Breaking News
Home / Breaking News / ಬೆಳಗಾವಿ ಜಿಲ್ಲೆಯಾದ್ಯಂತ ಖಾಕಿ ಖದರ್ ಎರಡು ಟಿಪ್ಪರ್ ನಾಲ್ಕು ಜನ ಆರೋಪಿಗಳು ಅಂದರ್…

ಬೆಳಗಾವಿ ಜಿಲ್ಲೆಯಾದ್ಯಂತ ಖಾಕಿ ಖದರ್ ಎರಡು ಟಿಪ್ಪರ್ ನಾಲ್ಕು ಜನ ಆರೋಪಿಗಳು ಅಂದರ್…

ಆಕ್ರಮ ಮರಳುಗಾರಿಕೆಗೆ ಖಾಕಿ ಖದರ್, ಎರಡು ಟಿಪ್ಪರ್ ಅಂದರ್…!!!

ಬೆಳಗಾವಿ- ಸಂಜೀವ ಪಾಟೀಲರು, ಬೆಳಗಾವಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಬೆಳಗಾವಿ ಜಿಲ್ಲೆಯಲ್ಲಿ ಖಾಕಿ ಖದರ್ ಜೋರಾಗಿದೆ.

ಜಲ್ಲೆಯಲ್ಲಿ ನಡೆದ ಅನೇಕ ಕಳ್ಳತನದ ಪ್ರಕರಣಗಳು ತ್ವರಿತಗತಿಯಲ್ಲಿ ತನಿಖೆಯಾಗಿ ಆರೋಪಿಗಳನ್ನು ಪತ್ತೆ ಮಾಡಿ,ಕಳುವಾದ ಸ್ವತ್ತನ್ನು ವಶಪಡಿಸಿಕೊಳ್ಳುವ ಕಾರ್ಯಾಚರಣೆಗಳು ಚುರುಕಾಗಿ ನಡೆಯುತ್ತಿವೆ.ಜೊತೆಗೆ ಕೊಲೆ ಪ್ರಕರಣಗಳು ಅತ್ಯಂತ ಫಾಸ್ಟಾಗಿ ಇನ್ವೆಸ್ಟೀಗೇಶನ್ ಮಾಡಲಾಗುತ್ತಿದೆ.

ಬೆಳಗಾವಿ ಜಿಲ್ಲೆಯಲ್ಲಿ ಇರುವಷ್ಟು ಆಕ್ರಮ ಮರಳುಗಾರಿಕೆ ಬಹುಶ ಬೇರೆ ಯಾವ ಜಿಲ್ಲೆಯಲ್ಲೂ ಇಲ್ಲ,ಖಾನಾಪೂರದಿಂದ ಗೋವಾ ರಾಜ್ಯಕ್ಕೆ ಆಕ್ರಮವಾಗಿ ಮರಳು ಸಾಗಿಸುವ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ.ಇದಕ್ಕೆ ಬ್ರೇಕ್ ಹಾಕಲು ಖಾಕಿ ಪಡೆ ಕಾರ್ಯಾಚರಣೆ ಆರಂಭಿಸಿದ್ದು ಖಾನಾಪೂರ ಠಾಣೆಯ ಪೋಲೀಸರು ಆಕ್ರಮ ಉಸುಕು ಸಾಗಾಣಿಕೆ ವಿರುದ್ಧ ಇವತ್ತು ಕೇಸ್ ದಾಖಲಿಸಿಕೊಂಡು,ಒಂದು ಟಿಪ್ಪರ್ ವಶಕ್ಕೆ ಪಡೆದಿದ್ದಾರೆ. ಈ ಟಿಪ್ಪರ್, ದೇಸೂರದಿಂದ ಚೋರ್ಲಾಗೆ ಆಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿರುವದನ್ನು ಖಾನಾಪೂರ ಪೋಲೀಸರು ತಡೆದಿದ್ದಾರೆ.

ಜೊತೆಗೆ ಆಕ್ರಮ ಮರಳು ಸಾಗಾಣಿಕೆ ವಿರುದ್ದ ಯಮಕನಮರಡಿ ಪೋಲೀಸ್ ಠಾಣೆಯಲ್ಲಿ ಇನ್ನೊಂದು ಕೇಸ್ ದಾಖಲಾಗಿದೆ. ಅರಳಿಕಟ್ಟಿಯಿಂದ ಪಾಶ್ಚಾಪೂರಗೆ ಉಸುಕು ಸಾಗಿಸುತ್ತಿದ್ದ ಲಾರಿ ಈಗ ಪೋಲೀಸರ ವಶದಲ್ಲಿದೆ.

ಬೈಕ್ ಕಳ್ಳರು ಪೋಲೀಸರ ಬಲೆಗೆ…..

ಇವತ್ತು ನಿಪ್ಪಾಣಿ ಗ್ರಾಮೀಣ ಠಾಣೆಯ ಪೋಲೀಸರು ಭರ್ಜರಿ ಬೇಟೆಯಾಡಿದ್ದಾರೆ.ಕಳುವಾಗಿದ್ದ 41 ಬೈಕ್ ಗಳನ್ನು ಕೇವಲ 72 ಗಂಟೆಗಳಲ್ಲಿ ಪತ್ತೆ ಮಾಡಿ ನಾಲ್ಕು ಜನ ಆರೋಪಿಗಳನ್ನು ಬಂಧಿಸಿ 41 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ನಿಪ್ಪಾಣಿ,ಸಂಕೇಶ್ವರ,ಅಂಕಲಿ,ಗೋಕಾಕ್ ಸದಲಗಾ ವ್ಯಾಪ್ತಿಯಲ್ಲಿ ನಡೆದ ಹಲವಾರು ಬೈಕ್ ಕಳ್ಳತನದ ಪ್ರಕರಣಗಳನ್ನು ನಿಪ್ಪಾಣಿ ಗ್ರಾಮೀಣ ಠಾಣೆಯ ಪೋಲೀಸರು ಭೇದಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

Nippani rural police have done a tremendous job of recovering 41 bikes in 72 hours.
Stolen bikes from Nippani,Sankeshwar,Ankali,Gokak,sadalaga,kagawad,Yamakanamaradi khadaklat,recovered.

Check Also

ಶಾಸಕ ರಾಜು ಕಾಗೆ ಅವರಿಗೆ ನೋಟೀಸ್ ಜಾರಿ..

ವಿವಾದಾತ್ಮಕ ಹೇಳಿಕೆ ಶಾಸಕರಾದ ರಾಜು ಕಾಗೆ ಅವರಿಗೆ ನೋಟಿಸ್ ಜಾರಿ ಚಿಕ್ಕೋಡಿ (ಮೇ.1) ಕಾಗವಾಡ ಶಾಸಕರಾದ ರಾಜು ಕಾಗೆ ಅವರು …

Leave a Reply

Your email address will not be published. Required fields are marked *