Breaking News

Breaking News

ಸುವರ್ಣಸೌಧಕ್ಕೆ ಜಿಲ್ಲಾಮಟ್ಟದ ಕಚೇರಿಗಳ ಸ್ಥಳಾಂತರ ಬೇಡ

ಬೆಳಗಾವಿ- ಬೆಳಗಾವಿ ರಾಜ್ಯದ ಎರಡನೇಯ ರಾಜಧಾನಿಯನ್ನಾಗಿ ಮಾಡಲು ಸರ್ಕಾರ 500 ಕೋಟಿ ಖರ್ಚು ಮಾಡಿ ಸುವರ್ಣ ವಿಧಾನ ಸೌಧ ಕಟ್ಟಡವನ್ನು ನಿರ್ಮಿಸಿದ್ದು,ಸುವರ್ಣ ಸೌಧಕ್ಕೆ ಜಿಲ್ಲಾ ಮಟ್ಟದ ಕಚೇರಿಗಳನ್ನು ಸ್ಥಳಾಂತರ ಮಾಡಬಾರದು,ರಾಜ್ಯ ಮಟ್ಟದ ಕಚೇರಿಗಳನ್ನು ಮಾತ್ರ ಸ್ಥಳಾಂತರ ಮಾಡಬೇಕೆಂದು ಕನ್ನಡಪರ ಸಂಘಟನೆಗಳು ಒತ್ತಾಯಿಸಿವೆ. ಕನ್ನಡ ಸಂಘಟನೆಗಳ ಕ್ರೀಯಾ ಸಮೀತಿಯ ಅದ್ಯಕ್ಷ ಅಶೋಕ ಚಂದರಗಿ ಅವರ ನೇತ್ರತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ವಿವಿಧ ಕನ್ನಡಪರ ಸಂಘಟನೆಗಳು,ಬೆಳಗಾವಿಯ ಸುವರ್ಣ ಸೌಧಕ್ಕೆ ಜಿಲ್ಲಾ …

Read More »

ಬಂಧಿತ ದರೋಡೆಕೋರನಿಗೆ ಸೊಂಕಿನ ಶಂಕೆ, ಹಿಂಡಲಗಾ ಜೈಲು,ಕ್ಯಾಂಪ್ ಠಾಣೆಯಲ್ಲಿ ಭೀತಿ.

ಬೆಳಗಾವಿ- ಇತ್ತೀಚಿಗಷ್ಟೆ ಬೆಳಗಾವಿ ನಗರದ ಕ್ಯಾಂಪ್ ಪೋಲೀಸರು ಬಂಧಿಸಿದ ಕುಖ್ಯಾತ ರೌಡಿಗೆ ಕೊರೋನಾ ಸೊಂಕಿನ ಶಂಕೆ ಹಿನ್ನಲೆಯಲ್ಲಿ, ಹಿಂಡಲಗಾ ಜೈಲು ಮತ್ತು ಕ್ಯಾಂಪ್ ಪೋಲೀಸ್ ಠಾಣೆಯಲ್ಲಿ ಭೀತಿ ಶುರುವಾಗಿದೆ. ದರೋಡೆಕೋರನಿಗೆ ಸೋಂಕು ಶಂಕೆ ಹಿಂಡಲಗಾ ಜೈಲಿನಲ್ಲಿ ಆತಂಕ ಸೃಷ್ಠಿಯಾಗಿದೆ. ದರೋಡೆ ಮಾಡುತ್ತಿದ್ದ ವ್ಯಕ್ಯಿಯನ್ನ ಬಂಧಿಸಿದ್ದ ಬೆಳಗಾವಿಯ ಕ್ಯಾಂಪ್ ಪೊಲೀಸರು. ಮೂರು ದಿನಗಳ ಹಿಂದೆ ಬಂಧಿಸಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದರು. ದರೋಡೆಕೋರನಿಗೆ ಇಂದು ಸೋಂಕಿನ ಶಂಕೆ ಹಿನ್ನೆಲೆಯಲ್ಲಿ ಹಿಂಡಲಗಾ ಜೈಲಿನಲ್ಲಿನ ಕೈದಿ …

Read More »

ಬೆಳಗಾವಿ ಜಿಲ್ಲಾ ಆಸ್ಪತ್ರೆಯ ಕೋವಿಡ್ ವಾರ್ಡಿನ ನರ್ಸಗೂ ಸೊಂಕು ದೃಡ

ಬೆಳಗಾವಿ- ಬೆಳಗಾವಿ ಜಿಲ್ಲಾ ಆಸ್ಪತ್ರೆಯ ಕೋವೀಡ್ ಐಸೋಲೇಶನ್ ವಾರ್ಡಿನಲ್ಲಿ ಕರ್ತವ್ಯ ನಿಭಾಯಿಸುತ್ತಿರುವ ನರ್ಸಗೂ ಸೊಂಕು ತಗಲಿರುವದು ದೃಡವಾಗಿದೆ. ಹಲವಾರು ದಿನಗಳಿಂದ ಈ ನರ್ಸ್ ಗೆ ಕೋವೀಡ್ ಲಕ್ಷಣಗಳು ಕಂಡು ಬಂದ ಹಿನ್ನಲೆಯಲ್ಲಿ ಇವರನ್ನು ಕ್ವಾರಂಟೈನ್ ಮಾಡಲಾಗಿತ್ತು ಇಂದು ಬೆಳಿಗ್ಗೆ ಸೊಂಕು ದೃಡವಾದ ಹಿನ್ನಲೆಯಲ್ಲಿ ರೋಗಿಗಳ ಸೇವೆ ಮಾಡಿದ ನರ್ಸಗೂ ಈಗ ಜಿಲ್ಲಾ ಆಸ್ಪತ್ರೆಯಲ್ಲಿ ಐಸೋಲೇಟ್ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಮಹಾಮಾರಿ ವೈರಸ್ ಹರಡಿ ಇಂದಿಗೆ ಮೂರು ತಿಂಗಳು ಗತಿಸಿದ್ದು ಇದೇ …

Read More »

ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸೊಂಕಿಗೆ ಇಂದು ಮತ್ತೊಂದು ಬಲಿ

ಬೆಳಗಾವಿ-ಕೊರೋನಾ ಸೊಂಕು ಬೆಳಗಾವಿ ಜಿಲ್ಲೆಯಲ್ಲಿ ಮೃತ್ಯುತಾಂಡವ ನಡೆಸಿದೆ ಈ ಮಹಾಮಾರಿ ಸೊಂಕಿಗೆ ಇಂದು ಮತ್ತೊಬ್ಬ ಬಲಿಯಾಗಿದ್ದಾನೆ. ಕೊರೋನಾ ಸೊಂಕಿಗೆ ಬೆಳಗಾವಿ ಜಿಲ್ಲೆಯಲ್ಲಿ ಇಂದಿನವರೆಗೆ ಒಟ್ಟು ನಾಲ್ಕು ಜನ ಬಲಿಯಾಗಿದ್ದಾರೆ. ಇಂದು ಬೆಳಗಾವಿ ಜಿಲ್ಲೆಯ ಅಥಣಿ ನಗರದ 45 ವರ್ಷದ ವ್ಯೆಕ್ತಿಯೊಬ್ಬ ಬಲಿಯಾಗಿದ್ದು ನಗರದಲ್ಲಿ ಕೊರೋನಾ ಮರಣಮೃದಂಗ ಮುಂದುವರೆದಿದೆ. ಇಂದು ಬಿಡುಗಡೆಯಾದ ರಾಜ್ಯ ಹೆಲ್ತ್ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ 7 ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದ್ದು ರಾಜ್ಯ ಹೆಲ್ತ್ …

Read More »

ಲೀಕ್ ಆಯ್ತು ಮಾಹಿತಿ…. ಪೋಲೀಸರಿಗೆ ದೂರು ಕೊಡ್ತಾರಂತೆ ಮರಾಠಿ ಸಾಹಿತಿ……!

ಬೆಳಗಾವಿ-ಬೆಳಗಾವಿಯಲ್ಲಿ ಸಾವನ್ನೊಪ್ಪಿದ ತಾಯಿಯ ಅಂತ್ಯಕ್ರಿಯೆಯನ್ನು ಮಹಾರಾಷ್ಟ್ರದ ಕೊಲ್ಹಾಪುರ ದಲ್ಲಿ ಮುಗಿಸಿ ಬೆಳಗಾವಿಗೆ ಮರಳಿ ಬಂದು,ನಗರದ ಹೊಟೇಲ್ ಒಂದರಲ್ಲಿ ಕ್ವಾರಂಟೈನ್ ಆಗಿರುವ ಬೆಳಗಾವಿಯ ಪ್ರಸಿದ್ಧ ಮರಾಠಿ ಸಾಹಿತಿಯೊಬ್ಬರು ಮಹಾನಗರ ಪಾಲಿಕೆಯ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾರೆ. ಕೊಲ್ಹಾಪೂರ ಜಿಲ್ಲಾಧಿಕಾರಿಗಳು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರವನ್ನು ಬೆಳಗಾವಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಲೀಕ್ ಮಾಡಿದ್ದರಿಂದ ಸಾರ್ವಜನಿಕವಾಗಿ ಅವಮಾನವಾಗಿದ್ದು,ಕೂಡಲೇ ಪತ್ರವನ್ನು ಬಹಿರಂಗ ಪಡಿಸಿದ ಅಧಿಕಾರಿಗಳ ಕ್ರಮ ಜರುಗಿಸಬೇಕೆಂದು ಬೆಳಗಾವಿಯ ಪ್ರಸಿದ್ಧ ಮರಾಠಿ ಸಾಹಿತಿ …

Read More »

ಬೆಳಗಾವಿ ನಗರದಲ್ಲಿ ಕೊರೋನಾ ಸೊಂಕಿಗೆ ಮೊದಲ ಬಲಿ

ಬೆಳಗಾವಿ- ಬೆಳಗಾವಿ ನಗರದಲ್ಲಿ ಕೊರೋನಾ ವೈರಸ್ ಚೆಲ್ಲಾಟ ನಡೆಸಿದೆ. ಇಲ್ಲಿಯ ಗುಡ್ ಶೆಡ್ ರಸ್ತೆಯ 74 ವರ್ಷದ ವ್ಯೆಕ್ತಿ ಉಸಿರಾಟದ ತೊಂದರೆಯಿಂದಾಗಿ ಭೀಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಇಂದು ಬೆಳಿಗ್ಗೆ ಈ ವ್ಯೆಕ್ತಿ ಮೃತಪಟ್ಟಿದ್ದು ಈತನಿಗೆ ಕೊರೋನಾ ಸೊಂಕು ಇರುವದು ದೃಡವಾಗಿದೆ. ಗುಡ್ ಶೆಡ್ ರಸ್ತೆ ನಿವಾಸಿಯಾಗಿದ್ದ 74 ವರ್ಷದ ವ್ಯೆಕ್ತಿಗೆ ನಿನ್ನೆ ಮಧ್ಯಾಹ್ನ ಉಸಿರಾಟದ ತೊಂದರೆಯಾದ ಕಾರಣ ಇತನನ್ನು ಸ್ಥಳೀಯ ವೈದ್ಯರಿಗೆ ತೋರಿಸಿದಾಗ ವೈದ್ಯರು ಭೀಮ್ಸ್ ಆಸ್ಪತ್ರೆಗೆ ದಾಖಲಿಸುವಂತೆ ವೈಸ್ಯರು …

Read More »

ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಬೆಳಗಾವಿಯ 573 ಜನರ ವಿರುದ್ಧ FIR

ಬೆಳಗಾವಿ-ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಬೆಳಗಾವಿ ಜಿಲ್ಲೆಯ 573 ಜನ ಶಂಕಿತರ ವಿರುದ್ಧ ಕೇಸ್ ಹಾಕಲು ಕ್ವಾರಂಟೈನ್ ನೂಡಲ್ ಅಧಿಕಾರಿಗಳು,ಜಿಲ್ಲೆಯ ಉಪವಿಭಾಗಾಧಿಕಾರಿಗಳು,ಮತ್ತು ತಹಶೀಲ್ದಾರರಿಗೆ ಸೂಚನೆ ನೀಡಿದ್ದಾರೆ. ಮಹಾರಾಷ್ಟ್ರ ಮತ್ತು ಪಕ್ಕದ ರಾಜ್ಯಗಳಿಂದ ಬೆಳಗಾವಿ ಜಿಲ್ಲೆಗೆ ಬಂದಿರುವ 573 ಜನ ಹೋಮ್ ಕ್ವಾರಂಟೈನ್ ನಲ್ಲಿ ಇರದೇ ಸುತ್ತಾಡಿದ್ದು ಇವರನ್ನು ಟ್ರ್ಯಾಕ್ ಮಾಡಿರುವ ಕ್ವಾರಂಟೈನ್ ಅಧಿಕಾರಿಗಳು,ನಿಯಮ ಉಲ್ಲಂಘನೆ ಮಾಡಿರುವ 573 ಜನರ ಪಟ್ಟಿ ಮಾಡಿ,ಬೆಳಗಾವಿ ಜಿಲ್ಲೆಯ ಎಲ್ಲ ಉಪ ವಿಭಾಗಾಧಿಕಾರಿಗಳಿಗೆ,ಮತ್ತು ತಹಶೀಲ್ದಾರುಗಳಿಗೆ ರವಾನಿಸಿದ್ದಾರೆ. ಬೆಳಗಾವಿ …

Read More »

ನಿವೃತ್ತ ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಬೆಳಗಾವಿ,-ಬೆಳಗಾವಿ, ಸಾರ್ವಜನಿಕರು, ಜನಪ್ರತಿನಿಧಿಗಳು ಸೇರಿದಂತೆ ಎಲ್ಲರ ಸಹಕಾರದಿಂದ ಎಂದೂ ಕಂಡರಿಯದ ಪ್ರವಾಹ ಪರಿಸ್ಥಿತಿ ಹಾಗೂ ಕೊರೊನಾದಂತಹ ಕ್ಲಿಷ್ಟಕರ ಪರಿಸ್ಥಿತಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸುವುದು ಸಾಧ್ಯವಾಯಿತು ಎಂದು ನಿವೃತ್ತ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಹೇಳಿದರು. ನಗರದ ಗಾಂಧಿ ಭವನದಲ್ಲಿ ಮಂಗಳವಾರ ನಡೆದ ಬೀಳ್ಕೊಡುಗೆ ಹಾಗೂ ನೂತನ ಜಿಲ್ಲಾಧಿಕಾರಿ ಸ್ವಾಗತ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಎಂತಹದ್ದೇ ಸಂದರ್ಭ ಬಂದರೂ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಮನಸ್ಸು ಮಾಡಿದರೆ ಯಶಸ್ವಿಯಾಗಿ ನಿಭಾಯಿಸಬಲ್ಲರು ಎಂಬುದಕ್ಕೆ …

Read More »

ಕೊರೋನಾ ಮಹಾಮಾರಿಗೆ ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಂದು ಬಲಿ

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಅಟ್ಟಹಾಸಕ್ಕೆ ಮೊತ್ತೊಂದು ಬಲಿಯಾಗಿದೆ.ಈ ಭಯಾನಕ ವೈರಸ್ ಗೆ ಜಿಲ್ಲೆಯಲ್ಲಿ ಒಟ್ಟು ಇಬ್ಬರು ಬಲಿಯಾದಂತಾಗಿದೆ. ಇಂದು ಅಥಣಿಯಲ್ಲಿ ಕೊರೋನಾ ಸೊಂಕಿಗೆ ಮೊತ್ತೊಬ್ಬ ಬಲಿಯಾಗಿದ್ದು ಇಂದು ಸಂಜೆ ಬಿಡುಗಡೆಯಾದ ಹೆಲ್ತ್ ಬುಲಿಟೀನ್ ನಲ್ಲಿ ಇಬ್ಬರು ಜನ ಸೊಂಕಿತರು ಪತ್ತೆಯಾಗಿದ್ದಾರೆ. ಇಂದು ಪತ್ತೆಯಾದ ಇಬ್ಬರು ಸೊಂಕಿತರ ಪೈಕಿ ಅಥಣಿ ತಾಲ್ಲೂಕಿನ ಸುಂಕಾನಟ್ಟಿ ಗ್ರಾಮದ 32 ವರ್ಷದ ಸೊಂಕಿತ ಮೃತಪಟ್ಟಿದ್ದು, ಈತ ನಿನ್ನೆ ರಾತ್ರಿಯೇ ತೀವ್ರ ಉಸಿರಾಟದ ತೊಂದರೆಯಿಂದಾಗಿ ಮೃತಪಟ್ಟಿದ್ದು …

Read More »

ಬೆಳಗಾವಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಎಂ.ಜಿ ಹಿರೇಮಠ ಅಧಿಕಾರ ಸ್ವೀಕಾರ

ಬೆಳಗಾವಿ- ಮೂಲತಹ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಗಣಿಕೊಪ್ಪ ಗ್ರಾಮದವರಾದ ಎಂ ಜಿ ಹಿರೇಮಠ ಅವರು ಇಂದು ಬೆಳಗಾವಿ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು. ಬೆಳಗಾವಿ ಜಿಲ್ಲಾಧಿಕಾರಿಯಾಗಿ ಎರಡು ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಎಸ್ ಬಿ ಬೊಮ್ಮನಹಳ್ಳಿ ಅವರು ನೂತನ ಜಿಲ್ಲಾಧಿಕಾರಿ ಎಂಜಿ ಹಿರೇಮಠ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದ್ರು

Read More »