Breaking News

Breaking News

ಅಧಿಕಾರದಿಂದ ವಂಚಿತರಾದರೂ, A.B.P ರಾಜಕೀಯ ವರ್ಚಸ್ಸು ಕುಗ್ಗಿಲ್ಲ…!!

ಎ.ಬಿ ಪಾಟೀಲರ, ದಶಕದ ಪ್ರಶ್ನೆಗೆ ಬೆಳಗಾವಿ ಉತ್ತರ…!!   ಬೆಳಗಾವಿ-ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಎ.ಬಿ ಪಿ ಅಂದ್ರೆ,ಕಿಂಗ್ ಮೇಕರ್ ಎನ್ನುವ ಕಾಲ ಇತ್ತು.ವಿಧಾನಸಭಾ ಕ್ಷೇತ್ರಗಳ ಮರುವಿಂಗಡನೆ ಯಾದಬಳಿಕ ಎ.ಬಿ ಪಾಟೀಲ ಅಧಿಕಾರದಿಂದ‌ ವಂಚಿತರಾದರೂ ಅವರ ವರ್ಚಸ್ಸು ಕಡಿಮೆಯಾಗಿಲ್ಲ.ಕಾಂಗ್ರೆಸ್ ಪಕ್ಷದಲ್ಲಿ ಪ್ರಭಾವಿಯಾಗಿರುವ ಅವರು ಅಧಿಕಾರಕ್ಕಾಗಿ ಹೊಸ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವ ಕಾಲ ಈಗ ಸನ್ನಿಹಿತ ವಾಗಿದೆ. ಹುಕ್ಕೇರಿ ಕ್ಷೇತ್ರದಿಂದ ಉಮೇಶ್ ಕತ್ತಿ ವಿರುದ್ಧ ಹಲವಾರು ಬಾರಿ ಪರಾಭವ ಗೊಂಡಿರುವ ಎ.ಬಿ ಪಾಟೀಲ …

Read More »

ಗೋಕಾಕ್ ಫಾಲ್ಸ್ ನಲ್ಲಿ ಡೇಂಜರ್ ಸೆಲ್ಫೀ….!!!

ಗೋಕಾಕ- ಗೋಕಾಕ್ ಫಾಲ್ಸ್ ದಲ್ಲಿ ಅಪಾಯದ ಅಂಚಿನಲ್ಲಿ ನಿಂತು ಸೆಲ್ಫಿ ತೆಗೆಯಲು ಹೋಗಿ,ನಿಯಂತ್ರಣ ತಪ್ಪಿ ಅದೆಷ್ಡು ಜನ ಜಲ ಸಮಾಧಿ ಆಗಿದ್ದಾರೆ ಅದಕ್ಕೆ ಲೆಕ್ಕವೇ ಇಲ್ಲ.ಇಷ್ಟೆಲ್ಲಾ ಅನಾಹುತಗಳು ಇಲ್ಲಿ ಪ್ರತಿವರ್ಷ ಸಂಭವಿಸಿದರೂ.ಜನರ ಹುಚ್ಚಾಟ ಮಾತ್ರ ನಿಂತಿಲ್ಲ. ಫಾಲ್ಸ್ ಸುತ್ತಲು ಜನರ ರಕ್ಷಣೆಗೆ ಯಾವುದೇ ರೀತಿಯ ಸವಲತ್ತುಗಳು ಇಲ್ಲ.ಅಪಾಯದ ಸ್ಥಳಕ್ಕೆ ಹೋಗದಂತೆ ಪ್ರವಾಸಿಗರನ್ನು ತಡೆಯಲು ಪೋಲೀಸರ ಕಾವಲು ಕೂಡಾ ಇಲ್ಲ.ಹೀಗಾಗಿ ಇಲ್ಲಿ ಬರುವ ಪ್ರವಾಸಿಗರ ಮೇಲೆ ನಿಯಂತ್ರಣ ಇಲ್ಲವೇ ಇಲ್ಲ.ಅದಕ್ಕಾಗಿ ಅಪಾಯದ …

Read More »

ಅಮರನಾಥದಲ್ಲಿ ಬೆಳಗಾವಿ ಮಹಿಳೆ, ಸುರಕ್ಷಿತ-ಕುಟುಂಬಸ್ಥರು ನಿರಾಳ

ಸಾಧ್ಯವಾದ ಸಂಪರ್ಕ; ಕುಟುಂಬಸ್ಥರು ನಿರಾಳ ಬೆಳಗಾವಿ: ಅಮರನಾಥ ದರ್ಶನಕ್ಕೆ ತೆರಳಿದ್ದ ಇಲ್ಲಿನ ಮಹಿಳೆಯೊಬ್ಬರು ನಿನ್ನೆಯಿಂದ ಸಂಪರ್ಕಕ್ಕೆ ಲಭ್ಯವಾಗದ್ದರಿಂದ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದರು. ಈಗ ಕರೆ ಮಾಡಿ ಪತಿಯೊಂದಿಗೆ ಮಾತನಾಡಿದ್ದು, ಕುಟುಂಬ ವರ್ಗದಲ್ಲಿ ಒಂದಿಷ್ಟು ನಿರಾಳಭಾವ ಮೂಡಿದೆ. ಬಸವನ ಕುಡಚಿಯ ದೇವರಾಜ ಅರಸ ಕಾಲೊನಿಯಲ್ಲಿ ವಾಸಿಸುತ್ತಿರುವ ಸೀಮಾ ಬೆಳಗೂರ ಎಂಬುವರು ಜು.5ರಂದು ಅಮರನಾಥ ದರ್ಶನಕ್ಕೆ ಹೋಗಿದ್ದರು. ಆದರೆ, ಎಷ್ಟೇ ಕರೆ ಮಾಡಿದರೂ ಕುಟುಂಬದವರಿಗೆ ಸಿಕ್ಕಿರಲಿಲ್ಲ. ಮೊಬೈಲ್‌ ಸ್ವಿಚ್‌ ಆಫ್‌ ಆಗಿರುವುದು ಕುಟುಂಬದವರ …

Read More »

ಸಮಸ್ಯೆ ಬಗೆಯರಿಯುವ ತನಕ ಹನಿಮೂನಗೆ ಹೋಗಲ್ಲ….!!

ಕೊಲ್ಹಾಪೂರ– ಮಾವನ ಕಡೆಯಿಂದ ಹಟ ಮಾಡಿ, ನೀರಿನ ಟ್ಯಾಂಕ್ ವರದಕ್ಷಣೆ ರೂಪದಲ್ಲಿ ಪಡೆದು ಈ ನೀರಿನ ಟ್ಯಾಂಕ್ ಸಮೇತ ಮೆರವಣಿಗೆ ಮಾಡಿದ,ನವದಂಪತಿಗಳು, ನೀರಿನ ಸಮಸ್ಯೆ ಬಗೆಯರಿಯುವ ತನಕ ಹನಿಮೂನಗೆ ಹೋಗಲ್ಲ.ಎಂದು ಮಹಾನಗರ ಪಾಲಿಕೆಗೆ ಸವಾಲು ಹಾಕಿದ ಘಟನೆ ಪಕ್ಕದ ಕೊಲ್ಹಾಪೂರದಲ್ಲಿ ನಡೆದಿದೆ. ನವ ದಂಪತಿಗಳು ಮದುವೆ ಮುಗಿದ ಬಳಿಕ, ಮೆರವಣಿಗೆ ನಡೆಸಿ, ಟ್ಯಾಂಕ್ ಮೇಲೆ , ನೀರಿನ ಸಮಸ್ಯೆ ಬಗೆ ಹರೆಯುವವರೆಗೂ ಹನಿಮೂನ್ ಮಾಡೋಲ್ಲ ಎಂದು ಬರೆದು, ಕೊಲ್ಹಾಪೂರ ಅಷ್ಟೆ …

Read More »

ನಾಪತ್ತೆಯಾಗಿದ್ದ ಸುಬೇದಾರ್ ಮೇಜರ್, ಬೆಳಗಾವಿಯಲ್ಲಿ ಪತ್ತೆ…

ಬೆಳಗಾವಿ: ನಾಪತ್ತೆ ಆಗಿದ್ದ ಮರಾಠಾ ಲಘು ಪದಾತಿ ದಳದ ಕಮಾಂಡೋ ಟ್ರೈನಿಂಗ್ ವಿಂಗ್ ನ ಸುಬೇದಾರ್ ಮೇಜರ್ ಸುರ್ಜಿತ್ ಸಿಂಗ್ ಅವರು ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿ, ಒಂದು ತಿಂಗಳ ಬಳಿಕ‌ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.‌ ಸುಬೇದಾರ್ ಮೇಜರ್ ಸುರ್ಜಿತ್ ಸಿಂಗ್ ಅವರು ನಾಪತ್ತೆ ಆಗಿದ್ದರಿಂದ ಸೇನಾ ವಲಯದಲ್ಲಿ ಆತಂಕಕ್ಕೆ‌ ಕಾರಣವಾಗಿತ್ತು.‌ ಪೊಲೀಸರು ಮತ್ತು ಸೇನೆಯ ಅಧಿಕಾರಿಗಳು ಶ್ರಮವಹಿಸಿ ಸೇನಾ ಅಧಿಕಾರಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಅಸ್ವಸ್ಥ ಸ್ಥಿತಿಯಲ್ಲಿ ಸೇನಾಧಿಕಾರಿ …

Read More »

ಬೆಳಗಾವಿ ಜಿಲ್ಲೆಯಲ್ಲೂ ಭೂಕಂಪ ಅಧಿಕಾರಿಗಳ ದೌಡು….

ಬೆಳಗಾವಿ- ಬೆಳಗಾವಿ ಜಿಲ್ಲೆಯ ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಅಥಣಿ ತಾಲ್ಲೂಕಿನ ಶಿರಹಟ್ಟಿ ಗ್ರಾಮದಲ್ಲೂ ಭೂಕಂಪವಾಗಿದ್ದು ಅಧಿಕಾರಿಗಳು ಈಗ್ರಾಮಕ್ಕೆ ದೌಡಾಯಿಸಿದ್ದಾರೆ. ಮುಖ್ಯಾಂಶಗಳು ಗಡಿ ಜಿಲ್ಲೆಯಲ್ಲೂ ಲಘು ಭೂಕಂಪದ ಅನುಭವ ಶಿರಹಟ್ಟಿ ಗ್ರಾಮದಲ್ಲಿ ಲಘು ಭೂಕಂಪನ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮ ಬೆಳಗ್ಗೆ 6.45 ಕ್ಕೆ ಲಘು ಭೂಕಂಪನ ಯಾವುದೇ ಹಾನಿ,ಅನಾಹುತ ಸಂಭವಿಸಿಲ್ಲ ಸ್ಥಳಕ್ಕೆ ಅಥಣಿ ಡಿವೈಎಸ್ಪಿ, ತಹಶಿಲ್ದಾರರ ಭೇಟಿ ಪರಿಶೀಲನೆ ಬೆಳಗಾವಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳ ಮೆಸ್ಸೇಜ್… Epicentre: 2.3 …

Read More »

ಲೈಸೆನ್ಸ್-ಪರ್ಮಿಟ್ ರದ್ದುಗೊಳಿಸಲು,ಬೆಳಗಾವಿ ಡಿಸಿ ಖಡಕ್ ಆರ್ಡರ್…!!

ಬೆಳಗಾವಿ, ಜು.8(ಕರ್ನಾಟಕ ವಾರ್ತೆ): ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಹಾಗೂ ವಾಹನ ದಟ್ಟಣೆ ಹೆಚ್ಚಾಗಿರುವ ರಸ್ತೆಗಳಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ನಿರಂತರ ತಪಾಸಣೆ ಕೈಗೊಂಡು ಸಾರಿಗೆ ನಿಯಮ ಉಲ್ಲಂಘಿಸುವವರಿಗೆ ಹಾಗೂ ಹೆಚ್ಚುವರಿ ಪ್ರಯಾಣಿಕರನ್ನು ಸಾಗಿಸುವ ವಾಹನಗಳ ಚಾಲಕರು ಮತ್ತು ಮಾಲೀಕರಿಗೆ ಬಿಸಿಮುಟ್ಟಿಸಬೇಕು ಎಂದು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ನಿತೀಶ್ ಪಾಟೀಲ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ (ಜು.8) ನಡೆದ ಜಿಲ್ಲಾ ರಸ್ತೆ ಸುರಕ್ಷತಾ …

Read More »

!‌ಮದ್ಯಪ್ರೀಯರಿಗೆ ನಾಳೆಯಿಂದ ಟೇನಶ್ಯನ್‌….

ಸರ್ಕಾರ ಮತ್ತು ಮದ್ಯ ಮಾರಾಟಗಾರರ ನಡುವಿನ ತಿಕ್ಕಾಟ ಮುಗಿಯುತ್ತಿಲ್ಲ.ಇ- ಇಂಡೆಂಟ್ ಸಮಸ್ಯೆ ಬಗೆ ಹರಿಸದಿದ್ದರೆ ನಾಳೆಯಿಂದ ವ್ಯಾಪಾರ ಬಂದ್ ಮಾಡುತ್ತೇವೆ ಎಂದು ಮಾರಾಟಗಾರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಚಿತ್ರದುರ್ಗ(ಜು.08): ಮದ್ಯ ಖರೀದಿಗೆ ಸಂಬಂಧಿಸಿ ಇ-ಇಂಡೆಂಟಿಗ್‌(ಬೇಡಿಕೆ) ವ್ಯವಸ್ಥೆಯಲ್ಲಿನ ಸಮಸ್ಯೆ ತಕ್ಷಣ ಬಗೆಹರಿಸದಿದ್ದರೆ ಶನಿವಾರದಿಂದ ರಾಜ್ಯಾದ್ಯಂತ ಮದ್ಯದಂಗಡಿ ಬಂದ್‌ ಮಾಡಲಾಗುವುದೆಂದು ಮದ್ಯ ಮಾರಾಟಗಾರರ ಒಕ್ಕೂಟದ ರಾಜ್ಯಾಧ್ಯಕ್ಷ ಎಸ್‌.ಗುರುಸ್ವಾಮಿ ಹೇಳಿದ್ದಾರೆ. ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೊಸ ಇ-ಇಂಡೆಂಟಿಂಗ್‌ ಸಾಫ್ಟ್‌ವೇರ್‌ನಿಂದಾಗಿ ಸಮಸ್ಯೆ ಉಲ್ಬಣವಾಗಿದೆ. ಮದ್ಯ …

Read More »

ಕಿನಾಲ್ ನಲ್ಲಿ ಕಾರ್ ಮುಳುಗಿ ಇಬ್ಬರ ಜಲಸಮಾಧಿ….

ಬೆಳಗಾವಿ- ಕಿನಾಲ್ ನಲ್ಲಿ ಕಾರು ಮುಳುಗಿ ಇಬ್ಬರು ಜಲಸಮಾಧಿಯಾಗಿದ್ದು ಓರ್ವ ಪ್ರಾಣಾಪಾಯದಿಂದ ಪಾರಾದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಕರಿಮಸೂತಿ ಏತ ನೀರಾವರಿಯ ಕಿನಾಲ್ ನಲ್ಲಿ ನಡೆದಿದೆ. ಕಾರು ಚಾಲಕನ ನಿಯಂತ್ರಣ ತಪ್ಪಿ ಕಾರು ಕಿನಾಲ್ ನಲ್ಲಿ ಪಲ್ಟಿಯಾಗಿದೆ.ಈ ಕಿನಾಲ್ ರಡ್ಡೇರಹಟ್ಟಿ ಗ್ರಾಮದ ಹದ್ದಿಯಲ್ಲಿ ಬರುತ್ತದೆ.ಸುರೇಶ್ ತುಕಾರಾಮ್ ಪೂಜಾರಿ,28,ಮಹಾದೇವ ಶ್ರೀಶೈಲ ಚಿಗರಿ 24 ಎಂಬಾತರು ಈ ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ‌. A car with 3 people has plunged …

Read More »

ಅಲ್ಲಿ ಮಳೆಯಾದ್ರೆ,… ಇಲ್ಲಿ ಛತ್ರಿ ಹಿಡೀಬೇಕು…ಅಧಿಕಾರಿಗಳು ಓಡಾಡಬೇಕು…!!!

ಮಹಾರಾಷ್ಟ್ರದಲ್ಲಿ ಮಹಾಮಳೆ, ಬೆಳಗಾವಿಯಲ್ಲಿ ಆತಂಕ ಬೆಳಗಾವಿ- ಮಹಾರಾಷ್ಟ್ರದ ಸಹ್ಯಾದ್ರಿ ಬೆಟ್ಟದಲ್ಲಿ ಭಯಂಕರ ಮಳೆ ಸುರಿಯುತ್ತಿರುವ ಪರಿಣಾಮ,ಮಹಾರಾಷ್ಟ್ರದ ಪಂಚಗಂಗಾ ನದಿ ಅಪಾಯ ಮಟ್ಟದಲ್ಲಿ ಹರಿತುತ್ತಿದ್ದು ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹದ ಆತಂಕ ಎದುರಾಗಿದೆ. ಮಹಾರಾಷ್ಟ್ರದ ಪಂಚಗಂಗಾ ನದಿ,ಕೃಷ್ಣಾ ನದಿಗೆ ಸೇರುತ್ತದೆ‌.ಪಂಚಗಂಗಾ ನದಿಗೆ ಮಹಾಪೂರ ಬಂದಿರುವ ಕಾರಣ,ಕೃಷ್ಣಾ ನದಿಯ ಒಳಹರಿವು ಹೆಚ್ಚಾಗಿದೆ.ಕೃಷ್ಣಾ ನದಿಗೆ 71 ಸಾವಿರ,293 ಕ್ಯುಸೆಕ್ಸ್ ನೀರು ಹರಿದು ಬರುತ್ತಿದೆ. ರಾಜಾಪೂರ ಬ್ಯಾರೇಜಿನಿಂದ,56.33 ಸಾವಿರ ಕ್ಯಸೆಕ್ಸ್,ದೂದಗಂಗಾ 14.960 ಕ್ಯುಸೆಕ್ಸ್, ನೀರು ಕೃಷ್ಣಾ …

Read More »