದಲ್ಲಿ ಪಲ್ಟಿಯಾಗಿದೆ. ಗಾಯಾಳುಗಳನ್ನು ಗಂಗಾವತಿ ಮತ್ತು ಕೊಪ್ಪಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ. ಗುರುವಾರ ಬೆಳಗ್ಗೆ 7:00 ರ ಸುಮಾರಿಗೆ ಈ ಘಟನೆ ನಡೆದಿದೆ. ಬಸ್ಸಿನಲ್ಲಿ ಸುಮಾರು 50ಕ್ಕೂ …

Read More »

ಬಲಾಡ್ಯ ಬೆಳಗಾವಿ ಜಿಲ್ಲೆಗೆ ಕಾಂಗ್ರೆಸ್ ಕೊಟ್ಟಿದ್ದು ಶೂನ್ಯ, ಬಿಗ್ ಝಿರೋ…!!

        ಬೆಳಗಾವಿ ದೊಡ್ಡ ಜಿಲ್ಲೆಗೆ,ಕೈ ಕೊಟ್ಟ ಕಾಂಗ್ರೆಸ್ ಸರ್ಕಾರ…!! ಬೆಳಗಾವಿ- ಅಂತೂ ಇಂತೂ 44 ನಿಗಮ ಮಂಡಳಿಗೆ ಅಧ್ಯಕ್ಷರ ನೇಮಕ ಮಾಡಿ ನಿನ್ನೆ ರಾತ್ರಿ ಕಾಂಗ್ರೆಸ್ ಸರ್ಕಾರ ಆದೇಶ ಹೊರಡಿಸಿ ಪಟ್ಟಿ ಬಿಡುಗಡೆ ಮಾಡಿದ್ದು 44 ಜನರ ಪಟ್ಟಿಯಲ್ಲಿ ಬೆಳಗಾವಿ ಜಿಲ್ಲೆಗೆ ಸಿಕ್ಕಿದ್ದು ಶೂನ್ಯ…. ಮುಖ್ಯಂತ್ರಿ ಸಿದ್ರಾಮಯ್ಯ ಸಹಿ ಮಾಡಿರುವ 44 ಜನರ. ನಿಗಮ ಮಂಡಳಿಗಳ ಅಧ್ಯಕ್ಷರ ಪಟ್ಟಿಯಲ್ಲಿ ಬೆಳಗಾವಿ ಜಿಲ್ಲೆಯ ಯಾರಿಗೂ ಯಾವುದೇ ಸ್ಥಾನ …

Read More »

ನಿಗಮ ಮಂಡಳಿಗಳ ಪಟ್ಟಿಗೆ ಸಿಎಂ ಅಸ್ತು‌….ಬೆಳಗಾವಿ ಬುಡಾ,ಕಾಡಾ ಯಾರಿಗೆ..??

ಬೆಳಗಾವಿ- ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಪಾಲಿಗೆ ಇಂದು ಸಿಹಿ ಸುದ್ದಿ ಹೊರಬಿದ್ದಿದೆ.ನಿಗಮ ಮಂಡಳಿಗಳ ಪಟ್ಟಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಹಿ ಹಾಕಿದ್ದಾರೆ ಎನ್ನುವ ಮಾಹಿತಿ ಬೆಳಗಾವಿ ಸುದ್ದಿ ಡಾಟ್ ಕಾಮ್ ಗೆ ಲಭ್ಯವಾಗಿದೆ. 45 ನಿಗಮ ಮಂಡಳಿಗಳ ಪಟ್ಟಿಗೆ ಸಿಎಂ ಸಹಿ ಹಾಕಿದ್ದಾರೆ ಎಂದು ಗೊತ್ತಾಗಿದ್ದು ನೇಮಕಗೊಂಡಿರುವ ಅಧ್ಯಕ್ಷರುಗಳಿಗೆ ನೇರವಾಗಿ ಆದೇಶ ಪತ್ರ ನಾಳೆ ಸ್ಪೀಡ್ ಪೋಸ್ಟ ಮಾಡಲು ನಿರ್ಧರಿಸಲಾಗಿದೆ.ಪಟ್ಟಿ ರಿಲೀಸ್ ಆಗುವ ಸಾಧ್ಯತೆಗಳು ಇಲ್ಲ ಎಂದು ಗೊತ್ತಾಗಿದೆ. 45 ನಿಗಮ …

Read More »

ಚಿಕ್ಕೋಡಿಯಲ್ಲಿ ಇಂಗ್ಲೀಷ್ ಶಾಲೆ ಉದ್ಘಾಟಿಸಿದ ಸೆಂಟ್ರೆಲ್ ಮಿನಿಸ್ಟರ್….

ಚಿಕ್ಕೋಡಿ ೨೮, ಫೆ. ೨೦೨೪ : ಕಳೆದೊಂದು ದಶಕದಲ್ಲಿ ಭಾರತವು ಐದನೇ ಆರ್ಥಿಕಶಕ್ತಿ ವಲಯವಾಗಿ ಬೆಳೆದುನಿಂತಿದೆ. ಔದ್ಯಮಿಕವಾಗಿ, ಆರೋಗ,್ಯ ಶೈಕ್ಷಣಿಕವಾಗಿ ಡಿಜಿಟಲ್ ಭಾರತವು ಪ್ರಕಾಶಿಸುತ್ತಿದೆ. ಇದೆಲ್ಲವೂ ಮೋದಿಜಿಯವರ ಸಮರ್ಥ ನಾಯಕತ್ವದಿಂದ ಸಾಧ್ಯವಾದುದು ಎಂದು ಕೇಂದ್ರ ವಿದೇಶಾಂಗ ಸಚಿವರಾದ ಪದ್ಮ ಶ್ರೀ ಡಾ.ಎಸ್.ಜೈಶಂಕರ ಅವರು ಹೇಳಿದರು. ಅವರು ಚಿಕ್ಕೋಡಿಯಲ್ಲಿ ಕೆಎಲ್‌ಇ ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ಕಳೆದ ಹತ್ತು ವರ್ಷಹಿಂದೆ ಭಾರತ ಆರ್ಥಿಕವಾಗಿ ಹನ್ನೊಂದನೆಯ ಸ್ಥಾನವನ್ನು …

Read More »

ಬೆಳಗಾವಿಯಲ್ಲಿ ಕನ್ನಡ ಕಡ್ಡಾಯ….,ಪಾಲಿಕೆ ಆಯುಕ್ತರಿಂದ ಅಡಿಪಾಯ..!!

ಬೆಳಗಾವಿ-ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ್ರು ಬೆಳಗಾವಿಯಲ್ಲಿ ಕರವೇ ರಾಜ್ಯಕಾರ್ಯಕಾರಿಣಿ ಸಭೆ ನಡೆಸಿ,ಕನ್ನಡ ನಾಮಫಲಕ ಕಡ್ಡಾಯದ ಕುರಿತು ಗಡುವು ನೀಡಿ ಬೆಂಗಳೂರಿಗೆ ತೆರಳುತ್ತಿದ್ದಂತೆಯೇ ಬೆಳಗಾವಿಯಲ್ಲಿ ಕನ್ನಡ ನಾಮಫಲಕ ಕಡ್ಡಾಯಗೊಳಿಸುವ ಕಾರ್ಯಾಚರಣೆ ಶುರುವಾಗಿದೆ. ಇಂದು ಬೆಳ್ಳಂ ಬೆಳಗ್ಗೆ ಪಾಲಿಕೆ ಅಧಿಕಾರಿಗಳ ತಂಡ ಬೆಳಗಾವಿಯ ಗಲ್ಲಿ,ಗಲ್ಲಿಗಳಲ್ಲಿ ಸುತ್ತಾಡಿ,ಅನ್ಯಭಾಷಿಕ ಫಲಕಗಳನ್ನು ತೆರವುಗೊಳಿಸಲು ಸೂಚಿಸಿದೆ.ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತ ಪಿ‌ ಎನ್ ಲೋಕೇಶ್ ಅವರ ಕನ್ನಡದ ಇಚ್ಛಾಶಕ್ತಿಯ ಪರಿಣಾಮ ಬೆಳಗಾವಿಯಲ್ಲಿ ಕನ್ನಡದ ಅನುಷ್ಠಾನಕ್ಕೆ ಚಾಲನೆ …

Read More »

ವಾರಂಟ್ ಜಾರಿ ಮಾಡಲು ಹೋದ ಪೇದೆಗೆ ಕಚ್ಚಿದ ನಾಯಿ….!!

ಬೆಳಗಾವಿ- ವಾರಂಟ್ ಜಾರಿ ಮಾಡಲು ಹೋದ ಪೋಲೀಸ್ ಪೇದೆಗೆ ಬೀದಿ ನಾಯಿ ಕಚ್ಚಿದ ಘಟನೆ ಬೆಳಗಾವಿ ಪಕ್ಕದ ಕಾಕತಿ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಾಕತಿ ಪೋಲೀಸ್ ಠಾಣೆಯ ಪೋಲೀಸ್ ಪೇದೆಯೊಬ್ಬ ಬೆನ್ನಾಳಿ ಗಾಮದಲ್ಲಿ ವಾರಂಟ್ ಜಾರಿ ಮಾಡಲು ಹೋಗುತ್ತಿರುವಾಗ ಬೀದಿ ನಾಯಿಯೊಂದು ಕಚ್ಚಿದ ಪರಿಣಾಮ ಪೋಲೀಸ್ ಪೇದೆ ಗಾಯಗೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಘಟನೆ ನಿನ್ನೆ ರಾತ್ರಿ ನಡೆದಿದೆ. ಕಾಕತಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನೇಕ ಕಾಡಂಚಿನ …

Read More »

ಕುಡಿಯುವ ನೀರಿಗೆ 25 ಲಕ್ಷ,…ಪ್ರವಾಸಕ್ಕೆ 35 ಲಕ್ಷ ….!!

ಬೆಳಗಾವಿ -ಬೆಳಗಾವಿ ಮಹಾನಗರ ಪಾಲಿಕೆಯ ತೆರಿಗೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ವೀಣಾಜನ ವಿಜಾಪುರೆ ಅವರು ಪಾಲಿಕೆಯ ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿದ್ದಾರೆ. ಬೆಳಗಾವಿ ಮಹಾನಗರ ಪಾಲಿಕೆಯ ಬಜೆಟ್ ಗಾತ್ರ, 436 ಕೋಟಿ 53.63 ಲಕ್ಷ ರೂ. ಮೊತ್ತದ ಉಳಿತಾಯದ ಬಜೆಟ್ ಮಂಡಿಸಿದ್ದು ವಿರೋಧ ಪಕ್ಷದ ನಗರ ಸೇವಕರ ಗದ್ದಲ ಗಲಾಟೆಯ ನಡುವೆ ಮೇಯರ್ ಸವಿತಾ ಕಾಂಬಳೆ ಅವರು ಬಜೆಟ್ ಗೆ ಅನುಮೋದನೆ ನೀಡಿದ್ದಾರೆ.ಬಜೆಟ್ ಪೂರ್ವದಲ್ಲಿ ವಿರೋಧ …

Read More »

ಶರ್ಯತ್ತಿನಲ್ಲೂ ಅಪ್ಪ,ಮಗನ ರಿಕಾರ್ಡ್ ಬ್ರೇಕ್…!!

ಬೆಳಗಾವಿ-ಕ್ರಿಕೆಟ್ ಟೂರ್ನಾಮೆಂಟ್ ಇರಲಿ ಅಥವಾ ಇನ್ಯಾವುದೇ ಸ್ಪರ್ದೆ ಇರಲಿ, ಒಂದು ಲಕ್ಷ,ಎರಡು ಲಕ್ಷ,ಐದು ಲಕ್ಷ,ಹತ್ತು ಲಕ್ಷ ಹನ್ನೊಂದು ಲಕ್ಷ ರೂ ವರೆಗೆ ಬಹುಮಾನ ಇಟ್ಟಿದ್ದನ್ನು,ಕೊಟ್ಟಿದ್ದನ್ನು ನಾವು ಕೇಳಿದ್ದೇವೆ,ನೋಡಿದ್ದೇವೆ.ಆದ್ರೆ ಬೆಳಗಾವಿ ಜಿಲ್ಲೆಯ ಅಪ್ಪ ಮಗ, ಈ ವಿಚಾರದಲ್ಲಿ ಎಲ್ಲ ರಿಕಾರ್ಡ್ ಗಳನ್ನು ಬ್ರೇಕ್ ಮಾಡಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಹಿರಿಯ ನಾಯಕ, ವರ್ಕರ್, ಮಾಜಿ ಮಂತ್ರಿ,ಹಾಲಿ ವಿಧಾನ ಪರಿಷತ್ತಿನ ಸದಸ್ಯ, ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ,ಬೆಳಗಾವಿ ಜಿಲ್ಲೆಯ …

Read More »

ಬೆಳಗಾವಿ ಪೋಲೀಸರಿಂದ ಅತೀ ದೊಡ್ಡ ದಾಳಿ….

*ಬೆಳಗಾವಿಯಲ್ಲಿ ಬಹುದೊಡ್ಡ ಅಕ್ರಮ ಕಳ್ಳಬಟ್ಟಿ ಅಡ್ಡೆ ಮೇಲೆ ಪೊಲೀಸರ ದಾಳಿ..!* ಬೆಳಗಾವಿ: ಬೆಳಗಾವಿ ತಾಲ್ಲೂಕಿನ ಸೋನಟ್ಟಿ ಗ್ರಾಮದ ಬಳಿ ಗುಡ್ಡಗಾಡು ಪ್ರದೇಶದಲ್ಲಿ ಅಕ್ರಮ ಕಳ್ಳಬಟ್ಟಿ ಸಾರಾಯಿ ಅಡ್ಡೆ ಮೇಲೆ ಬೆಳ್ಳಂಬೆಳಿಗ್ಗೆ ಭರ್ಜರಿ ದಾಳಿ ನಡೆದಿದ್ದು, ಅಕ್ರಮವಾಗಿ ಸಂಗ್ರಹಿಸಿದ್ದ ಅಂದಾಜು 5 ಸಾವಿರ ಲೀಟರ್ ಕಳ್ಳಬಟ್ಟಿ ಸಾರಾಯಿ ಜಪ್ತಿ ಮಾಡಲಾಗಿದೆ. ಡಿಸಿಪಿ ರೋಹನ್ ಜಗದೀಶ ನೇತೃತ್ವದಲ್ಲಿ 200 ಜನ ಪೊಲೀಸ್ ಸಿಬ್ಬಂದಿಗಳ ತಂಡದಿಂದ ಈ ದೊಡ್ಡ ಕಾರ್ಯಾಚರಣೆ ನಡೆದಿದ್ದು, ಅಕ್ರಮವಾಗಿ ಸಂಗ್ರಹಿಸಿದ್ದ …

Read More »

ಬೆಳಗಾವಿ: ರಿಕ್ಷಾ ಪಲ್ಟಿ : ಮಹಿಳೆ ಸಾವು

  ಬೆಳಗಾವಿ-ನಿಪ್ಪಾಣಿ-ಜತ್ರಾಟ ರಸ್ತೆಯಲ್ಲಿ ರಿಕ್ಷಾ ಪಲ್ಟಿಗೊಂಡ ಪರಿಣಾಮ ಮಹಿಳೆ ಮೃತಪಟ್ಟು ಚಾಲಕ ಸೇರಿ ಇತರ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ. ಇಂದುಬಾಯಿ ರಾಮಚಂದ್ರ ಮೋರೆ( 70) ಗಂಭೀರ ಗಾಯಗೊಂಡು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಅಪ್ಪಾ ಸೋ ಪಾಟೀಲ(45), ಅವರ ಪತ್ನಿ ಸುರೇಖಾ (40), ಸಿದ್ದು ನರಾಟೆ (65)ಇವರೆಲ್ಲ ಗಂಭೀರವಾಗಿ ಗಾಯಗೊಂಡಿದ್ದು ಇವರೆಲ್ಲ ಜತ್ರಾಟ ನಿವಾಸಿಗಳು. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಿಪ್ಪಾಣಿಯ ಬಸವೇಶ್ವರ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ …

Read More »