ಬೆಳಗಾವಿ-ಬಿಜೆಪಿ ಶಾಸಕ ಮಹಾದೇವಪ್ಪ ಯಾದವಾಡ ಕಚೇರಿಯನ್ನೂ ಕಳ್ಳರು ಟಾರ್ಗೆಟ್ ಮಾಡಿದ್ದು ಕಚೇರಿಯಲ್ಲಿ ಕಳ್ಳತನ ನಡೆದಿದೆ. ಬೆಳಗಾವಿ ಜಿಲ್ಲೆ ರಾಮದುರ್ಗದ ಪಟ್ಟಣದಲ್ಲಿರುವ ಶಾಸಕರ ಕಚೇರಿಯಲ್ಲಿ ತಡರಾತ್ರಿ ಕಳ್ಳತನ ನಡೆದಿದೆ.ಮಹಾದೇವಪ್ಪ ಯಾದವಾಡ್, ರಾಮದುರ್ಗ ಬಿಜೆಪಿ ಶಾಸಕರಾಗಿದ್ದು ಇವರ ಕಚೇರಿ ಕಳ್ಳರ ಕಣ್ಣಿಗೆ ಬಿದ್ದಿದೆ. ಕಚೇರಿ ಬೀಗ ಮುರಿದು ದಾಖಲೆಗಳನ್ನು ಚೆಲ್ಲಾಪಿಲ್ಲಿ ಮಾಡಿದ ಮುಸುಕುಧಾರಿಗಳು. ಕಚೇರಿ ಬಳಿಯ ಸಿಸಿ ಕ್ಯಾಮರಾದಲ್ಲಿ ಮುಸುಕುಧಾರಿಗಳ ಚಲನವಲನ ಸೆರೆಯಾಗಿದೆ ಕಚೇರಿಯಲ್ಲಿ ಏನು ಕಳ್ಳತನವಾಗಿದೆ ಎಂಬ ಗುಟ್ಟು ಬಿಟ್ಟು ಕೊಡದ …
Read More »ಕಿತವಾಡ ಫಾಲ್ಸ್ ನಲ್ಲಿ ಬೆಳಗಾವಿಯ ಯುವಕ ನಾಪತ್ತೆ….
ಬೆಳಗಾವಿ-ಕರ್ನಾಟಕದ ಗಡಿ ಅಂಚಿನಲ್ಲಿರುವ,ಮಹಾರಾಷ್ಟ್ರ ಚಂದಗಡ ಹದ್ದಿಯಲ್ಲಿ ಬರುವ ಕಿತವಾಡ ಫಾಲ್ಸ್ ನಲ್ಲಿ ಬೆಳಗಾವಿಯ ಯುವಕನೊಬ್ಬ ನಾಪತ್ತೆಯಾಗಿದ್ದಾನೆ. ಬೆಳಗಾವಿಯ ಮಾಳಮಾರುತಿ ಬಡಾವಣೆಯ ನಿವಾಸಿ ಅಭಿಷೇಕ ಸಜ್ಜನ್ (24) ಎಂಬಾತ ಕಿತವಾಡ ಮಿನಿ ಜಲಪಾತದಲ್ಲಿ ನಾಪತ್ತೆಯಾಗಿದ್ದು,ಚಂದಗಡ ಪೋಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಭಿಷೇಕ ಸಜ್ಜನ್ ಇಂದು ಬೆಳಿಗ್ಗೆ ತನ್ನ ಕುಟುಂಬ ಸದಸ್ಯರೊಂದಿಗೆ ಕಿತವಾಡ ಜಲಪಾತಕ್ಕೆ ತೆರಳಿದ್ದ,ಮಧ್ಯಾಹ್ನ 2-30 ರ ಸುಮಾರಿಗೆ ಜಲಪಾತದಲ್ಲಿ ಜಲ ವಿಹಾರ ಮಾಡುತ್ತಿರುವಾಗ ನಾಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದ್ದು ಚಂದಗಡ ಪೋಲೀಸರು …
Read More »ದನಗೋಳದಾವ್ರ…ಮನಿಗೋಳದಾವ್ರ,ಅಂಗಡಿಗೋಳದಾವ್ರ,ಹುಷಾರ್ಲೇ ಮಲಕೋರ್ರೀಪೋ..!!
ಬೆಳಗಾವಿ- ಗಡಿಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ.ಥರ,ಥರಾ ನಡುಗುವ ಚಳಿಯಲ್ಲಿ ಬೆಚ್ಚಗೆ ಕವದಿ ಹೊತ್ತು ಬೆಚ್ಚಗೆ ಮಲಗಿದ್ರೆ ಬೆಳಗಾಗುವಷ್ಟರಲ್ಲಿ ಬೆಚ್ವಿ ಬಿಳೋದು ಗ್ಯಾರಂಟಿ….. ಅಥಣಿ ಚಿಕ್ಕೋಡಿ,ನಿಪ್ಪಾಣಿ,ರಾಯಬಾಗ ಸೇರಿದಂತೆ,ಮಹಾರಾಷ್ಟ್ರ ಗಡಿಭಾಗಕ್ಕೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಡಂಗುರ ಸಾರುವ ಮೂಲಕ ಸಾರ್ವಜನಿಕರನ್ನು ಎಚ್ಚರಿಸುವ ಕಾರ್ಯ ನಡೆದಿದೆ. ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳ ಸೂಚನೆಯಂತೆ,ಗಡಿ ಭಾಗದ,ಗ್ರಾಮಗಳಲ್ಲಿ,ದನಗೋಳದಾವ್ರ…ಮನಿಗೋಳದಾವ್ರ,ಅಂಗಡಿಗೋಳದಾವ್ರ,ಹುಷಾರ್ಲೇ,ಮಲಕೋರ್ರೀಪೋ..!! ಎಂದು ಡಂಗುರ ಸಾರುತ್ತಿರುವದು ಸಾಮಾನ್ಯವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಈಗ ಮೈಕೊರೆಯುವ ಚಳಿ. …
Read More »ಸಚಿವ ರಮೇಶ್ ಜಾರಕಿಹೊಳಿ ನನ್ನ ಸ್ನೇಹಿತ – ಅಶೋಕ ಪೂಜಾರಿ
ಬೆಳಗಾವಿ-ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಾಣ ಮಾಡಲಾಗಿದೆ ಅಂತಾ ಜನ ನಂಬಿದ್ದರು,ಉತ್ತರ ಕರ್ನಾಟಕದ ಅಭಿವೃದ್ಧಿ ಆಗಬಹುದೆಂಬ ಅತೀವ ಆತ್ಮವಿಶ್ವಾಸ ಜನರಿಗೆ ಇತ್ತು ಆದ್ರೆ ಸುವರ್ಣಸೌಧ ನಿರ್ಮಿಸಿದ ಉದ್ದೇಶ ಇನ್ನುವರೆಗೆ ಈಡೇರಿಲ್ಲ ಎಂದು ಉತ್ತರ ಕರ್ನಾಟಕ ಅಭಿವೃದ್ಧಿ ಹೋರಾಟ ಸಮೀತಿಯ ಅದ್ಯಕ್ಚ ಅಶೋಕ ಪೂಜಾರಿ ಅಸಮಾಧಾನ ವ್ಯೆಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು,ಸರ್ಕಾರ ಬೆಳಗಾವಿಯ ಸುವರ್ಣಸೌಧದಲ್ಲಿ, ಅಧಿವೇಶನ ನಡೆಸುತ್ತಿಲ್ಲ,ಈ ಸುವರ್ಣಸೌಧದಲ್ಲಿ ಲೈಟ್ ಹಚ್ಚೋರು ಗತಿ ಇಲ್ಲ,ಸುವರ್ಣಸೌಧ ಉತ್ತರ ಕರ್ನಾಟಕ ಆಡಳಿತಾತ್ಮಕ …
Read More »ಕೂಡಲಸಂಗಮದಿಂದ ಬೆಂಗಳೂರಿನವರೆಗೆ ಬೃಹತ್ ಪಾದಯಾತ್ರೆ
ಬೆಳಗಾವಿ -ಲಿಂಗಾಯತ ಪಂಚಮಸಾಲಿ ಸಮುದಾಯವನ್ನು 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ 4ನೇ ಹಂತದ ಚಳವಳಿಯನ್ನು ಜ. 14 ರಂದು ಕೂಡಲಸಂಗಮದಿಂದ ಬೆಂಗಳೂರಿನ ವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು. ಶನಿವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಪ್ರತಿ ವರ್ಷ ನಮ್ಮ ಭಕ್ತರು ಅದ್ದೂರಿಯಾಗಿ ಜನ್ಮ ದಿನಾಚಾರಣೆ ಮಾಡುತ್ತಿದ್ದರು. ಆದರೆ ಕೋವಿಡ್-19 ಇರುವುದರಿಂದ ಡಿ.23 ರಂದು ರಾಜ್ಯಾದ್ಯಂತ ರಕ್ತದಾಸೋಹ ಮಾಡಲು …
Read More »ಲೋಕಲ್ ಕಾರ್ಬಾರ್..ಮಟನ್ ಪಾರ್ಟಿ…ಉಳವಿ ಪ್ರವಾಸ…!!!
ಬೆಳಗಾವಿ- ಬೆಳಗಾವಿ ತಾಲ್ಲೂಕಿನ ಪುಟ್ಟ ಗ್ರಾಮ,ಈ ಗ್ರಾಮದಲ್ಲಿ ಬರೋದು ಒಂದೇ ವಾರ್ಡು,ಎರಡು ಸ್ಥಾನ.ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದ್ದು ಇನ್ನೊಂದು ಸ್ಥಾನಕ್ಕೆ ಗ್ರಾಮದ ಇಬ್ಬರು ಬಲಾಡ್ಯರ ನಡುವೆ ಬಿರುಸಿನ ಸ್ಪರ್ದೆ ನಡೆಯುತ್ತಿದೆ. ಬೆಳಗಾವಿ ತಾಲ್ಲೂಕಿನ ಮುತ್ನಾಳ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ವಿರುಪನಕೊಪ್ಪ ಗ್ರಾಮದಲ್ಲಿ ನಡೆದಿರುವ ಲೋಕಲ್ ವಾರ್ ನಲ್ಲಿ ಗ್ರಾಮದ ಇಬ್ಬರು ಗೌಡ್ರು ಸ್ಪರ್ದೆ ಮಾಡಿದ್ದಾರೆ.ಇಬ್ಬರ ನಡುವೆ ನಡೆಯುತ್ತಿರುವ ಪೈಪೋಟಿ ನೋಡಿದ್ರೆ ಇದೊಂದು ಮಿನಿ ವಿಧಾನಸಭೆ ಸಮರ ಎನ್ನುಂತೆ ಕಾಣುತ್ತಿದೆ. …
Read More »ಬೆಳಗಾವಿಯಲ್ಲಿ ಹೆಂಡತಿಯ ಮರ್ಡರ್ ಮಾಡಿದ ಗಂಡ…
ಬೆಳಗಾವಿ- ಗಂಡನೊಬ್ಬ ತನ್ನ ಹೆಂಡತಿಗೆ ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ಬೆಳಗಾವಿಯ ಅಟೋ ನಗರದಲ್ಲಿ ನಡೆದಿದೆ. 32 ವರ್ಷದ ಸಕೂಬಾಯಿ ಲಮಾಣಿ ಕೊಲೆಯಾದ ದುರ್ದೈವಿಯಾಗಿದ್ದು,ಘಟನಾ ಸ್ಥಳಕ್ಕೆ ಮಾಳಮಾರುತಿ ಠಾಣೆಯ ಪೋಲೀಸರು ದೌಡಾಯಿಸಿದ್ದಾರೆ. ಕೊಲೆಗೆ ಕಾರಣ ಏನೆಂಬುದು ಗೊತ್ತಾಗಿಲ್ಲ ಪೋಲೀಸರು ತನಿಖೆ ಆರಂಭಿಸಿದ್ದಾರೆ.
Read More »ನಾನು ಬಿಜೆಪಿ ಸೇರಲ್ಲ. ನನ್ನದು ಬಸವ ಕೃಪ ಅದು ಕೇಶವ ಕೃಪಾ..!!
ಬೆಳಗಾವಿ- ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಿ.ಎಂ.ಇಬ್ರಾಹಿಂ ಅಸಮಾಧಾನ ವ್ಯೆಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ಹಳಬರು, ಹೊಸಬರ ಪರಿಚಯ ಮಾಡಿಕೊಂಡಿದ್ದೇನೆ. ರಾಜ್ಯದಲ್ಲಿ ರಾಜಕೀಯ ವ್ಯವಸ್ಥೆ ಕೆಟ್ಟು ಹೋಗಿದೆ, ಹೀಗಾಗಿ ಎಲ್ಲಾ ಸಮುದಾಯದ ಮುಖಂಡರ ಜೊತೆಗೆ ಚರ್ಚೆ ಮಾಡಿರುವೆ. ಅವರಿಂದ ಒಳ್ಳೆಯ ಅಭಿಪ್ರಾಯ ಬಂದಿದೆ.ಮುಂದೆ ಒಂದು ರಾಜಕೀಯ ತೀರ್ಮಾನ ಮಾಡ್ತಿನಿ.ನಾನು ಬಿಜೆಪಿ ಸೇರಲ್ಲ.ನನ್ನದು ಬಸವ ಕೃಪ ಅದು ಕೇಶವ ಕೃಪಾ.. ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ. ಕಾಂಗ್ರೆಸ್, ಜೆಡಿಎಸ ಯಥಾ ಪ್ರಕಾರ ನಡೆಯುತ್ತಿದೆ,ಬದಲಾವಣೆಗೆ ಜನರು …
Read More »ಬೆಳಗಾವಿ ಲೋಕಸಭಾ ಚುನಾವಣೆ ಇಬ್ಬರ ಹೆಸರು ಹೈಕಮಾಂಡ್ ಗೆ…
ಬೆಳಗಾವಿ- ಬೆಳಗಾವಿ ಲೋಕಸಭಾ ಉಪ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ದಿಸಲು ಹಲವಾರು ಜನ ಆಕಾಂಕ್ಷಿಗಳು ಮುಂದೆ ಬಂದಿದ್ದಾರೆ.ಆದ್ರೆ ಅತೀ ಶೀಘ್ರದಲ್ಲೇ ಇಬ್ಬರು ಪ್ರಬಲ ಆಕಾಂಕ್ಷಿಗಳ ಹೆಸರನ್ನು ಹೈಕಮಾಂಡ್ ಗೆ ಕಳುಹಿಸುತ್ತೇವೆ.ಕಾಂಗ್ರೆಸ್ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ ಎಂದು ಕೆಪಿಸಿಸಿ ಅದ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದರು. ಬೆಳಗಾವಿಯಲ್ಲಿ ನಡೆದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರ ಸಹೋದರಿಯ ಮಗಳ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಅವರ …
Read More »ಸದ್ದಿಲ್ಲದೇ ಬೆಳಗಾವಿಗೆ ಆಗಮಿಸಿರುವ ಸಿಎಂ….
ಬೆಳಗಾವಿ-ಕಾಂಗ್ರೆಸ್ ಪಕ್ಷದ ಸಹವಾಸ ಬೇಡ ಎಂದು ತೀರ್ಮಾಣಿಸಿರುವ ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹೀಂ ಬೆಳಗಾವಿಗೆ ಆಗಮಿಸಿದ್ದಾರೆ. ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆ ಆಗಲಿರುವ ಅವರು ತಮ್ಮ ಬೆಂಬಲಿಗರನ್ನು ಭೇಟಿಯಾಗಿ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಬೆಳಗಾವಿಯ ಹೊಟೆಲ್ ಈಫಾದಲ್ಲಿ ವಾಸ್ತವ್ಯ ಮಾಡಿರುವ ಸಿಎಂ ಇಬ್ರಾಹಿಂ ಅವರನ್ನು ಅವರ ಅಭಿಮಾನಿಗಳು ವಿಶೇಷವಾಗಿ ಜೆಡಿಎಸ್ ನಾಯಕರು ಭೇಟಿಯಾಗುತ್ತಿದ್ದಾರೆ.
Read More »