ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಹಣಕಾಸು ಸ್ಥಾಯಿ ಸಮಿತಿಯ ಅಧ್ಯಕ್ಷ ರತನ ಮಾಸೇಕರ ಅವರು ಸರ್ಪಲಸ್ ಬಜೆಟ್ ಮಂಡಿಸಿದ್ದಾರೆ ಈ ಬಾರಿ ಬಜೆಟ್ ಗಾತ್ರ ಶೇ ೧೫ ರಷ್ಟು ಇಳಿಕೆಯಾಗಿದ್ದು ಪಾಲಿಕೆಯ ಆದಾಯ ಹೆಚ್ಚಿಸಲು ಅನೇಕ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಪಾಲಿಕೆಯ ಆದಾಯ ಹೆಚ್ಚಿಸಲು ಪಾಲಿಕೆ ವ್ಯಾಪ್ತಿಯ ಸ್ವಯಂ ಘೋಷಿತ ಆಸ್ತಿ ತೆರಿಗೆಯ ಎಲ್ಲ ಆಸ್ತಿಗಳನ್ನು ಮರು ಸರ್ವೆ ಮಾಡಲು ಹೊರ ಗುತ್ತಿಗೆ ನೀಡಿ ಆಸ್ತಿ ತೆರಿಗೆ ವ್ಯವಸ್ಥೆಯನ್ನು ಸಂಪೂರ್ಣವಾಗಿ …
Read More »ಶಾಸಕ ಸೇಠ ವಿರುದ್ಧ ದೂರು ನೀಡಲು, ಜಿಲ್ಲಾ ಉಸ್ತುವಾರಿ ಸಚಿವರ ಬಳಿ ನಗರ ಸೇವಕರ ನಿಯೋಗ
ಬೆಳಗಾವಿ- ದಲಿತ ನಗರಸೇವಕನಿಗೆ ಅನ್ಯಾಯ ಬಜೆಟ್ ಮೀಟಿಂಗ್ ಪ್ರಾರಂಭ ವಾಗುತ್ತಿದ್ದಂತೆ ಆರಂಭದಲ್ಲಿ ಕರೆಂಟ್ ಶಾಕ್ ನೀಡಿತು ಕರೆಂಟ್ ಬಂದ ನಂತರ ನಗರ ಸೇವಕ ಚಿಕ್ಕಲದಿನ್ನಿ ಶಾಕ್ ನೀಡಿದರು ಬಜೆಟ್ ಮಂಡನೆಗೆ ಮಹಾಪೌರರು ಆದೇಶಿಸುತ್ತಿದಂತೆ ಮದ್ಯ ಪ್ರವೇಶಿಸಿದ ನಗರ ಸೇವಕ ಚಿಕ್ಕಲದಿನ್ನಿ ಮಾತನಾಡಿ ಶಾಸಕ ಫಿರೋಜ್ ಸೇಠ ತಮ್ಮ ವಾರ್ಡಿನಲ್ಲಿ ನೂರು ಕೋಟಿ ಅನುದಾನದ ಕಶಮಗಾರಿಗಳನ್ನು ಬಸವ ಕಾಲೋನಿಯಲ್ಲಿ ಪೂಜೆ ನೆರವೇರಿಸುವಾಗ ಸೇಠ ಅವರು ತಮಗೆ ಆಮಂತ್ಣಣ ನೀಡಿಲ್ಲ ದಲಿತ ನಗರ …
Read More »ಮೇಯರ್, ಉಪ ಮೇಯರ್,ಕಮಿಷ್ನರ್ ಗೆ ಹೊಸ ವೇರಣಾ ಕಾರು
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಡೆಪ್ಯುಟಿ ಮೇಯರ್,ಹಾಗು ಪಾಲಿಕೆ ಆಯುಕ್ತರಿಗೆ ಹೊಸ ಹುಂದಾಯಿ ಕಂಪನಿಯ ಮೂರು ಕಾರುಗಳನ್ನು ಖರೀದಿಸಲು ಪಾಲಿಕೆ ಹಣ ಪಾವತಿ ಮಾಡಿದ್ದು ವಾರದಲ್ಲಿ ಮೂರು ಹೊಸ ವೇರಣಾ ಕಾರುಗಳು ಪಾಲಿಕೆ ಆವರಣದಲ್ಲಿ ರಾರಾಜಿಸಲಿವೆ ಒಂದು ವೇರಣಾ ಕಾರಿನ ಬೆಲೆ ೬ ಲಕ್ಷ ೭೮ ಸಾವಿರವಿದ್ದು ಮೂರು ಕಾರಿನ ಮೊತ್ವನ್ನು ಕಂಪನಿಯ ಏಜನ್ಸಿಗೆ ಪಾವತಿ ಮಾಡಲಾಗಿದೆ ಮೇಯರ್ ಸರೀತಾ ಪಾಟೀಲ ಅವರು ಹೊಸ ವಾಹನ ನೀಡುವಂತೆ ಆಗ್ರಹಿಸಿ …
Read More »ಅನೀಲ ಬೆನಕೆ ಕ್ರಿಕೇಟ್ ಟ್ರೋಫಿಗೆ ಶ್ರೀಗಳ ಚಾಲನೆ
ಅನೀಲ ಬೆನಕೆ ಕ್ರಿಕೇಟ್ ಟ್ರೋಫಿಗೆ ಶ್ರೀಗಳ ಚಾಲನೆ ಬೆಳಗಾವಿ-ಪ್ರಸಕ್ತ ಸಾಲಿನ ಅನಿಲ ಬೆನಕೆ ಕ್ರಿಕೆಟ್ ಪಂದ್ಯಾವಳಿಯನ್ನು ಕಾರಂಜಿಮಠದ ಶ್ರೀಗಳು ಉದ್ಘಾಟಿಸಿದರು ಸ್ಟಂಪ್ ಗಳಿಗೆ ಪೂಜೆ ನೆರವೇರಿಸಿ ಶಾಂತಿಯ ಸಂಕೇತವಾಗಿರುವ ಪಾರಿವಾಳಗಳನ್ನು ಹಾರಿ ಬಿಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಲಾಯಿತು ಈ ಸಂಧರ್ಭದಲ್ಲಿ ಮಾತನಾಡಿದ ಶ್ರೀ ಗಳು ಬೆಳಗಾವಿಯಲ್ಲಿ ನಡೆಯುತ್ತಿರುವ ಅನೀಲ ಬೆನಕೆ ಕ್ರಿಕೆಟ್ ಪಂದ್ಯಾವಳಿಗೆ ದೇಶದ ವಿವಿಧ ರಾಜ್ಯಗಳ ತಂಡಗಳು ಭಾಗವಹಿಸುತ್ತಿವೆ ಕ್ರಿಡಾಪಟುಗಳು ಈ ಪಂದ್ಯಾವಳಿಯ ಸದುಪಯೋಗ ಪಡಿಸಿಕೊಂಡು ತಮ್ಮ …
Read More »ಸಿದ್ಧು ಆಡಳಿತ ಹಳಿ ತಪ್ಪಿದೆ- ಸವಸುದ್ಧಿ ಹೇಳಿಕೆ
ಸ್ವಪಕ್ಷಕ್ಕೆ ಕಾಂಗ್ರೆಸ್ ನಾಯಕರಿಂದಲೇ ಮೋಸ: ಲಕ್ಕನ್ನ ಸವಸುದ್ದಿ ಗುಡುಗು ಬೆಳಗಾವಿ: ಗೋಕಾಕ ತಾಲೂಕು ಕಲ್ಲೊಳ್ಳಿ ಪಟ್ಟಣ ಪಂಚಾಯಿತಿಗೆ ಸಿಎಂ ಸಿದ್ದರಾಮಯ್ಯ ಅವರಿಂದ ಬಿಜೆಪಿ ಅಭ್ಯರ್ಥಿಗಳ ನೇಮಕ ಮಾಡುವ ಕೆಲಸ ನಡೆದಿದೆ ಎಂದು ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾ ಅಶ್ಯಕ್ಷ ಲಕ್ಕನ್ನ ಸವಸುದ್ದಿ ಆಧಾರ ಸಹಿತ ಆರೋಪಿಸಿದ್ದಾರೆ. ಸಿದ್ದರಾಮಯ್ಯ ಆಡಳಿತ ಹದ ತಪ್ಪಿ, ಪಕ್ಷದ ಹಳಿ ತಪ್ಪುತ್ತಿದೆ. ಇದರಿಂದಲೇ ಎಸ್. ಎಂ. ಕೃಷ್ಣ ಪಕ್ಷದಿಂದ ಹೊರನಡೆದದ್ದರಲ್ಲಿ ಸಂಶಯವಿಲ್ಲ ಎಂದು ಇಂದು ಸುದ್ದಿಗೋಷ್ಠಿಯಲ್ಲಿ …
Read More »ಬೆಳಗಾವಿ ಟ್ರಾಫಿಕ್ ಸುಧಾರಣೆಗೆ ಡಿಜೆ ಸೂಚನೆ
ಬೆಳಗಾವಿ:ಟ್ರಾಫಿಕ್ ಸುಧಾರಣೆಗೆ ವ್ಯಾಪಕ ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯುಕ್ತರು ಹಾಗೂ ಎಸ್ಪಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ನ್ಯಾಯಾಧೀಶ ಆರ್. ಜೆ. ಸತೀಶಸಿಂಗ್ ತಿಳಿಸಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಅವರು ಬೆಳಗಾವಿಯಲ್ಲಿ ಟ್ರಾಫಿಕ್ ಅಫೇನ್ಸಸ್ ತೀರಾ ಹೆಚ್ಚಿದೆ ಎಂದು ನ್ಯಾಯಾಧೀಶರು ಅಸಮಧಾನ ವ್ಯಕ್ತಪಡಿಸಿದರು. ಉತ್ತರ ಕರ್ನಾಟಕದಲ್ಲಿ ಟ್ರಾಫಿಕ್ ಸೆನ್ಸ್, ಕಾನೂನುಗಳ ಪರಿಪಾಲನೆ ಇಲ್ಲ. ಸುಪ್ರೀಂಕೋರ್ಟಗೆ ನಾನೇ ವಾಗ್ದಾಣ ನೀಡಿದಂತೆ ಟ್ರಾಫಿಕ್ ಸುಧಾರಣೆ ಮಾಡುವುದು ಪೊಲೀಸರಿಗೆ ಅನಿವಾರ್ಯ. ಇಂದಿನಿಂದಲೇ ಪೊಲೀಸ್ …
Read More »ಕಾರ್ಟೂನ್ ದಲ್ಲಿ ಮೂಡಿದ ಖಾಕಿ ಖದರ್..!
ಕಾರ್ಟೂನ್ ನಲ್ಲಿ ಖಾಕಿಗೆ ಅದ್ಧೂರಿ ಚಾಲನೆ: ಬೆಳಗಾವಿ: ಅಪರಾಧ ತಡೆದು ಸಾಮರಸ್ಯತೆ ಮೂಡಿಸುವ ಪೊಲೀಸ್ ಇಲಾಖೆಯ ಕಾರ್ಯವೈಖರಿ ಮತ್ತು ನಾಗರಿಕರು ವಹಿಸಬೇಕಾದ ಎಚ್ಚರಿಕೆಯನ್ನು ಪ್ರತಿಬಿಂಬಿಸುವ ಪರಿಣಾಮಕಾರಿ ಕಾರ್ಟೂನ್ ನಲ್ಲಿ ಖಾಕಿ ಇಂದು ಬೆಳಿಗ್ಗೆ ಸುಂದರ ಪರಿಸರದ ಶರ್ಖತ್ ಉದ್ಯಾನದಲ್ಲಿ ಪ್ರಾರಂಭವಾಯಿತು. ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಜೆ. ಸತೀಶಸಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಪೊಲೀಸ್ ಆಯುಕ್ತ ಟಿ. ಜೆ. ಕೃಷ್ಣಭಟ್, ನ್ಯಾಯಾಧೀಶರಾದ ಬಸವರಾಜ ಚಿಗರೆಡ್ಡಿ, ದೇಶಪಾಂಡೆ ಜಿ. ಎಸ್, ಎಂ. …
Read More »ಎಸ್ ಎಂ ಕೃಷ್ಣಾ ಅವರನ್ನು ಬಿಟ್ಟು ಕೊಡುವದಿಲ್ಲ,ಅವರ ವಿರುದ್ಧ ಮಾತನಾಡಿದರೆ ಸುಮ್ಮನೇ ಕುಳಿತುಕೊಳ್ಳುವದಿಲ್ಲ- ಶಂಕರ ಮುನವಳ್ಳಿ
ಬೆಳಗಾವಿ- ರಾಜ್ಯದ ಕಾಂಗ್ರೆಸ್ ನಾಯಕರು ಎಸ್ ಎಂ ಕೃಷ್ಣಾ ಅವರನ್ನು ಮರಳಿ ಕಾಂಗ್ರೆಸ್ ತರುವ ಪ್ರಯತ್ನ ಮಾಡದೇ ಅವರ ಮನಸ್ಸಿಗೆ ನೋವಾಗುವ ರೀತಿಯಲ್ಲಿ ಹೇಳಿಕೆ ನೀಡುತ್ತರುವದಕ್ಕೆ ಕಾಂಗ್ರೆಸ್ ಮುಖಂಡ ಶಂಕರ ಮುನವಳ್ಳಿ ಆಕ್ರೋಶ ವ್ಯೆಕ್ತ ಪಡಿಸಿದ್ದಾರೆ ನಗರದಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಅವರು ದಿನೇಶ ಗುಂಡುರಾವ ಮತ್ತು ರಮೇಶ ಕುಮಾರ್ ಅವರು ಎಸ್ ಎಂ ಕೃಷ್ಣಾ ಅವರಿಗೆ ನೋವಾಗುವ ರೀತಿಯಲ್ಲಿ ಹೇಳಿಕೆ ನೀಡುವದನ್ನು ನಿಲ್ಲಿಸಲಿ ಎಸ್ ಎಂ ಕೃಷ್ಣಾ ಇಲ್ಲದೇ …
Read More »ಖಾನಾಪೂರ ರಕ್ಷಿತಾರಣ್ಯದಲ್ಲಿ ಜಿಂಕೆ ಬೇಟೆ
ಬೆಳಗಾವಿ- ಖಾನಾಪೂರ ತಾಲೂಕಿನ ಗೋಲಹಳ್ಳಿ ಅರಣ್ಯದಲ್ಲಿ ಬೇಟೆಗೆ ಜಿಂಕೆಯೊಂದು ಬಲಿಯಾಗಿದೆ.ಈ ಪ್ರಕರಣಕ್ಕೆ ಸಮಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದ್ದು ಬೇಟೆಗೆ ಬಳಿಸಿದ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ ಬೆಳಗಾವಿಯ ಖಾನಾಪುರ ಅರಣ್ಯ ಪ್ರದೇಶದಲ್ಲಿ ಜಿಂಕೆ ಬೇಟೆ ನಡೆದ ಪ್ರಕರಣವನ್ನು- ಅರಣ್ಯ ಇಲಾಖೆ ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆ,ನಡೆಸುವ ಮೂಲಕ ಪತ್ತೆ ಮಾಡಿದ್ದಾರೆ ನಂದಗಡ ಠಾಣೆಯಲ್ಲಿ ಪ್ರಕರಣ ದಾಖಲು.ಬಂಧಿತರಿಂದ ಒಂದು ಬಂದೂಕು. 2ಲಾಂಗೂ ಮಚ್ಚು ಜಪ್ತಿ ಖಾನಾಪುರ ತಾಲೂಕಿನ ಬೀಡಿ ಗ್ರಾಮದ ಪರ್ವೇಜ್ ಶಮಶೇರ್ ಸೇರಿ ಇಬ್ಬರ …
Read More »ನೇಗಿನಹಾಳದಲ್ಲಿ ಹಾಡುಹಗಲೇ ವ್ಯೆಕ್ತಿಯ ಕೊಲೆ
ಬೆಳಗಾವಿ- ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದ ಬಸ್ ನಿಲ್ಧಾಣದಲ್ಲಿ ಮಗನೊಬ್ಬ ತನ್ನ ಸ್ವಂತ ಚಿಕ್ಕಪ್ಪನನ್ನೇ ಕುಡಗೋಲಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿದೆ ಮಲ್ಲಪ್ಪ ಸಿದ್ಧಪ್ಪ ಭೂತಾಳೆ ಕೊಲೆಯಾದ ದುರ್ದೈವಿಯಾಗಿದ್ದು ಆರೋಪಿ ಸುರೇಶ ಭೂತಾಳೆ ಪರಾರಿಯಾಗಿದ್ದಾನೆ ಹತ್ಯೆಗೆ ಭೂ ವಿವಾದ ವೇ ಕಾರಣ ಎಂದು ತಿಳಿದು ಬಂದಿದೆ ಬಸ್ ನಿಲ್ಧಾಣದಲ್ಲಿ ಸಾರ್ವಜನಿಕರ ಎದುರೇ ಮಲ್ಲಪ್ಪ ಭೂತಾಳೆಯನ್ನು ಅಟ್ಟಾಡಿಸಿ ಕುಡಗೋಲಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಬೈಲಹೊಂಗಲ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Read More »