Breaking News

ಇಬ್ಬರ ಮೃತದೇಹಗಳು ಬೆಳಗಾವಿಗೆ ಇನ್ನಿಬ್ಬರ ಮೃತದೇಹಗಳು ಗೋವಾಕ್ಕೆ

ಬೆಳಗಾವಿ – ಪ್ರಯಾಗರಾಜ್ ಮಹಾಕುಂಭ ಮೇಳದಲ್ಲಿ ನಡೆದ ಕಾಲ್ತುಳಿತದಲ್ಲಿ ಮೃತಪಟ್ಟಿರುವ ಬೆಳಗಾವಿಯ ನಾಲ್ಕು ಜನ ಯಾತ್ರಾರ್ಥಿಗಳ ಮೃತದೇಹಗಳು ಬೆಳಗಾವಿಗೆ ರವಾನೆಯಾಗಿವೆ.

ಬೆಳಗಾವಿಯ ಅರುಣ ಗೋರ್ಪಡ್ (61), ಮಹಾದೇವಿ ಬಾವನೂರ ( 48) ಇಬ್ಬರ ಮೃತದೇಹಗಳು ಸಂಜೆ ಐದು ಗಂಟೆಗೆ ಬೆಳಗಾವಿಯ ಸಾಂಭ್ರಾ ವಿಮಾನ ನಿಲ್ಧಾಣಕ್ಕೆ ತಲುಪಲಿವೆ.

ಮೇಘಾ ಹತ್ತವರವಾಠ್ ( 24), ಜ್ಯೋತಿ ಹತ್ತರವಠ ( 44) ತಾಯಿ ಮತ್ತು ಮಗಳು ಮೃತಪಟ್ಟಿದ್ದು ಇವರಿಬ್ಬರ ಮೃತದೇಹಗಳು ದೆಹಲಿಯಿಂದ ಗೋವಾಕ್ಕೆ ತಲುಪಿ ಗೋವಾದಿಂದ ಬೆಳಗಾವಿಗೆ ತಲುಪಲಿವೆ ಎನ್ನುವ ಮಾಹಿತಿ ಬೆಳಗಾವಿ ಸುದ್ದಿಡಾಟ್ ಕಾಮ್ ಗೆ ಸಿಕ್ಕಿದೆ.

ದೆಹಲಿ – ಬೆಳಗಾವಿ ಇಂಡಿಗೋ ವಿಮಾನದಲ್ಲಿ ಜಾಗದ ಕೊರತೆ ಇರುವದರಿಂದ ಇಬ್ಬರ ಮೃತದೇಹಗಳನ್ನು ದೆಹಲಿಯಿಂದ ಗೋವಾಕ್ಕೆ ಸಂಜೆ 6-00 ಗಂಟೆಗೆ ಕಳುಹಿಸಲಾಗುತ್ತಿದೆ ಸುಮಾರ 8 ಗಂಟೆ ಹೊತ್ತಿಗೆ ಮೇಘಾ ಮತ್ತು ಜ್ಯೋತಿ ಇಬ್ಬರ ಮೃತದೇಹಗಳು ಗೋವಾಕ್ಕೆ ತಲುಪಿ ಮದ್ಯರಾತ್ರಿ ಬೆಳಗಾವಿಗೆ ತಲುಪುವ ಸಾಧ್ಯತೆ ಇದೆ.

Check Also

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವರ್ಕ್ ಫ್ರಾಮ್ ಹೋಮ್….!!!

  ಬೆಳಗಾವಿ- ರಸ್ತೆ ಅಪಘಾತದದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಸಚವೆ ಲಕ್ಷ್ಮೀ ಹೆಬ್ಬಾಳಕರ್ ತಮ್ಮ …

Leave a Reply

Your email address will not be published. Required fields are marked *