Breaking News

ಬೆಳಗಾವಿಯಲ್ಲಿ ಪನ್ನಿ ಮಾರಾಟ ಇಬ್ಬರನ್ನ ಅರೆಸ್ಟ್ ಮಾಡಿದ ಖಡೇಬಜಾರ ಪೊಲೀಸರು..!

ಬೆಳಗಾವಿ- ಬೆಳಗಾವಿ ಮಹಾನಗರದಲ್ಲಿ ಗಾಂಜಾ,ಪನ್ನಿ ಸೇರಿದಂತೆ ಇತರ ಮಾದಕ ವಸ್ತುಗಳ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ‌,ಎನ್ನುವ ಆರೋಪಗಳು ದಟ್ಡವಾದ ಬೆನ್ನಲ್ಲಿ ಬೆಳಗಾವಿ ಪೋಲೀಸ್ರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.

ಬೆಳಗಾವಿ: ಪನ್ನಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಬೆಳಗಾವಿಯ ಖಡೇಬಜಾರ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಳಗಾವಿಯ ಸರ್ದಾರ್ ಮೈದಾನದಲ್ಲಿ ಪನ್ನಿ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಖಡೇಬಜಾರ್ ಸಿಪಿಐ ಡಿ.ಪಿ.ನಿಂಬಾಳ್ಕರ್ ನೇತೃತ್ವದ ತಂಡವು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದೆ. ಉಜ್ವಲ್ ನಗರ 12ನೇ ಕ್ರಾಸ್‍ನ ತೌಸಿಫ್ ರಿಯಾಜ್ ನಿಜಾಮಿ(26), ಸದಾಶಿವನಗರದ ಸೂರಜ್ ಅಜಯ ಬನಸ್ಕರ(25) ಬಂಧಿತ ಆರೋಪಿಗಳು.
ಬಂಧಿತರಿಂದ 185ಪನ್ನಿ ಮಾದಕ ವಸ್ತುವಿನ ಕಾಗದ ಚೀಟಿಗಳ ಸಮೇತ ಒಟ್ಟು 48ಗ್ರಾಂ 410 ಮೀಲಿ ಗ್ರಾಂ ಇದ್ದು, ಇದರ ಒಟ್ಟು ಮೌಲ್ಯ 64,750 ರೂಪಾಯಿ ಆಗಿದೆ. 1150 ರೂಪಾಯಿ ನಗದು, ಎರಡು ಮೊಬೈಲ್ ಸೇರಿ ಒಟ್ಟು 68,600 ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಬಗ್ಗೆ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

Check Also

ಸೋಮವಾರ ಬೆಳಗಾವಿಗೆ ವಾಟಾಳ್ ನಾಗರಾಜ್

  ಬೆಳಗಾವಿ- ಮಾರ್ಚ್ 10 ರಂದು ಸೋಮವಾರ ಬೆಳಗಾವಿ ಮಹಾನಗರಕ್ಕೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಆಗಮಿಸಲಿದ್ದಾರೆ. ಸೋಮವಾರ …

Leave a Reply

Your email address will not be published. Required fields are marked *