Breaking News

ಬೆಳಗಾವಿ ಪಾಲಿಕೆಯಲ್ಲಿ ಕಾರ್.. ವಾರ್ ಹಳೆ ಅಂಬ್ಯಾಸಿಡರ್ ಆಯ್ತು ಡಿಬಾರ್..!

ಬೆಳಗಾವಿ- ಮಹಾನಗರ ಪಾಲಿಕೆಯಲ್ಲಿ ಹೊಸ ಕಾರಿಗಾಗಿ ಕದನ ಶುರುವಾಗಿದೆ ತಮಗೆ ಹೊಸ ಕಾರು ಬೇಕು ಎಂದು ಪಟ್ಟು ಹಿಡಿದಿರುವ ಡಪ್ಯುಟಿ ಮೇಯರ್ ಸಂಜಯ ಶಿಂಧೆ, ಪಾಲಿಕೆ ಅಂಬ್ಯಾಸಿಡರ್ ಕಾರನ್ನು ತ್ಯೇಜಿಸಿ ಖಾಸಗಿ ವಾಹನದಲ್ಲಿ ಪಾಲಿಕೆ ಕಚೇರಿಗೆ ಬರುತ್ತಿದ್ದಾರೆ. ಪಾಲಿಕೆಯ ಅಂಬ್ಯಾಸಿಡರ್ ಕಾರ್ ರೀಪೇರಿಗೆ ಬಂತು ಈ ಕಾರನ್ನು ಹುಬ್ಬಳ್ಳಿಯ ಗ್ಯಾರೇಜಿಗೆ ಕಳುಹಿಸಿ 50 ಸಾವಿರ ಖರ್ಚುಮಾಡಿ ಕಾರು ದುರಸ್ಥಿ ಮಾಡಲಾಯಿತು ಅಲ್ಲಿಯವರೆಗೆ ಉಪಮಹಾಪೌರರು ಪಾಲಿಕೆ ಆರೋಗ್ಯಾಧಿಕಾರಿಗಳ ಕಾರನ್ನು ಉಪಯೋಗ ಮಾಡುತ್ತಿದ್ದರು …

Read More »

ಹಳೆಯ ಗಂಡನ ಪಾದವೇ ಗತಿ…! ಗೂಡಿಗೆ ಮರಳಿದ ಗೌಡರು..!

ಬೆಳಗಾವಿ-ಆಡ ಮುಟ್ಟದ ಸೊಪ್ಪಿಲ್ಲ ಬಾಬಾಗೌಡರು ಸೇರ್ಪಡೆಯಾಗದ ರಾಜಕೀಯ ಪಕ್ಷವೇ ಉಳಿದಿಲ್ಲ. ಎಲ್ಲ ರಾಜಕೀಯ ಪಕ್ಷಗಳಲ್ಲಿ ಸೇರ್ಪಡೆಯಾಗಿ ದೇಶ ಸಂಚಾರ ಮಾಡಿ ಎಲ್ಲ ಪಕ್ಷಗಳಲ್ಲಿ ತೊಂದರೆ ಅನುಭವಿಸಿ ಹಳೆಯ ಗಂಡನ ಪಾದವೇ ಗತಿ ಎಂದು ಖಾತ್ರಿಯಾದ ಮೇಲೆ ಕೇಂದ್ರದ ಮಾಜಿ ಸಚಿವ ಬಾಬಾಗೌಡಾ ಪಾಟೀಲ ಮತ್ತೆ ರೈತ ಸಂಘಣೆಯತ್ತ ಮುಖ ಮಾಡಿದ್ದಾರೆ ಸೋಮವಾರ ನೂರಾರು ರೈತರೊಂದಿಗೆ ಬೆಳಗಾವಿ ನಗರದಲ್ಲಿ ಮೆರವಣಿಗೆ ನಡೆಸಿ ಅಖಂಡ ಕರ್ನಾಟಕ ರೈತ ಸಂಘಟಣೆಯ ಹೆಸರಿನಿಲ್ಲಿ ಪ್ರತಿಭಟನೆ ನಡೆಸಿ …

Read More »

ಬೆಂಕಿಯ ಜ್ವಾಲೆಗೆ ನುಗ್ಗಿ ಅನಾಹುತ ತಪ್ಪಿಸಿದ ರಾಕೇಶ

ಬೆಲಗಾವಿ-ನಗರದ ಟೆಂಗಿನಕರ ಗಲ್ಲಿಯಲ್ಲಿರುವ ಅಂಗಡಿಯಲ್ಲಿ ಸಿಲಿಂಡರ್ ಗ್ಯಾಸ್ ಸೋರಿಕೆಯಿಂದಾಗಿ ಚುರಮರಿ ಅಂಗಡಿಗೆ ಬೆಂಕಿ ತಗಲಿ ಅಪಾರ ಪ್ರಮಾನದ ಹಾನಿಯಾದ ಘಟನೆ ಬಾನುವಾರ ಮಧ್ಯಾಹ್ನ ನಡೆದಿದೆ ರಾಕೇಶ ಪರಶರಾಮ ಶಹಾಪೂರಕರ ಅವರಿಗೆ ಸೇರಿದ ಅಶ್ವಿನಿ ಪರ್ಸನ್ ಅಂಗಡಿಯಲ್ಲಿ ಈ ಬೆಂಕಿ ಅವಘಡ ಸಂಬವಿಸಿದೆ,ಬೆಳಿಗ್ಗೆ ಅಂಗಡಿಯಲ್ಲಿ ಭಜಿ ಮಡಲು ಗ್ಯಾಸ್ ಹೊತ್ತಿಸಿದ ಸಂಧರ್ಭದಲ್ಲಿ ಗ್ಯಾಸ್ ಪೈಪ್ ಲೀಕೇಜ್ ಆಗಿ ಅಂಗಡಿಯಲ್ಲಿ ಬೆಂಕಿ ಹರಡಿದಾಗ ಅಂಡಿಯಲ್ಲಿದ್ದವರು ಹೊರ ಬಂದಿದ್ದಾರೆ ನಂತರ ಭಂಡ ಧೈರ್ಯ ಪ್ರದರ್ಶಿಸಿದ …

Read More »

ಬಲೀ..ಕಾ…ಬಕ್ರಾ ಆದರೂ ಬೆಲೆ ಒಂದೂವರೆ ಲಕ್ಷ..!

ಬೆಳಗಾವಿ- ಬಕ್ರೀದ ಹಬ್ಬದ ಸಂದರ್ಭದಲ್ಲಿ ಕುರಿ ಮತ್ತು ಆಡಿಗೆ ಎಲ್ಲಿಲ್ಲದ ಬೆಲೆ ಇದನ್ನು ಗಮನದಲ್ಲಿಟ್ಟುಕೊಂಡು ಗೋಕಾಕ ತಾಲೂಕಿನ ಪಿಜಿ ಮಲ್ಲಾಪೂರ ಗ್ರಾಮದ ರೈತನೊಬ್ಬ ಸಾಕಿದ ಕಮಲಾಪುರಿ ಜಾತಿಯ ಕುರಿಗೆ ಈಗ ಎಲ್ಲಿಲ್ಲದ ಬೇಡಿಕೆ ಕುರಿಯ ಮಾರಾಟಕ್ಕೆ ರೈತ ನಡೆಸಿದ ಬಹಿರಂಗ ಸವಾಲ್ ನಲ್ಲಿ ಕುರಿಗೆ ಒಂದು ಲಕ್ಷ 20 ಸಾವಿರ ರೂ ದರ ಫಿಕ್ಸ ಆದರೂ ಕುರಿ ಮಾರಾಟವಾಗಿಲ್ಲ ಪಿಜಿ ಮಲ್ಲಾಪೂರ ಗ್ರಾಮದ ರೈತ ಸಾಕಿದ ಮಹಾ ಕುರಿಗೆ ಒಂದೂವರೆ …

Read More »

ಕಮಲದ ಕಾಂತಕ್ಕೆ ಮರಳಾದ ಶಶಿಕಾಂತ, ಶಿವಕಾಂತ….!

ಬೆಳಗಾವಿ ವಿಧಾನಸಭೆ ಚುನಾವಣೆಗೆ ಇನ್ನೂ ಒಂದುವರೆ ವರ್ಷ ಬಾಕಿ ಇದೆ. ಆದರೇ ಈಗಿನಿಂದಲೇ ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯ ದೃವೀಕರಣ ಆರಂಭವಾಗಿದೆ. ಪಕ್ಷಾಂತರದ ಗಾಳಿ ಬಿಸುತ್ತಿದೆ. ಒಂದು ಕಾದಲ್ಲಿ ಕಾಂಗ್ರೆಸ್ ಹೈಕಮಾಂಡ್ ಎಂದೇ ಖ್ಯಾತಿಗಳಿಸಿದ್ದ ಎಸ್.ಬಿ. ಸಿದ್ನಾಳ್ ಅವರ ಕುಟುಂಬ ಇದೀಗ ಕಮಲದ ಕಾಂತಕ್ಕೆ ಆಕರ್ಷಿರಾಗಿದ್ದಾರೆ. ಸಿದ್ನಾಳರ ಇಬ್ಬರು ಸುಪುತ್ರರಾದ ಶಿವಕಾಂತ ಮತ್ತು ಶಶಿಕಾಂತ ಇದೀಗ ಭಾರತೀಯ ಜನತಾ ಪಾರ್ಟಿ ಸೇರುವು ತಯಾರಿ ನಡೆಸಿದ್ದಾರೆ. ಎಸ್. ಬಿ ಸಿದ್ನಾಳ್ ಕಾಂಗ್ರೆಸ್ ಪಕ್ಷದಲ್ಲಿ …

Read More »

ಸಂಸದ ಅಂಗಡಿ ಸೇರಿದಂತೆ ನೂರಾರು ಕಾರ್ಯಕರ್ತರಿಂದ ಪ್ರವೀಣ ಟಕ್ಕಳಕಿಗೆ ಅದ್ದೂರಿ ಸ್ವಾಗತ

ಬೆಳಗಾವಿ-ಮಹಾರಾಷ್ಟ್ರದ ಮಾಲೇಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ವರ್ಷಗಳ ನಂತರ ಜಾಮೀನಿನ ಮೇಲೆ ಹೊರಬಂದಿರುವ ಆರೋಪಿ ಪ್ರವೀಣ ಟಕ್ಕಳಕಿ ಅವರನ್ನು ಭಜರಂಗ ದಳ ವಿವಿಧ ಹಿಂದೂ ಸಂಘಟನೆಗ¼ ನೂರಾರು ಕಾರ್ಯಕರ್ತರು ಸಾಂಬ್ರಾ ನಿಲ್ದಾಣದ ಬಳಿ ಶನಿವಾರ ಅದ್ಧೂರಿಯಾಗಿ ಸ್ವಾಗತಿಸಿದರು. ಸಂಸದ ಸುರೇಶ ಅಂಗಡಿ ಸಹ ವಿಮಾನ ನಿಲ್ದಾಣಕ್ಕೆ ಬಂದು ಪ್ರವೀಣ ಅವರನ್ನು ಬರಮಾಡಿಕೊಂಡರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೋಕಾ (ಮಹಾರಾಷ್ಟ್ರ ಕಂಟ್ರೋಲ್ ಆಫ್ ಕ್ರೈಂ ಆ್ಯಕ್ಟ್) ಕಾಯ್ದೆಯಡಿ ದಾಖಲಿಸಿದ್ದ ಮಹಾರಾಷ್ಟ್ರ ಸರಕಾರದ …

Read More »

ಕುಂದಾ ನಗರಿಯಲ್ಲಿ.. ಕಾವೇರಿ ಅನ್ಯಾಯದ ಆಕ್ರೋಶ

ಬಂದ್ ಮಿಶ್ರ ಪ್ರತಿಭಟನೆ…. ಬೆಳಗಾವಿ- ತಮಿಳು ನಾಡಿಗೆ ನೀರು ಹರಿಸುತ್ತಿರುವುದನ್ನ ವಿರೋಧಿಸಿ ಇವತ್ತು ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮಿಶ್ರ ಪ್ರತ್ರಿಕ್ರಿಯೆ ವ್ಯಕ್ತವಾಗಿದೆ. ಬೆಳಿಗ್ಗೆಯಿಂದ ಬಸ್ ಸಂಚಾರ ಎಂದಿನಂತೆ ಇದ್ದು, ನೆರೆಯ ಗೋವಾ-ಮಹಾರಾಷ್ಟ್ರ ರಾಜ್ಯಗಳಿಗೆ ತೆರಳಬೇಕಿದ್ದ ಬಸ್ ಗಳು ಹಾಗೂ ಜಿಲ್ಲೆಯ ಬೇರೆ ಬೇರೆ ಕಡೆಗಳಿಗೆ ತೆರಳಬೇಕಿದ್ದ ಬಸ್ ಗಳು ಎಂದಿನಂತೆ ಸಂಚರಿಸುತ್ತಿವೆ. ಇನ್ನೂ ಖಾಸಗಿ ಬಸ್ ಸಂಚಾರ, ಅಟೋ ಸಂಚಾರದಲ್ಲೂ …

Read More »

ಗಣೇಶ ವಿಸರ್ಜನೆಗೆ ಕಪಿಲೇಶ್ವರ ಹೊಂಡ..ನೈರ್ಮಲ್ಯ ಕುಂಡ..ರೆಡಿ !

ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತ ಜಿಮ ಪ್ರಭು ಮತ್ತು ಪಾಲಿಕೆ ಅಧಿಕಾರಿಗಳ ತಂಡ ಹಗಲು ರಾತ್ರಿ ಶ್ರಮಿಸಿ ಗಣೇಶ ವಿಸರ್ಜನೆಗಾಗಿ ನಗರದಲ್ಲಿರುವ ಕಪಿಲೇಶ್ವರ ಹೊಂಡ ಸೇರಿದಂತೆ ಎಲ್ಲ ಹೊಂಡಗಳನ್ನು ಸಜ್ಜುಗೊಳಿಸಿದ್ದಾರೆ ಕಪಿಲೇಶ್ವರ ಹೊಂಡ,ಜಕ್ಕನಕೇರಿ ಹೊಂಡ ವಡಗಾಂವಿ ಕೆರೆ ಕಿಲ್ಲಾ ಕೆರೆಉ ಹೊಂಡ ಸೇರಿದಂತೆ ಎಲ್ಲ ಹೊಂಡಗಳು ಗಣೇಶ ವಿಸರ್ಜನೆಗೆ ರೆಡಿಯಾಗಿವೆ ಜೊತೆಗೆ ನಗರದ ವಿವಿಧ ಭಾಗಗಳಲ್ಲಿ ಗಣೇಶ ವಿರ್ಜನೆಗಾಗಿ ನೈರ್ಮಲ್ಯ ಕುಂಡಗಳನ್ನು ಇರಿಸಲಾಗಿದೆ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರ ಮಾರ್ಗದರ್ಶನದಲ್ಲಿ …

Read More »

ಬೆಳಗಾವಿ ವಿಟಿಯು ಕುಲಪತಿ ಹುದ್ದೆಗೆ 80 ಜನ ಆಕಾಂಕ್ಷಿಗಳು

ಬೆಳಗಾವಿ-ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾಲಯ ಆಗಿರುವ ಬೆಳಗಾವಿಯ ವಿಶ್ವೇಶರಯ್ಯ ತಾಂತ್ರಿಕ ವಿಶ್ವವಿದ್ಯಾಲದ ಕುಲಪತಿ ಹುದ್ದೆಗೆ ಒಟ್ಟು 80ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು ಇದೇ ವಾರದಲ್ಲಿ ಕುಲಪತಿ ನೇಮಕ ಆಗಲಿದೆ ಆರ್ಥಿಕವಾಗಿ ಬಲಾಡ್ಯವಾಗಿರುವ ಬೆಳಗಾವಿಯ ವಿಟಿಯು ಕುಲಪತಿ ಹುದ್ದೆಗೆ ಇದೇ ಮೊದಲ ಬಾರಿ 80 ಜನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಅಚ್ಚರಿ ಮೂಡಿಸಿದ್ದಾರೆ ಕುಲಪತಿ ಹುದ್ದೆಗೆ ಬಂದಿರುವ ಅರ್ಜಿಗಳನ್ನು ಪರಶೀನೆ ಮಾಡುವ ಶೋಧನಾ ಸಮೀತಿ 80 ಜನರಲ್ಲಿ ಎಂಟು ಜನರ ಹೆಸರಗಳನ್ನು …

Read More »

ಪ್ರತಿಷ್ಠಾಪಣೆಗೊಳ್ಳುವ ಮೊದಲೇ ವಿಸರ್ಜನೆಗೊಂಡ ವಿನಾಯಕ

ಬೆಳಗಾವಿ-ಬೆಳಗಾವಿ ನಗರದ ಶ್ರೀ ನಗರದಲ್ಲಿ ಸೋಮವಾರ ರಾತ್ರಿ ಶ್ರೀ ಗಣೇಶನ ಮೂರ್ತಿಯನ್ನು ಅಲ್ಲಿಯ ಸಾರ್ವಜನಿಕ ಗಣೇಶ ಉತ್ಸವ ಮಂಡಳದವರು ಪ್ರತಿಷ್ಠಾಪಿಸಲು ತಂದಾಗ ಮೂರ್ತಿ ವೀರೂಪಗೊಂಡ ಹಿನ್ನಲೆಯಲ್ಲಿ ಮಂಡಳದವರು ಮೂರ್ತಿಯನ್ನು ಪ್ರತಿಷ್ಠಾಪಣೆ ಮಾಡದೇ ಈ ಮೂರ್ತಿಯನ್ನು ಮಂಗಳವಾರ ಮಧ್ಯಾಹ್ನ 12 ಘಂಟೆಗೆ ನಗರದ ಕಿಲ್ಲಾ ಕೆರೆಯಲ್ಲಿ ವಿಸರ್ಜನೆ ಮಾಡಿದ ಘಟಣೆ ನಡೆದಿದೆ ವಿರೂಪಗೊಂಡ ಮೂರ್ತಿಯನ್ನು ಮಂಗಳವಾರ ಮಧ್ಯಾಹ್ನ ನಗರದ ಕಿಲ್ಲಾ ಕೆರೆಯಲ್ಲಿ ವಿಸರ್ಜನೆ ಮಾಡಿದ ಶ್ರೀ ನಗರದ ಸಾರ್ವಜನಿಕ ಗಣೇಶ ಮಂಡಳದ …

Read More »