ಬೆಳಗಾವಿ-ಕರ್ತವ್ಯ ನಿರತ ಲೈನ್ ಮನ್ ಆತ್ಮಹತ್ಯೆಗೆ ಶರಣಾದ ಘಟನೆಬೆಳಗಾವಿಯ ಸೈಹಾದ್ರಿ ನಗರ ಗ್ರಿಡ್ ನಲ್ಲಿ ನಡೆದಿದೆ. ಮಣ್ಣುರು ಗ್ರಾಮದ ರಘು ಬರ್ಮಾ ಹಳಗುಂಡೆ ಆತ್ಮಹತ್ಯೆಗೆ ಶರಣಾದ ವ್ಯಕ್ತಿಯಾಗಿದ್ದು.ರಾತ್ರಿ ಪಾಳೆಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲಾ,ಸ್ಥಳಕ್ಕೆ ಎಪಿಎಂಸಿ ಠಾಣೆ ಪೊಲೀಸರ ಬೇಟಿ ಪರಿಶೀಲನೆ ನಡೆಸಿದ್ದಾರೆ.
Read More »ಗಣಪತಿ ಹಬ್ಬಕ್ಕೆ ಬೆಳಗಾವಿಯಲ್ಲಿ ನಡೆದಿದೆ ಭರ್ಜರಿ ತಯಾರಿ….
ಬೆಳಗಾವಿ- ಇಂದಿನಿಂದ ಶ್ರಾವಣ ಮಾಸ ಶುರುವಾಗಿದೆ.ಎಲ್ಲರೂ ಭಕ್ತಿಯ ಭಂಡಾರದಲ್ಲಿ ಮುಳುಗಿ,ಭಗವಂತನ ಧ್ಯಾನ ಮಾಡುತ್ತಿರುವ ಸಂಧರ್ಭದಲ್ಲಿ ಇನ್ನೊಂದು ಕಡೆ ಬೆಳಗಾವಿಯಲ್ಲಿ ಗಣಪತಿ ಹಬ್ಬದ ಭರ್ಜರಿ ತಯಾರಿ ನಡೆದಿದೆ. ಪಕ್ಕದ ಮಹಾರಾಷ್ಟ್ರದ ಪೂನೆಯಲ್ಲಿ , ಗಣೇಶ ಉತ್ಸವವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಪೂನೆ ಹೊರತುಪಡಿಸಿದರೆ,ಬೆಳಗಾವಿಯಲ್ಲಿ ಅತ್ಯಂತ ಅದ್ಧೂರಿಯಾಗಿ ಗಣಪತಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುತ್ತಾರೆ.ಬೆಳಗಾವಿಯ ಗಣೇಶ ಹಬ್ಬದ ವೈಶಿಷ್ಟ್ಯ ನೋಡಲು ದೂರ,ದೂರದ ನಗರಗಳಿಂದ ಹೊರ ರಾಜ್ಯಗಳಿಂದ ಬೆಳಗಾವಿಗೆ ಭಕ್ತರು ಬರ್ತಾರೆ. ಬೆಳಗಾವಿ ಮಹಾನಗರದಲ್ಲಿ 350 ಕ್ಕೂ …
Read More »ಕರಾವಳಿಯಲ್ಲಿ, ಕಳವಳ : ಸುರತ್ಕಲ್ ನಲ್ಲಿ ಇಂದು ಮತ್ತೊಬ್ಬ ಯುವಕನ ಕೊಲೆ.
ಮಂಗಳೂರು- ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಬರ್ಬರ ಹತ್ಯೆಯಿಂದಾಗಿ ದಕ್ಷಿಣ ಕನ್ನಡದಲ್ಲಿ ಪರಿಸ್ಥಿತಿ ನಿಗಿ ನಿಗಿ ಕೆಂಡದಂತಾಗಿದ್ದು ಇದರ ಮಧ್ಯೆ ಸುರತ್ಕಲ್ ನಲ್ಲಿ ಮತ್ತೊಬ್ಬ ಯುವಕನ ಬರ್ಬರ ಹತ್ಯೆ ನಡೆದಿದೆ. ಸುರತ್ಕಲ್ ನ ಎಸ್ ಕೆ ಮೊಬೈಲ್ ಅಂಗಡಿ ಬಳಿ ಘಟನೆ ನಡೆದಿದೆ. ಮೂವರು ಯುವಕರ ತಂಡ ಫಾಜಿಲ್ ಮಂಗಳಪೇಟೆ ಎಂಬಾತನನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಪರಾರಿಯಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಫಾಜಿಲ್ ನನ್ನು ಸ್ಥಳೀಯರು ಕೂಡಲೇ ಸ್ಥಳೀಯ ಖಾಸಗಿ …
Read More »ಬೆಳಗಾವಿಯ ರಕ್ಷಣೆಗಾಗಿ ಸಿಎಂ ಬೊಮ್ಮಾಯಿಗೆ ಪತ್ರ….!
ಬೆಳಗಾವಿ-ಮಹಾರಾಷ್ಟ್ರದಲ್ಲಿ ಏಕನಾಥ ಶಿಂಧೆ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ,ಬೆಳಗಾವಿ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ಮೂಗು ತೂರಿಸುತ್ತಿದೆ.ಮಹಾರಾಷ್ಟ್ರದಿಂದ ಕರ್ನಾಟಕ ಗಡಿಭಾಗದ ಮಕ್ಕಳಿಗೆ ಉಚಿತ ಶಿಕ್ಷಣ ಸೌಲಭ್ಯ ವಿಚಾರವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಗಂಭೀರವಾಗಿ ಪರಗಣಿಸಿದೆ. ಉಚಿತ ಶಿಕ್ಷಣ ಆಫರ್ ನೀಡಿರುವ ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯ,ಬೆಳಗಾವಿ ವಿಚಾರದಲ್ಲಿ ಹಸ್ತಕ್ಷೇಪ ಮಾಡುತ್ತಿದೆ.ಕರ್ನಾಟಕ ಗಡಿಭಾಗದ 865 ಗ್ರಾಮಗಳ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತೇವೆ ಎಂದು ಮಹಾರಾಷ್ಟ್ರದ ವಿಶ್ವವಿದ್ಯಾಲಯ ಘೋಷಣೆ ಮಾಡಿರುವದಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ತೀವ್ರ …
Read More »ಕಲುಷಿತ ನೀರು ಸೇವಿಸಿ 40ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದು ಎಲ್ಲಿ ಗೊತ್ತಾ..??.
ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ನಿರಂತರವಾಗಿ ಮಳೆಸುರಿದು ರಣಬಿಸಿಲು ಬಿದ್ದಮೇಲೆ ಒಂದರ ಮೇಲೊಂದು ಅವಾಂತರ ನಡೆಯುತ್ತಲೇ ಇದೆ.ಕಲುಷಿತ ನೀರು ಸೇವಿಸಿ 40ಕ್ಕೂ ಹೆಚ್ಚು ಜನರು ಅಸ್ವಸ್ಥರಾದ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಬೆನ್ನೂರ ಗ್ರಾಮದಲ್ಲಿ ನಡೆದಿದೆ. ಹೊಸಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬೆನ್ನೂರ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಗ್ರಾಮಸ್ಥರಿಗೆ ವಾಂತಿ ಭೇದಿ ಪ್ರಾರಂಭವಾಗಿದೆ.40 ಜನರಲ್ಲಿ 13 ಜನ ತೀವ್ರ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾಮದುರ್ಗದ ಖಾಸಗಿ ಆಸ್ಪತ್ರೆಗೆ …
Read More »ಬೆಳಗಾವಿ ಲಾಡ್ಜ್ ಮೇಲೆ ಪೋಲೀಸರ ದಾಳಿ ನಾಲ್ವರ ಬಂಧನ…
ಬೆಳಗಾವಿ-ಹಿಂಡಲಗಾ- ಸುಳಗಾ ರಸ್ತೆಯಲ್ಲಿರುವ ಅಂಬಿಕಾ ಲಾಡ್ಜ್ ಆ್ಯಂಡ್ ಬೋರ್ಡಿಂಗ್ ಮೇಲೆ ದಾಳಿ ಮಾಡಿರುವ ಮಹಿಳಾ ಠಾಣೆಯ ಪೋಲೀಸರು,ವೇಶ್ಯಾವಾಟಿಕೆ ನಡೆಸುತ್ತಿದ್ದ ನಾಲ್ವರನ್ನು ಬಂಧಿಸಿದ್ದಾರೆ. ಮಹಿಳಾ ಠಾಣೆಯ ಪಿಐ ಶ್ರೀದೇವಿ ಪಾಟೀಲ ನೇತ್ರತ್ವದ ಪೋಲೀಸರ ತಂಡ ಕಾರ್ಯಾಚರಣೆ ನಡೆಸಿ ಅಂಬಿಕಾ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ನಾಲ್ವರನ್ನು ಬಂಧಿಸಿ,ಹಲವಾರು ಜನ ನೊಂದ, ಯುವತಿಯರ,ಮಹಿಳೆಯರ ರಕ್ಷಣೆ ಮಾಡಿದ್ದಾರೆ. ದಾಳಿ ಮಾಡಿರುವ ಪೋಲೀಸರು,1) ಸೋಮನಾಥ ಗವಳಿ ಸಾ.ಬೆಳಗಾವಿಯ ಗವಳಿಗಲ್ಲಿ 2) ರಾಹುಲ್ ಪಾಟೀಲ ಶಿವಾಜಿಗಲ್ಲಿ ಕಂಗ್ರಾಳಿ …
Read More »ಘಟಪ್ರಭಾದಲ್ಲಿ ಮೀನುಗಾರ ನಾಪತ್ತೆ, ಯಡೂರಿನಲ್ಲಿ ಚಿರತೆ ದಾಳಿ..
ಪ್ರವಾಹದಲ್ಲಿ ಕೊಚ್ಚಿ ಹೋದ ಮೀನುಗಾರ… ಬೆಳಗಾವಿ- ಘಟಪ್ರಭಾ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಮೀನುಗಾರನೊಬ್ಬ ಪ್ರವಾಹದಲ್ಲಿ ಕೊಚ್ವಿ ಹೋಗಿರುವ ಘಟನೆ ಶಿಂಗಳಾಪೂರದಲ್ಲಿ ನಡೆದಿದೆ. ಘಟಪ್ರಭಾ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಗೋಕಾಕಿನ 40 ವರ್ಷದ ಪರಶುರಾಮ ರಾಜು ಜಾಲಗಾರ ನಾಪತ್ತೆಯಾಗಿದ್ದಾನೆ. ಪೋಲೀಸರು ಸ್ಥಳಕ್ಕೆ ದೌಡಾಯಿಸಿ ನಾಪತ್ತೆಯಾಗಿರುವ ಮೀನುಗಾರನ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಚಿಕ್ಕೋಡಿಯ ಯಡೂರನಲ್ಲಿ ಚಿರತೆ ದಾಳಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಯಡೂರನಲ್ಲಿ ಚಿರತೆ ಕಾಣಿಸಿಕೊಂಡಿದ್ದು,ಈ ಚಿರತೆ ಕುರಿ ಮತ್ತು …
Read More »ನಮ್ಮ ಸವದಿ ಸಾಹುಕಾರ್ ಸಿಎಂ ಆಗ್ತಾರಂತೆ ಹಿಗೊಂದು ಅಡಿಯೋ ವೈರಲ್…!!
ಬೆಳಗಾವಿ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಡಿಸಿಎಂ ಹುದ್ದೆಗೇರಿ ಅಚ್ಛರಿ ಮೂಡಿಸಿದವರು ಲಕ್ಷ್ಮಣ್ ಸವದಿ. ಇದೀಗ ಲಕ್ಷ್ಮಣ್ ಸವದಿ ಮುಖ್ಯಮಂತ್ರಿ ಹುದ್ದೆಗೇರಲಿದ್ದಾರೆ ಎಂಬ ಗುಸು ಗುಸು ರಾಜಕಾರಣದಲ್ಲಿ ಸದ್ದು ನಡೆದೆ. ಲಕ್ಷ್ಮಣ ಸವದಿ ಬೆಂಬಲಿಗರೂ ಕೂಡ ಸವದಿ ಸವ್ಕಾರ್ ಮುಂದಿನ ಸಿಎಂ ಎಂದು ಮಾತನಾಡಿದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿ ಹುದ್ದೆಗೇರಿ ಒಂದು ವರ್ಷವಾಗಿದೆ. ಇದಕ್ಕಾಗಿ ಬಿಜೆಪಿ ನಾಳೆ ಜನೋತ್ಸವ ಕಾರ್ಯಕ್ರಮ …
Read More »ಬೊಮ್ಮಾಯಿ ಹೇಳಿದ ಹಾಗೆ,ಚಂದರಗಿ ಮಾಡಿದ್ರು…!!
ಬೆಳಗಾವಿ- ಬೆಳಗಾವಿ ಜಿಲ್ಲೆಯ ಖ್ಯಾತ ಸಾಹಿತಿಗಳ,ಸಂಗೀತಗಾರರ,ರಂಗ ಕಲಾವಿದರ ಹೆಸರುಗಳಲ್ಲಿ ಪ್ರತಿಷ್ಠಾನಗಳನ್ನು ಸ್ಥಾಪಿಸಿ ಸರಕಾರದ ಅನುದಾನ ಪಡೆಯಲು ರಾಜ್ಯ ಸರಕಾರದ ಮೇಲೆ ಒತ್ತಡ ತರಲು ಇಂದು ಮಂಗಳವಾರ ಮುಂಜಾನೆ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಸಾಹಿತಿಗಳ,ಚಿಂತಕರ ಸಭೆಯಲ್ಲಿ ನಿರ್ಧರಿಸಲಾಯಿತು. ಖ್ಯಾತ ರಂಗಭೂಮಿ ಕಲಾವಿದ ದಿ.ಏಣಗಿ ಬಾಳಪ್ಪ,ಖ್ಯಾತ ಹಿಂದೂಸ್ತಾನಿ ಗಾಯಕ ದಿ.ಕುಮಾರ ಗಂಧರ್ವ,ಖ್ಯಾತ ಕಾದಂಬರಿಕಾರ ದಿ.ಕೃಷ್ಣಮೂರ್ತಿ ಪುರಾಣಿಕ,ಖ್ಯಾತ ಕವಿ ದಿ.ಡಿ.ಎಸ್. ಕರ್ಕಿ ಮತ್ತು ಖ್ಯಾತ ಸಾಹಿತಿ ದಿ.ಎಸ್.ಡಿ. ಇಂಚಲ ಅವರ ಹೆಸರುಗಳಲ್ಲಿ ಪ್ರತಿಷ್ಠಾನಗಳನ್ನು …
Read More »ಬೆಳಗಾವಿ ಪೋಲೀಸರಿಂದ ಭರ್ಜರಿ ಬೇಟೆ,ಬೆಚ್ಚಿ ಬಿತ್ತು ಆಕ್ರಮ ಅಕ್ಕಿ ಪೇಟೆ…!!
ಬೆಳಗಾವಿ-ಬಡವರ ಅನ್ನಭಾಗ್ಯದ ಅಕ್ಕಿಯನ್ನು ಆಕ್ರಮವಾಗಿ ಸಾಗಿಸುತ್ತಿದ್ದ ಜಾಲವನ್ನು ಬೆಳಗಾವಿ ಪೋಲೀಸರು ಪತ್ತೆ ಹಚ್ಚಿದ್ದು,ಬರೊಬ್ಬರಿ 31 ಟನ್ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸರಿಂದ ಸುಮಾರು 7 ಲಕ್ಷ ಮೌಲ್ಯದ 31 ಟನ, 320 ಕ್ವಿಂಟಲ ಅಕ್ರಮ ಪಡಿತರ ಅಕ್ಕಿ ವಶಕ್ಕೆ ಪಡೆದಿರುವ ಪೋಲೀಸರು ತನಿಖೆ ಶುರು ಮಾಡಿದ್ದಾರೆ. ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಐ ಬೆಳಗಾವಿ ಗ್ರಾಮೀಣ ಠಾಣೆ ಹಾಗೂ ಸಿಬ್ಬಂದಿಯವರು ದಾಳಿ ಮಾಡಿ 1) ವಾಸಿಮ ಮುಜಾವರ ಸಾ. ಹುಂಚ್ಯಾನಟ್ಟಿ …
Read More »