Breaking News

ಕೋಟಿ,ಕೋಟಿ ಖರ್ಚು ಮಾಡಿ ಕಟ್ಟಿದ, ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಓಪನಿಂಗ್ ಮಾಡಿದ ಸಿಎಂ

ಬೆಳಗಾವಿಯಲ್ಲಿ 16.50 ಕೋಟಿ ವೆಚ್ಚದ ಕ್ರೀಡಾ ಸಮುಚ್ಚಯಗಳ ಲೋಕಾರ್ಪಣೆ* ಬೆಳಗಾವಿ, ಡಿ.21: ಬೆಳಗಾವಿ ನಗರದಲ್ಲಿ ಸುಮಾರು 16.50 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಕ್ರೀಡಾ ಸಮುಚ್ಚಯಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರು ಚಾಲನೆ ನೀಡಿದರು. 2 ಎಕರೆ 14 ಗುಂಟೆ ಜಾಗದಲ್ಲಿ ಒಳಾಂಗಣ ಕ್ರೀಡಾಂಗಣ ಮತ್ತು ಮಹಿಳಾ ಕ್ರೀಡಾ ವಸತಿ ನಿಲಯ ನಿರ್ಮಿಸಲಾಗಿದ್ದು, ಸುಮಾರು 16.50 ಕೋಟಿ ವೆಚ್ಚ …

Read More »

ಇಂದು ಕೈ ಪಾರ್ಟಿ ಸೇರಲಿರುವ ಅಶೋಕ ಪೂಜಾರಿ….

ಬೆಳಗಾವಿ: ರಾಜ್ಯದ ಪವರ್ ಫುಲ್ ಪಾಲಿಟಿಕಲ್ ಸೆಂಟರ್ ಆಗಿರುವ ಬೆಳಗಾವಿಯಲ್ಲಿ ಅಧಿವೇಶನ ಸಂದರ್ಭದಲ್ಲೂ ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ.ಪರಿಷತ್ತಿನ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ಬಳಿಕ ಬೆಳಗಾವಿ ಕಾಂಗ್ರೆಸ್ ಪಡೆ ಫುಲ್ ಜೋಶ್ ನಲ್ಲಿದೆ. ವಿಧಾನ ಪರಿಷತ್ ಚುನಾವಣೆ ಮುಗಿದ ನಂತರ ಹಲವಾರು ನಾಯಕರು ಪಕ್ಷಾಂತರಕ್ಕೆ ಮುಂದಾಗಿದ್ದಾರೆ. ಕಳೆದ ಮಂಗಳವಾರ ಅಷ್ಟೇ ಜೆಡಿಎಸ್ ನಾಯಕ ಕೋನರೆಡ್ಡಿ ಆ ಪಕ್ಷ ತೊರೆದು, ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಈಗ ಗೋಕಾಕದ ಜೆಡಿಎಸ್ ಮುಖಂಡ ಅಶೋಕ ಪೂಜಾರಿ …

Read More »

ಶಿವಾಜಿ, ಮೂರ್ತಿ ಧ್ವಂಸಕ್ಕೆ ಯತ್ನ ಮೂವರು ಪೋಲೀಸರ ವಶಕ್ಕೆ

ಬೆಳಗಾವಿ- ಮೂವರು ಜನ ಯುವಕರು ಕಾಕತಿ ಪೋಲೀಸ್ ಠಾಣೆ ವ್ಯಾಪ್ತಿಯ ಹೊನಗಾ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಯ ಧ್ವಂಸಕ್ಕೆ ಯತ್ನಿಸುತ್ತಿರುವಾಗ,ಗ್ರಾಮಸ್ಥರು ಜಮಾಯಿಸಿ ಪೋಲೀಸರಿಗೆ ಮಾಹಿತಿ ನೀಡಿದ ಘಟನೆ ಇಂದು ಸಂಜೆ ನಡೆದಿದೆ. ಇಂದು ಸಂಜೆ ಹೊತ್ತಿಗೆ ಮೂವರು ಜನ ಯುವಕರು ಹೊನಗಾ ಗ್ರಾಮದ ಶಿವಾಜಿ ಪುತ್ಥಳಿಯ ಕಟ್ಟೆಯ ಮೇಲೆ ಏರಿ,ಗಲಾಟೆ ಮಾಡುತ್ತಿರುವಾಗ,ಗ್ರಾಮಸ್ಥರು ಜಮಾಯಿಸಿ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ‌.ಸ್ಥಳಕ್ಕೆ ಧಾವಿಸಿದ ಕಾಕತಿ ಪೋಲೀಸರು ಮೂವರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ …

Read More »

ಚಿಕ್ಕೋಡಿ, ಗೋಕಾಕನಲ್ಲಿ ಬ್ಲಡ್ ಬ್ಯಾಂಕ್ ಸ್ಥಾಪನೆಗೆ ಪ್ರಸ್ತಾವ ಸಲ್ಲಿಸಲು ಸಚಿವ ಡಾ.ಕೆ.ಸುಧಾಕರ್ ಸೂಚನೆ

ಬೆಳಗಾವಿ, ಡಿ.20(ಕರ್ನಾಟಕ ವಾರ್ತೆ): ಗೋಕಾಕ ಹಾಗೂ ಚಿಕ್ಕೋಡಿಯಲ್ಲಿ ರಕ್ತಭಂಡಾರ(ಬ್ಲಡ್ ಬ್ಯಾಂಕ್) ಸ್ಥಾಪನೆಗೆ ಸಂಬಂಧಿಸಿದಂತೆ ಕೂಡಲೇ ಪ್ರಸ್ತಾವನೆ‌ ಕಳಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಸಚಿವರಾದ ಡಾ.ಕೆ.ಸುಧಾಕರ್ ಸೂಚನೆ ನೀಡಿದರು. ಕೆ.ಎಲ್.ಇ. ಸಂಸ್ಥೆಯ ಸಭಾಂಗಣದಲ್ಲಿ ಸೋಮವಾರ(ಡಿ.20) ನಡೆದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬೆಳಗಾವಿ ದೊಡ್ಡ ಜಿಲ್ಲೆಯಾಗಿದೆ. ಸದ್ಯಕ್ಕೆ ಒಂದೇ ಬ್ಲಡ್ ಬ್ಯಾಂಕ್ ಇರುವುದರಿಂದ ಚಿಕ್ಕೋಡಿ ಹಾಗೂ ಗೋಕಾಕ ನಲ್ಲಿ …

Read More »

ಸುವರ್ಣಸೌಧದ ಎದುರು, ಚೆನ್ನಮ್ಮಾ,ರಾಯಣ್ಣನ ಮೂರ್ತಿ- ಸಿಎಂ

ಬೆಳಗಾವಿ-ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿಶನದಲ್ಲಿ ಇಂದು ವಿಧಾನಸಭೆಯಲ್ಲಿ ಶಾಸಕರು ಪಕ್ಷಾತೀತವಾಗಿ ಎಲ್ಲರೂ ಎಂಈಎಸ್ ಪುಂಡಾಟಿಕೆಯ ವಿರುದ್ಧ ಕಿಡಿಕಾರಿದರು. ಇಂದು ದಿನವಿಡಿ ಸದನದಲ್ಲಿ ಎಂಈಎಸ್ ಪುಂಡಾಟಿಕೆಯ ಕುರಿತು ಚರ್ಚೆ ನಡೆಯಿತು,ಎಲ್ಲರೂ ಇವತ್ತು ಎಂಈಎಸ್ ವಿರುದ್ಧ ಮನಬಿಚ್ವಿ ಮಾತನಾಡಿ,ಎಂಈಎಸ್ ಕಿತಾಪತಿಯ ಕುರಿತು ಆಕ್ರೋಶ ವ್ಯೆಕ್ತಪಡಿಸಿದರು. ಸಚಿವ ಈಶ್ವರಪ್ಪ ಮಾತನಾಡಿ,ಇದು ಮಹಾರಾಷ್ಟ್ರ ಏಕೀಕರಣ ಸಮೀತಿ ಅಲ್ಲ,ಇದು ಮಹಾರಾಷ್ಟ್ರ ಹೇಡಿಗಳ ಸಮೀತಿ ಎಂದು ಕಿಡಿಕಾರಿ,ಕ್ರಾಂತಿವೀರನ ಮೂರ್ತಿಯನ್ನು ವಿರೂಪಗೊಳಿಸಿದ ದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು …

Read More »

ರಾಯಣ್ಣನ ಮೂರ್ತಿ ವಿರೂಪಗೊಳಿಸಿದ ಮೂವರು ಪುಂಡರ ಅರೆಸ್ಟ್…

ಬೆಳಗಾವಿ-ಅನಗೋಳದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನ ಪ್ರಕರಣಕ್ಕೆ ಸಮಂಧಿಸಿದಂತೆ ಮೂವರು ಪುಂಡರನ್ನು ಬೆಳಗಾವಿ ಪೋಲೀಸರು ಅರೆಸ್ಟ್ ಮಾಡಿದ್ದಾರೆ. *ಪ್ರತಿಮೆ ಹಾನಿ ಮಾಡಿ ದುಷ್ಕೃತ್ತ ಎಸಗಿದ ಮೂವರ ಬಂಧನವಾಗಿದ್ದು ಬೆಳಗಾವಿ ತಾಲೂಕಿನ ಅನಗೋಳದ ಕನಕದಾಸ ಕಾಲೋನಿಯಲ್ಲಿ ನಡೆದಿದ್ದ ಘಟನೆಯ ಜಾಲವನ್ನು ಪೋಲೀಸರು ಪತ್ತೆ ಮಾಡಿದ್ದಾರೆ. ಡಿ.18ರಂದು ಪ್ರತಿಮೆಯನ್ನ ಬೀಳಿಸಿ ಖಡ್ಗ, ಗುರಾಣಿ ಬೇರ್ಪಡಿಸಿ ವಿಕೃತಿ ಮೆರದಿದ್ದ ಪುಂಡರು ಪೋಲೀಸರ ಬಲೆಗೆ ಬಿದ್ದಿದ್ದಾರೆ. ಕಲ್ಲು ತೂರಾಟ ನಡೆಸಿದ ಪುಂಡರಿಂದಲೇ ಮಧ್ಯರಾತ್ರಿ ಎರಡು ಗಂಟೆ …

Read More »

ಪರಮ ಭಕ್ತನಿಂದ, ಶಾರದೆಯ ಮಡಿಲು. ಶೃಂಗಾರ….ಗುರು..ದೇವೋ -ಅಭಯ….!!!!

ಬೆಳಗಾವಿ-ಕಲಿತ ಶಾಲೆ,ಕಲಿಸಿದ ಗುರುಗಳನ್ನು ಸ್ಮರಿಸುವುದು ಇಂದಿನ ಅಧುನಿಕ ಯುಗದಲ್ಲಿ ವಿರಳ,ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಕಲಿತ ಶಾಲೆ ಸ್ವರೂಪವನ್ನೇ ಬದಲಶಯಿಸಿ ಕಲಿಸಿದ ಗುರುಗಳನ್ನು ವಿಭಿನ್ನವಾಗಿ ಸ್ಮರಿಸಿ, ಇಂದಿನ ಜನಪ್ರತಿನಿಧಿಗಳಿಗೆ ಸ್ಪೂರ್ತಿಯ ಸೆಲೆಯಾಗಿದ್ದಾರೆ. ಶಾಸಕ ಅಭಯ ಪಾಟೀಲರು ಕಲಿತಿದ್ದು ಬೆಳಗಾವಿ ಶಹಾಪೂರ ಪ್ರದೇಶದಲ್ಲಿರುವ ಚಿಂತಾಮಣರಾವ್ ಸರ್ಕಾರಿ ಶಾಲೆಯಲ್ಲಿ ಈ ಶಾಲೆಯು ಶತಮಾನೋತ್ಸವದ ಸಂಬ್ರಮದಲ್ಲಿದ್ದು ಶತಮಾನೋತ್ಸವವನ್ನು ಶಾಸಕ ಅಭಯ ಪಾಟೀಲ ಅರ್ಥಪೂರ್ಣವಾಗಿ ಆಚರಿಸುತ್ತಿದ್ದಾರೆ. ಶತಮಾನೋತ್ಸವದ ಸವಿನೆನಪಿಗಾಗಿ ಶಾಸಕ ಅಭಯ ಪಾಟೀಲ …

Read More »

ನೌಕರಿ ಬೇಕಾ ನೌಕರಿ ಹಾಗಾದ್ರೆ ಬೆಳಗಾವಿ ಕಡೆ ಹೆಜ್ಜೆ ಹಾಕ್ರೀ…!!!

ಬೆಳಗಾವಿ: ಚಳಿಗಾಲ ಅಧಿವೇಶನದಲ್ಲೇ ಕುಂದಾನಗರಿಗೆ ಭರಪೂರ ಉದ್ಯೋಗವಕಾಶ ದೊರೆಯಲಿದ್ದು, ಡಿ. 23ರಂದು ಜರುಗಲಿರುವ ಬೃಹತ್ ಉದ್ಯೋಗ ಮೇಳಕ್ಕೆ ನಗರದ ಕೆಎಲ್ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯ ಸಜ್ಜಾಗಿದೆ.   ಬೆಳಗಾವು ದಕ್ಷಿಣ ಮತಕ್ಷೇತ್ರದ ಶಾಸಕರಾಗಿರುವ .ಅಭಯ ಪಾಟೀಲ ಎಲ್ಲ ಶಾಸಕರಿಗಿಂತಲೂ ಡಿಫರೆಂಟ್. ಬೆಳಗಾವಿಗೆ ಏನು ಬೇಕೆಂದು ಸಮಗ್ರವಾಗಿ ಅರಿತ ಅವರು ಉನ್ನತ ಶಿಕ್ಷಣ ಸಚಿವ ಡಾ.ಸಿ.ಅಶ್ವತ್ಥನಾರಾಯಣ ಗಮನಸೆಳೆದು ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದ ನೇತೃತ್ವದಲ್ಲೇ ‘ಸರ್ವರಿಗೂ ಉದ್ಯೋಗ’ ಶೀರ್ಷಿಕೆಯಡಿ ಉದ್ಯೋಗ ಮೇಳ …

Read More »

ಬೆಳಗಾವಿಯಲ್ಲಿ ತಡರಾತ್ರಿ ರಾಯಣ್ಣನ ಮೂರ್ತಿ ಧ್ವಂಸ..

ಬೆಳಗಾವಿ-ತಲವಾರ,ಬರ್ಚಿ ಹಿಡಿದುಕೊಂಡು ಬಂದ ಕಿಡಗೇಡಿಗಳು ರಾಯಣ್ಣ ಸರ್ಕಲ್ ನಲ್ಲಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯ ಮೇಲೆ ದಾಳಿ ಮಾಡಿ ಮೂರ್ತಿಯ ಮುಖವನ್ನು ಭಗ್ನಗೊಳಿಸಿ,ಖಡ್ಗವನ್ನು ಮುರಿದು ಮೂರ್ತಿಯ ಕೈಯನ್ನು ಧ್ವಂಸ ಮಾಡಿದ ಘಟನೆ ಮದ್ಯರಾತ್ರಿ ಅನಿಗೋಳದಲ್ಲಿ  ನಡೆದಿದೆ ತಡರಾತ್ರಿ ಏಕಾಏಕಿ ದಾಳಿ ಮಾಡಿದ ಕಿಡಗೇಡಿಗಳು ರಾಯಣ್ಣನ ಮೂರ್ತಿಯ ಮೇಲೆ ದಾಳಿ ಮಾಡಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಸಂಪೂರ್ಣವಾಗಿ ಭಗ್ನಗೊಳಿಸಿದ್ದಾರೆ. ರಾಯಣ್ಣನ ಮೂರ್ತಿ ಭಗ್ನಗೊಳಿಸಿ ವಿಚಾರವನ್ನು ಪೋಲೀಸರಿಗೆ ತಿಳಿಸುತ್ತಿದ್ದಂತೆಯೇ ಪೋಲೀಸರು ಸ್ಥಳಕ್ಕೆ …

Read More »

ನೈಜೇರಿಯಾದಿಂದ ಬೆಳಗಾವಿಗೂ ಬಂತು ಓಮಿಕ್ರಾನ್ ವೈರಸ್…!!

ಬೆಳಗಾವಿ- ಕೊರೋನಾ ಹೋಯ್ತಲ್ಲಾ ಅಂತಾ ಬೆಳಗಾವಿ ಜಿಲ್ಲೆಯ ಜನ ನಿಟ್ಟುಸಿರು ಬಿಡುವಾಗಲೇ ಮಹಾಮಾರಿ ಓಮಿಕ್ರಾನ್ ವೈರಸ್ ಬೆಳಗಾವಿ ಜಿಲ್ಲೆಗೂ ವಕ್ಕರಿಸಿದೆ. ನೈಜೇರಿಯಾದಿಂದ ಹೈದ್ರಾಬಾದ್ ಗೆ ಆಗಮಿಸಿ ಹೈದ್ರಾಬಾದಿನಿಂದ ಬೆಳಗಾವಿಗೆ ಆಗಮಿಸಿದ ಬೆಳಗಾವಿ ನಗರದ ಆಝಂ ನಗರದ ನಿವಾಸಿಯೊಬ್ಬನಿಗೆ ಓಮಿಕ್ರಾನ್ ಇರುವದು ದೃಡಪಟ್ಟಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ. ನೈಜೇರಿಯಾದಿಂದ ಹೈದ್ರಾಬಾದ್ ,ಅಲ್ಲಿಂದ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ಆಗಮಿಸಿದ ಓಮಿಕ್ರಾನ್ ಸೊಂಕಿತನ ಗಂಟಲು ದ್ರವ ಪರೀಕ್ಷೆ ಮಾಡಲಾಗಿತ್ತು ಆತನ …

Read More »