ನಕಲಿ ಡ್ರೆಸ್ ಹಾಕೊಂಡು ನಕಲಿ ಪಿಸ್ತೂಲ್ ಇಟ್ಕೊಂಡು ದುಡ್ಡು ದೋಚಿದ ಅಸಲಿ ಖಿಲಾಡಿ ಅಂದರ್…!!
ಬೆಳಗಾವಿ- ಸೇನೆಗೆ ಭರ್ತಿಯಾಗಲು ನಗರದ ಸಿಪಿಎಡ್ ಮೈದಾನದಲ್ಲಿ ರನ್ನೀಂಗ್ ಪ್ರ್ಯಾಕ್ಟೀಸ್ ಮಾಡುವ ಹುಡುಗರನ್ನು ಟಾರ್ಗೇಟ್ ಮಾಡಿ ಮಿಲಿಟರಿ ಅಧಿಕಾರಿಯ ಡ್ರೆಸ್ ಹಾಕಿ ಮಿಲಿಟರಿಯಲ್ಲಿ ಭರ್ತಿ ಮಾಡುವದಾಗಿ ನಂಬಿಸಿ ಹುಡುಗರಿಂದ ಲಕ್ಷಾಂತರ ರೂ ಹಣ ದೋಚಿದ್ದ ಖಿಲಾಡಿಯೊಬ್ಬ ಕ್ಯಾಂಪ್ ಪೋಲೀಸರ ಅತಿಥಿಯಾಗಿದ್ದಾನೆ
ಗರ್ಲಗುಂಜಿ, ಹಾಲಿ ಅನಿಗೋಳದ ನಿವಾಸಿ ಸಾಗರ ಪರಶರಾಮ್ ಪಾಟೀಲ್ ಎಂಬಾತ ಪ್ರತಿ ದಿನ ಮಿಲಿಟರಿ ಅಧಿಕಾರಿಯ ಡ್ರೆಸ್ ಹಾಕಿ ಸಿಪಿಎಡ್ ಮೈದಾನಕ್ಕೆ ಬಂದು ಮೈದಾನದಲ್ಲಿ ರನ್ನೀಂಗ್ ಮಾಡುವ ಹುಡುಗರೊಂದಿಗೆ ತಾನೂ ರನ್ನೀಂಗ್ ಮಾಡಿ ಹೀಗೆ ಓಡಬೇಕು,ಹಾಗೆ ಜಂಪ್ ಮಾಡಬೇಕು ಎಂದು ಹುಡುಗರಿಗೆ ಟ್ರೆನಿಂಗ್ ಕೊಟ್ಟು ಮುಗ್ದ ಹುಡುಗರನ್ನು ಪಟಾಯಿಸಿದ್ದ ನಕಲಿ ಮಿಲಿಟರಿ ಅಧಿಕಾರಿ ಪರಶುರಾಮ ಮಿಲಿಟರಿಯಲ್ಲಿ ನೌಕರಿ ಕೊಡಿಸುವದಾಗಿ ಅನೇಕ ಜನ ಯುವಕರಿಂದ ಲಕ್ಷಾಂತರ ರೂ ದುಡ್ಡು ವಸೂಲಿ ಮಾಡಿ ಪರಾರಿಯಾಗಿದ್ದ
ಪ್ರಕರಣ ದಾಖಲಿಸಿಕೊಂಡ ಕ್ಯಾಂಪ್ ಪೋಲೀಸರು ನಕಲಿ ಮಿಲಿಟರಿ ಅಧಿಕಾರಿಯನ್ನು ಬಂಧಿಸಿ ಆತನಿಂದ ಮಿಲಿಟರಿ ಡ್ರೆಸ್ ಹಾಗು ಎರಡು ನಕಲಿ ಪಿಸ್ತೂಲ್ ಗಳನ್ನು ವಶಪಡಿಸಿಕೊಂಡು ಖಿಲಾಡಿ ಪರಶುರಾಮ್ ಗೆ ಅಸಲಿ ಜೈಲಿಗೆ ಕಳಿಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ