Breaking News

Breaking News

DCM ಮಾಡಲು ಬೆಳಗಾವಿಯಿಂದ ಪತ್ರ ಅಭಿಯಾನ…!!

ಬೆಳಗಾವಿ- ಲೋಕೋಪಯೋಗಿ ಇಲಾಖೆ ಸಚಿವ,ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ,ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ಸತೀಶ್ ಜಾರಕಿಹೊಳಿ ಅವರನ್ನು ಉಪ ಮುಖ್ಯಮಂತ್ರಿ ಮಾಡುವಂತೆ ಬೆಳಗಾವಿ ಜಿಲ್ಲೆಯಲ್ಲಿ ಅವರ ಅಭಿಮಾನಿಗಳು ಕಾಂಗ್ರೆಸ್ ಹೈಕಮಾಂಡ್ ಗೆ ಪತ್ರ ಬರೆಯುವ ಅಭಿಯಾನ ಆರಂಭಿಸಿದ್ದಾರೆ. ಸತೀಶ್ ಜಾರಕಿಹೊಳಿ ಅವರ ಬೆಂಬಲಿಗರು,ಅಭಿಮಾನಿಗಳು, ಹಾಗೂ ಹಲವಾರು ಜನ ಕಾಂಗ್ರೆಸ್ ಪದಾಧಿಕಾರಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ,ಸೋನಿಯಾ ಗಾಂಧಿ,ರಾಹುಲ್ ಗಾಂಧಿ ಹಾಗು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ …

Read More »

ಬೆಳಗಾವಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಗೋಕಾವಿ

ಬೆಳಗಾವಿ- ಬೆಳಗಾವಿ ಸರ್ಕಾರಿ ನೌಕರರ ಸಂಘದ ಪ್ರಭಾರಿ ಅಧ್ಯಕ್ಷರನ್ನಾಗಿ ಶಂಕರ ಗೋಕಾವಿ ಅವರನ್ನು ನೇಮಕ ಮಾಡಿ,ರಾಜ್ಯ ಅಧ್ಯಕ್ಷ ಷಡಕ್ಷರಿ ಅವರು ಆದೇಶ ಹೊರಡಿಸಿದ್ದಾರೆ‌. ಬೆಳಗಾವಿ ಜಿಲ್ಲಾ ನೌಕರರ ಸಂಘದ ಪ್ರಭಾರಿ ಅಧ್ಯಕ್ಷರಾಗಿದ್ದ ಬಸವರಾಜ್ ರಾಯವ್ವಗೋಳ ಅವರು ರಾಜಿನಾಮೆ ನೀಡಿರುವ ಕಾರಣ ಶಂಕರ ಗೋಕಾವಿ ಅವರನ್ನು ಪ್ರಭಾರಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಶಂಕರ ಗೋಕಾವಿ ಅವರು ಲೆಕ್ಕಪರಿಶೋಧನಾ ಮತ್ತು ಲೆಕ್ಕಪತ್ರ ಶಾಖೆಯ ನೌಕರರ ಸಂಘದ ನಿರ್ದೇಶಕರಾಗಿದ್ದರು ಅವರನ್ನು ಬೆಳಗಾವಿ ಜಿಲ್ಲಾ ನೌಕರರ …

Read More »

ನಾಲ್ವರು ಬಾಲಕರು ಸೇರಿಕೊಂಡು ಓರ್ವ ಬಾಲಕನ ಕೊಲೆ ಮಾಡಿದ್ರು…

ಬೆಳಗಾವಿ- ನಾಲ್ವರು ಬಾಲಕರು ಸೇರಿಕೊಂಡು ಓರ್ವ ಬಾಲಕನನ್ನು ತಲವಾರ್ ನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ಪಕ್ಕದ ಮಲ್ಲಾಪೂರ ಗ್ರಾಮದಲ್ಲಿ ನಡೆದಿದೆ. ನಿನ್ನೆ ರಾತ್ರಿ ಗೆಳೆಯರ ಮದ್ಯೆ ವಾಗ್ವಾದ ಆಗಿದೆ.ಇದು ವಿಕೋಪಕ್ಕೆ ಹೋಗಿ ನಾಲ್ಚರು ಬಾಲಕರು ಸೇರಿಕೊಂಡು ಮಲ್ಲಾಪೂರ ಗ್ರಾಮದ 16 ವರ್ಷದ ಪ್ರಜ್ವಲ್ ಸುಂಕದ ಎಂಬಾತನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಪ್ರಜ್ವಲ್ ನನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು ಆದ್ರೆ ಕೊನೆಗೂ …

Read More »

ಬಸ್ ನಿಲ್ಲಿಸು..ನಿಲ್ಲಿಸು..ಅಂತಾ ಚೀರಾಡಿದ್ರೂ ಆ ಚಾಲಕ ಕೇಳಲೇ ಇಲ್ಲ…!!

ಬೆಳಗಾವಿ- ನಿನ್ನೆ ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ರಸ್ತೆ ಜಲಾವೃತಗೊಂಡು ರಸ್ತೆ ಹಳ್ಳವಾಗಿದೆ,ಶಾಲಾ ಮಕ್ಕಳ ಬಸ್ ಚಾಲಕ ಈ ರಸ್ತೆಯಲ್ಲಿ ಬಸ್ ಚಲಾಯಿಸಿ ಪುಂಡಾಟಿಕೆ ಪ್ರದರ್ಶಿಸಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಹುಕ್ಕೇರಿ ತಾಲ್ಲೂಕಿನ ಎಲಿಮುನ್ನೋಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶಾಲಾ ಬಸ್ ಜಲಾವೃತಗೊಂಡ ರಸ್ತೆ ಸಮೀಪ ಬಂದಾಗ,ಅಲ್ಲಿದ್ದ ಸಾರ್ವಜನಿಕರು ಬಸ್ ನಿಲ್ಲಿಸುವಂತೆ ಚೀರಾಡಿದ್ರೂ ಇದನ್ನು ಲೆಕ್ಕಿಸದೇ ಬಸ್ ಜಲಾವೃತ ರಸ್ತೆಯಲ್ಲೇ ಚಲಾಯಿಸಿದ್ದಾನೆ.ಬಸ್ ನೀರಿನಲ್ಲಿ ಸಿಲುಕಿ ಪಲ್ಟಿಯಾಗುವ ಪರಿಸ್ಥಿತಿಗೆ …

Read More »

ಜಿತೋ ಮಹಿಳಾ ಅಧ್ಯಕ್ಷರಾಗಿ ಮಾಯಾ ಜೈನ್‌ ಆಯ್ಕೆ

ಬೆಳಗಾವಿ: ಜೈನ ಇಂಟರ್‌ನ್ಯಾಷನಲ್ ಟ್ರೇಡ್ ಆರ್ಗನೈಜೇಷನ್‌ (ಜಿತೋ) ಮಹಿಳಾ ಘಟಕದ 2023-24ನೇ ಅವಧಿ ಅಧ್ಯಕ್ಷರಾಗಿ ಮಾಯಾ ಜೈನ್‌ ಆಯ್ಕೆಯಾಗಿದ್ದಾರೆ. ಪದಾಧಿಕಾರಿಗಳು ಇಂತಿದ್ದಾರೆ. ಮಮತಾ ಜೈನ್‌ (ಪ್ರಧಾನ ಕಾರ್ಯದರ್ಶಿ), ಶಿಲ್ಪಾ ಶಹಾ (ಖಜಾಂಚಿ), ಸಾರಿಕಾ ಗಾದಿಯಾ (ಉಪಾಧ್ಯಕ್ಷೆ), ಲೀನಾ ಶಹಾ ಮತ್ತು ಮಯೂರಾ ಪಾಟೀಲ (ಸಹ ಕಾರ್ಯದರ್ಶಿ) ಆಯ್ಕೆಯಾಗಿದ್ದಾರೆ. ಪದಗ್ರಹಣ ಸಮಾರಂಭ ಅಕ್ಟೊಬರ್ 2ರಂದು ಬೆಳಿಗ್ಗೆ 10.30 ಗಂಟೆಗೆ ಫೌಂಡ್ರಿ ಕ್ಲಸ್ಟರ್ ಸಭಾಗೃಹದಲ್ಲಿ ನಡೆಯಲಿದ್ದು, ಸಂಸದೆ ಮಂಗಲಾ ಅಂಗಡಿ , ಶಾಸಕ …

Read More »

ಹಣಕಾಸಿನ ವ್ಯವಹಾರ ಓರ್ವನ ಮೇಲೆ ಫೈರೀಂಗ್…

.ಬೆಳಗಾವಿ: ಹಣಕಾಸಿನ ವ್ಯವಹಾರಕ್ಕೆ ಯೋಧರಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿ ರಿವಾಲ್ವರ್ ನಿಂದ ಹಾರಿಸಿದ ಗುಂಡು ಯೋಧನ ಹೊಟ್ಟೆಗೆ ತಗುಲಿ ಗಂಭೀರ ಗಾಯಗೊಂಡ ಘಟನೆ ಗೋಕಾಕ ತಾಲೂಕಿನ ಅಂಕಲಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ನಡೆದಿದೆ. ಗೋಕಾಕ ತಾಲೂಕಿನ ರಾಜನಕುಟ್ಟೆ ಗ್ರಾಮದ ನಂಜುಂಡಿ ಲಕ್ಷ್ಮಣ ಬೂದಿಹಾಳ(32) ಗುಂಡು ಹಾರಿಸಿದ್ದು, ಅದೇ ಗ್ರಾಮದ ಬಸಪ್ಪ ಮೈಲಪ್ಪ ಬಂಬರಗಾ(32) ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇಬ್ಬರೂ ಭಾರತೀಯ ಸೇನೆಯಲ್ಲಿ …

Read More »

ಜನತಾ ದರ್ಶನದಲ್ಲಿ ಊಟದ ವ್ಯವಸ್ಥೆ ಮಾಡಿದ ಕಾಕಾ…!!

ಬೆಳಗಾವಿ-ಒಬ್ಬ ನಾಯಕ ಹೇಗಿರಬೇಕು,ಆತನ ಜವಾಬ್ದಾರಿಗಳೇನು ಅನ್ನೋದನ್ನು ಮಾಜಿ ಸಚಿವ ಪ್ರಕಾಶ್ ಹುಕ್ಕೇರಿಯವರನ್ನು ನೋಡಿ ಕಲಿಯಬೇಕು, ಯಾಕಂದ್ರೆ ಅವರಲ್ಲಿರುವ ಸಾಮಾಜಿಕ ಕಳಕಳಿ ಎಲ್ಲರಿಗೂ ಮಾದರಿ. ಇಂದು ಬೆಳಗಾವಿಯ ಕೆಪಿಟಿಸಿಎಲ್ ಹಾಲ್ ನಲ್ಲಿ ಜನತಾ ದರ್ಶನ ನಡೆಯಿತು,ಬೆಳಗಾವಿ ಜಿಲ್ಲೆಯ ಮೂಲೆ ಮೂಲೆಗಳಿಂದ ಸಾರ್ವಜನಿಕರು ತಮ್ಮ ಅಹವಾಲು ಹೇಳಿಕೊಳ್ಳಲು ಬೆಳಗಾವಿಗೆ ಆಗಮಿಸಿದ್ದರು .ಸರ್ಕಾರದ ದೆಹಲಿಯ ವಿಶೇಷ ಪ್ರತಿನಿಧಿಯಾಗಿರುವ ಪ್ರಕಾಶ್ ಹುಕ್ಕೇರಿ ಅವರು ಜನತಾ ದರ್ಶನದಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಜನರಿಗೆ ಸ್ವಂತ ಖರ್ಚಿನಲ್ಲಿ …

Read More »

ಜನತಾ ದರ್ಶನದಲ್ಲಿ ಸಾರ್ವಜನಿಕರ ದಂಡು….!!

ಬೆಳಗಾವಿ,-ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಬೆಂಗಳೂರಿಗೆ ಅಲೆದಾಡುವುದನ್ನು ತಪ್ಪಿಸಲು ಸ್ಥಳೀಯ ಮಟ್ಟದಲ್ಲಿ ಜನತಾ ದರ್ಶನವನ್ನು ಹಮ್ಮಿಕೊಳ್ಳಲಾಗುತ್ತಿದೆ. ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕರ್ನಾಟಕ ಸರಕಾರದ ನವದೆಹಲಿ ವಿಶೇಷ ಪ್ರತಿನಿಧಿ-2 ಪ್ರಕಾಶ್ ಹುಕ್ಕೇರಿ ಅವರು ಹೇಳಿದರು. ನಗರದ ಕೆಪಿಟಿಸಿಎಲ್ ಸಮುದಾಯ ಭವನದಲ್ಲಿ ಮಂಗಳವಾರ(ಸೆ.26) ನಡೆದ ಜನತಾ ದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜನರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾಡಳಿತವು ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಆದಾಗ್ಯೂ ಜನರ …

Read More »

ಗರ್ಭಿಣಿ, ಬಾಣಂತಿ, ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಬೇಕು

ಬೆಳಗಾವಿ, -ಒಂದು ದೇಶ ಅಭಿವೃದ್ಧಿಯಾಗಬೇಕೆಂದರೆ ಅಲ್ಲಿರುವ ಮಕ್ಕಳು ಆರೋಗ್ಯ, ಪ್ರಜ್ಞಾವಂತ, ದೈಹಿಕವಾಗಿ, ಶಾರೀರಿಕವಾಗಿ ಸದೃಢವಾಗಿರಬೇಕು. ಗರ್ಭಿಣಿ ಹಾಗೂ ಬಾಣಂತಿಯರು ಪೌಷ್ಟಿಕ ಆಹಾರ ಸೇವಿಸಿದಾಗ ಮಾತ್ರ ಆರೋಗ್ಯವಂತ ಮಕ್ಕಳ ಜನನವಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ಸಂರಕ್ಷಣಾ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಕುಮಾರ …

Read More »

ಐದು ಕೋಟಿ ರೂಪಾಯಿ ಅನುದಾನಕ್ಕೆ ಪ್ರಸ್ತಾವನೆ ಕಳಿಸಲು ನಿರ್ಧಾರ- DC

ಬೆಳಗಾವಿ, ಸೆ.): “ಕಳೆದ ವರ್ಷ ಸರಕಾರವು ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದ ಉತ್ಸವವನ್ನಾಗಿ ಘೋಷಿಸಿ ಎರಡು ಕೋಟಿ ರೂಪಾಯಿ ಅನುದಾನ ನೀಡಿತ್ತು. ಅದೇ ರೀತಿ ಈ ಬಾರಿ ಐದು ಕೋಟಿ ರೂಪಾಯಿ ಅನುದಾನ ನೀಡುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಲಾಗುವುದು” ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು. ಕಿತ್ತೂರು ಉತ್ಸವದ ಪೂರ್ವಭಾವಿಯಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ(ಸೆ.26) ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಬಾರಿ ಐದು ಕೋಟಿ ರೂಪಾಯಿ …

Read More »