Breaking News

Breaking News

ಲಾಕ್ ಡೌನ್ ಫಾಲ್ಸ್,….ಗೋಕಾಕಿನಲ್ಲಿ ಮಿಡ್ ನೈಟ್ ಮಾರ್ಕೆಟ್…. !!!

ಬೆಳಗಾವಿ-ಜಿಲ್ಲಾಡಳಿತ ಲಾಕ್ ಡೌನ್ ಬಿಗಿಗೊಳಿಸಲು ಹಗಲು ಹೊತ್ತಿನಲ್ಲಿ ಬೆವರು ಸುರಿಸಿದ್ರೆ , ನಮ್ಮ ವ್ಯಾಪಾರಿಗಳು ಒಂದು ಹೆಜ್ಜೆ ಮುಂದಕ್ಕಿಟ್ಟು ರಾತ್ರಿ ಹೊತ್ತಿನಲ್ಲಿ ಮಾರ್ಕೆಟ್ ನಡೆಸಿ ಜನರ ಜೀವದ ಜತೆ ಚೆಲ್ಲಾಟ ವಾಡುತ್ತಿದ್ದಾರೆ ಬೆಳಗಾವಿ ಜಿಲ್ಲೆ ಈಗ ರೆಡ್ ಝೋನ್,ಕೊರೋನಾ ಹಾಟ್ ಸ್ಪಾಟ್ ಬೆಳಗಾವಿ ಜಿಲ್ಲೆಯಲ್ಲಿ 72 ಜನರಿಗೆ ಸೊಂಕು ತಗುಲಿದೆ. ಈ ಮಹಾಮಾರಿ ವೈರಸ್ ದಿನದಿಂದ ದಿನಕ್ಕೆ ತಾಲ್ಲೂಕಿನಿಂದ ತಾಲ್ಲೂಕಿಗೆ ರಣಕೇಕೇ ಹಾಕುತ್ತಿದೆ‌. ಆದರೂ ಬುದ್ದಿ ಕಲಿಯದ ಜನ ಮದ್ಯರಾತ್ರಿ …

Read More »

ಗುಂಡಿಕ್ಕಿ ತಾಲೂಕು ಪಂಚಾಯತ್ ಮಾಜಿ ಸದಸ್ಯನ ಹತ್ಯೆ

ಬೆಳಗಾವಿ- ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ರಾಜಾಪುರ ಗ್ರಾಮದಲ್ಲಿ ಗುಂಡಿಕ್ಕಿ ತಾಲೂಕು ಪಂಚಾಯತ್ ಮಾಜಿ ಸದಸ್ಯನ ಹತ್ಯೆ ಮಾಡಿದ ಘಟನೆ ನಡೆದಿದೆ. ಜಮೀನಿನ ಸೀಮೆಗಾಗಿ ಸಹೋದರ ಸಂಬಂಧಿಗಳ ನಡುವೆ ‌ಗಲಾಟೆ ನಡೆದು ತಾಲೂಕು ಪಂಚಾಯತ್ ಮಾಜಿ ಸದಸ್ಯನ ಮೇಲೆ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ. ಚಿಂತಾಪ್ಪ ರಾಮಪ್ಪ ಮೇಟಿ (55) ಮೃತ ವ್ಯಕ್ತಿಯಾಗಿದ್ದು ಸಹೋದರ ಸಂಬಂಧಿ ಗೋಪಯ್ಯ ಮೇಟಿ ಎಂಬಾತನಿಂದ ಈ ಕೃತ್ಯ ನಡೆದಿದೆ ಎಂದು ತಿಳಿದು ಬಂದಿದೆ. ಚಿಂತಪ್ಪಾ …

Read More »

ಗಡಿ ದಾಟಿದ, ಸತೀಶ್ ಸಾಹುಕಾರ್ ಸೋಶಿಯಲ್ ಸರ್ವಿಸ್……!!!

ಬೆಳಗಾವಿ- ಜಾರಕಿಹೊಳಿ ಸಹೋದರರಲ್ಲಿ ಸತೀಶ್ ಸಾಹುಕಾರ್ ಗೆ ಬಡವರ ಮೇಲೆ ಅತೀವ ಪ್ರೀತಿ,ಅವರು ದುಂದು ವೆಚ್ಚ ಮಾಡುವದೇ ಇಲ್ಲ,ಹತ್ತು ಹಲವಾರು ಬಾರಿ ಯೋಚಿಸಿ,ಪರಶೀಲಿಸಿ,ಎಲ್ಲಿ ಎನು ಮಾಡಬೇಕೋ ಅದನ್ನು ಮಾಡಿಯೇ ಬಿಡುತ್ತಾರೆ. ಯಮಕನಮರಡಿ ಕ್ಷೇತ್ರದಲ್ಲಿ ಬರುವ ಚಿಕ್ಕಾಲಗುಡ್ಡ ಗ್ರಾಮದ ಹಿರಿಯರು ಸತೀಶ್ ಸಾಹುಕಾರ್ ಅವರನ್ನು ಭೇಟಿಯಾಗಿ ,ಗೋವಾದ ಪಣಜಿಗೆ ಹೋದ ಚಿಕ್ಕಾಲಗುಡ್ಡ ಗ್ರಾಮದ ಕೆಲವು ಜನ ಸಂಕಷ್ಟದಲ್ಲಿದ್ದಾರೆ ಅವರಿಗೆ ಸಹಾಯ ಮಾಡಬೇಕು ಎಂದು ಕೇಳಿಕೊಂಡಾಗ,ಅದಕ್ಕೆ ತಕ್ಷಣ ಸ್ಪಂದಿಸಿದ ಸತೀಶ್ ಗೋವಾದಲ್ಲಿರುವ ತಮ್ಮ …

Read More »

ಕಂಟೈನ್ಮೆಂಟ್ ಝೋನ್ ಹಿರೇಬಾಗೇವಾಡಿಗೆ ಜಿಲ್ಲಾಧಿಕಾರಿ ಭೇಟಿ- ಗ್ರಾಮಸ್ಥರ ಜತೆ ಸಭೆ

ಕಂಟೈನ್ಮೆಂಟ್ ಝೋನ್ ಹಿರೇಬಾಗೇವಾಡಿಗೆ ಜಿಲ್ಲಾಧಿಕಾರಿ ಭೇಟಿ- ಗ್ರಾಮಸ್ಥರ ಜತೆ ಸಭೆ ————————————————————— ಅಗತ್ಯ ವಸ್ತುಗಳ ಪೂರೈಕೆಗೆ ಕ್ರಮ: ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಭರವಸೆ ಬೆಳಗಾವಿ-ಹಿರೇಬಾಗೇವಾಡಿ ಗ್ರಾಮಸ್ಥರು ಕೋವಿಡ್-೧೯ ಬಗ್ಗೆ ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಇಲ್ಲಿನ ಜನರ ಸಮಸ್ಯೆಗಳನ್ನು ಜಿಲ್ಲಾಡಳಿತ ಗಮನಿಸಿದ್ದು, ವೈದ್ಯಕೀಯ ಸೌಲಭ್ಯ, ಅಗತ್ಯ ವಸ್ತುಗಳ ಪೂರೈಕೆ, ಜಾನುವಾರುಗಳಿಗೆ ಮೇವು ಸೇರಿದಂತೆ ಎಲ್ಲ ಬಗೆಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಸೋಂಕು ಸಂಪೂರ್ಣವಾಗಿ ತಡೆಗಟ್ಟಲು ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಎಲ್ಲರೂ …

Read More »

ರಾಯಬಾಗ ಕುಡಚಿಯ ಮೂರು ಪಾಸಿಟೀವ್ ಕೇಸ್ ಪತ್ತೆ 72 ಕ್ಕೇರಿದ ಸೊಂಕಿತರ ಸಂಖ್ಯೆ

ಬೆಳಗಾವಿ- ಬೆಳಗಾವಿ ಪಾಲಿಗೆ ಇಂದು ಶುಭ ಶುಕ್ರವಾರ ಆಗಲಿಲ್ಲ ಯಾಕಂದ್ರೆ ಇಂದು ಬೆಳಗಿನ ಹೆಲ್ತ್ ಬುಲಿಟೀನ್ ಬಿಡುಗಡೆ ಯಾಗಿದೆ. ಈ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯ ಮೂರು  ಪಾಸಿಟಿವ್ ಕೇಸ್ ಪತ್ತೆಯಾಗಿವೆ ಬೆಳಗಾವಿ ಜಿಲ್ಲೆಯ ರಾಯಬಾಗ ಕುಡಚಿಯ ಮೂರು ಪಾಸಿಟೀವ್ ಕೇಸ್ ಪತ್ತೆಯಾಗಿದ್ದು ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 70 ರ ಗಡಿ ದಾಟಿ 72 ಕ್ಕೇರಿದೆ ನಿನ್ನೆ ಗುರುವಾರ ಒಂದೇ ದಿನ ಹದಿನಾಲ್ಕು ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದ್ದವು ಇಂದು …

Read More »

ಬೆಳಗಾವಿ ಜಿಲ್ಲೆಯಲ್ಲಿ ಇನ್ನೂ 1715 ಶಂಕಿತರ ರಿಪೋರ್ಟ್ ಬರೋದು ಬಾಕಿ…..

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ವೈರಾಣು ವಿನ ತಾಂಡವ ಮುಂದುವರೆದಿದೆ ಬೆಳಗಾವಿ ತಾಲ್ಕೂಕಿನ ಹಿರೇಬಾಗೇವಾಡಿ ಗ್ರಾಮವೊಂದರಲ್ಲಿಯೇ 36 ಸೊಂಕಿತರು ಪತ್ತೆಯಾಗಿದ್ದು ಈ ಮಹಾಮಾರಿ ವೈರಸ್ ಓರ್ವ ವೃದ್ದೆಯನ್ನು ಬಲಿ ಪಡೆದಿದ್ದು ಇದೇ ಗ್ರಾಮದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 69 ಕ್ಕೇರಿದೆ ಜಿಲ್ಲೆಯಲ್ಲಿ ಇನ್ನೂ 1715 ಶಂಕಿತರ ರಿಪೋರ್ಟ್ ಬಾಕಿ ಇದ್ದು,ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ ಇನ್ನೂ ಹೆಚ್ಚಳವಾಗುವ ಲಕ್ಷಣಗಳು ಕಾಣಿಸುತ್ತಿವೆ. ಬೆಳಗಾವಿ ಜಿಲ್ಲೆಯಲ್ಲಿ 69 ಜನ ಸೊಂಕಿತರ ಪೈಕಿ …

Read More »

ಬೆಳಗಾವಿಯಲ್ಲಿ ಕೊರೋನಾ ಸೊಂಕಿನ ಮಹಾಸ್ಪೋಟ.ಇಂದು ಗುರುವಾರ ಒಂದೇ ದಿನ 14 ಸೊಂಕಿತರ ಪತ್ತೆ 69 ಕ್ಕೇರಿದ ಸೊಂಕಿತರ ಸಂಖ್ಯೆ

ಬೆಳಗಾವಿ–ಬೆಳಗಾವಿ ಜಿಲ್ಲೆಯಲ್ಲಿ ಇಂದು ಗುರುವಾರ ಕೊರೋನಾ ಸೊಂಕು ದೊಡ್ಡ ಆಘಾತ ನೀಡಿದೆ.ಇಂದು ಒಂದೇ ದಿನ  14 ಜನ .ಸೊಂಕಿತರು ಪತ್ತೆಯಾಗಿದ್ದು ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ69 ಕ್ಕೆ     ತಲುಪಿದೆ. ಕೊರೋನಾ ಸೊಂಕು ಗಡಿನಾಡು ಗುಡಿ ಬೆಳಗಾವಿಯಲ್ಲಿ ತಾಂಡವಾಡುತ್ತಿದೆ ದಿನದಿಂದ ದಿನಕ್ಕೆ ಕೊರೋನಾ ಸೊಂಕು ತನ್ನ ಕದಂಬಬಾಹು ಚಾಚಿದೆ ಹಿರೇಬಾಗೇವಾಡಿಯಲ್ಲಿ ಇಂದು 12  ಸೊಂಕಿತರು ಪತ್ತೆಯಾಗಿದ್ದು ಹಿರೇಬಾಗೇವಾಡಿ ಯಲ್ಲಿ ಸೊಂಕಿತರ ಸಂಖ್ಯೆ37 ಕ್ಜೆ    ಏರಿದಂತಾಗಿದೆ. ಸಂಕೇಶ್ವರದಲ್ಲಿ  ಮತ್ತೆ ಇಬ್ಬರು  …

Read More »

ಕೆಲವು ದಿನಗಳ ಗೆಳೆಯ ‘ಕೊರೊನಾ’ ಗಿಳಿ ಇನ್ನಿಲ್ಲ..!

  ಕೆಲವು ದಿನಗಳ ಗೆಳೆಯ ಗಿಳಿ ಇಂದು ಸಂಜೆ ಮೃತಪಟ್ಟಿದೆ. ಕೆಲ ದಿನಗಳ ಹಿಂದೆ ಬೆಳಗಾವಿಯ ಸರ್ಕ್ಯೂಟ್ ಹೌಸ್ ನಲ್ಲಿ ಮರದ ಮೇಲಿಂದ ಗಿಳಿಯೊಂದು ಬಿದ್ದಿತ್ತು. ಮೇಲಿಂದ ಬಿದ್ದು ಕಾಲು ಮುರಿದುಕೊಂಡಿದ್ದ ಮುದ್ದಾದ ಗಿಳಿಗೆ ಮಾಧ್ಯಮ ಮಿತ್ರರಾದ ನಮ್ಮ ವಿಡಿಯೋ ಜರ್ನಲಿಸ್ಟ್ ಪ್ರತಾಪ್, ಪ್ರವೀಣ, ವಿನಾಯಕ ರಕ್ಷಣೆ ನೀಡಿದ್ದರು. ಕೆಲಸ ಒತ್ತಡದ ನಡುವೆ ಗಿಳಿಗೆ ಪಶು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಸಹ ಕೊಡಿಸಿದ್ರು. ನಂತರ ಬೆಳಗ್ಗೆ, ಸಂಜೆ ಅದಕ್ಕೆ …

Read More »

ಯಕ್ಸಂಬಾ CRPF ಯೋಧನ ಗಲಾಟೆ ಪ್ರಕರಣ,ಸದಲಗಾ ಪಿ ಎಸ್ಐ ಸ್ಸಪೆಂಡ್

ಬೆಳಗಾವಿ- ಸಿಆರ್‌ಪಿಎಪ್ ಯೋಧ ಸಚಿನ್ ಮೇಲೆ ಕೇಸ್ ದಾಖಲು ಮಾಡಿದ ಪ್ರಕರಣಕ್ಕೆ ಸಮಂಧಿಸಿಂತೆ ಕರ್ತವ್ಯದಲ್ಲಿ ಲೋಪ ಆರೋಪದಡಿ ಸದಲಗಾ ಸಬ್ ಇನ್ಸ್ಪೆಕ್ಟರ್ ಸಸ್ಪೆಂಡ್ ಮಾಡಲಾಗಿದೆ. ಯೋಧನ ಗಲಾಟೆ ಪ್ರಕರಣದ ಸಮಸ್ಯೆಯನ್ನು ಸರಿಯಾಗಿ ನಿರ್ವಹಣೆ ಮಾಡದ ಹಿನ್ನಲೆ ಪಿಎಸ್ಐ ಅನಿಲ ಕುಮಾರ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ಹೇಳಿದ್ದಾರೆ. ಪ್ರಕರಣದ ಕುರಿತು ತನಿಖೆ ಮುಂದುವರೆದಿದೆ. ಯೋಧ ಸಚಿನ್ ಬಿಡುಗಡೆಯಾದ ಬಳಿಕ ಆತನಿಂದ ಹೇಳಿಕೆ ಪಡೆದಿದ್ದು. …

Read More »

ಬುಧವಾರ ಸಂಜೆಯ ಹೆಲ್ತ್ ಬುಲಿಟೀನ್ ,ಬೆಳಗಾವಿಗೆ ಸಮಾಧಾನ

ಬೆಳಗಾವಿ- ಬುಧವಾರ ಸಂಜೆಯ ಹೆಲ್ತ್ ಬುಲಿಟೀನ್ ಬಿಡುಗಡೆಯಾಗಿದೆ ಬೆಳಗಾವಿ ಜಿಲ್ಲೆಯ ಯಾವುದೇ ಪಾಸಿಟೀವ್ ಪ್ರಕರಣ ಪತ್ತೆಯಾಗಿಲ್ಲ ಬುಧಾವಾರ ಸಂಜೆಯ ರಿಪೋರ್ಟ್ ಬೆಳಗಾವಿ ಜಿಲ್ಲೆಗೆ ಸಮಾಧಾನ ತಂದಿದೆ‌ ಬುಧಾವರಾ ಬೆಳಗಿನ ಹೆಲ್ತ್ ಬುಲಿಟೀನ್ ನಲ್ಲಿ ಸಂಕೇಶ್ವರದ ಹನ್ನೆರಡು ವರ್ಷದ ಬಾಲಕನಿಗೆ ಸುಂಕು ಇರುವದು ದೃಡವಾಗಿತ್ತು ಸಂಜೆಯ ಬುಲಿಟೀನ್ ಜಿಲ್ಲೆಗೆ ರಿಲ್ಯಾಕ್ಸ್ ತಂದಿದೆ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 55 ಇದೆ

Read More »