Breaking News

Breaking News

ಬೆಳಗಾವಿ ಜಿಲ್ಲಾ ಆಸ್ಪತ್ರೆಯ ಹೆರಿಗೆ ವಾರ್ಡಿನಲ್ಲಿ ಕಣ್ಣೀರು….

ಬೆಳಗಾವಿ- ಸೀಜರೀನ್ ಸಂಧರ್ಭದಲ್ಲಿ ಮಗು ಸಾವನ್ನೊಪ್ಪಿದ್ದು, ಬೆಳಗಾವಿ ಜಿಲ್ಲಾ ಆಸ್ಪತ್ರೆಯ ಹೆರಿಗೆ ವಾರ್ಡಿನಲ್ಲಿ ಕುಟುಂಬಸ್ಥರು ಕಣ್ಣೀರು ಸುರಿಸುತ್ತಿದ್ದಾರೆ. ಹೆರಿಗೆಗಾಗಿ ಎಂಟು ದಿನದ ಹಿಂದೆಯೇ ಮಹಿಳೆಯನ್ನು ಅಡ್ಮಿಟ್ ಮಾಡಲಾಗಿತ್ತು, ನಾರ್ಮಲ್ ಡಿಲೇವರಿ ಆಗುತ್ತೆ ಅಂತಾ ವೈದ್ಯರು ಹೇಳಿದ್ರು,ಆದ್ರೆ ಇವತ್ತು ಬೆಳಗ್ಗೆ ಸೀಜರೀನ್ ಮಾಡುವಾಗ,ವೈದ್ಯರ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ‌‌. ಮಗುವಿನ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ನಮಗೆ ನ್ಯಾಯ ಬೇಕು,ಎಂದು ಮಹಿಳೆಯ ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ‌,ಸ್ಥಳಕ್ಕೆ ಪೋಲೀಸರು …

Read More »

ಮೊದಲು ಎಲೆಕ್ಷನ್ ಆಗಲಿ, ಆಮೇಲೆ ಪೈಪೋಟಿ ಮಾಡಲಿ…

ಬೆಳಗಾವಿ: ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಹುದ್ದೆ ಪೈಪೋಟಿ ವಿಚಾರಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಮೊದಲು ಎಲೆಕ್ಷನ್ ಆಗಲಿ, ಶಾಸಕರು ಆರಿಸಿ ಬರಲಿ, ಆ ಮೇಲೆ ಪೈಪೋಟಿ ಮಾಡಲಿ ಎಂದು ತಿಳಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊದಲು ಎಲೆಕ್ಷನ್ ಆಗಬೇಕು.ಶಾಸಕರು ಆರಿಸಿ ಬರಬೇಕು.ಬಳಿಕ ಪೈಪೋಟಿ ಮಾಡಲಿ‌ ಎಂದರು.‌ ಡಿ.ಕೆ.ಶಿವಕುಮಾರ್ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, …

Read More »

ಬೈಕ್ ಟ್ಯಾಂಕ್ ಮೇಲೆ ಸವಾರಿ, ಕಾರಿಗೆ ಡಿಕ್ಕಿ ಇಬ್ಬರ ಸಾವು…

ಬೆಳಗಾವಿ ಬೈಲಹೊಂಗಲ ತಾಲೂಕಿನಲ್ಲಿ ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಬೈಕ್‌ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲಿ ಓರ್ವ, ಚಿಕಿತ್ಸೆಗೆ ಸಾಗಿಸುತ್ತಿದ್ದ ವೇಳೆ ಇನ್ನೊರ್ವ ಮೃತಪಟ್ಟಘಟನೆ ಜಾಲಿಕೊಪ್ಪ ಗ್ರಾಮದಲ್ಲಿ ನಡೆದಿದೆ. ಬೈಕ್ ಪೆಟ್ರೋಲ್ ಟ್ಯಾಂಕ್ ಮೇಲೆ 11 ವರ್ಷದ ಬಾಲಕನನ್ನು ಕೂರಿಸಿ,ಬೈಕ್ ಚಲಾಯಿಸುವಾಗ ಈ ದುರ್ಘಟನೆ ನಡೆದಿದೆ. ಸಿದ್ದಪ್ಪ ಮಲ್ಲೂರು (11) ಹಾಗೂ ಬಸವಂತಗೌಡ ಮಲ್ಲೂರು (46)ಎಂಬವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಬಲವಾಗಿ ಗಾಯಗೊಂಡಿದ್ದ ಮತ್ತೊಬ್ಬ ಸವಾರ ವೀರಣ್ಣ …

Read More »

ಚಿಕಲೆ ಫಾಲ್ಸ್ ನಲ್ಲಿ ಪ್ರವಾಸಿರಿಂದ ಶುಲ್ಕ ವಸೂಲಿಗೆ ಬ್ರೇಕ್….!!

ಬೆಳಗಾವಿ-ಖಾನಾಪೂರ ತಾಲ್ಲೂಕಿನ ಜಾಂಬೋಟಿ ಬಳಿಯ ಚಿಕಲೆ ಫಾಲ್ಸ್ ನಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಪ್ರವಾಸಿಗರಿಂದ ತಲಾ 295 ರೂ ಪ್ರವೇಶ ಶುಲ್ಕ ವಸೂಲಿ ಮಾಡುವ ಯೋಜನೆಗೆ ಬ್ರೇಕ್ ಬಿದ್ದಿದೆ. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮಾದ್ಯಮ ಮಿತ್ರರ ಜೊತೆ ಮಾತನಾಡಿದ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ,ಅರಣ್ಯ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ಮಾಡಿ,ಚಿಕಲೆ ಫಾಲ್ಸ್ ನಲ್ಲಿ ಪ್ರವಾಸಿರಿಂದ ಪ್ರವೇಶ ಶುಲ್ಕ ವಸೂಲಿ ಮಾಡಬಾರದು ಎಂದು ಸೂಚಿಸಲಾಗಿದ್ದು.ಶುಲ್ಕ ವಸೂಲಿಯ ಕಾರ್ಯ ನಿನ್ನೆ ಸೋಮವಾರದಿಂದ …

Read More »

ಕನ್ನಡ ಬೆಳಿಸೋದು,ಉಳಿಸೋದು ಹೇಗೆ ಅಂತಾ ,ಅಧಿಕಾರಿಗಳಿಗೆ ಸಲಹೆ ನೀಡಿದ ನಾಗಾಭರಣ

ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ ಅಧಿಕಾರಿಗಳು ಕನ್ನಡ ಉಳಿಸಿ, ಬೆಳೆಸುವ ಜವಾಬ್ದಾರಿ ನಿಭಾಯಿಸಬೇಕು: ಡಾ. ಟಿ.ಎಸ್. ನಾಗಾಭರಣ ಬೆಳಗಾವಿ, -ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿ ವ್ಯವಹರಿಸಬೇಕು. ಯಾವುದೇ ಮಾಹಿತಿ, ಹಾಗೂ ಪತ್ರ ವ್ಯವಹಾರಗಳು ಕನ್ನಡದಲ್ಲಿಯೇ ಇರಬೇಕು. ಅಧಿಕಾರಿಗಳು ಸರ್ಕಾರಿ ಕೆಲಸ ನಿರ್ವಹಣೆಯ ಜೊತೆಗೆ ಕನ್ನಡವನ್ನು ಬೆಳೆಸಲು ನಿರಂತರ ಶ್ರಮಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಟಿ.ಎಸ್.ನಾಗಾಭರಣ ಅವರು ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ (ಜು.18) …

Read More »

ಬೆಳಗಾವಿ ಜಿಲ್ಲೆಯಲ್ಲಿ, ಪಶುಗಳ ಆರೋಗ್ಯ ಕಾಪಾಡಲು ಬರಲಿವೆ, 82 ಅಂಬ್ಯುಲೆನ್ಸ್ …!!

ಬೆಳಗಾವಿಯಲ್ಲಿ 82 ಆ್ಯಂಬುಲೆನ್ಸ್ ಲೋಕಾರ್ಪಣೆ: ಸಚಿವ ಪ್ರಭು ಚವ್ಹಾಣ್ ಬೆಳಗಾವಿ, -ಬೆಳಗಾವಿ ವಿಭಾಗದ ಜಿಲ್ಲೆಗಳಲ್ಲಿ ಜಾನುವಾರುಗಳ ಸಂರಕ್ಷಣೆ ಮತ್ತು ಆರೋಗ್ಯ ಸೇವೆಗಾಗಿ 82 ಆ್ಯಂಬುಲೆನ್ಸ್ ಗಳನ್ನು ಜುಲೈ 19ರಂದು ಲೋಕಾರ್ಪಣೆ ಮಾಡಲಾಗುವುದು ಎಂದು ಪಶುಸಂಗೋಪನೆ ಇಲಾಖೆಯ ಸಚಿವ ಪ್ರಭು ಬಿ.ಚವ್ಹಾಣ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಜುಲೈ 19ರಂದು ಬೆಳಗಾವಿಯಲ್ಲಿ ಸ್ಥಾನೀಯ ಶಾಸಕ, ಹಿರಿಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ …

Read More »

ಅಧಿಕಾರ ಹೋಗುವ ಮುನ್ನ, ನಾಗಾಭರಣ ನಡೆ,ಬೆಳಗಾವಿ ಕಡೆ….

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ,ಈಗ ಬೆಳಗಾವಿ ಕಡೆಗೆ ಮುಖ ಮಾಡಿದ್ದಾರೆ.ಸರ್ಕಾರ ಈಗಾಗಲೇ ಹಲವಾರು ನಿಗಮ ಮಂಡಳಿಗಳ ಅಧ್ಯಕ್ಷ ಉಪಾಧ್ಯಕ್ಷರ ನಾಮನಿರ್ಧೇಶನ ರದ್ದು ಮಾಡಿದ ಬೆನ್ನಲ್ಲಿಯೇ ನಾಗಾಭರಣ ಕ್ರೀಯಾಶೀಲರಾಗಿದ್ದು ಗಡಿ ಭಾಗದ ಕನ್ನಡಿಗರ ಭಾಗ್ಯ. ಬೆಳಗಾವಿ, -: ಭವಿಷ್ಯದ ಕನ್ನಡ ಕಟ್ಟಬೇಕಾದರೆ ತಂತ್ರಾಂಶಗಳಲ್ಲಿ ಹೆಚ್ಚಾಗಿ ಕನ್ನಡ ಬಳಕೆ ಮಾಡಬೇಕು. ಜೊತೆಗೆ ಎಲ್ಲರೂ ದಿನನಿತ್ಯ ಕಾರ್ಯ ಚಟುವಟಿಕೆಗಳಲ್ಲಿ ಸದಾ ಕನ್ನಡ ಭಾಷೆ ಬಳಸಿದರೆ ಭವಿಷ್ಯದಲ್ಲಿ ಕನ್ನಡ ವ್ಯಾಪಕವಾಗಿ ಬೆಳವಣಿಗೆಯಾಗುವುದರ ಮೂಲಕ …

Read More »

ಲೀಡರ್ ಜೊತೆ ಸೆಲ್ಫಿ ತೆಗೆಸಿಕೊಂಡ,ಪ್ರಭಾವಿ ಲೀಡರ್….!!

ಕುಡಚಿ ಕ್ಷೇತ್ರದಲ್ಲಿ ಲಕ್ಷ್ಮೀ ಹೆಬ್ಬಾಳಕರ ಸೆಲ್ಫೀ…..!!! ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲಿ 18 ವಿಧಾನಸಭಾ ಕ್ಷೇತ್ರಗಳಿವೆ, ಆದ್ರೆ ಕುಡಚಿ ವಿಧಾನಸಭಾ ಕ್ಷೇತ್ರ ಈಗ ಎಲ್ಲರ ಗಮನ ಸೆಖೆಯುತ್ತಿದೆ. ಯಾಕಂದ್ರೆ ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ ಈ ಕ್ಷೇತ್ರದಲ್ಲಿ ಸೈಕಲ್ ಜಾಥಾ ನಡೆಸಿದ ಬಳಿಕ,ಶಾಸಕಿ ಲಕ್ಷ್ಮೀ ಹೆಬ್ಬಾಳಕರ,ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಇದೇ ಕ್ಷೇತ್ರದಲ್ಲಿ ಪ್ರತ್ಯಕ್ಷವಾಗಿದ್ದಾರೆ. ಕುಡಚಿ ಕ್ಷೇತ್ರದಲ್ಲಿ ಕಾಂಗ್ರೆಸ್ ನಡೆಸಿರುವ ಸೈಕಲ್ ಜಾಥಾ, ಬಿಜೆಪಿ ಪಕ್ಷಕ್ಕಿಂತ ಹೆಚ್ಚು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಲ್ಲಿ ನಡುಕ …

Read More »

ಬೆಳಗಾವಿಯಲ್ಲಿ ಸರ್ ಎಂ .ವಿಶ್ವೇಶ್ವರಯ್ಯ ಕಟ್ಟಿದ ಡ್ಯಾಂ ಭರ್ತಿ……!!

ಬೆಳಗಾವಿ-ಬೆಳಗಾವಿ ಮಹಾನಗರದ ಕುಡಿಯುವ ನೀರಿನ ಮುಖ್ಯ ಮೂಲವಾಗಿರುವ,ಶುದ್ಧ ನೈಸರ್ಗಿಕ ನೀರಿನ ಮೂಲ ಹೊಂದಿರುವ ಬೆಳಗಾವಿಯ ರಾಕಸಕೊಪ್ಪ ಡ್ಯಾಂ ಭರ್ತಿಯಾಗಿದೆ. 1964 ರಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ನವರು ಪೂನೆಯ ಸುಪ್ರಿಡೆಂಟ್ ಇಂಜಿನಿಯರ್ ಆಗಿದ್ದ ಸಂಧರ್ಭದಲ್ಲಿ ಬೆಳಗಾವಿಯ ರಾಕಸಕೊಪ್ಪನಲ್ಲಿ ಜಲಾಶಯ ನಿರ್ಮಿಸುವ ಯೋಜನೆ ರೂಪಿಸಿದ್ದರು.ಹೀಗಾಗಿ ಈ ಜಲಾಶಯದ ಅನೇಕ ವಿಶೇಷತೆಗಳಿವೆ. ರಾಕಸಕೊಪ್ಪ ಜಲಾಶಯದ ಸಾಮರ್ಥ್ಯ ಕೇವಲ ಅರ್ದ ಟಿಎಂಸಿ ಇದೆ. ಈ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಲು 2475 ಫೀಟ್ ( R.L ರೇಡಿಸ್ …

Read More »

ಇದು ಬ್ರೇಕಿಂಗ್ ಅಲ್ಲ ಶಾಕೀಂಗ್ ನ್ಯುಸ್…..!!!

ಚಿಕಲೆ ಜಲಪಾತದಲ್ಲಿ ಪ್ರವಾಸಿಗರಿಂದ ಹಣ ವಸೂಲಿ….!!! ಬೆಳಗಾವಿ- ಯಾವುದೇ ಪ್ರವಾಸಿ ತಾಣ ಆಗಿರಲಿ, ಹತ್ತೋ ಇಪ್ಪತ್ತೋ ರೂಪಾಯಿ ಪ್ರವೇಶ ಶುಲ್ಕ ಪಡೆಯುವದನ್ನು ನಾವು ನೋಡಿದ್ದೇವೆ. ಐವತ್ತು ರೂಗಳವರೆಗೆ ಎಂಟ್ರಿ ಫೀಸ್ ಕೊಟ್ಟಿದ್ದೇವೆ.ಆದ್ರೆ ಜಾಂಬೋಟಿ ಬಳಿಯ ಚಿಕಲೆ ಪ್ರವಾಸಿರಿಂದ ಅರಣ್ಯ ಇಲಾಖೆಯ ಸಿಬ್ಬಂಧಿ ಪಡೆಯುತ್ತಿರುವ ಪ್ರವೇಶ ಶುಲ್ಕದ ಮೊತ್ತ ಕೇಳಿದ್ರೆ ಚಳಿ ಜ್ವರ ಬರುವದರಲ್ಲಿ ಸಂಶಯವೇ ಇಲ್ಲ. ದೊಡ್ಡ ದೊಡ್ಡ ಬ್ರಾಂಡೇಡ್ ಕಂಪನಿಗಳು ತಮ್ಮ ಉತ್ಪನ್ನಗಳ ದರ ನಿಗದಿ ಮಾಡಿದಂತೆ,ಚಿಕಲೆ ಫಾಲ್ಸ್ …

Read More »