Breaking News

Breaking News

ಖಾನಾಪೂರ ಅಭಯಾರಣ್ಯದಲ್ಲಿ ಚಿರತೆ ಬೇಟೆ…!!!

ಬೆಳಗಾವಿ- ಖಾನಾಪುರ ತಾಲೂಕಿನ ಕಿರಾವಳಿ ಗ್ರಾಮದ ಬಳಿ ಚಿರತೆಯೊಂದನ್ನು ಬೇಟೆಯಾಡಿ ಅದರ ಪಂಜು ಮತ್ತು ಎಲುಬುಗಳನ್ನು ತೆಗೆದುಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಲೋಂಡಾ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಕಿರಾವಳಿ ಮಠದ ಬಳಿ ಚಿರತೆಯನ್ನು ಬೇಟೆಯಾಡಲಾಗಿದ್ದು, ಸ್ಥಳೀಯರ ಪ್ರಕಾರ ಹತ್ಯೆಯಾಗಿರುವ ಚಿರತೆಯ ಎಲುಬುಗಳು, ನಾಲ್ಕು ಕಾಲಿನ ಪಂಜುಗಳನ್ನು ಕತ್ತರಿಸಿ ತೆಗೆದುಕೊಂಡು ಹೋಗಲಾಗಿದ್ದು, ಚಿರತೆಯ ದೇಹದ ಮೇಲೆ ಗುಂಡು ಹಾಕಿ ಕೊಂದಿರುವ ಗುರುತು ಇದೆ. ಈ ಭಾಗದಲ್ಲಿ ಉತ್ತರ ಭಾರತದಿಂದ …

Read More »

ಬಾರ್ ನಲ್ಲಿ ಫುಲ್ ಟೈಟ್…ಬೀದಿಯಲ್ಲಿ ಫುಲ್ ಫೈಟ್..

ಬೆಳಗಾವಿ- ಬೆಳಗಾವಿಯ ಟಿಳಕವಾಡಿ ಪ್ರದೇಶದ ಮೂರನೇಯ ಗೇಟ್ ಬಳಿಯ ಬಾರ್ ಒಂದರಲ್ಲಿ ಎರಡು ಯುವಕರ ಗುಂಪುಗಳ ನಡುವೆ ಘರ್ಷಣೆಯಾಗಿ ಮೂವರು ಜನ ಯುವಕರು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ ಭಾನುವಾರ ಮದ್ಯಾಹ್ನ ಬಾರ್ ನಲ್ಲಿ ಯುವಕರ ನಡುವೆ ಯಾವುದೋ ಒಂದು ವಿಷಯಕ್ಕೆ ಸಮಂಧಿಸಿದಂತೆ ವಾಗ್ವಾದ ನಡೆದಿದೆ ನಂತರ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಘರ್ಷಣೆಯಾಗಿದೆ ಒಂದು ಯುವಕರ ಗುಂಪು ಇನ್ನೊಂದು ಗುಂಪಿನ ಮೇಲೆ ಹಲ್ಲೆ ಮಾಡಿದೆ ಬಾರ್ ನಲ್ಲಿ ಆರಂಭವಾದ …

Read More »

ಕೊಳವೆ ಬಾವಿಯಲ್ಲಿ ಕಾವೇರಿಯ ಕೈ ಕಾಣಿಸಿತು

ಬೆಳಗಾವಿ -ಅಥಣಿ ತಾಲೂಕಿನ ಝುಂಜುರವಾಡ ಗ್ರಾಮದಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದ ಆರು ವರ್ಷದ ಬಾಲಕಿ ಕಾವೇರಿಯ ರಕ್ಷಣೆಗೆ NDRF ರಾಷ್ಟ್ರೀಯ ವಿಪತ್ತು ರಕ್ಷಣಾ ದಳದ ತಂಡ ಕಾರ್ಯಾಚರಣೆ ಆರಂಭಿಸಿದ್ದು 20 ಅಡಿ ಆಳದಲ್ಲಿ ಕಾವೇರಿಯ ಕೈ ಕಾಣಿಸಿಕೊಂಡಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ ಕೊಳವೆ ಬಾವಿಯ ಸುತ್ತಲು ಜೆಸಿಬಿ ಯಿಂದ ಕಾರ್ಯಾಚರಣೆ ಮುಂದುವರೆದಿದೆ ಸುಮಾರು ಹತ್ತು ಅಡಿ ಆಳ ಜೆಸಿಬಿಯಿಂದ ಮಣ್ಣು ತೆಗೆಯಲಾಗಿದೆ ಈಗ ಬಂಡೆಗಲ್ಲು ಹತ್ತಿರುವದರಿಂದ ಕಾರ್ಯಾಚರಣೆ ನಡೆಸಲು …

Read More »

ಕಾವೇರಿಯ ರಕ್ಚಣೆಗೆ ಧಾವಿಸಿದ ರಾಷ್ಟ್ರೀಯ ವಿಪತ್ತು ರಕ್ಷಣಾ ದಳ

ಬೆಳಗಾವಿ- ಅಪ್ಪ ಅಮ್ಮ ಅಟ್ಟಿಗೆ ಆರಿಸುತ್ತಿರುವಾಗ ಗದ್ದೆ ಯಲ್ಲಿ ಆಡುತ್ತ ಆಡುತ್ತ ತೆರೆದ ಕೊಳವೆ ಬಾವಿಗೆ ಜಾರಿದ ಕಂದಮ್ಮ ಕಾವೇರಿಯ ರಕ್ಷಣೆಗೆ ಅಥಣಿಯ ಝುಂಜುರವಾಡ ಗ್ರಾಮಕ್ಕೆ ಪೂನಾದಿಂದ ರಾಷ್ಟೀಯ ವಿಪತ್ತು ರಕ್ಷಣಾ ದಳದ ತಂಡ ಆಗಮಿಸಿದೆ ಜಿಲ್ಲಾಧಿಕಾರಿ ಎನ್ ಜಯರಾಂ ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಝುಂಜುರವಾಡ ಗ್ರಾಮದಲ್ಲಿ ಠಿಖಾನಿ ಹೂಡಿದ್ದು ತೆರೆದ ಬಾವಿಯ ಇಪ್ಪತ್ತು ಅಡಿ ಆಳದಲ್ಲಿ ಕಾವೇರಿಯ ಬಟ್ಟೆ ಕಾಣಿಸಿಕೊಂಡಿದ್ದು ಕಾವೇರಿಯನ್ನು …

Read More »

ಬೆಳಗಾವಿ ಬಸ್ ನಿಲ್ದಾಣದಲ್ಲಿ ಹಗಲು ದರೋಡೆ ನಾಲ್ಕು ಲಕ್ಷ ಲೂಟಿ.

ಬೆಳಗಾವಿ-ನಿಂಬೆಹಣ್ಣು ಖರೀಧಿ ಮಾಡಲು ಗೋವಾದಿಂದ ಬೆಳಗಾವಿಗೆ ಬಂದ ವ್ಯಾಪಾರಿಯೊಬ್ಬನಿಗೆ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದ ಬಳಿ ಚಾಕು ತೋರಿಸಿ ಬಂಗಾರದ ಆಭರಣ ನಗದು ಹಣ ಸೇರಿದಂತೆ ಸುಮಾರು ನಾಲ್ಕು ಲಕ್ಷ ರೂ ಲೂಟಿ ಮಾಡಿದ ಘಟನೆ ನಡೆದಿದೆ ಗೋವಾದಿಂದ ಬಸ್ ಮೂಲಕ   ನಿಂಬೆಹಣ್ಣು ಖರೀಧಿಸಲು ಬೆಳಗಾವಿಗೆ ಬಂದ ಸಂದೀಪ ಕಾಶಿನಾಥ ಧೋಡಣಕರ ಎಂಬ ವ್ಯೆಕ್ತಿಗೆ ಬೆಳಗಾವಿಯ ಹೊಸ ಸಿಬಿಟಿ ಬಸ್ ನಿಲ್ದಾಣದ ಬಳಿ ಚಾಕು ತೋರಿಸಿ ಆತನ ಬಳಿ …

Read More »

ಸತೀಶ ಜಾರಕಿಹೊಳಿಗೆ ಶಂಕರ ಮುನವಳ್ಳಿ ಸವಾಲ್…!

ಬೆಳಗಾವಿ- ಮೆಥೋಡಿಸ್ಟ್ ಚರ್ಚ್ ಬಳಿ ಇರುವ ಕುಲಕರ್ಣಿ ಜಾಗಕ್ಕೆ ಸಂಬಂಧಿಸಿದಂತೆ ತನ್ನ ಪರವಾಗಿ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ನೀಡಿರುವ ತೀರ್ಪಿನಿಂದ ಉತ್ತೇಜಿತಗೊಂಡಿರುವ ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ, ಧೈರ್ಯ ಇದ್ದರೆ ಜಿಲ್ಲಾಡಳಿತ ಮತ್ತು ತಂತ್ರಗಾರಿಕೆ ರೂಪಿಸುತ್ತಿರುವ ಮಾಜಿ ಸಚಿವ ಸತೀಶ ಜಾರಕಿಹೊಳಿ  ಕೆಎಟಿ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಗೆ ಅಪೀಲು ಸಲ್ಲಿಸಿದರೂ ಕೂಡ ನನ್ನದೇ ಗೆಲುವು. ಬೇಕಿದ್ದರೆ ಜಿಲ್ಲಾಡಳಿತ ಈ ನನ್ನ ಸವಾಲು ಸ್ವೀಕರಿಸಿ ಮುಂದುವರಿಯಬಹುದು ಎಂದಿದ್ದಾರೆ.ಶನಿವಾರ …

Read More »

ಬೆಳಗಾವಿಯಲ್ಲಿ ತೆಲೆ ಎತ್ತಲಿದೆ ಹೈಡ್ರಾಲಿಕ್ ಮಲ್ಟೀ ಲೇವಲ್ ಕಾರ್ ಪಾರ್ಕಿಂಗ್..

ಬೆಳಗಾವಿ- ಬೆಳಗಾವಿ ಮಹಾನಗರ ದಿನದಿಂದ ದಿನಕ್ಕೆ ಮಾಡರ್ನ್ ಆಗುತ್ತಲೇ ಇದೆ ನಗರದ ಪಾರ್ಕಿಂಗ್ ಸಮಸ್ಯೆಯನ್ನು ಬಗೆ ಹರಿಸಲು ನಗರದಲ್ಲಿ ಮಲ್ಟೀಲೇವಲ್ ಕಾರ್ ಪಾರ್ಕಿಂಗ್ ಕಟ್ಟಡಗಳನ್ನು ನಿರ್ಮಿಸಲು ಮಹಾನಗರ ಪಾಲಿಕೆ ಮುಂದಾಗಿದೆ ಬೆಳಗಾವಿ ನಗರದ ಹೃದಯ ಭಾಗದಲ್ಲಿರುವ ಬಾಪಟ ಗಲ್ಲಿಯಲ್ಲಿ 4.5 ಕೋಟಿ ರೂ ವೆಚ್ಚದಲ್ಲಿ ಹೈಡ್ರಾಲಿಕ್ ಲಿಫ್ಡ ಆಧಾರದ ಮಲ್ಟೀ ಲೇವಲ್ ಕಾರ್ ಪಾರ್ಕಿಂಗ್ ಕಟ್ಟಡ ನಿರ್ಮಿಸಲು ಈಗಾಗಲೇ ಟೆಂಡರ್ ಕರೆಯಲಾಗಿದ್ದು ಎರಡು ತಿಂಗಳಲ್ಲಿ ಕಾಮಗಾರಿ ಶುರುವಾಗಲಿದೆ ನಗರದಲ್ಲಿ ಕಾರ್ …

Read More »

ಸಂಸದರಿಂದ ಪಾಸ್ ಪೋರ್ಟ್ ಸೇವಾ ಕೇಂದ್ರದ ಸ್ಥಳ ಪರಶೀಲನೆ

ಬೆಳಗಾವಿ-ಸಂಸದ ಸುರೇಶ ಅಂಗಡಿ ಅವರ ಹಲವಾರು ವರ್ಷಗಳ ಹೋರಾಟದ ಫಲವಾಗಿ ಬೆಳಗಾವಿಗೆ ಪಾಸ್ ಪೋರ್ಟ್ ಸೇವಾ ಕೇಂದ್ರ ಮಂಜೂರಾಗಿದ್ದು ಶನಿವಾರ ಸಂಸದ ಸುರೇಶ ಅಂಗಡಿ ನಗರದ ಕೇಂದ್ರ ಅಂಚೆ ಕಚೇರಿಯಲ್ಲಿ ಸ್ಥಳ ಪರಶೀಲನೆ ಮಾಡಿದರು ಈ ಸಂಧರ್ಭದಲ್ಲಿ ಮಾತನಾಡಿದ ಸಂಸದ ಸುರೇಶ ಅಂಗಡಿ ಬೆಳಗಾವಿ ನಗರದಲ್ಲಿ ಪಾಸ್ ಪೋರ್ಟ ಸೇವಾ  ಕೇಂದ್ರ ಮಂಜೂರಾಗಿದ್ದು ನಗರದ ಕೇಂದ್ರ ಅಂಚೆ ಕಚೇರಿಯಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರ ಕಾರ್ಯಾರಂಭ ಮಾಡಲಿದೆ ಎಂದರು ನಗರದ …

Read More »

ಬೆಳಗಾವಿಯಲ್ಲಿ ಉದ್ಘಾಟನೆಗೆ ರೆಡಿ ಆಯ್ತು ವಾಟರ್ ಪಾರ್ಕ…

ಬೆಳಗಾವಿ – ಬೆಳಗಾವಿ ನಗರದ ಹೊರ ವಲಯದಲ್ಲಿ ಪೀರನವಾಡಿ ಪರಿಸರದಲ್ಲಿ ವಾಟರ್ ಪಾರ್ಕ ಉದ್ಘಾಟನೆಗೆ ರೆಡಿಯಾಗಿದೆ ಬೆಳಗಾವಿ ನಗರದಿಂದ 12 ಕಿ ಮೀ ದೂರದಲ್ಲಿ ಪೀರನವಾಡಿ ಗ್ರಾಮದ ಜೈನ ಕಾಲೇಜಿನಿಂದ ಮೂರು ಕಿ ಮೀ ದೂರದಲ್ಲಿ ಯಶನೀಶ್ ಫನ್ ವರ್ಡ 27  ರಂದು ಉದ್ಘಾಟನೆಯಾಗಲಿದ್ದು 29 ರಿಂದ ಜನರ ಸೇವೆಗೆ ಲಭ್ಯವಾಗಲಿದೆ ಎಂಟೂವರೆ ಎಕರೆ ಪ್ರದೇಶದಲ್ಲಿ ಈ ವಾಟರ್ ಪಾರ್ಕ ನಿರ್ಮಿಸಲಾಗಿದ್ದು 27 ರಂದು ಕೈಗಾರಿಕಾ ಸಚಿವ ಆರ್ ವ್ಹಿ …

Read More »

ಬೆಳಗಾವಿ ಸ್ಮಾರ್ಟ್ ಬಸ್ ನಿಲ್ಧಾಣದ ಅಡಿಪಾಯ ರೆಡಿ…

ಬೆಳಗಾವಿ- ಉತ್ತರ ಕರ್ನಾಟಕದ ಹೆಬ್ಬಾಗಿಲು ಗಡಿನಾಡ ಗುಡಿ ಕರ್ನಾಟಕ,ಗೋವಾ ಮತ್ತು ಮಹಾರಾಷ್ಟ್ರ ಮೂರು ರಾಜ್ಯಗಳ  ಸಂಪರ್ಕದ ಕೊಂಡಿ ಸ್ಮಾರ್ಟ್ ಸಿಟಿ ಬೆಳಗಾವಿ ನಗರದ ಸ್ಮಾರ್ಟ್ ಬಸ್ ನಿಲ್ಧಾಣದ ಕಾಮಗಾರಿ ಭರದಿಂದ ಸಾಗಿದೆ ಡಿಸೆಂಬರ 3 – 2016   ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೈಟೆಕ್ ಬಸ್ ನಿಲ್ಧಾಣದ ಕಾಮಗಾರಿಗೆ ಚಾಲನೆ ನೀಡಿ ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ತಾಕೀತು ಮಾಡಿದ್ದರು 32 ಕೋಟಿ 48 ಲಕ್ಷ ರೂ ಅನುದಾನದಲ್ಲಿ …

Read More »