*ಸೈಬರ್ ನೋವಿಗೆ ಪೋಲೀಸರಿಂದ ಮುಲಾಮು…!!!*
*ವರ್ಷದಲ್ಲೇ ಸಾವಿರ, 309 ದೂರುಗಳಿಗೆ ಸ್ಪಂದನೆ*
*ಬೆಳಗಾವಿ ಸೈಬರ್ ಪೋಲೀಸರಿಗೆ ವಂದನೆ*
ಬೆಳಗಾವಿ-ಪಿಐ ಗಡ್ಡೇಕರ ಅವರು ಬೆಳಗಾವಿ ಸೈಬರ್ ಪೋಲೀಸ್ ಠಾಣೆಗೆ ಬಂದಾಗಿನಿಂದ ಈ ಠಾಣೆಯ ದೂರುದಾರರಿಗೆ ಫಾಸ್ಟ್ ರಿಲೀಫ್ ಸಿಗುತ್ತಿದೆ.ಯಾಕಂದ್ರೆ ಈ ಠಾಣೆಯ ಸಿಬ್ಬಂಧಿಗಳ ಕ್ರಿಯಾಶೀಲತೆಯಿಂದಾಗಿ ಬೆಳಗಾವಿ CEN ಠಾಣೆಯ ಗೋಲ್ಡನ್ ಹಾವರ್ ಈಗ ಶುರುವಾಗಿದೆ.
ಬೆಳಗಾವಿಯ ಸೈಬರ್ ಪೋಲೀಸ್ ಠಾಣೆಯಲ್ಲಿ ಕಳೆದ ಒಂದು ವರ್ಷದಿಂದ 1309 ಸೈಬರ್ ಪ್ರಕರಣಗಳು ದಾಖಲಾಗಿದ್ದವು.ಈ ಪ್ರಕರಣಗಳಿಗೆ ಸಮಂಧಿಸಿದಂತೆ ದೂರುದಾರರು 2 ಕೋಟಿ,45 ಲಕ್ಷ 37 ಸಾವಿರ ರೂ ಹಣವನ್ನು ಕಳೆದುಕೊಂಡಿದ್ದರು.
ಬೆಳಗಾವಿಯ CEN ಪೋಲೀಸರ ಸಮಯ ಪ್ರಜ್ಞೆ,ಕ್ರಿಯಾಶೀಲತೆ,ಜನಪರ ಕಾಳಜಿಯಿಂದಾಗಿ ಕೇವಲ ಒಂದೇ ವರ್ಷದಲ್ಲಿ 1309 ಪ್ರಕರಣಗಳನ್ನು ಭೇದಿಸಿ,1825 ಬ್ಯಾಂಕ್ ಖಾತೆಗಳಲ್ಲಿ ಇದ್ದ 2 ಕೋಟಿ 33 ಲಕ್ಷ ರೂ ಹಣವನ್ನು ಪ್ರೀಜ್ ಮಾಡಿಸಿ,ಈಗಾಗಲೇ 88 ಲಕ್ಷಕ್ಕೂ ಅಧಿಕ ಹಣವನ್ನು ದೂರುದಾರರಿಗೆ ಮರಳಿಸುವಲ್ಲಿ ಬೆಳಗಾವಿಯ ಸೈಬರ್ ಪೋಲೀಸರು ಯಶಸ್ವಿಯಾಗಿದ್ದಾರೆ.
ವಿವಿಧ ಪ್ರಕರಣಗಳಿಗೆ ಸಮಂಧಿಸಿದ ,ಈಗಾಗಲೇ ಪ್ರಿಜ್ ಮಾಡಿಸಿರುವ 1ಕೋಟಿ 44 ಲಕ್ಷ ರೂ ಹಣವನ್ನು ದೂರುದಾರರಿಗೆ ಮರಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.ಈ ಕುರಿತು ಪ್ರಕ್ರಿಯೆಗಳು ಚುರುಕಾಗಿ ನಡೆಯುತ್ತಿವೆ ಎಂದು ಬೆಳಗಾವಿ ಡಿಸಿಪಿ ವಿಕ್ರಂ ಅಮಟೆ ತಿಳಿಸಿದ್ದಾರೆ.
ಬೆಳಗಾವಿಯ CEN ಠಾಣೆಯ ಪೋಲೀಸರು ತೀವ್ರಗತಿಯಲ್ಲಿ ವಂಚನೆ ಪ್ರಕರಣಗಳನ್ನು ಭೇದಿಸಿದ್ದು , ಸೈಬರ್ ವಂಚನೆಯಾದ ಸಂಧರ್ಭದಲ್ಲಿ ತಕ್ಷಣ 112 ಸಂಖ್ಯೆಗೆ ಕಾಲ್ ಮಾಡಿ ದೂರು ನೀಡಬಹುದು.ಇಲ್ಲವಾದಲ್ಲಿ ತಕ್ಷಣ ಸೈಬರ್ ಠಾಣೆಗೆ ದೂರು ನೀಡಿದ್ರೆ ತಮಿಖೆಗೆ ಅನಕೂಲವಾಗುತ್ತದೆ.ವಂಚನೆಯಾದ ಬಳಿಕ ಯಾರು ಎಷ್ಟು ಬೇಗ ದೂರು ಕೊಡ್ತಾರೋ ಅಷ್ಟೇ ಬೇಗ ಪ್ರಕರಣವನ್ನು ಭೇದಿಸಲು ಸಾದ್ಯವಿದೆ.ಇದಕ್ಕೆ ಸೈಬರ್ ಭಾಷೆಯಲ್ಲಿ ಗೋಲ್ಡನ್ ಹಾವರ್ ಅಂತಾರೆ…