Breaking News

Breaking News

ಸರ್ಕಾರದ ಮಾರ್ಗಸೂಚಿ ಪ್ರಕಾರ ಬಕ್ರೀದ್ ಹಬ್ಬ ಆಚರಿಸಲು ಅವಕಾಶ

ಬೆಳಗಾವಿ,-ಕೋವಿಡ್-೧೯ ಹಿನ್ನೆಲೆಯಲ್ಲಿ ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿ ಪ್ರಕಾರ ಬಕ್ರೀದ್ ಹಬ್ಬ ಆಚರಣೆ ಮಾಡಬೇಕು. ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಜಿಲ್ಲಾಡಳಿತದಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಮ್.ಜಿ. ಹಿರೇಮಠ ಅವರು ತಿಳಿಸಿದ್ದಾರೆ. ಅಗಸ್ಟ್ ೧ ರಂದು ಆಚರಿಸಲಾಗುವ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಶಾಂತಿ ಹಾಗೂ ಕಾನೂನು‌ ಸುವ್ಯವಸ್ಥೆ ಕಾಪಾಡುವ ನಿಮಿತ್ತ ಬುಧವಾರ (ಜು.೨೯) ಜಿಲ್ಲಾಧಿಕಾರಿಗಳ ಕಷೇರಿಯ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕರ್ನಾಟಕ …

Read More »

ಬೆಳಗಾವಿ ಜಿಲ್ಲಾ ಪಂಚಾಯತಿ CEO ರಾಜೇಂದ್ರ ಕೆ.ವಿ ವರ್ಗಾವಣೆ

ಬೆಳಗಾವಿ- ಬೆಳಗಾವಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜೇಂದ್ರ ಕೆ.ವಿ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ರಾಜೇಂದ್ರ ಕೆ.ವಿ.ಅವರನ್ನು ಮಂಗಳೂರು ಜಿಲ್ಲಾಧಿಕಾರಿಯನ್ನಾಗಿ ನೇಮಿಸಲಾಗಿದ್ದು.ಬೆಳಗಾವಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ದರ್ಶನ್ ಹೆಚ್.ವಿ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ರಾಜೇಂದ್ರ ಕೆ.ವಿ ಅವರು ಕೋವೀಡ್ ಸಂಧರ್ಭದಲ್ಲಿ ಪ್ರಚಾರದ ಹಂಗಿಲ್ಲದೇ ಹಗಲು ರಾತ್ರಿ ಶ್ರಮಿಸಿದ್ದರು.ಈ ಹಿಂದೆ ಪ್ರವಾಹದ ಸಂಧರ್ಭದಲ್ಲಿ ರಾಜೇಂದ್ರ ಕೆ.ವಿ ಅವರು ಸಲ್ಲಿಸಿದ …

Read More »

ಕಳಸಾ ಬಂಡೂರಿ ವಿಸ್ತೃತ ಯೋಜನಾ ವರದಿ ಅನುಷ್ಠಾನಕ್ಕೆ ಆಡಳಿತಾತ್ಮಕ ಒಪ್ಪಿಗೆ 

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಣಕುಂಬಿ ಗ್ರಾಮದ ಬಳಿ ಮಹದಾಯಿ‌ ನದಿಗೆ ಅಣೆಕಟ್ಟು ನಿರ್ಮಿಸಿ ಕೂಡು ಕಾಲುವೆ ಮುಖಾಂತರ 1.72 ಟಿ ಎಂ ಸಿ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಲಪ್ರಭಾ ನದಿಗೆ ತಿರುಗಿಸುವ ಕಳಸಾ ನಾಲಾ ತಿರುವು ಯೋಜನೆಗೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಹಾಗೆಯೇ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ನೆರಸೆ ಗ್ರಾಮದ ಬಳಿ ಬಂಡೂರ ಹಳ್ಳಕ್ಕೆ ಅಣೆಕಟ್ಟು ನಿರ್ಮಿಸಿ, ಕೂಡು ಕಾಲುವೆ ಮುಖಾಂತರ 2.18 …

Read More »

ಬೆಳಗಾವಿಯ ಜೀವನ ರೇಖಾ ಆಸ್ಪತ್ರೆಯಲ್ಲಿ ಕೋವೀಡ್ ವ್ಯಾಕ್ಸೀನ್ ಪ್ರಯೋಗ ಆರಂಭ

ಬೆಳಗಾವಿ- ICMR ಸಹಯೋಗದೊಂದಿಗೆ ಭಾರತ ಬಯೋಟೇಕ್ ನವರು ಸಿದ್ಧ ಪಡಿಸಿರುವ ಕೋವೀಡ್ ವ್ಯಾಕ್ಸೀನ್ ಪ್ರಯೋಗ ಮಾಡಲು ಕರ್ನಾಟಕದಲ್ಲಿಯೇ ಆಯ್ಕೆಯಾಗಿರುವ ಬೆಳಗಾವಿಯ ಏಕೈಕ ಆಸ್ಪತ್ರೆ,ಜೀವನ ರೇಖಾ ಆಸ್ಪತ್ರೆಯಲ್ಲಿ ಕೋವಿಡ್ ವ್ಯಾಕ್ಸೀನ್ ಪ್ರಯೋಗ ಶುರುವಾಗಿದೆ‌. ಭಾರತ ಬಯೋಟೆಕ್ ಸಿದ್ಧ ಪಡಿಸಿರುವ ಈ ವ್ಯಾಕ್ಸೀನ್ ಬೆಳಗಾವಿಯ ಜೀವನ ರೇಖಾ ಆಸ್ಪತ್ರೆಯಲ್ಲಿ ಕೋವೀಡ್ ವೈರಸ್ ಹೊಂದಿರದ ವ್ಯಕ್ತಿಗಳ ಮೇಲೆ ಪ್ರಯೋಗ ಮಾಡಲಾಗುತ್ತಿದೆ. ಬೆಳಗಾವಿಯ ಜೀವನ ರೇಖಾ ಆಸ್ಪತ್ರೆಯ ವೈದ್ಯರು ಈಗಾಗಲೇ ಬೆಳಗಾವಿಯ 40 ಜನರಿಗೆ ವ್ಯಾಕ್ಸೀನ್ …

Read More »

ಸಾವು ಬದುಕು ನಮ್ಮ ಕೈಯಲ್ಲಿಲ್ಲ- ಕೈಚಲ್ಲಿದ ಸಚಿವ ರಮೇಶ್ ಜಾರಕಿಹೊಳಿ

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾಗೆ ಸಾವಿನ ಸಂಖ್ಯೆ ಹೆಚ್ಚಳ ಆಗ್ತಾ ಇದೆ ಇದನ್ನು ತಡೆಯೋಕೆ ಜಿಲ್ಲಾಡಳಿತದ ಕ್ರಮ ಏನು ಎಂದು ಮಾದ್ಯಮಗಳ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ,ಕೊರೋನಾ ದೊಡ್ಡ ರೋಗ ಅಲ್ಲ ಅದಕ್ಕೆ ಹೆದರಬೇಕಾಗಿಲ್ಲ ,ನಾವು ಕೋವೀಡ್ ಜೊತೆ ಬದುಕುವದನ್ನು ಕಲಿಯಬೇಕು.ಸಾವು ಬದುಕು ನಮ್ಮ ಕೈಯಲ್ಲಿಲ್ಲ, ಹೋರಾಟ ಮಾಡಿ ಉಳಿಸುವ ಯತ್ನ ಮಾಡಬೇಕು ಎಂದು ಸಚವ ರಮೇಶ್ ಹೇಳಿದ್ದಾರೆ. ಬೆಳಗಾವಿಯ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಮುಖ್ಯಮಂತ್ರಿಗಳ …

Read More »

ಬೆಳಗಾವಿ ಜಿಲ್ಲೆಯಲ್ಲಿ ಕಿಲ್ಲರ್ ವೈರಸ್ ಕ್ರೌರ್ಯ ಇಂದು ಸಂಡೇ 163 ಸೊಂಕಿತರ ಪತ್ತೆ

ಬೆಳಗಾವಿ- ಜಿಲ್ಲೆಯಲ್ಲಿ ಕಿಲ್ಲರ್ ವೈರಸ್ ಕ್ರೌರ್ಯ ಮುಂದುವರೆದಿದೆ ಇಂದು ಸಂಡೇ ಲಾಕ್ ಡೌನ್ ದಿನವೇ ಬೆಳಗಾವಿ ಜಿಲ್ಲೆಯಲ್ಲಿ ಒಂದೇ ದಿನ 163 ಸೊಂಕಿತರು ಪತ್ತೆಯಾಗಿದ್ದಾರೆ.ಆದರೆ ಇವತ್ತು ಒಂದೇ ದಿನ 173 ಜನ ಡಿಸ್ಚಾರ್ಜ್ ಆಗಿದ್ದು ಸಂತಸದ ಸಂಗತಿ ಇಂದು ಸಂಡೇ ಮಹಾಮಾರಿ ವೈರಸ್ ಗೆ 6 ಜನ ಬಲಿಯಾಗಿದ್ದುಬೆ ಳಗಾವಿ ಜಿಲ್ಲೆಯಲ್ಲಿ ಪ್ರತಿದಿನ ನೂರುಗಟ್ಟಲೇ ಸೊಂಕಿತರು ಪತ್ತೆಯಾಗುತ್ತಿದ್ದಾರೆ.ಸಿಂಗಲ್ ,ಡಬಲ್,ತ್ರಿಬಲ್ ಸೆಂಚ್ಯುರಿ ಬಾರಿಸಿರುವ ಈ ಮಹಾಮಾರಿ ವೈರಸ್ ಇವತ್ತು ಭಾನುವಾರ ಒಂದೇ …

Read More »

ಅಂಬ್ಯುಲೆನ್ಸ್ ಗೆ ಬೆಂಕಿ ಹಚ್ಚಿದ 11 ಜನ ಆರೋಪಿಗಳಿಗೆ ವಕ್ಕರಿಸಿದ ಮಹಾಮಾರಿ…!

ಬೆಳಗಾವಿ- ಇತ್ತೀಚಿಗೆ ಜಿಲ್ಲಾ ಆಸ್ಪತ್ರೆಗೆ ನುಗ್ಗಿ ವೈದ್ಯರ ಮೇಲೆ ಹಲ್ಲೆ ಮಾಡಿ ಬಂಧನಕ್ಜೊಳಗಾದ 11 ಜನ ಆರೋಪಿಗಳಿಗೆ ಕೊರೋನಾ ಸೊಂಕು ತಗಲಿದ್ದು ದೃಡವಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಮಂಧಿಸಿದಂತೆ ಪ್ರಾಥಮಿಕ ಹಂತದಲ್ಲಿ ಹದಿನಾಲ್ಕು ಜನ ಆರೋಪಿಗಳನ್ನು ಬಂಧಿಸಲಾಗಿತ್ತು ಇವರನ್ನು ಹಿಂಡಲಗಾ ಜೈಲಿಗೆ ಕಳುಹಿಸುವ ಮುನ್ನ ಕೋವೀಡ್ ಟೆಸ್ಟ್ ಮಾಡಲಾಗಿತ್ತು ಹದಿನಾಲ್ಕು ಜನ ಆರೋಪಿಗಳ ಪೈಕಿ 11 ಜನರಿಗೆ ಸೊಂಕು ತಗಲಿದ್ದು ದೃಡವಾಗಿದೆ ದು ವಿಶ್ವಸನೀಯ ಮೂಲಗಳು ತಿಳಿಸಿವೆ ಆಸ್ಪತ್ರೆ …

Read More »

ಸರ್ಕಾರಕ್ಕೆ ವರ್ಷ ನಾಳೆ ಪರದೆ ಮೇಲೆ ಹರ್ಷ…..!

ಬೆಳಗಾವಿ ,ಜು.26(ಕರ್ನಾಟಕ ವಾರ್ತೆ): ಮಾನ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ರಾಜ್ಯ ಸರಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಮೊದಲ ವರ್ಷದ ಸಮಾರಂಭವು ನವತಂತ್ರಜ್ಞಾನದ ವರ್ಚುವಲ್ ಪ್ಲಾಟ್‌ಫಾರಂ ಮೂಲಕ ಜು.27ರಂದು ಬೆಳಗ್ಗೆ 11ಕ್ಕೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯಲಿದೆ. ಈ ಸಮಾರಂಭವು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಏಕಕಾಲಕ್ಕೆ ಭಿತ್ತರವಾಗಲಿದೆ. ಅದೇ ರೀತಿ ಬೆಳಗಾವಿ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಕೂಡ ಭಿತ್ತರಗೊಳ್ಳಲಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ ಜನರನ್ನು …

Read More »

ಬೆಳಗಾವಿಯ ಜಿಲ್ಲಾ ಆಸ್ಪತ್ರೆಯಲ್ಲಿ OXYGEN ಸಿಲಿಂಡರ್,ಸೈನಿಟೈಸರ್ ಟಕ್ಕರ್ ಭುಗಿಲೆದ್ದ ಬೆಂಕಿ

ಬೆಳಗಾವಿ- ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಬದಲಾವಣೆ ಮಾಡುವ ಸಂಧರ್ಭದಲ್ಲಿ ಸಿಲಿಂಡರ್ ಗ್ಯಾಸ್ ಮತ್ತು ಸೈನಿಟೈಸರ್ ಮಿಲನವಾಗಿ ಆಕಸ್ಮಿಕವಾಗಿ ಭುಗಿಲೆದ್ದ ಬೆಂಕಿಗೆ ಇಬ್ಬರು ಗಾಯಗೊಂಡಿದ್ದಾರೆ. ಜಿಲ್ಲಾ ಆಸ್ಪತ್ರೆಯ ಎಮರ್ಜನ್ಸೀ ವಾರ್ಡಿನಲ್ಲಿ ಸಿಲಿಂಡರ್ ಬದಲಾವಣೆ ಮಾಡುವಾಗ ಗ್ಯಾಸ್ ಲೀಕ್ ಆಗಿದೆ ,ಲೀಕ್ ಗ್ಯಾಸ್ ಮತ್ತು ಸೈನಿಟೈಸರ್ ಮಿಕ್ಸ್ ಆಗಿ ಬೆಂಕಿ ಕಾಣಿಸಿಕೊಂಡಿದೆ.ಅದೇ ವಾರ್ಡಿನಲ್ಲಿದ್ದ ಓರ್ವ ನರ್ಸ ಮತ್ತು ಡಾಕ್ಟರ್ ಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಈ ಘಟನೆ ನಡೆಯುತ್ತಿದ್ದಂತೆಯೇ ಸಿಲಿಂಡರ್ …

Read More »

ಚಿತೆಯ ಮೇಲೆ ಹೆಣ ಎಸೆದು,ಅಮಾನವೀತೆಯಗೆ ಸಾಕ್ಷಿಯಾದ ಸ್ಮಶಾನ……!

ಬೆಳಗಾವಿ- ಗುಂಡಿಯಲ್ಲಿ ಹೆಣ ಎಸೆದಿದ್ದಾಯ್ತು ಇದೀಗ ಬೆಳಗಾವಿಯಲ್ಲಿ ಚಿತೆ ಮೇಲೆ ಹೆಣ ಎಸೆದ ಅಮಾನವೀಯ ಘಟನೆಗೆ ಬೆಳಗಾವಿಯ ಸ್ಮಶಾನವೊಂದು ಸಾಕ್ಷಿಯಾಗಿದೆ. ಬೆಳಗಾವಿ ನಗರದಲ್ಲಿ ಕೊರೊನಾ ಸೋಂಕಿತರ ಸಾವು ದಿನದಿಂದ ದಿನಕ್ಕೆ ಹೆಚ್ವುತ್ತಲೇ ಇದೆ.ಬೆಳಗಾವಿಯಲ್ಲಿ ಬೇಕಾಬಿಟ್ಟಿ ಅಂತ್ಯಕ್ರಿಯೆ ನಡೆಯತ್ತಿದೆ‌,ಎನ್ನುವದಕ್ಕೆ ಮೋಬೈಲ್ ವಿಡಿಯೋವೊಂದು ಅದಕ್ಕೆ ಸಾಕ್ಷ್ಯ ಒದಗಿಸಿದೆ. ಬೆಳಗಾವಿ ನಗರದ ಮಧ್ಯಭಾಗದ ಸ್ಮಶಾನದಲ್ಲಿ ಕೊರೊನಾ ಸೋಂಕಿತರ ಅಂತ್ಯಕ್ರಿಯೆ ನಡೆಯುತ್ತಿದೆ. ಮಹಾನಗರ ಪಾಲಿಕೆಯ ಸದಾಶಿವ ನಗರ ಸ್ಮಶಾನದಲ್ಲಿ ಸೊಂಕಿತರ ಅಂತ್ಯಕ್ರಿಯೆ ಮಾಡಲಾಗುತ್ತಿದೆ. ಬೆಳಗಾವಿ ಮಹಾನಗರ …

Read More »