ಬೆಳಗಾವಿ- ದಿನವಿಡೀ ಮೋಬೈಲ್ ನಲ್ಲಿ ವಿಡಿಯೋ ಗೇಮ್ ಆಡಬೇಡ ಎಂದು ಹೆಂಡತಿ ಬುದ್ದಿವಾದ ಹೇಳಿದ್ದಕ್ಕೆ ಗಂಡನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಚಿಕ್ಕಮಗಳೂರು ಮೂಲದ ಶಬಾಜ್ ಸಿ.ಎಂ.(36) ಎಂಬಾತ,ಚಿಕ್ಕಮಂಗಳೂರಿನಿಂದ ಬೆಳಗಾವಿಗೆ ಬಂದು,ಬೆಳಗಾವಿಯ ಖಡೇಬಝಾರ್ ನಲ್ಲಿರುವ ಸೂರ್ಯಾ ಲಾಜ್ ನಲ್ಲಿ ಸೀಲೀಂಗ್ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮದ್ಯರಾತ್ರಿಯೇ ನಡೆದಿದ್ದು ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಮಾರ್ಕೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ಬೆಳಗಾವಿ ಜಿಲ್ಲೆಗೆ ಮತ್ತೊಂದು ಪವರ್ ಫುಲ್ ಹುದ್ದೆ…..!
ಬೆಳಗಾವಿ- ಈ ಹಿಂದೆ ಅಂದಾಜು ಸಮೀತಿಯ ಸದಸ್ಯರಾಗಿ ಬಳ್ಳಾರಿ ಡ್ಯಾಂ ಕಾಮಗಾರಿಯ ಗೋಲ್ ಮಾಲ್ ಪತ್ತೆ ಮಾಡಿ ಹಲವಾರು ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ ರಾಜ್ಯದ ಗಮನ ಸೆಳೆದಿದ್ದ ಶಾಸಕ ಅಭಯ ಪಾಟೀಲ್ ಅವರು ಈಗ ಅಂದಾಜು ಸಮೀತಿಯ ಅದ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ, ಇವರನ್ನು ವಿಧಾನಸಭೆಯ ಅಂದಾಜುಗಳ ಸಮಿತಿ ಅಧ್ಯಕ್ಷರನ್ನಾಗಿ ನೇಮಕಾ ಮಾಡಲಾಗಿದ್ದು ,ವಿಧಾನಸಭೆಯ ಪವರ್ ಫುಲ್ ಸಮೀತಿ ಅಂದ್ರೆ ಎಕ್ಸಟೀಮೇಟ್, ಕಮೀಟಿ …
Read More »ಯಮಕನಮರಡಿ ಕ್ಷೇತ್ರದಲ್ಲಿ ಈಗ ಎಜ್ಯುಕೇಶನ್ ಸೀಝನ್….!
ಯಮಕನಮರಡಿ ಕ್ಷೇತ್ರದಲ್ಲಿ ಶಾಸಕ ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ್ ಜಾರಕಿಹೊಳಿ ಅವರು ಸರ್ಕಾರಿ ಶಾಲೆಗಳ ಅಭಿವೃದ್ಧಿಯ ಕುರಿತು ವಿಶೇಷ ಗಮನಹರಿಸಿದ್ದು ಶಾಲೆಗಳ ಅಭಿವೃದ್ಧಿಗೆ ಕೋಟ್ಯಾಂತರ ರೂ ಅನುದಾನ ನೀಡಿದ್ದಾರೆ ಬೆಳಗಾವಿ : ಶಾಸಕರ ಅನುದಾನದಲ್ಲಿ ಬಿಡುಗಡೆ ಗೊಂಡ 1 ಕೋಟಿ 11 ಲಕ್ಷ ರೂಪಾಯಿ ವೆಚ್ಚದ ಶಾಲಾ ಅಭಿವೃದ್ಧಿ ಕಾಮಗಾರಿಗೆ ಜಿಪಂ.ಸದಸ್ಯ ಸಿದ್ದು ಸುಣಗಾರ ಮಂಗಳವಾರ ಚಾಲನೆ ನೀಡಿದರು. ಯಮಕನಮರಡಿ ವಿಧಾನಸಭಾ ಕ್ಷೇತ್ರದ ಕಾಕತಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಸೂನಟ್ಟಿ ಗ್ರಾಮದ …
Read More »ಚಿನ್ನ ಕಳವು ಮಾಡಿದವನೂ, ಅದನ್ನು ಖರೀದಿವನೂ, ಅರೆಸ್ಟ್….
ಬೆಳಗಾವಿ- ಖಾನಾಪೂರ ಪೋಲೀಸರು ವಿಶೇಷ ಕಾರ್ಯಾಚರಣೆಯ ಮೂಲಕ ಚಿನ್ನ ಕಳ್ಳತನ ಮಾಡಿದವನನ್ನು,ಜೊತೆಗೆ ಕಳವು ಮಾಡಿದ ಚಿನ್ನವನ್ನು ಖರೀಧಿ ಮಾಡಿದ ಜ್ಯುವಲರಿ ವ್ಯಾಪಾರಿ ಇಬ್ಬರನ್ನೂ ಅರೆಸ್ಟ್ ಮಾಡಿದ್ದಾರೆ. ಚಿನ್ನದ ಆಭರಣ ಕದ್ದು ಅದನ್ನು ಮಾರಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸಿ ಅವನ ಬಳಿಯಿದ್ದ 26,5300 ಮೌಲ್ಯದ ಚಿನ್ನಾಭರಣಗಳು ವಶಪಡಿಸಿಕೊಂಡಿದ್ದಾರೆ ಕಳ್ಳತನ ಆರೋಪಿಗೆ ಸಹಾಯ ಮಾಡಿದ್ದ ಕಳುವಾದ ಚಿನ್ನವನ್ನು ಖರೀಧಿ ಮಾಡಿದ್ದ ಜ್ಯುವೆಲರಿ ಶಾಪ್ ಮಾಲೀಕನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಬೆಳಗಾವಿಯ ವಡಗಾಂವ ಗಲ್ಲಿಯ …
Read More »ಮತ್ತೆ ಹಿಂಡಲಗಾ ಜೈಲಿಗೆ ವಿನಯ ಶಿಪ್ಟ್….
ಬೆಳಗಾವಿ- ಮೂರು ದಿನಗಳ ಕಾಲ ಸಿಬಿಐ ಕಸ್ಟಡಿಯಲ್ಲಿದ್ದ ಮಾಜಿ ಮಂತ್ರಿ ವಿನಯ ಕುಲಕರ್ಣಿಗೆ 14ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಇಂದು ನಾಲ್ಕು ಗಂಟೆಗೆ ಸಿಬಿಐ ಅಧಿಕಾರಿಗಳು ಹಿಂಡಲಗಾ ಕಾರಾಗೃಹ ಕ್ಕೆ ಕರೆತಂದರು ಮೂರು ದಿನಗಳ ಕಾಲ ಹುಬ್ಬಳ್ಳಿಯಲ್ಲಿ ಸಿಬಿಐ ವಶದಲ್ಲಿದ್ದ ವಿನಯ ಕುಲಕರ್ಣಿ,ಇಂದು ಮತ್ತೆ ಹಿಂಡಲಗಾ ಜೈಲಿಗೆ ಶಿಪ್ಟ್ ಮಾಡಲಾಯಿತು.
Read More »ಬೆಳಗಾವಿಯಲ್ಲಿ ಇಂದು ಪ್ರತಿಭಟನೆಗಳ ಸೀಝನ್…
ಪ್ರತಿಮೆ ಭಗ್ನಗೊಳಿಸಿದ,ಕಿಡಗೇಡಿಗಳ ವಿರುದ್ಧ ಕ್ರಮ ಜರುಗಿಸಿ…. ರಾಮದುರ್ಗ ತಾಲೂಕಿನ ಬಿಜಗುಪ್ಪಿ ಗ್ರಾಮದಲ್ಲಿ ವಿಶ್ವಗುರು ಬಸವೇಶ್ವರ ಪ್ರತಿಮೆಯನ್ನು ಭಗ್ನಗೊಳಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸೋಮವಾರ ಬೆಳಗಾವಿ ಲಿಂಗಾಯತ ಸಂಘಟನೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ರವಾನಿಸಿದರು. ಮಹಾ ಮಾನವತಾವಾದಿ ಬಸವೇಶ್ವರರ ಮೂರ್ತಿಯನ್ನು ಸಮಾಜಘಾತುಕ ವ್ಯಕ್ತಿಗಳು ಭಗ್ನ ಮಾಡಿದ್ದಾರೆ. ಇವ ನಮ್ಮವ. ಇವ ನಮ್ಮವ ಎಂದು ಜಗದ ಜನರೆಲ್ಲರನ್ನು ಅಪ್ಪಿಕೊಂಡು ಜಾತಿ, ವರ್ಗ, ಲಿಂಗ, ವರ್ಣ ಭೇದಗಳನ್ನು …
Read More »ಬೆಳಗಾವಿಯ, ಜನಕಲ್ಯಾಣ ಟ್ರಸ್ಟ್ ಸೇವೆಗೆ ಸಮ್ಮಾನ…..
ಜನ ಕಲ್ಯಾಣ ಟ್ರಸ್ಟ್ ನೇತೃತ್ವದಲ್ಲಿ ಕಳೆದ ಎರಡು ತಿಂಗಳಿಂದ ಬೆಳಗಾವಿ ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜನಸೇವಾ ಕೋವಿಡ್ -19 ಕೇಂದ್ರದ ಸಮಾರೋಪ ಸಮಾರಂಭ ರವಿವಾರ ಸಂಜೆ 4. ಗಂಟೆಗೆ ಅನಗೋಳದ ಸಂತಮೀರಾ ಆಂಗ್ಲ್ ಮಾಧ್ಯಮ ಶಾಲೆಯಲ್ಲಿ ಜರುಗಿತು. ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಜನಕಲ್ಯಾಣ ಟ್ರಸ್ಟ್ ಅಧ್ಯಕ್ಷ ಅರವಿಂದರಾವ್ ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು ಪ್ರಮುಖ ವಕ್ತಾರರಾಗಿ ಆರ್‍ಎಸ್‍ಎಸ್ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶಜಿ ಭೇಂಡೆ ಉಪಸ್ಥಿತರಿದ್ದರು. ಸಮಾರೋಪ ಸಭೆಯಲ್ಲಿ …
Read More »ನವ್ಹೆಂಬರ್ 14 ರಂದು ಡಿಸಿಸಿ ಬ್ಯಾಂಕ್ ಅದ್ಯಕ್ಚ ಉಪಾದ್ಯಕ್ಷರ ಚುನಾವಣೆ….
ಬೆಳಗಾವಿ – ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಡಳಿಯ ಚುನಾವಣೆ ಮುಗಿದಿದ್ದು,ನವ್ಹೆಂಬರ್ 14 ರಂದು ಅದ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ನವ್ಹೆಂಬರ್ 14 ರಂದು ಬೆಳಿಗ್ಗೆ 11 ರಿಂದ ಮದ್ಯಾಹ್ನ 1 ಗಂಟೆಯವರೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ನಡೆಯಲಿದ್ದು ಮದ್ಯಾಹ್ನ 3-00 ಗಂಟೆಗೆ ನಿರ್ದೇಶಕ ಮಂಡಳಿಯ ಸಭೆ ಆರಂಭವಾಗಲಿದ್ದು,ನಾಮ ಪತ್ರ ವಾಪಸ್ ಪಡೆಯಲು 30 ನಿಮಿಷ ಕಾಲಾವಕಾಶ ನೀಡಿದ ಬಳಿಕ ಚುನಾವಣೆ ನಡೆಯಲಿದೆ. ಹಾಲಿ ಅದ್ಯಕ್ಷ ರಮೇಶ್ ಕತ್ತಿ …
Read More »ಅಹೋರಾತ್ರಿ ಕೈಕಾಲು ಮುಗಿದರೂ, ಗರ್ಭಿಣಿಗೆ ಕಣ್ಣೆತ್ತಿಯೂ ನೋಡಲಿಲ್ಲ…!!
ಬೆಳಗಾವಿ- ಮಹಾಮಾರಿ ಕೊರೋನಾ ಬಂದಾಗಿನಿಂದ ಬೆಳಗಾವಿ ಜಿಲ್ಲಾ ಆಸ್ಪತ್ರೆ ಕೋವೀಡ್ ಆಸ್ಪತ್ರೆಯಾಗಿರುವ ಈ ದವಾಖಾನೆಯಲ್ಲಿ ಓಪಿಡಿ ಬಂದ್ ಆಗಿದೆ ಹೀಗಾಗಿ ಈ ಆಸ್ಪತ್ರೆಯಲ್ಲಿ ಸಾಮಾನ್ಯ ರೋಗಿಗಳು ಚಿಕಿತ್ಸೆಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ. ನಿನ್ನೆ ರಾತ್ರಿ ಜಿಲ್ಲಾ ಆಸ್ಪತ್ರೆಯಲ್ಲಿ ,ಬೆಳಗಾವಿ ಜಿಲ್ಲೆಯ ಜನಪ್ರತಿನಿಧಿಗಳಿಗೆ ಛೀ..ಥೂ ಎನ್ನುವ ,ಭೀಮ್ಸ್ ಡೈರೆಕ್ಟರ್ ಮುಖದ ಮೇಲೆ ಉಗುಳುವ,ಜಿಲ್ಲಾಧಿಕಾರಿಗಳಿಗಳೇ ನಿಮಗೆ ಹೃದಯ ಇದೆಯಾ…? ಎಂದು ಪ್ರಶ್ನೆ ಮಾಡುವಂತಹ ಕರಾಳ ಘಟನೆಯೊಂದು ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ… ನಿನ್ನೆ …
Read More »ಬರ್ತ್ ಡೇ ಗಿಫ್ಟ್…ಬೆಳಗಾವಿಯಿಂದ ಹುಬ್ಬಳ್ಳಿಗೆ ಶಿಪ್ಟ್…..!!
ಬೆಳಗಾವಿ – ಕುದುರೆ ಸವಾರ,ಪಂಚಮಸಾಲಿ ಸಮಾಜದ ಸರ್ದಾರ.ಸಮಾಜದ ಜಗದ್ಗುರುಗಳ ಪ್ರೀತಿಯ ಲೀಡರ್ ವಿನಯ್ ಕುಲಕರ್ಣಿ ಅವರ ಹುಟ್ಟು ಹಬ್ಬದ ದಿನವೇ ಸಿಬಿಐ ಅಧಿಕಾರಿಗಳು ಬೆಳ್ಳಂ ಬೆಳಿಗ್ಗೆ ಹಿಂಡಲಗಾ ಜೈಲಿಗೆ ಧಾವಿಸಿ ಮೂರು ದಿನಗಳವರೆಗೆ ಕಸ್ಟಡಿಗೆ ಪಡೆದುಕೊಂಡರು.ಜನ್ಮ ದಿನದ ದಿನವೇ ವಿನಯ್ ಕಸ್ಟಡಿಗೆ ಹೋಗಬೇಕಾಯಿತು. ಧಾರವಾಡ ಜಿಪಂ ಸದಸ್ಯ ಯೋಗೇಶಗೌಡ ಕೊಲೆ ಪ್ರಕರಣದ ಆರೋಪದಡಿ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಧಾರವಾಡ ನ್ಯಾಯಾಲಯ ಮೂರು ದಿನಗಳ ಕಾಲ ಸಿಸಿಬಿ …
Read More »