Breaking News

Breaking News

ಸಿಡಿ ಪಾಲಿಟೀಕ್ಸ್ ಶುರು ಆಗಿದ್ದೇ ಬೆಳಗಾವಿಯಿಂದ ….!!!

ಬೆಳಗಾವಿ- ಸಿಡಿ ಇದೇ ಅದನ್ನು ರಿಲೀಸ್ ಮಾಡ್ತೀವಿ ,ನಮಗೆ ಅನುದಾನ ಕೊಡದಿದ್ದರೆ ಅದನ್ನು ರಿಲೀಸ್ ಮಾಡ್ತೀವಿ ಅಂತಾ ಈಗ ಸಿಎಂ ಯಡಿಯೂರಪ್ಪ ಅವರಿಗೆ ಹೆದರಿಸಿ,ಬೆದರಿಸಿ ಅನುದಾನ ಪಡೆಯುತ್ತಿದ್ದಾರೆ ಎಂದು ದೃಶ್ಯ ಮಾದ್ಯಮಗಳಲ್ಲಿ ಪ್ರಕಟವಾಗಿದೆ. ಮಾಜಿ ಕೇಂದ್ರ ಸಚಿವ ಬಸವರಾಜ್ ಯತ್ನಾಳ ಅವರು ಸಿಡಿ ತೋರಿಸಿ ಕೆಪಿಸಿಸಿ ಅದ್ಯಕ್ಷ ಡಿ.ಕೆ ಶಿವಕುಮಾರ್ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ,ಬೆಂಗಳೂರಿನ ಕಾಂಗ್ರೆಸ್ ಶಾಸಕ ಜಮೀರ ಅಹ್ಮದ್ ಅವರು ವಿಶೇಷ ಅನುದಾನ ಪಡೆಯುತ್ತಿದ್ದಾರೆ ಎಂದು …

Read More »

ಮಹಾ ಸಿಎಂ ಠಾಖ್ರೆ ವಿರುದ್ಧ ಕನ್ನಡ ಸಂಘಟನೆಗಳ ಗರಂ…

ಳಗಾವಿ- ಪದೇಪದೇ ಗಡಿ ಕ್ಯಾತೆ ತಗೆಯುತ್ತಿರುವ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಬೆಳಗಾವಿಯಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯೆಕ್ತಪಡಿಸಿವೆ. ಉದ್ಧವ್ ಠಾಕ್ರೆ ಶವಯಾತ್ರೆ ಮಾಡುವ ಮೂಲಕ ಕನ್ನಡಪರ ಸಂಘಟನೆಗಳ ಆಕ್ರೋಶ ವ್ಯೆಕ್ತಪಡಿಸಿ,ಕನ್ನಡ ಸಾಹಿತ್ಯ ಭವನದಿಂದ ಚೆನ್ನಮ್ಮ ವೃತ್ತಕ್ಕೆ ಉದ್ಧವ ಠಾಕ್ರೆ ಪ್ರತಿಕೃತಿ ತಂದು ಶವಯಾತ್ರೆ ಮಾಡಿದ್ದಾರೆ, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ಸಚಿವ ಏಕನಾಥ ಶಿಂಧೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಕ್ಷಮೆಯಾಚಿಸಬೇಕು, …

Read More »

ಬೆಳಗಾವಿಗೆ ಆಗಮಿಸಿದ, ಅಮಿತ್ ಶಾ…

ಬೆಳಗಾವಿ, – ಜನಸೇವಕ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಇಲ್ಲಿಗೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಾಯಿತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜತೆ ಆಗಮಿಸಿದ ಕೇಂದ್ರ ಗೃಹ ಸಚಿವರನ್ನು ಬರಮಾಡಿಕೊಳ್ಳಲಾಯಿತು. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ ಗಣ್ಯರನ್ನು ಸ್ವಾಗತಿಸಿದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ …

Read More »

ಗೋ ಬ್ಯಾಕ್, ಎಂದು ಘೋಷಣೆ ಕೂಗಿದವರು,ಅರೆಸ್ಟ್ ಆದ್ರು…!!

ಬೆಳಗಾವಿ- ಕೇಂದ್ರ ಗೃಹ ಸಚಿವ ಅಮೀತ ಶಾ ಅವರು ಇಂದು ಬೆಳಗಾವಿಗೆ ಬರುತ್ತಿರುವ ಹಿನ್ನಲೆಯಲ್ಲಿ ,ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಪೋಲೀಸರು ಬಂಧಿಸಿದ್ದಾರೆ.. ಇಂದು ಬೆಳ್ಳಂ ಬೆಳಿಗ್ಗೆ ವಿವಿಧ ರೈತಪರ ಸಂಘಟನೆಗಳು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಪ್ರತಿಭಟಿಸಿದರು,ಚನ್ನಮ್ಮ ವೃತ್ತದಿಂದ ಡಿಸಿ ಕಚೇರಿಯವರೆಗೆ ಉರುಳು ಸೇವೆಮಾಡಿದ ರೈತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಅಮೀತ ಶಾ ಗೋ ಬ್ಯಾಕ್…ರೈತ ವಿರೋಧಿ ಕಾನೂನು ಜಾರಿಗೆ …

Read More »

ಕೋರೆ ಅಂಗಳದಲ್ಲಿ ಬಿಜೆಪಿ ಕೋರ್ ಕಮೀಟಿ….!!!

ಬೆ ಬೆಳಗಾವಿ-ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರಲಿ ಅಥವಾ ಬಿಜೆಪಿ ಇರಲಿ,ಕೇಂದ್ರ ಸಚಿವರು,ರಾಷ್ಟ್ರೀಯ ನಾಯಕರು ಯಾರೇ ಆಗಲಿ ಅವರು ಬೆಳಗಾವಿಗೆ ಬಂದರೆ,ಅವರು ಕಡ್ಡಾಯವಾಗಿ ಕೆ ಎಲ್ ಇ ಗೆ ಹೋಗಲೇಬೇಕು. ಈ ವಿಷಯದಲ್ಲಿ ಡಾ. ಪ್ರಭಾಕರ ಕೋರೆ ಯಾವತ್ತೂ ಫೇಲ್ ಆಗಿಲ್ಲ,ಮುಂದೆ ಆಗುವದೂ ಇಲ್ಲ,ಯಾಕಂದ್ರೆ ಪ್ರಭಾಕರ ಕೋರೆ ಎನ್ನುವ ಹೆಸರಿನಲ್ಲೇ ಪವರ್ ಅಡಗಿದೆ,ಮಾಜಿ…ಎನ್ನಯವ ಪದವನ್ನು ಅವರು ಸಹಿಸಿಕೊಂಡಿಲ್ಲ,ಮಾಜಿ ರಾಜ್ಯಸಭಾ ಸದಸ್ಯ ಆಗಿರುವ ಪ್ರಭಾಕರ ಕೋರೆ ಈಗ ಹಾಲಿ ಆಗಲು ಎಲ್ಲಿಲ್ಲದ ಕಸರತ್ತು …

Read More »

ನಾಳೆ ಅಮೀತ ಶಾ ಕಾರ್ಯಕ್ರಮಕ್ಕೆ ಲಕ್ಷ..ಲಕ್ಷ..ಜನ…

ಬೆಳಗಾವಿ- ಕೇಂದ್ರ ಗೃಹ ಸಚಿವ,ಬಿಜೆಪಿಯ ಚಾಣಕ್ಯ ಎಂದೇ ಪ್ರಸಿದ್ಧಿ ಪಡೆದಿರುವ ಅಮೀತ ಶಾ ಅವರು ನಾಳೆ ಕುಂದಾನಗರಿ ಬೆಳಗಾವಿಗೆ ಆಗಮಿಸುತ್ತಿದ್ದು ಬೆಳಗಾವಿ ಈಗ ಬಿಜೆಪಿ ಮಯವಾಗಿದೆ. ನಾಳೆ ಮಧ್ಯಾಹ್ನ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಅಮೀತ ಶಾ ಅವರ ಕಾರ್ಯಕ್ರಮ ನಡೆಯಲಿದ್ದು,ಇಲ್ಲಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ.ಈ ಕಾರ್ಯಕ್ರಮಕ್ಕೆ ಲಕ್ಷ.. ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಬೆಳಗಾವಿಯಲ್ಲಿ ಅಮೀತ ಶಾ ಅವರಿಗೆ ಸ್ವಾಗತ ಕೋರಿ ದೊಡ್ಡ ದೊಡ್ಡ ಬ್ಯಾನರ್ ಗಳನ್ನು …

Read More »

ಮಂತ್ರಿಯಾದ ಬಳಿಕ ಅಖಂಡ ಕರ್ನಾಟಕದ ಮಂತ್ರ ಜಪಿಸಿದ ಸಾಹುಕಾರ್…!

ಬೆಳಗಾವಿ ಯಡಿಯೂರಪ್ಪ ನೇತೃತ್ವದ ಸರಕಾರದಲ್ಲಿ ನನಗೆ ಸಚಿವ ಸ್ಥಾನ ಸಿಗುವಲ್ಲಿ ವಿಳಂಬವಾದರೂ ಸಿಎಂ ನನ್ನ ಮೇಲೆ ವಿಶ್ವಾಸ ಇಟ್ಟು ಸಚಿವ ಸ್ಥಾನ ನೀಡಿದ್ದಾರೆ. ಉತ್ತರ ಕರ್ನಾಟಕದ ಜತೆ ಜತೆಗೆ ಅಖಂಡ ಕರ್ನಾಟಕದ ಅಭಿವೃದ್ದಿಗೆ ಶ್ರಮಿಸುವೆ ಎಂದು ನೂತನ ಸಚಿವ ಉಮೇಶ ಕತ್ತಿ ಹೇಳಿದರು. ಶುಕ್ರವಾರ ನಗರದ ಲಕ್ಷ್ಮೀ ಟೇಕಡಿಯ ಹುಕ್ಕೇರಿ ಹಿರೇಮಠದ ಶಾಖಾ ಮಠಕ್ಕೆ ಭೇಟಿ ನೀಡಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರ ಆಶೀರ್ವಾದ ಪಡೆದು ಮಾತನಾಡಿದರು. ರಾಜ್ಯದಲ್ಲಿ …

Read More »

ಬೆಳಗಾವಿಯಲ್ಲಿ ಅಮೀತ ಶಾ ಕೋರ್ ಕಮೀಟಿ ಮೀಟೀಂಗ್ ಮಾಡ್ತಾರೆ…!!

ಬೆಳಗಾವಿ-ರಾಜ್ಯಕ್ಕೆ ಎರಡು ದಿನ ಅಮಿತ್ ಶಾ ಬರ್ತಾಯಿದ್ದಾರೆ 16 ರಂದು ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಬರ್ತಾರೆ. ಬೆಂಗಳೂರಿನಲ್ಲಿ ಇಲಾಖೆ ಪರಿಶೀಲನೆ, ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಕೊಡ್ತಾರೆ. ಭದ್ರವಾತಿಗೆ ಕಾರ್ಯಕ್ರಮಕ್ಕೆ ಹೋಗಿ ಮರಳಿ ಬೆಂಗಳೂರಿಗೆ ವಾಸ್ತವ್ಯಕ್ಕೆ ಬರಲಿದ್ದಾರೆ. 17 ರಂದು ಬೆಳಗ್ಗೆ 10.30ಕ್ಕೆ ಅಮಿತ್ ಶಾ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣ ಕ್ಕೆ ಬರಲಿದ್ದಾರೆ ಎಂದು ಬೆಳಗಾವಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ …

Read More »

ರಮೇಶ್ ಹಾಕಿದ್ದು ಮುಸ್ಲೀಂ ಟೋಪಿ……!

ಬೆಳಗಾವಿ ರಮೇಶ ಜಾರಕಿಹೊಳಿ ಮುಸ್ಲಿಂ ಟೋಪಿ ಹಾಕಿದ್ದು ನೋಡಿದ್ದೇವೆ ಆದರೆ ಕರಿ ಟೋಪಿ ಹಾಕಿದ್ದು ನೋಡಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ಶುಕ್ರವಾರ ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ರಮೇಶ ಜಾರಕಿಹೊಳಿ ಮುಸ್ಲಿಂ ಪರವಾಗಿ ಹೋರಾಟ ಮಾಡಿದ್ದರು. ಮುಂದೆಯೂ ಇರುತ್ತಾರೆ ಎನ್ನುವ ವಿಶ್ವಾಸ ಇದೆ.ರಮೇಶ ಜಾರಕಿಹೊಳಿ ಅಧಿಕಾರ ಎಂಜಾಯ್ ಮಾಡಲಿ ಆದರೆ ಹಿಂದಿನ ಹೋರಾಟ ಮುಂದುವರೆಸಬೇಕು ಎಂದು ಸಲಹೆ‌ ನೀಡಿದರು. ನಮ್ಮ ತಂದೆ ಪತ್ರ ಚಳವಳಿಯಲ್ಲಿ …

Read More »

ಪ್ರಮಾಣ ವಚನ ಸ್ವೀಕರಿಸಿದ ಹುಕ್ಕೇರಿ ಸಾಹುಕಾರ್….!!

ಬೆಳಗಾವಿ- ಬೆಳಗಾವಿ ಜಿಲ್ಲೆಯ ರಾಜಕೀಯ ಮನೆತನದ ಹಿರಿಯ ಸದಸ್ಯ ಉಮೇಶ್ ಕತ್ತಿ ಇಂದು ಕೊನೆಗೂ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಅಚ್ಚರಿಯ ಬೆಳವಣಿಗೆಯಲ್ಲಿ ಉಮೇಶ್ ಕತ್ತಿ ಅವರಿಗೆ ಕೊನೆಗೂ‌ ಮಂತ್ರಿ ಸ್ಥಾನ ಸಿಕ್ಕಿದ್ದು ಎಂ‌ ಟಿ ಬಿ ನಾಗರಾಜ್ ಅರವಿಂದ ಲಿಂಬಾವಳಿ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿದೆ, ರಾಜಾ ಹುಲಿ ಸಂಪುಟಕ್ಕೆ ಒಟ್ಟು 7 ಜನ ಹೊಸ ಸಚಿವರು ಸೇರ್ಪಡೆ ಆಗಿದ್ದಾರೆ..

Read More »