ಬೆಳಗಾವಿ- ಕರ್ನಾಟಕ ಸರ್ಕಾರ ಮಹಾದಾಯಿ ನದಿ ನೀರನ್ನು ಡೈವೋರ್ಟ್ ಮಾಡಿದೆ ಎಂದು ಸುಳ್ಳು ಆಪಾದನೆ ಮಾಡಿ ಯೋಜನೆ ಇನ್ನಷ್ಟು ವಿಳಂಬವಾಗಬೇಕು ಎನ್ನುವ ಗೋವಾ ಸರ್ಕಾರದ ಕುತಂತ್ರಕ್ಕೆ ಮಾನ್ಯ ಸರ್ವೋಚ್ಛ ನ್ಯಾಯಾಲಯ ಬ್ರೇಕ್ ಹಾಕಿರುವ ಹಿನ್ನಲೆಯಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಈಗ ನಿರಾಳವಾಗಿದ್ದಾರೆ. ಸತ್ಯ ಅರಿಯಲು ಕರ್ನಾಟಕ,ಮಹಾರಾಷ್ಟ್ರ ,ಮತ್ತು ಗೋವಾ ಮೂರು ರಾಜ್ಯಗಳ ಇಂಜಿನಿಯರ್ ಗಳು ಸ್ಥಳಕ್ಕೆ ಭೇಟಿ ನೀಡಿ ನ್ಯಾಯಾಲಯಕ್ಕೆ ವರದಿ ಸೂಚಿಸುವಂತೆ ಆದೇಶಿಸಿರುವದರಿಂದ ಗೋವಾ ಸರ್ಕಾರಕ್ಕೆ ಸೆಟ್ …
Read More »ಕತ್ತಲೆಗೆ ಅಂಜದ ಅಂಜಲಿ,,ಭರವಸೆಯ ಬೆಳಕಾದರು…!!
ಬೆಳಗಾವಿ- ಬೆಳಗಾವಿ ಜಿಲ್ಲೆಯ ಖಾನಾಪೂರ ವಿಧಾನಸಭಾ ಕ್ಷೇತ್ರ ಶೇ 80% ರಷ್ಟು ಅರಣ್ಯ ಪ್ರದೇಶದಲ್ಲಿ ವಿಸ್ತರಿಸಿದೆ. ಇಲ್ಲಿಯ ಅರಣ್ಯರೋಧನ ಕೇಳಲು ಈ ಕ್ಷೇತ್ರದ ಶಾಸಕಿ ಅಂಜಲಿ ನಿಂಬಾಳ್ಜರ್ ಸಾಕ್ಷಾತ್ ತಾಯಿಯಾಗಿ ಅವತರಿಸಿದ್ದಾರೆ ಎನ್ನುವದಕ್ಕೆ ಅವರು ಮಾಡುತ್ತಿರುವ ಮಹತ್ಕಾರ್ಯಗಳೇ ಅದಕ್ಕೆ ಸಾಕ್ಷಿಯಾಗಿವೆ… ಖಾನಾಪೂರ ಕ್ಷೇತ್ರದ ಅತ್ಯಂತ ದಟ್ಟ ಅರಣ್ಯ ಪ್ರದೇಶದಲ್ಲಿ ವಾಸ ಮಾಡುತ್ತಿರುವ ಕಾಡು ಪ್ರದೇಶದ ಜನರಿಗೆ ಅಂಜಲಿ ನಿಂಬಾಳ್ಕರ್ ಧ್ವನಿಯಾಗಿದ್ದಾರೆ. ಕಳೆದ ಮೂವತ್ತು ವರ್ಷಗಳಿಂದ ಈ ಕ್ಷೇತ್ರದ ಯಾವುದೇ ಒಬ್ಬ …
Read More »ಮಂಗಳಸೂತ್ರವನ್ನೇ ತೆಗೆದು ಸರ್ ಇದನ್ನು ಮಾರಿ ನಿಮ್ಮ ದಂಡ ತುಂಬಿಸಿಕೊಳ್ಳಿ ಎಂದ ಮಹಿಳೆ….
ಬೆಳಗಾವಿ- ಬೆಳಗಾವಿಯಲ್ಲಿ ವಾಹನಸವಾರರಿಂದ ದಂಡ ವಸೂಲಿ ಮಾಡುವ ಟ್ರಾಫಿಕ್ ಪೋಲೀಸ್ ದಬ್ಬಾಳಿಕೆ ಯಾವ ಮಟ್ಟಕ್ಕೆ ಹೋಗಿದೆ ಎಂದು ನಾವು ಕಲ್ಪನೆ ಮಾಡಿಕೊಳ್ಳಲೂ ಸಹ ಸಾದ್ಯವಿಲ್ಲ ಅಂತಹದೊಂದು ಘಟನೆ ಭಾನುವಾರ ಮದ್ಯಾಹ್ನ ಬೆಳಗಾವಿ ನಗರದಲ್ಲಿ ನಡೆದಿದೆ. ಈ ಘಟನೆ ನಡೆದಿದ್ದು ಭಾನುವಾರ ಮದ್ಯಾಹ್ನ ,ಬೆಳಗಾವಿ ನಗರದ ಮಾರ್ಕೆಟ್ ಪೋಲೀಸ್ ಠಾಣೆ ಎದುರಿನ ಹೊಟೇಲ್ ಪೈ ಎದುರುಗಡೆ,ಈ ಘಟನೆಯ ಕುರಿತು ಸುದ್ದಿ ಮಾಡಬೇಕೋ ಅಥವಾ ಬಿಡಬಿಕೋ ಎನ್ನುವ ಗೊಂದಲದಲ್ಲಿದ್ದೆ,ಯಾಕಂದ್ರೆ ಇಷ್ಟು ದಂಡ ವಸೂಲಿ …
Read More »ಪೋಲೀಸ್ ಇನೆಸ್ಪೆಕ್ಟರ್ ಅವರನ್ನು ಹವಾಲ್ದಾರ್ ಎಂದು ಕರೆಯುವ ಠಾಣೆ ಇರೋದು ಬೆಳಗಾವಿಯಲ್ಲಿ ಮಾತ್ರ….
ಬೆಳಗಾವಿ- ಬೆಳಗಾವಿಯಲ್ಲಿ ಪೋಲೀಸ್ ಇನೆಸ್ಪೆಕ್ಟರ್ ಅವರನ್ನು ಹವಾಲ್ದಾರ್ ಎಂದು ಕರೆಯುವ ಪೋಲೀಸ್ ಠಾಣೆಯೊಂದು ಬೆಳಗಾವಿ ನಗರದಲ್ಲೇ ಇದೆ.. ಇವರು ಪೋಲೀಸ್ ಇನೆಸ್ಪೆಕ್ಟರ್ ಹುದ್ದೆಯಲ್ಲಿದ್ದರೂ ಠಾಣೆಯ ಸಿಬ್ಬಂಧಿಗಳು,ಪಿಸಿಗಳು,ಎಲ್ಲರೂ ಇವರನ್ನು ಹವಾಲ್ದಾರ್ ಸರ್ ಎಂದೇ ಕರೆಯುತ್ತಾರೆ. ಠಾಣೆಯ ವ್ಯಾಪ್ತಿಯ ಜನರೂ ಪೋಲೀಸ್ ಇನೆಸ್ಪೆಕ್ಟರ್ ಅವರನ್ನು ಹವಾಲ್ದಾರ್ ಸರ್ ಎಂದೇ ಕರೆಯುತ್ತಾರೆ. ಈ ರೀತಿ ಯಾಕೆ ? ಎನ್ನುವ ಪ್ರಶ್ನೆ ಹಲವಾರು ದಿನಗಳಿಂದ ಕಾಡುತ್ತಿತ್ತು ಈ ರೀತಿಯ ಸನ್ನಿವೇಶಕ್ಕೆ ಕಾರಣವಾಗಿರುವ ಠಾಣೆ ಬೆಳಗಾವಿಯ ಶಹಾಪೂರ್ …
Read More »ಬೆಳಗಾವಿಯಲ್ಲಿ ಇಂದು ಕೋವೀಡ್ ಶೂನ್ಯ…
ಬೆಳಗಾವಿ – ಪಕ್ಕದ ಮಹಾರಾಷ್ಟ್ರದಲ್ಲಿ ರೂಪಾಂತರಿ ಕೊರೋನಾ ಭೀತಿ ಹೆಚ್ಚಾಗಿದ್ದರೂ ಬೆಳಗಾವಿಯಲ್ಲಿ ಇವತ್ತು ಸೊಂಕಿತರು ಪತ್ತೆಯಾಗಿಲ್ಲ.ಇವತ್ತಿನ ಹೆಲ್ತ್ ಬುಲೀಟೀನ್ ರಿಪೋರ್ಟ್ ಶೂನ್ಯ…. ಬೆಳಗಾವಿ ಜಿಲ್ಲೆಯಲ್ಲಿ ಇವತ್ತು ಯಾವುದೇ ಸೊಂಕಿತರು ಪತ್ತೆಯಾಗದೇ ಇರುವದು ಸಂತಸದ ಸಂಗತಿಯಾಗಿದೆ.ಆದರೂ ಬೆಳಗಾವಿ ಜಿಲ್ಲಾಡಳಿತ ಬೆಳಗಾವಿ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಿದ್ದು ಎಲ್ಲ ರೀತಿಯ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ.
Read More »ಗಡಿಯಲ್ಲಿದ್ದರೂ, ವ್ಹೀ ಆರ್ ವೇರೀ ಸೇಫ್ – ಬೆಳಗಾವಿ ಡಿಸಿ
ಬೆಳಗಾವಿ- ಪಕ್ಕದಮಹಾರಾಷ್ಟ್ರದಲ್ಲಿ ದಿನೇದಿನೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಈಗಾಗಲೇ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದ್ದು RTPCR ಟೆಸ್ಟ್ ಕಡ್ಡಾಯ ಮಾಡಿದೆ. ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರಿಗೆ RTPCR ಟೆಸ್ಟ್ ಕಡ್ಡಾಯ ಮಾಡಿದೆ. ಬೆಳಗಾವಿಯಲ್ಲಿ ಡಿಹೆಚ್‌ಒ ಡಾ.ಎಸ್.ವಿ.ಮುನ್ಯಾಳ್ ಮಾದ್ಯಮಗಳ ಜೊತೆ ಮಾತನಾಡಿ ಈ ವಿಷಯವನ್ನು ತಿಳಿಸಿದ್ದು. ಈಗಾಗಲೇ ಚೆಕ್‌ಪೋಸ್ಟ್ ಗಳಲ್ಲಿ ಆರೋಗ್ಯ ತಪಾಸಣೆ ಕೇಂದ್ರ ಸ್ಥಾಪನೆ ಮಾಡಲಾಗಿದೆ.ಮಾರ್ಚ್ 15ರವರೆಗೆ ಎರಡನೇ ಅಲೆ ಬರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.ಹೀಗಾಗಿ ಮಾರ್ಗಸೂಚಿ ಪಾಲನೆ …
Read More »ಬೆಳಗಾವಿಯಲ್ಲಿ ಮತ್ತೇ ಬಾಲ ಬಿಚ್ಚುತ್ತಿದೆ ಕೊರೋನಾ ಮಹಾಮಾರಿ..!!
ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿ ಮತ್ತೇ ಬಾಲಬಿಚ್ಚುತ್ತಿದೆ ಯಾಕಂದ್ರೆ ಇವತ್ತಿನ ಹೆಲ್ತ್ ಬುಲಿಟೀನ್ ಬಿಡುಗಡೆಯಾಗಿದ್ದು ಇವತ್ತು ಒಂದೇ ದಿನ ಜಿಲ್ಲೆಯಲ್ಲಿ 15 ಸೊಂಕಿತರು ಪತ್ತೆಯಾಗಿದ್ದಾರೆ. ಬೆಳಗಾವಿ ನಗರದಲ್ಲಿ 6,ಜನ ಸೊಂಕಿತರು,ಖಾನಾಪೂರ ತಾಲ್ಲೂಕಿನಲ್ಲಿ 6 ಜನ ಸೊಂಕಿತರು,ಗೊಕಾಕಿನಲ್ಲಿ ಒಂದು,ಹುಕ್ಕೇರಿಯಲ್ಲಿ ಒಂದು,ಸವದತ್ತಿಯಲ್ಲಿ ಒಂದು ಹೀಗೆ ಬೆಳಗಾವಿ ಜಿಲ್ಲೆಯಲ್ಲಿ ಇವತ್ತು ಒಂದೇ ದಿನ 15 ಜನ ಕೋವೀಡ್ ಸೊಂಕಿತರು ಪತ್ತೆಯಾಗಿದ್ದಾರೆ. ಪಕ್ಕದ ಮಹಾರಾಷ್ಟ್ರ ರಾಜ್ಯದಲ್ಲಿ ಕೋವೀಡ್ ಮಹಾಮಾರಿಯ ಭೀತಿಹೆಚ್ಚಾಗಿದ್ದು,ಬೆಳಗಾವಿ ಜಿಲ್ಲೆಯಲ್ಲಿ ಅದರಲ್ಲೂ ಮಹಾರಾಷ್ಟ್ರದ …
Read More »ಗಾಂಜಾ ಮಾರಾಟಕ್ಕೆ ಹ್ಯಾಂಡ್ ಬ್ರೇಕ್ ಹಾಕುತ್ತಿದೆ ಖಾಕಿ ಪಡೆ….
ಬೆಳಗಾವಿ-ಬೆಳಗಾವಿ ಮಹಾನಗರ ಗಾಂಜಾ ಮತ್ತು ಮಾದಕ ವಸ್ತುಗಳ ಮಾರಾಟದಿಂದ ಸಂಪೂರ್ಣವಾಗಿ ಮುಕ್ತವಾಗಬೇಕು ಎನ್ನುವ ಸಂಕಲ್ಪ ಮಾಡಿರುವ ಬೆಳಗಾವಿ ಡಿಸಿಪಿ ವಿಕ್ರಂ ಅಮಟೆ ಅವರು ಬೆಳಗಾವಿ ನಗರದಲ್ಲಿ ಎಡೆಬಿಡದೆ ದಾಳಿಗಳನ್ನು ಮಾಡುವ ಮೂಲಕ ಗಾಂಜಾ ಮಾರಾಟಕ್ಕೆ ಹ್ಯಾಂಡ್ ಬ್ರೇಕ್ ಹಾಕುತ್ತಿದ್ದಾರೆ. ನಿನ್ನೆ ರಾತ್ರಿ ಡಿಸಿಪಿ ವಿಕ್ರಂ ಅಮಟೆ ಅವರ ಮಾರ್ಗದರ್ಶನ ದಲ್ಲಿ ಮಾರ್ಕೆಟ್ ಎಸಿಪಿ ಕಟ್ಟೀಮನಿ ಬೆಳಗಾವಿ ನಗರದ ಶಹಾಪೂರ ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲಿ ದಾಳಿ ಮಾಡಿ ಓರ್ವ ಆರೋಪಿಯನ್ನು ಬಂಧಿಸಿ …
Read More »ಯಲ್ಲಮ್ಮ, ಚಿಂಚಲಿ ಮಾಯಕ್ಕ ದೇವಿ, ದರ್ಶನಕ್ಕೆ ನಿರ್ಬಂಧ
ಬೆಳಗಾವಿ- ಕೋವಿಡ್ ರೂಪಾಂತರ ಭೀತಿ ಹಿನ್ನಲೆಯಲ್ಲಿ ಗಡಿ ಭಾಗದಲ್ಲಿ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಸವದತ್ತಿ ಯಲ್ಲಮ್ಮ, ಚಿಂಚಲಿ ಮಾಯಕ್ಕ ದೇವಿ ದೇವಸ್ಥಾನಗಳ ಸಾರ್ವಜನಿಕ ದರ್ಶನಕ್ಕೆ ನಿರ್ಬಂಧ ಮಾಡಲಾಗಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಆದೇಶ..ಹೀಗಿದೆ. ಕೋವಿಡ್-19 ಪ್ರಸ್ತಾವನೆಯಲ್ಲಿ ವಿವರಿಸಿದಂತೆ ಸಾರ್ವಜನಿಕರ ಮತ್ತು ಭಕ್ತಾಧಿಗಳ ಆರೋಗ್ಯದ ಹಿತದೃಷ್ಟಿಯಿಂದ (ಕರೋನಾ)ರೂಪಾಂತರಿ ವೈರಾಣುವಿನ ಹರಡುವಿಕೆಯನ್ನು ನಿಯಂತ್ರಿಸುವ ಕುರಿತು ಮುಂಜಾಗೃತಾ ಕ್ರಮವಾಗಿ ಎಂ.ಜಿ.ಹಿರೇಮಠ, ಭಾ.ಆ.ಸೇ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ, ಬೆಳಗಾವಿ ಜಿಲ್ಲೆ ಆದ …
Read More »ಹುಗ್ಗಿ ಊಟ….ವಿದ್ಯಾರ್ಥಿಗಳಿಗೆ ಪಾಠ….ದೂರವಾಯ್ತು ಸಮಸ್ಯೆಗಳ ಕಾಟ….!!!
ಬೆಳಗಾವಿ, – ಜನರ ಅಹವಾಲುಗಳನ್ನು ಆಲಿಸುವುದರ ಜತೆಗೆ ಸರ್ಕಾರದ ಸಹಾಯ-ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವ ಆಶಯದೊಂದಿಗೆ ಆರಂಭಗೊಂಡಿರುವ “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ” ಎಂಬ ಮೊದಲ ವಿನೂತನ ಕಾರ್ಯಕ್ರಮ ನಿರೀಕ್ಷೆಗೂ ಮೀರಿ ಯಶಕಂಡಿತು. ಬೈಲಹೊಂಗಲ ತಾಲ್ಲೂಕಿನ ಬೈಲವಾಡ ಗ್ರಾಮದಲ್ಲಿ ಶನಿವಾರ (ಫೆ.20) ನಡೆದ ಮೊದಲ ಕಾರ್ಯಕ್ರಮದಲ್ಲಿ ಸ್ಥಳೀಯ ಜನರು ಅತ್ಯುತ್ಸಾಹದಿಂದ ಭಾಗವಹಿಸಿದರು. ಜನರ ಸಮಸ್ಯೆಗಳಿಗೆ ಧ್ವನಿಯಾಗುವ ನಿಟ್ಟಿನಲ್ಲಿ ಹಳ್ಳಿಯ ಕಡೆ ಹೆಜ್ಜೆ ಹಾಕಿರುವ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರನ್ನು ಗ್ರಾಮಸ್ಥರು ಆತ್ಮೀಯವಾಗಿ …
Read More »