ಬೆಳಗಾವಿ ಬ್ರಿಟಿಷ್ ರಿಗೆ ಕ್ಷಮೆ ಕೇಳಿರುವ ಸಾವರ್ಕರ್ ಅವರನ್ನು “ವೀರ” ಎಂದು ಕರೆಯುವುದು ಸರಿಯಲ್ಲ ಎಂದು ಆಮ್ ಆದ್ಮಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ತಿಳಿಸಿದರು. ಭಾನುವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.ಸುಮಾರು ಜನ ಸ್ವಾತಂತ್ರ್ಯ ಹೋರಾಟಗಾರರು ಇದ್ದರು. ಕ್ಷಮೆ ಕೇಳಿದ್ದ ವ್ಯಕ್ತಿ ಸಾವರ್ಕರ್ ಅವರಿಗೆ ವೀರ ಎಂದು ಕರೆಯುವುದು ಸರಿಯಲ್ಲ. ಸಾವರ್ಕರ್ ಅವರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ. ಆದರೆ ಬ್ರಿಟಿಷ್ ರಿಗೆ ಕ್ಷಮೆ ಕೇಳಿದ ವ್ಯಕ್ತಿಯನ್ನು ಹೇಗೆ …
Read More »ಅನ್ನಭಾಗ್ಯದ ಅಕ್ಕಿ ಆಕ್ರಮ ಸಾಗಾಣಿಕೆ ಓರ್ವನ ಅರೆಸ್ಟ್..
ಬೆಳಗಾವಿ-ಹಾರೂಗೇರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಆಕ್ರಮವಾಗಿ ಅಕ್ಕಿ ಸಾಗಿಸುತ್ತಿದ್ದ ಓರ್ವನನ್ನು ಪೋಲೀಸರು ಬಂಧಿಸಿದ್ದಾರೆ. ಈ ದಿವಸ ದಿನಾಂಕ 20/08/2022 ರಂದು *ಆರೋಪಿಯಾದ (ಡ್ರೈವರ್/ ವಾಹನದ ಮಾಲೀಕ) ಯಮನಪ್ಪ ಭೀಮಪ್ಪ ಮಾಳ್ಯಾಗೋಳ, 47 ವರ್ಷ ಸಾ- ಸಂಗನಕೇರಿ ತಾ- ಮೂಡಲಗಿ* ಈತನು ತನ್ನ ಟಾಟಾ ಕಂಪನಿಯ 1109 ಗೂಡ್ಸ್ ಕ್ಯಾಂಟರ್ ನಂಬರ್ ಕೆ.ಎ- 49/1155 ಇದರಲ್ಲಿ *ಸುಮಾರು 11 ಟನ್ *520 ಕೆಜಿ** ತೂಕದ *ಪಡಿತರ ಅಕ್ಕಿ* (ಸುಮಾರು 384 ಚೀಲಗಳು …
Read More »ಕೆಸರಿನ ಗದ್ದೆಯಲ್ಲಿ,ಓಟ,ಜಗ್ಗಾಟ,ಮೊಸರಿನ ಗಡಿಗೆ ಒಡೆಯುವ ನೋಟ ಅದ್ಭುತ…..!!
ಬೆಳಗಾವಿ- ಶಾಸಕ ಅಭಯ ಪಾಟೀಲ ಪ್ರತಿ ವರ್ಷ ಕೃಷ್ಣ ಜನ್ಮಾಷ್ಠಮಿಯನ್ನು ವಿಶಿಷ್ಟವಾಗಿ ಆಚರಿಸುತ್ತಾರೆ.ಕೆಸರಿನ ಗದ್ದೆಯಲ್ಲಿ ಮೊಸರಿನ ಗಡಿಗೆ ಒಡೆಯುವ ಸ್ಥರ್ದೆಯ ಜೊತೆಗೆ ಇತರ ಸ್ಪರ್ದೆಗಳನ್ನು ಏರ್ಪಡಿಸುತ್ತಾರೆ. ಬೆಳಗಾವಿಯ ರೂಪಾಲಿ ಚಿತ್ರಮಂದಿರದ ಬಳಿಯ ಪಾಟೀಲ ಮಾಳಾದಲ್ಲಿ ಶಾಸಕ ಅಭಯ ಪಾಟೀಲ ಅವರು ಇಂದು ಕೃಷ್ಣ ಜನ್ಮಾಷ್ಠಮಿ ನಿಮಿತ್ಯ ಕೆಸರಿನ ಗದ್ದೆಯಲ್ಲಿ ಓಟದ ಸ್ಪರ್ದೆ, ಹಗ್ಗ ಜಗ್ಗಾಟದ ಸ್ಪರ್ದೆ,ಜೊತೆಗೆ ಮೊಸರಿನ ಗಡಿಗೆ ಒಡೆಯುವ ಸ್ಪರ್ದೆ ಏರ್ಪಡಿಸಿದ್ದರು,ಈ ಸ್ಪರ್ದೆಗಳನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನ ಅಲ್ಲಿ …
Read More »ರಾಯಣ್ಣನ ಬ್ಯಾನರ್ ಹರಿದು ಹಾಕಿದ ಪ್ರಕರಣ ಓರ್ವನ ಬಂಧನ
ಗೋಕಾಕನಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಭಾವಚಿತ್ರ ಹರಿದು ಹಾಕಿ ಆರೋಪಿ ಅರೆಸ್ಟ್; ಕೋರ್ಟ್‌ಗೆ ಹಾಜರುಪಡಿಸಿದ ಪೊಲೀಸರು ಬೆಳಗಾವಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಭಾವಚಿತ್ರವನ್ನು ಯಾರೋ ಕಿಡಿಗೇಡಿಗಳು ಹರಿದು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವ ಆರೋಪಿಯನ್ನ ಬಂಧಿಸಿ ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದಾರೆ. ಖನಗಾಂವ ಗ್ರಾಮದಲ್ಲಿ ನಡೆದ ಸಂಗೊಳ್ಳಿ ರಾಯಣ್ಣನ ಫ್ಲೆಕ್ಸ್ ಹರಿದು ಹಾಕಿದ ಪ್ರಕರಣಕ್ಕೆ ಸಮಂಧಿಸಿದಂತೆ, ಗೋಕಾಕ ತಾಲೂಕಿನ ದೇವಗೌಡನಟ್ಟಿ ಗ್ರಾಮದ ಲಕ್ಷ್ಮಣ ಸತ್ಯೇಪ್ಪ ಪೂಜೇರಿ(35) ಎಂಬಾತನನ್ನು ಬಂಧಿಸಲಾಗಿದೆ. ನೋಡೋದಾದ್ರೆ …
Read More »ಜಾರಕಿಹೊಳಿ ಬ್ರದರ್ಸ್ ಹೆಸರು ಪ್ರಸ್ತಾಪಿಸದ, ಮಾರುತಿ ಅಷ್ಟಗಿ…
ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆಗೆ ಅಖಾಡಾ ರೆಡಿಯಾಗುತ್ತಿದೆ.ಅದರಲ್ಲೂ ವಿಶೇಷವಾಗಿ ಯಮಕನಮರಡಿ ಕ್ಷೇತ್ರದಲ್ಲಿ ಬಿಜೆಪಿ ಈಗಿನಿಂದಲೇ ಸಿದ್ಧತೆ ನಡೆಸಿದೆ. ಯಮಕನಮರಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಎರಡು ಬಾರಿ ಪರಾಭವಗೊಂಡಿರುವ ಮಾರುತಿ ಅಷ್ಟಗಿ ಅವರಿಗೆ ಬಿಜೆಪಿ ಕರಕುಶಲ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಿದ್ದು ಅಷ್ಟಗಿ ಇಂದು ಯಮಕನಮರಡಿ ಯಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಂಡಿದ್ದಾರೆ. ಇಂದು ರವಿವಾರ ಮಧ್ಯಾಹ್ನ 12-00 ಗಂಟೆಗೆ ಯಮಕನಮರಡಿ ಯಲ್ಲಿ ನಡೆಯಲಿರುವ ಅಭಿನಂಧನಾ ಕಾರ್ಯಕ್ರಮಕ್ಕೆ ಬರುವ ಬಿಜೆಪಿ ನಾಯಕರ ಹೆಸರು ಪ್ರಸ್ತಾಪಿಸಿ,ಮಾರುತಿ …
Read More »ಚಿರತೆ ಕಂಡಿಲ್ಲ,ಚಿರತೆ ಹಿಡಿದಿಲ್ಲ,ಕಾರ್ಯಾಚರಣೆ ನಿಂತಿಲ್ಲ…!!
ಚೀರಾಡಿ,ಕೂಗಾಡಿ,,ಪಟಾಕಿ ಸಿಡಿಸಿದ್ರೂ,ಚಿರತೆ ಕಾಣಲಿಲ್ಲ…!! ಬೆಳಗಾವಿ-ಬೆಳಗಾವಿಯಲ್ಲಿ ಕಳೆದ ಎರಡು ವಾರಗಳಿಂದ ಚಿರತೆಯ ಭಯ ಎಲ್ಲರನ್ನು ಕಾಡುತ್ತಿದೆ.ಬೆಳಗಾವಿಯಲ್ಲಿ ಈಗ ನಾಯಿ ನೋಡಿದ್ರೂ ಅದು ಚಿರತೆ ಹಾಗೆ ಕಾಣಿಸುತ್ತಿದೆ. ಚಿರತೆ ಪತ್ತೆಗೆ ಅರಣ್ಯ ಇಲಾಖೆಯವರು,ಬೋನು ಇಟ್ಟರು, ಅದರಲ್ಲಿ ನಾಯಿ ಕಟ್ಟಿದರು,ಚಿರತೆ ಚಲನ ವಲನ ಗಮನಿಸಲು,ಸಿಸಿ ಟಿವ್ಹಿ ಕ್ಯಾಮರಾ ಅಳವಡಿಸಿದರು,ಆದ್ರೆ ಕೇವಲ ಒಂದೇ ಬಾರಿ ಆ ಚಾಲಾಕಿ ಚಿರತೆ ಕ್ಯಾಮರಾ ಕಣ್ಣಿಗೆ ಬಿದ್ದಿದೆ. ಎರಡು ವಾರಗಳ ಕಾಲ ಸಿಸಿ ಕ್ಯಾಮರಾ ಚಕ್ ಮಾಡಿ ಸುಸ್ತಾದ ಅರಣ್ಯ …
Read More »ಕ್ಷೇತ್ರದಲ್ಲಿ ಪ್ರಚಾರ ನಡೆಸದೇ, ಹಣ ಖರ್ಚು ಮಾಡದೇ ಗೆದ್ದಿದ್ದೇನೆ.
ಬೆಳಗಾವಿ- ಕೆಪಿಸಿಸಿ ಕಾರ್ಯಾಧ್ಯಕ್ಷ ಯಮಕನಮರಡಿ ಕ್ಷೇತ್ರದ ಶಾಸಕ,ಮಾಜಿ ಸಚಿವರೂ ಆಗಿರುವ ಸತೀಶ್ ಜಾರಕಿಹೊಳಿ ಅವರು,ಯಮಕನಮರಡಿ ಕ್ಷೇತ್ರದಿಂದ ಸ್ಪರ್ದೆ ಮಾಡುವ ಕುರಿತು ಮಾದ್ಯಮಗಳ ಎದುರು ಹಲವಾರು ವಿಚಾರಗಳನ್ನು ಬಿಚ್ವುಡುವ ಮೂಲಕ ಅನೇಕ ಉಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ನಿನ್ನೆ ಶುಕ್ರವಾರ, ಬೆಳಗಾವಿಯಲ್ಲಿ ಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಅವರು,2018ರ ಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ ಕಡಿಮೆ ಅಂತರದಲ್ಲಿ ಗೆಲುವು ಆಗಿದ್ದು ನಿಜ.ಕಳೆದ ಚುನಾವಣೆಯಲ್ಲಿ ಸ್ವಪಕ್ಷ ನಾಯಕರ ಪಿತೂರಿ ಬಗ್ಗೆ …
Read More »ರಾಯಣ್ಣ ಭಾವಚಿತ್ರಕ್ಕೆ ಅವಮಾನ,ಖನಗಾಂವ ಗ್ರಾಮದಲ್ಲಿ ಗೊಂದಲ..
ರಾಯಣ್ಣ ಭಾವಚಿತ್ರಕ್ಕೆ ಅವಮಾನ,ಖನಗಾಂವ ಪ್ರಕ್ಷುಬ್ಧ… ಬೆಳಗಾವಿ-ಖನಗಾಂವ ಗ್ರಾಮದಲ್ಲಿ ರಾಯಣ್ಣ ಭಾವಚಿತ್ರಕ್ಕೆ ಅಪಮಾನ ಮಾಡಲಾಗಿದ್ದು,ಈ ಘಟನೆಯಿಂದಾಗಿಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಖನಗಾಂವ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ತಡರಾತ್ರಿ ಸಂಗೋಳ್ಳಿ ರಾಯಣ್ಣ ಭಾವಚಿತ್ರವನ್ನು ಕಿಡಗೇಡಿಗಳು, ಹರಿದು ಹಾಕಿದ ಘಟನೆ ನಡೆದಿದೆ. ಕಿಡಿಗೇಡಿಗಳ ಕೃತ್ಯ ಖಂಡಿಸಿ ಗ್ರಾಮದಲ್ಲಿ ರಾಯಣ್ಣ ಅಭಿಮಾನಿಗಳಿಂದ ಪ್ರತಿಭಟನೆ ಕೂಡಾ ನಡೆದಿದ್ದು ಟೈಯರ್ ಗೆ ಬೆಂಕಿ ಹಚ್ಚಿ ಗ್ರಾಮದಲ್ಲಿ ಪ್ರತಿಭಟನಾ ಮೆರವಣಿಗೆ ಮಾಡಲಾಗಿದೆ. ಗ್ರಾಮದ ರಸ್ತೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ …
Read More »ಸ್ಕೂಲ್ ವಾಹನ,ಗೂಡ್ಸ ವಾಹನ ಡಿಕ್ಕಿ ,ಇಬ್ಬರೂ ಡ್ರಾಯವರ್ ಗಳು ಖಲ್ಲಾಸ್…!!
ಬೇಳ್ಳಂ ಬೇಳ್ಳಿಗೆ ಜವರಾಯನ ಅಟ್ಟಹಾಸ ಅಥಣಿ ಬಳಿ ಭೀಕರ ಶಾಲಾ ಬಸ್ ಹಾಗೂ ಗೂಡ್ಸ ವಾಹನದ ಮಧ್ಯ ಅಪಘಾತ* ಮುಂಜಾನೆ ಮುಂಜಾನೆ ಅಥಣಿಯಲ್ಲಿ ಭೀಕರ ಅಪಘಾತ ಶಾಲೆ ಬಸ್ ಹಾಗೂ ಗೂಡ್ಸ್ ವಾಹನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಎರಡು ವಾಹನ ಚಾಲಕರು ಸ್ಥಳದಲ್ಲಿ ಸಾವನ್ನಪ್ಪಿದ್ದಾರ ಅಥಣಿ- ಮಿರಜ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಬಣಜವಾಡ ಶಿಕ್ಷಣ ಸಂಸ್ಥೆಗೆ ಸೇರಿದ ಶಾಲೆ ವಾಹನ ಟ್ರಕ್ ನಡುವೆ …
Read More »ಬೆಳಗಾವಿಯ ಭೀಮ್ಸ್ ನಿರ್ದೇಶಕರಾಗಿ ಅಶೋಕ ಕುಮಾರ್ ಶೆಟ್ಟಿ..
ಬೆಳಗಾವಿ-ಬೆಳಗಾವಿಯ ಭೀಮ್ಸ್ ನಿರ್ದೇಶಕರಾಗಿ ಅಶೋಕ ಕುಮಾರ್ ಶೆಟ್ಟಿ ಅವರನ್ನು ನೇಮಿಸಿ,ವೈದ್ಯಕೀಯ ಶಿಕ್ಷಣ ಇಲಾಖೆಯ ಆಧೀನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ. ಅಶೋಕ ಕುಮಾರ್ ಶೆಟ್ಟಿ ಅವರು ಭೀಮ್ಸ್ ನಲ್ಲಿ ಫ್ರೋಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಭೀಮ್ಸ್ ಉಸ್ತುವಾರಿಯಾಗಿದ್ದ,ಅಮಲನ್ ಆದಿತ್ಯ ಭಿಸ್ವಾಸ್ ಅವರ ವರ್ಗಾವಣೆಯ ಬಳಿಕ ಬೆಳಗಾವಿಯ ಭೀಮ್ಸ್ ಆಡಳಿತದಲ್ಲಿ ಮಹತ್ವದ ಬೆಳವಣಿಗೆಗಳು ಆಗಿವೆ. ಭೀಮ್ಸ್ ನಿರ್ದೇಶಕರಾಗಿ ನೇಮಿಸಲಾಗಿರುವ ಅಶೋಕ ಕುಮಾರ್ ಶೆಟ್ಟಿ ಅವರು, ಭೀಮ್ಸ್ ನಲ್ಲಿ ಪೋರೆನ್ಸಿಕ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
Read More »