Breaking News

Breaking News

ಗೋಲ್ಡ್ ಮೆಡಲ್ ಪಡೆದ ಪೈಲವಾನ್ ಗೆ ಬೆಳಗಾವಿಯಲ್ಲಿ ಗ್ರ್ಯಾಂಡ್ ವೆಲ್ ಕಮ್…!!!

ಬೆಳಗಾವಿ- ಅಪ್ಪ ಎರಡು ದಶಕಗಳ ಕಾಲ ಜೀತ ಮಾಡಿ ಬೆಳೆಸಿದ ಮಗ ಪೈಲವಾನ್ ಈ ಪೈಲವಾನ್ ಈಗ ಜಗತ್ಪ್ರಸಿದ್ಧ, ಕಿರ್ಗಿಸ್ತಾನದಲ್ಲಿ ನಡೆದ ಅಂತರಾಷ್ಟ್ರೀಯ ಕುಸ್ತಿಯಲ್ಲಿ ಗೋಲ್ಡ್ ಮೆಡಲ್ ಪಡೆದು ಇಂದು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ಆಗಮಿಸಿದಾಗ ಕುಸ್ತಿ ಅಭಿಮಾನಿಗಳು ಈ ಕುಸ್ತಿ ಪಟುಗೆ ಅದ್ಧೂರಿ ಸ್ವಾಗತ ನೀಡಿದ್ರು ಈ ಕುಸ್ತಿ ಪಟು ಮುಧೋಳದವರು. ನಿಂಗಪ್ಪ ಗೆಣೆನ್ನವರ ಕಿರ್ಗಿಸ್ತಾನದಲ್ಲಿ ನಡೆದ 17 ವರ್ಷದೊಳಗಿನವರ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ …

Read More »

ಸಹೋದರ ಗೆದ್ದ ನಂತರ, ವೇಷ ಬದಲಾಯಿಸಿದ ಮುರುಗೇಶ……!!!

ಮೋಸ…ಮೋಸ..ಮೋಸ…!!!! ವಾಯುವ್ಯ ಪದವೀಧರ ಕ್ಷೇತ್ರದಿಂದ ಸಚಿವ ಮುರುಗೇಶ ನಿರಾಣಿ ಸಹೋದರ ಹಣಮಂತ ನಿರಾಣಿ ಸ್ಪರ್ದೆ ಮಾಡಿದ್ದರು.ಈ ಸಂಧರ್ಭದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರದಲ್ಲಿ ಮುರುಗೇಶಣ್ಣಾ ವೀರಮಾತೆ, ಚನ್ನಮ್ಮಾಜಿಯ ಕಿತ್ತೂರು ಕ್ರಾಂತಿಯ ನೆಲ,ಈ ನೆಲದಲ್ಲೇ ಅಂತರಾಷ್ಟ್ರೀಯ ವಿಮಾನ ನಿಲ್ಧಾಣ ಮಾಡ್ತೀವಿ,ಅದಕ್ಕಾಗಿಯೇ ಅಲ್ಲಿ ಜಮೀನು ಗುರುತಿಸಲಾಗಿದೆ ಹುಬ್ಬಳ್ಳಿ- ಬೆಳಗಾವಿ ನಡುವೆ ಈ ನಿಲ್ಧಾಣ ಮಾಡಲು ನಾನು ಬದ್ಧ ಎಂದು ಹೇಳಿ,ಬೆಳಗಾವಿ ಜಿಲ್ಲೆಯ ಜನರಲ್ಲಿ ಭರವಸೆಯ ಬೆಳಕು ಮೂಡಿಸಿದ್ದ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ …

Read More »

ರಾಜ್ಯವನ್ನು ಬೆಚ್ಚಿ ಬೀಳಿಸಿದ ಮೂಡಲಗಿ ಭ್ರೂಣ ಹತ್ಯೆ ಪ್ರಕರಣ

ಬೆಳಗಾವಿ- ಭ್ರೂಣ ಹತ್ಯೆ ತಡೆಯಲು ಕೇಂದ್ರ,ಹಾಗೂ ರಾಜ್ಯ ಸರ್ಕಾರಗಳು ಕಠಿಣ ಕಾನೂನು ಜಾರಿಗೆ ತಂದರೂ,ಭ್ರೂಣ ಹತ್ಯೆಗಳು ನಿಲ್ಲುತ್ತಿಲ್ಲ.ಹಣ ಗಳಿಸುವದಕ್ಕಾಗಿ ಪಾಪಿಗಳು ನಿರಂತರವಾಗಿ ಭ್ರೂಣ ಹತ್ಯೆ ಮಾಡುತ್ತಲೇ ಇದ್ದು ಈ ಧಂದೆ ನಿಲ್ಲುತ್ತಿಲ್ಲ ಎನ್ನುವದಕ್ಕೆ ಮೂಡಲಗಿಯ ಘಟನೆಯೇ ಸಾಕ್ಷಿಯಾಗಿದೆ. ಬೆಳಗಾವಿ ಜಿಲ್ಲೆಯ ಮೂಡಲಗಿ ಬಸ್ ನಿಲ್ದಾಣದ ಬಳಿ ಹರಿದ ಹಳ್ಳದಲ್ಲಿ ಹತ್ಯೆ ಮಾಡಲಾದ ಏಳು ಭ್ರೂಣಗಳು ಪತ್ತೆಯಾಗಿದ್ದು, ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಎಲ್ಲ ಏಳೂ ಭ್ರೂಣಗಳನ್ನು ಪ್ಸಾಸ್ಟಿಕ್ ಡಬ್ಬಗಳಲ್ಲಿ ತುಂಬಿರುವ ಕಿರಾತಕರು, ಶುಕ್ರವಾರ …

Read More »

ನಾಯಿ ಬರ್ತಡೇ,ಕ್ವಿಂಟಲ್ ಕೇಕ್,3ಕ್ವಿಂಟಲ್ ಚಿಕನ್, 1ಕ್ವಿಂಟಲ್ ಮೊಟ್ಟೆ…!!

ಬೆಳಗಾವಿ- ನಾವು ನಮ್ಮ ಮಕ್ಕಳ ಬರ್ತಡೇ ಆಚರಿಸಲು ಅರ್ದ ಕೆ.ಜಿ ಕೇಕ್ ತರಿಸಬೇಕೋ ಅಥವಾ ಒಂದು ಕೆ.ಜಿ ಕೇಕ್ ಬೇಕೋ ಅಂತಾ ವಿಚಾರ ಮಾಡ್ತೀವಿ,ಆದ್ರೆ ಬೆಳಗಾವಿ ಜಿಲ್ಲೆಯಲ್ಲಿ ಒಬ್ಬ ತನ್ನ ಸಾಕು ನಾಯಿ ಬರ್ತಡೇಗೆ ಕ್ವಿಂಟಲ್ ಕೇಕ್,ಕಟ್ ಮಾಡಿ,ಬರ್ತಡೇ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನರಿಗೆ 3ಕ್ವಿಂಟಲ್ ಚಿಕನ್, 1ಕ್ವಿಂಟಲ್ ಮೊಟ್ಟೆ, ಸಸ್ಯಹಾರಿಗಳಿಗೆ 50ಕೆಜಿ ಕಾಜುಕರಿ ಮಾಡಿಸಿ ಬಾಡೂಟ ಹಾಕಿಸಿ,ಎಲ್ಲರ ಗಮನ ಸೆಳೆದಿದ್ದಾನೆ. ತನ್ನ ನೆಚ್ಚಿನ ಸಾಕು ನಾಯಿ ‘ಕ್ರಿಶ್’ ಹುಟ್ಟು ಹಬ್ಬವನ್ನು …

Read More »

ಬೆಳಗಾವಿ ಸಿಟಿಯಲ್ಲಿ,ಜಿಟಿ,ಜಿಟಿ, ಮಾನ್ಸೂನ್….!!!

ಬೆಳಗಾವಿ- ಬೆಳಗಾವಿ ಸಿಟಿ ಸೇರಿದಂತೆ ಜಿಲ್ಲೆಯಾದ್ಯಂತ ಮಳೆರಾಯನ ಆಗಮನವಾಗಿದೆ.ಮದ್ಯರಾತ್ರಿಯಿಂದಲೇ ಬಿಡುವಿಲ್ಲದೇ ಜಿಟಿ ಜಿಟಿ ಮಳೆ ಸುರಿಯುತ್ತಲೇ ಇದೆ. ಇದಕ್ಕೂ ಮೊದಲು ಆಗೊಮ್ಮೆ ಈಗೊಮ್ಮೆ ಮಳೆ ಸುರಿದು,ಮೋಡಗಳು ಮಾಯವಾಗಿ ಬಿಸುಲು ಬೀಳುವ ಆಟ ನಡೆಯುತ್ತಿತ್ತು ಆದ್ರೆ ನಿನ್ನೆ ರಾತ್ರಿಯಿಂದ ಬೆಳಗಾವಿ ಜಿಲ್ಲೆಯಲ್ಲಿ ಪಕ್ಕಾ ಮಾನ್ಸೂನ್ ಸುರಿಯುತ್ತಿದೆ. ಸರಿಯಾಗಿ ಮಳೆ ಬಾರದ ಕಾರಣ ಬಿತ್ತನೆ ಕಾರ್ಯವೂ ಮುಗಿದಿಲ್ಲ,ಆದ್ರೆ ಈಗ ಸುರಿಯುತ್ತಿರುವ ಮಳೆ ನೋಡಿದ್ರೆ ಇನ್ಮುಂದೆ ಎಲ್ಲ ಕೃಷಿ ಚಟುವಟಿಕೆಗಳು ಸುಗಮವಾಗಿ ಸಾಗಲಿವೆ. ಬೆಳಗಾವಿ …

Read More »

ಜಂಗಲ್ ಮಿನಿಸ್ಟರ್ ಕತ್ತಿಯಿಂದ ವಿಭಜನೆಯ ದಂಗಲ್….!!!

ಬೆಳಗಾವಿ- ಬೆಳಗಾವಿಯ ಹಿರಿಯ ಬಿಜೆಪಿ ನಾಯಕ ಉಮೇಶ್ ಕತ್ತಿ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡುವ ವಿಚಾರವನ್ನು ಉಮೇಶ್ ಕತ್ತಿ ಪದೇ ಪದೇ ಪ್ರಸ್ತಾಪ ಮಾಡಿ ಟೀಕೆಗೆ ಗುರಿಯಾಗುತ್ತಿರುವದು ಹೊಸದೇನಲ್ಲ, ಮಿನಿಸ್ಟರ್ ಉಮೇಶ್ ಕತ್ತಿ ಈಗ ಮತ್ತೆ ರಾಜ್ಯ ವಿಭಜಿಸುವ ವಿಚಾರವನ್ನು ಪ್ರಸ್ತಾಪ ಮಾಡಿ ಮತ್ತೆ ಹಲವಾರು ಜನ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನಾಯಕರ ಆಕ್ರೋಶ ಸಚಿವ ಅಶ್ವತ್ಥ ನಾರಾಯಣ ಅವರು ಉಮೇಶ್ ಕತ್ತಿ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿ ಈ …

Read More »

ಮಹಿಳಾ ಪೋಲೀಸ್ ಪೇದೆಯ ಜೊತೆ ಅಸಭ್ಯವಾಗಿ ವರ್ತಿಸಿದ ಎಎಸ್ಐ ಸಸ್ಪೆಂಡ್….

ಬೆಳಗಾವಿ- ಮಹಿಳಾ ಪೋಲೀಸ್ ಪೇದೆಯ ಜೊತೆ ಅಸಭ್ಯವಾಗಿ ವರ್ತಿಸಿದ ಎಎಸ್ಐ ನನ್ನು ನಗರ ಪೋಲೀಸ್ ಆಯುಕ್ತರು ಸಸ್ಪೆಂಡ್ ಮಾಡಿದ ಘಟನೆ ಬೆಳಗಾವಿ ಮಹಾನಗರದಲ್ಲಿ ನಡೆದಿದೆ. ಬೆಳಗಾವಿ ಮಹಾನಗರದ ಎಪಿಎಂಸಿ ಪೋಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದ್ದು ಈ ಠಾಣೆಯ ಎಎಸ್ಐ ASI ರಾಜು ಕಲಾದಗಿ ಎಂಬುವರು,ಕುಡಿದ ಅಮಲಿನಲ್ಲಿ ನಿನ್ನೆ ರಾತ್ರಿ, ಮಹಿಳಾ ಪೋಲೀಸ್ ಪೇದೆಯ ಜೊತೆ ಅಸಭ್ಯವಾಗಿ ವರ್ತಿಸಿದ ಕುರಿತು ಎಪಿಎಂಸಿ ಠಾಣೆಯಲ್ಲಿ ದೂರು ದಾಖಲು ಆಗಿತ್ತು. ಈ ಘಟನೆಯನ್ನು …

Read More »

ಕಂಠದಲ್ಲಿ ಕೃಷ್ಣ…..! ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ಆಪರೇಷನ್ ಸಕ್ಸೆಸ್…!!!

ಬೆಳಗಾವಿ-ಇದೇನಿದು ಕಂಠದಲ್ಲಿ ಕೃಷ್ಣ ಎಂದು ಆಶ್ಚರ್ಯವಾಗುತ್ತದೆ ಅಲ್ಲವೆ….ನಿಜ ಕಂಠದಿಂದ ಕೃಷ್ಣನನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆದ ಘಟನೆ ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ನಡೆದಿದೆ. 45ವರ್ಷದ ವ್ಯಕ್ತಿಯೊಬ್ಬ ದೇವರ ತೀರ್ಥ ಸೇವನೆ ಮಾಡುವ ಅಭ್ಯಾಸ ಹೊಂದಿದ್ದ. ಎಂದಿನಂತೆ ತೀರ್ಥ ಸೇವನೆ ಮಾಡುವಾಗ ಗಮನಿಸದೇ ಲೋಹದ ಕೃಷ್ಣನನ್ನು ನುಂಗಿದ್ದಾನೆ. ಇದರಿಂದ ಆತನಿಗೆ ಗಂಟಲು ನೋವು ಮತ್ತು ಗಂಟಲು ಊತ ಉಂಟಾಗಿ ಸ್ಥಳಿಯ ವೈದ್ಯರನ್ನು ಚಿಕಿತ್ಸೆಗಾಗಿ ಸಂಪರ್ಕಿಸಿದ್ದಾನೆ. ಆಗ ಸ್ಥಳಿಯ ವೈದ್ಯರು ಎಕ್ಸರೇ ಮಾಡಿಸಲು …

Read More »

ಬೆಳಗಾವಿಯಲ್ಲಿ ತ್ರಿವಳಿ ಕೊಲೆ,ಆರೋಪಿ ನಿರ್ದೋಶಿ..

ಬೆಳಗಾವಿ: ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ತಾಯಿ-ಇಬ್ಬರು ಮಕ್ಕಳ ಕಗ್ಗೋಲೆ ‌ಪ್ರಕರಣದ ಆರೋಪಿ ಪ್ರವೀಣ್ ಭಟ್ ನಿರ್ದೋಷಿ ಎಂದು ಧಾರವಾಡ ಹೈಕೋರ್ಟ್ ಪೀಠ ತೀರ್ಪು ನೀಡಿದೆ. ಬೆಳಗಾವಿ ಎರಡನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ತಿರಸ್ಕರಿಸಿದ ಹೈಕೋರ್ಟ್, ಜೂನ್ 21ರಂದು ತೀರ್ಪು ನೀಡಿದೆ.ನ್ಯಾಯಾಧೀಶರಾದ ಕೆ.ಎಸ್. ಮುದಗಲ್, ಎಂಜಿಎಸ್ ಕಮಲ್ ಆದೇಶ ಹೊರಡಿಸಿದ್ದಾರೆ. 2018ರ ಏಪ್ರಿಲ್.ನಲ್ಲಿ ಪ್ರವೀಣ್ ಭಟ್‌ ಅವರಿಗೆ ಬೆಳಗಾವಿಯ ಕೋರ್ಟ್ಜೀವಾವಧಿ ಶಿಕ್ಷೆ ವಿಧಿಸಿತ್ತು.2015 ಆ.16ರಂದುಬೆಳಗಾವಿಯ ಕುವೆಂಪು ನಗರದಲ್ಲಿ ನಸುಕಿನ ಜಾವ …

Read More »

ಬೆಳಗಾವಿಯಲ್ಲಿ, ನಾಡದ್ರೋಹಿಗಳ ವಿರುದ್ಧ ಬಿತ್ತು ಕೇಸ್…!!!

  – ಬೆಳಗಾವಿ- ಬೆಳಗಾವಿಯಲ್ಲಿ ನಾಡದ್ರೋಹಿ ಎಂಇಎಸ ಪುಂಡಾಟಿಕೆ ಮುಂದುವರೆದಿದೆ‌.ಸೋಶಿಯಲ್ ಮಿಡಿಯಾದಲ್ಲಿ ಕಿರಿಕ್ ಮಾಡುತ್ತಿರುವ ಕಂಗಾಲ್ ಕಂಪನಿ ಎಂಇಎಸ್ ಗೆ ಖಾಕಿ ಪಡೆ ಖದರ್ ತೋರಿಸಿದೆ. ಸೋಶಿಯಲ್ ಮಿಡಿಯಾದಲ್ಲಿ ಸರ್ಕಾರಕ್ಕೆ ಧಮಕಿ ಹಾಕಿದ,ನಾಡದ್ರೋಹಿಗಳ ವಿರುದ್ಧ ಕೇಸ್ ಬುಕ್ ಆಗಿದೆ.ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಸೈಟ್ ವಿರುದ್ಧ ಕೇಸ್ ದಾಖಲಾಗಿದೆ. ಬೆಳಗಾವಿ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಎಂಇಎಸ್ ವಿರುದ್ಧ ಸೋಮೋಟೋ ಕೇಸ್ ದಾಖಲು ಮಾಡಲಾಗಿದ್ದು, ಹೆಡ್ ಕಾನ್ಸ್‌ಟೇಬಲ್ ಬಿ.ಎನ್. ನಾಕುಡೆಯಿಂದ ದೂರು …

Read More »