Breaking News

ಕುಂಭಮೇಳದಲ್ಲಿ ಕಾಲ್ತುಳಿತ,ಬೆಳಗಾವಿಯಿಂದ ವಿಶೇಷ ತಂಡ ರವಾನೆ

ಬೆಳಗಾವಿ- ಉತ್ತರ ಪ್ರದೇಶದ ಪ್ರಯಾಗ್ ರಾಜ್ ಕುಂಭ ಮೇಳಕ್ಕೆ ತೆರಳಿದ್ದ ಬೆಳಗಾವಿಯ ನಾಲ್ವರು ಮೃತಪಟ್ಟಿದ್ದು ಬೆಳಗಾವಿ ಜಿಲ್ಲಾಡಳಿತ ವಿಶೇಷ ತಂಡ ರಚನೆ ಮಾಡಿ ಪ್ರಯಾಗರಾಜ್ ಗೆ ರವಾನೆ ಮಾಡಲಾಗಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಮಹ್ಮದ್ ರೋಷನ್ ತಿಳಿಸಿದ್ದಾರೆ.

ಕಾಲ್ತುಳಿತದಲ್ಲಿ ಮೃತಪಟ್ಟಿರುವ ನಾಲ್ವರ ಮೃತದೇಹಗಳನ್ನು ನಾಳೆ ಮಧ್ಯಾಹ್ನದವರೆಗೆ ಬೆಳಗಾವಿಗೆ ತರುವ ಪ್ರಯತ್ನ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್ ಹೇಳಿದರು.
ಪ್ರಯಾಗ್ ರಾಜ್ ದಲ್ಲಿ ಕುಂಭ ಮೇಳದಲ್ಲಿ ಬೆಳಗಾವಿಯ ಅರುಣ ಗೋರ್ಪಡ್ (61), ಮಹಾದೇವಿ ಬಾವನೂರ ( 48) ಮೇಘಾ ಹತ್ತವರಠ ( 24), ಜ್ಯೋತಿ ಹತ್ತರವಠ ( 44) ಮೃತಪಟ್ಟಿದ್ದಾರೆ. ಮೃತರ ಮನೆಗೆ ಬೆಳಗಾವಿ ತಹಶಿಲ್ದಾರರ ಅವರನ್ನು ಕಳುಹಿಸಿ ಪ್ರಯಾಗ್ ರಾಜ್ ಹೋದವರ ಮಾಹಿತಿಯನ್ನು ಜಿಲ್ಲಾಡಳಿತ ಪಡೆದ ಬಳಿಕ ಬೆಳಗಾವಿಯ ನಾಲ್ವರು ಮೃತಪಟ್ಟಿದ್ದಾರೆ ಎಂದು ಖಚಿತ ಪಡಿಸಿಕೊಳ್ಳಲಾಗಿದೆ ಜಿಲ್ಲಾಧಿಕಾರಿ ಮಹ್ಮದ್ ರೋಷನ್ ಹೇಳಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರಕಾರದ ಆದೇಶದ ಮೇರೆಗೆ ವಿಶೇಷ ತಂಡ ರಚಿಸಲಾಗಿದ್ದು ತಂಡದಲ್ಲಿ ವಿಶೇಷ ಜಿಲ್ಲಾಧಿಕಾರಿ ಹರ್ಷ ಶೆಟ್ಟಿ ಹಾಗೂ ಬೆಳಗಾವಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೃತಿ ಅವರನ್ನು ಪ್ರಯಾಗ್ ರಾಜ್ ಕುಂಭ ಮೇಳದಲ್ಲಿ ದುರಂತದಲ್ಲಿ ಸಿಲುಕಿದವರ ರಕ್ಷಣೆಗೆ ‌ನೇಮಕ ಮಾಡಲಾಗಿ‌ದೆ. ಇವರ ಮೊದಲ ಆಧ್ಯತೆ ಮೃತಪಟ್ಟ ನಾಲ್ವರನ್ನು ಬೆಳಗಾವಿ ಜಿಲ್ಲೆಗೆ ವಾಪಸ್ಸು ತರಲು ಪ್ರಯತ್ನಿಸಲಿದ್ದಾರೆ ಎಂದರು.

ಪ್ರಯಾಗರಾಜ್ ನಲ್ಲಿ ಮೃತಪಟ್ಟಿರುವ ನಾಲ್ವರನ್ನು
ಪ್ರಯಾಗ್ ರಾಜ್ ದಿಂದ ಎರಡೂ ಅಂಬುಲೆನ್ಸ್ ಮೂಲಕ ದೆಹಲಿಗೆ ಸಾಗಿಸಿ ದೆಹಲಿಯಿಂದ ಬೆಳಗಾವಿಗೆ ಏರ್ ಲಿಫ್ಟ್ ಮೂಲಕ ತರಲಾಗುವುದು ಎಂದು ಡಿಸಿ ಮಾಹಿತಿ ನೀಡಿದರು.

ಕುಂಭ ಮೇಳದಲ್ಲಿ ನಡೆದ ಘಟನೆಯಲ್ಲಿ ಗಾಯಾಳುಗಳಿಗೆ ವೈದ್ಯಕೀಯ ಚಿಕಿತ್ಸೆ ನೋಡಿಕೊಳ್ಳುವ ಜವಾಬ್ದಾರಿ ಇಬ್ಬರು ವಿಶೇಷ ಅಧಿಕಾರಿಗಳು‌ ನೋಡಿಕೊಳ್ಳಲಿದ್ದಾರೆ. ಗಾಯಾಳುಗಳ ಸಂಖ್ಯೆಯನ್ನು ಜಿಲ್ಲಾಡಳಿತ ಪಡೆಯುತ್ತಿದೆ‌ ಎಂದರು.

Check Also

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವರ್ಕ್ ಫ್ರಾಮ್ ಹೋಮ್….!!!

  ಬೆಳಗಾವಿ- ರಸ್ತೆ ಅಪಘಾತದದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಸಚವೆ ಲಕ್ಷ್ಮೀ ಹೆಬ್ಬಾಳಕರ್ ತಮ್ಮ …

Leave a Reply

Your email address will not be published. Required fields are marked *