ಕೋವಿಡ್-೧೯ ಸೋಂಕಿತ ವ್ಯಕ್ತಿ ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್ ಬೆಳಗಾವಿ, ಏ.೧೮(ಕರ್ನಾಟಕ ವಾರ್ತೆ): ಕೋವಿಡ್-೧೯ ಸೋಂಕು ತಗುಲಿದ್ದ ವ್ಯಕ್ತಿಯೊಬ್ಬರು ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ತಿಳಿಸಿದ್ದಾರೆ. ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಳಗಾವಿ ತಾಲ್ಲೂಕಿನ ಬೆಳಗುಂದಿ ಗ್ರಾಮದ ೭೦ ವರ್ಷದ ವ್ಯಕ್ತಿ(ಪಿ-೧೨೬)ಯನ್ನು ಶನಿವಾರ (ಏ.೧೮) ಸಂಜೆ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿರುತ್ತದೆ. ಜಿಲ್ಲೆಯಲ್ಲಿ ಇಂದಿನವರೆಗೆ ಒಟ್ಟು 42 ಜನರಲ್ಲಿ ಸೋಂಕು ಪತ್ತೆಯಾಗಿದೆ. …
Read More »ಬೆಳಗುಂದಿಯ ಕೊರೋನಾ ಪಾಸಿಟೀವ್ ಈಗ ನೆಗೆಟೀವ್
ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಅವರು ದಿನಾಂಕ ೧೮-೪-೨೦೨೦ ರಂದು ನಡೆಸಿದ ಪತ್ರಿಕಾಗೋಷ್ಠಿ ಪ್ರಮುಖಾಂಶಗಳು.. * ಜಿಲ್ಲೆಯ ಮೊದಲ ಪಾಸಿಟಿವ್ ಪ್ರಕರಣದ ವ್ಯಕ್ತಿ ಗುಣಮುಖರಾಗಿದ್ದು, ಇದೀಗ ಮರು ಪರೀಕ್ಷೆ ವರದಿ ನೆಗೆಟಿವ್ ಬಂದಿರುತ್ತದೆ. * ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 42 ಜನರಲ್ಲಿ ಸೋಂಕು ಪತ್ತೆಯಾಗಿದೆ. ಜಿಲ್ಲೆಯ ಮೊದಲ ಪಾಸಿಟಿವ್ ಪ್ರಕರಣ ಪಿ-೧೨೬ ಈಗ ಗುಣಮುಖರಾಗಿದ್ದು, ಮರು ಪರೀಕ್ಷೆ ಬಳಿಕವೂ ವರದಿ ನೆಗೆಟಿವ್ ಬಂದಿರುತ್ತದೆ. * ಹಿರೇಬಾಗೇವಾಡಿ ಹಾಗೂ ಕುಡಚಿಯಲ್ಲಿ …
Read More »ಅಪಘಾತದಲ್ಲಿ ಮೃತಪಟ್ಟ ಪಿಎಸ್ಐ ಗಣಾಚಾರಿ ಪಾರ್ಥಿವ ಶರೀರಕ್ಕೆ ಸಚಿವ ಜಗದೀಶ್ ಶೆಟ್ಟರ್ ಅವರಿಂದ ಅಂತಿಮ ನಮನ
ಅಪಘಾತದಲ್ಲಿ ಮೃತಪಟ್ಟ ಪಿಎಸ್ಐ ಗಣಾಚಾರಿ ಪಾರ್ಥಿವ ಶರೀರಕ್ಕೆ ಸಚಿವ ಜಗದೀಶ್ ಶೆಟ್ಟರ್ ಅವರಿಂದ ಅಂತಿಮ ನಮನ ಬೆಳಗಾವಿ, ಕೊರೋನಾ ಸೊಂಕು ಹಿನ್ನೆಲೆಯಲ್ಲಿ ಲಾಕ್ ಡೌನ್ ಬಂದೋಬಸ್ತ್ ಗಾಗಿ ನಿಯೋಜಿಸಲಾಗಿದ್ದ ಸಂದರ್ಭದಲ್ಲಿ ಅಪಘಾತದಲ್ಲಿ ಮೃತಪಟ್ಟಿರುವ ಬೆಳಗಾವಿ ಖಡೇಬಜಾರ್ ಪೊಲೀಸ್ ಠಾಣೆಯ ಪಿಎಸ್ಐ ಮನೋಹರ ಗಣಾಚಾರಿ ಅವರ ಪಾರ್ಥಿವ ಶರೀರದ ದರ್ಶನ ಪಡೆದುಕೊಂಡ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಹಾಗೂ ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಅವರು ಶ್ರದ್ಧಾಂಜಲಿ …
Read More »ಹಿರೇಬಾಗೇವಾಡಿಯ ಮತ್ತೋರ್ವನ ರಿಪೋರ್ಟ ಪಾಸಿಟೀವ್ 42 ಕ್ಕೇರಿದ ಸೊಂಕಿತರ ಸಂಖ್ಯೆ…..
ಹಿರೇಬಾಗೇವಾಡಿಯ ಮತ್ತೋರ್ವನ ರಿಪೋರ್ಟ ಪಾಸಿಟೀವ್ 42 ಕ್ಕೇರಿದ ಸೊಂಕಿತರ ಸಂಖ್ಯೆ….. ಬೆಳಗಾವಿ – ಇಂದು ಬೆಳಿಗ್ಗೆ ಬಿಡುಗಡೆಯಾದ ಹೆಲ್ತ ಬುಲಿಟೀನ್ ನಲ್ಲಿ ಹಿರೇಬಾಗೇವಾಡಿಯ ಮತ್ತೋರ್ವ ಸೊಂಕಿತನಿಗೆ ಕೊರೋನಾ ಪಾಸಿಟೀವ್ ಇರುವದು ದೃಡವಾಗಿದೆ ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 42 ಕ್ಕೇರಿದೆ
Read More »ಲಾಕ್ ಡೌನ್ ಸಂಕಟ..ಬೆಳಗಾವಿಯ ಶಹಾಪೂರ ಪ್ರದೇಶದಲ್ಲಿ ರಸ್ತೆಯಲ್ಲೇ ಹೆರಿಗೆ….
ಬೆಳಗಾವಿ- ಬೆಳಗಾವಿಯ ಶಹಾಪೂರ ಪ್ರದೇಶದ ಮಾಹಿ ಆಸ್ಪತ್ರೆ ಬಳಿ ಮಹಿಳೆಯಬ್ಬಳ ರಸ್ತೆಯಲ್ಲೇ ಹೆರಿಗೆ ಆದ ಘಟನೆ ನಡೆದಿದೆ. ಮಹಿಳೆಯನ್ನು ಹೆರಿಗೆಗಾಗಿ ಮಕ್ಕಳ ಆಸ್ಪತ್ರೆಗೆ ತರಲಾಗಿತ್ತು ಆದರೆ ಈ ಆಸ್ಪತ್ರೆ ಬಂದ್ ಆಗಿತ್ತು ಅದಕ್ಕೆ ಈ ಮಹಿಳೆಯನ್ನು ಬೇರೆ ಆಸ್ಪತ್ರೆಗೆ ವಾಪಸ್ ಕರೆದುಕೊಂಡು ಹೋಗುವ ಸಂಧರ್ಭದಲ್ಲಿ ಮಹಿಳೆಯ ಹೆರಿಗೆ ರಸ್ತೆಯಲ್ಲೇ ಆಗಿದೆ . ವಡಗಾವಿ ಮೂಲದ ಈ ಮಹಿಳೆಯನ್ನು ಲಾಕ್ ಡೌನ್ ಸಂಧರ್ಭದಲ್ಲಿ ಎಲ್ಲ ಖಾಸಗಿ ಆಸ್ಪತ್ರೆಗಳು ಬಂದ್ ಆಗಿರುವ ಹಿನ್ನಲೆಯಲ್ಲಿ …
Read More »ಲಾಕ್ ಡೌನ್ ಬಂದೋಬಸ್ತಿಗೆ ಬರುತ್ತಿದ್ದ ಬೆಳಗಾವಿಯ ಪಿ ಎಸ್ ಐ ಸಾವು
ಬೆಳಗಿನ ಜಾವ ಮನೆಯಿಂದ ಠಾಣೆಗೆ ಬರುತ್ತಿದ್ದ ಬೆಳಗಾವಿಯ ಪಿ ಎಸ್ ಐ ಸಾವು …. ಬೆಳಗಾವಿ- ಬೆಳಗಿನ ಜಾವ ಮನೆಯಿಂದ ಕರ್ತವ್ಯ ನಿಭಾಯಿಸಲು ಠಾಣೆಗೆ ಬರುತ್ತಿದ್ದ ಬೆಳಗಾವಿಯ ಖಡೇಬಝಾರ್ ಠಾಣೆಯ ಪಿ ಎಸ್ ಐ ಗಣಾಚಾರಿ ಬೈಕ್ ಸ್ಕೀಡ್ ಆಗಿ ಬಿದ್ದು ಸ್ಥಳದಲ್ಲೇ ಸಾವನ್ನೊಪ್ಪಿದ್ದಾರೆ. ಬೆಳಗಾವಿ ಮಹಾನಗರದಲ್ಲಿ ಲಾಕ್ ಡೌನ್ ಬಿಗಿಗೊಳಿಸಲು ಬೆಳಗಿನ ಜಾವದಿಂದಲೇ ಬೆಳಗಾವಿ ಪೋಲೀಸರು ಲಾಕ್ ಡೌನ್ ಬಿಗಿಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದರು ಯಳ್ಳೂರ ರಸ್ತೆಯ ನಿವಾಸಿಯಾಗಿದ್ದ ಖಡೇಬಝಾರ್ …
Read More »ಇನ್ನೂ ನಾಲ್ಕು ದಿನ ಬೆಳಗಾವಿಯ ರವಿವಾರ ಪೇಠೆ ಬಂದ್
ಬೆಳಗಾವಿ- ಬೆಳಗಾವಿ ಮಹಾನಗರದಲ್ಲಿ ಇಂದು ಐದು ಕೊರೋನಾ ಸೊಂಕಿತರು ಪತ್ತೆಯಾದ ಹಿನ್ನಲೆಯಲ್ಲಿ ಮುಂದಿನ ನಾಲ್ಕು ದಿನಗಳವರೆಗೆ ಬೆಳಗಾವಿಯ ರವಿವಾರಪೇಠೆಯನ್ನು ಸಂಪೂರ್ಣವಾಗಿ ಬಂದ್ ಮಾಡಲು ನಗರ ಪೋಲೀಸ್ ಇಲಾಖೆ ನಿರ್ಧರಿಸಿದೆ . ಬೆಳಗಾವಿಯ ಕ್ಯಾಂಪ್ ಪ್ರದೇಶದ ಮೂವರಿಗೆ,ಮಾಳ ಮಾರುತಿ ಠಾಣೆ ವ್ಯಾಪ್ತಿಯ ಓರ್ವನಿಗೆ ,ಮತ್ತು ಎಪಿ ಎಂ ಸಿ ಠಾಣೆ ವ್ಯಾಪ್ತಿಯ ಏರ್ವನಿಗೆ ಸೊಂಕು ದೃಡವಾದ ಹಿನ್ನಲೆಯಲ್ಲಿ ನಗರ ಪೋಲೀಸ್ ಇಲಾಖೆ ಗಂಭೀರವಾಗಿದ್ದು ನಾಳೆಯಿಂದ ಬೆಳಗಾವಿ ನಗರದಲ್ಲಿ ಖಡಕ್ ಲಾಕ್ …
Read More »ಶುಕ್ರವಾರ ಬೆಳಗಾವಿಯಲ್ಲಿ ಕೊರೋನಾ ಸ್ಪೋಟ ಮತ್ತೆ ಐವರಿಗೆ ಸೊಂಕು, 41 ಕ್ಕೇರಿದ ಸೊಂಕಿತರ ಸಂಖ್ಯೆ…
ಬೆಳಗಾವಿಯಲ್ಲಿ ಮತ್ತೆ ಐವರಿಗೆ ಕೊರೋನಾ ಸೊಂಕು 41 ಕ್ಕೇರಿದ ಸೊಂಕಿತರ ಸಂಖ್ಯೆ ಬೆಳಗಾವಿ – ಬೆಳಗಾವಿಯಲ್ಲಿ ಕೊರೋನಾ ಮತ್ತೆ ಸ್ಪೋಟಗೊಂಡಿದೆ.ಇಂದು ಮತ್ತೆ ಐವರಿಗೆ ಸೊಂಕು ಪತ್ತೆ ಯಾಗಿದ್ದು ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 41 ಕ್ಕೇರಿದೆ ಇಂದು ಸಂಜೆ ಬಿಡುಗಡೆಯಾಗಿರುವ ಬುಲಿಟೀನ್ ನಲ್ಲಿ ಐವರಿಗೆ ಸೊಂಕು ಇರುವದು ದೃಡವಾಗಿದ್ದು ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ ಇಂದು ಕೊರೋನಾ ಸೊಂಕು ಇರುವ ಐದೂ ಜನರು ತಬ್ಲೀಗ್ ಜಮಾತಿನ ನಂಟು ಹೊಂದಿದವರು …
Read More »ಮಾರ್ಗಸೂಚಿ ಪ್ರಕಾರವೇ ಕ್ವಾರಂಟೈನ್ ವ್ಯವಸ್ಥೆ
ಬೆಳಗಾವಿ, : ಸರ್ಕಾರದ ಮಾರ್ಗಸೂಚಿ ಪ್ರಕಾರವೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಸೇರಿದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಹೋಟೆಲ್ ಸೇರಿದಂತೆ ವಿವಿಧ ಕಡೆಗಳಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಸ್ಪಷ್ಟಪಡಿಸಿದ್ದಾರೆ. ಕ್ವಾರಂಟೈನ್ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿರುವುದು ಸತ್ಯಕ್ಕೆ ದೂರವಾಗಿರುತ್ತದೆ. ಎಲ್ಲ ಕ್ವಾರಂಟೈನ್ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ವೈಯಕ್ತಿಕ ಸ್ವಚ್ಛತೆ ಸೇರಿದಂತೆ ಎಲ್ಲ ಬಗೆಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ. …
Read More »ಬೆಳಗಾವಿಯಲ್ಲಿ ಕೊರೋನಾ ವೈರಾಣು ಪ್ರಯೋಗಾಲಯಕ್ಕೆ ICMR ಹಸಿರು ನಿಶಾನೆ….
ಬೆಳಗಾವಿ- ಬೆಳಗಾವಿಯಲ್ಲಿ ಕೊರೋನಾ ಸೊಂಕು ಪತ್ತೆ ಮಾಡುವ ಲ್ಯಾಬ್ ಆರಂಭಿಸಲು ICMR ಹಸಿರು ನಿಶಾನೆ ನೀಡಿದೆ ಎಂದು ರಾಷ್ಟ್ರದ ಪ್ರತಿಷ್ಠಿತ ಹಿಂದೂ ಇಂಗ್ಲೀಷ್ ಪತ್ರಿಕೆ ಟ್ವಿಟ್ ಮಾಡಿದೆ ಬೆಳಗಾವಿಯ ಕೆ ಎಲ್ ಇ ಆಸ್ಪತ್ರೆಯ ಎದುರಿನ. ರಾಷ್ಟ್ರೀಯ ಪಾರಂಪರಿಕ ಔಷಧಿ ಸಂಶೋಧನಾ ಕೇಂದ್ರದ ಕಟ್ಟಡದಲ್ಲಿ ಈ ಪ್ರಯೋಗಾಲಯ ಆರಂಭವಾಗಲಿದೆ . ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರುಡುತ್ತಿದ್ದು ಕೊರೋನಾ ಸೊಂಕಿತರ ಗಂಟಲು ದ್ರವ ಪರೀಕ್ಷೆ ಇನ್ನು ಮುಂದೆ ತ್ವರಿತವಾಗಿ …
Read More »