ಬೆಳಗಾವಿ- ಕುರಿಗಳ ಖರೀದಿಗಾಗಿ ಸಾಲ ಕೊಡುವದಾಗಿ ಹೇಳಿ ನಲವತ್ತು ಸಾವಿರ ರೂಪಾಯಿ ಪಾವತಿಸಿಕೊಂಡು ಕುರಿ ಸಾಲ ಕೊಡಲಿಲ್ಲವೆಂದು ಕೆಲವರು ಬಿಕೆ ಕಂಗ್ರಾಳಿ ಗ್ರಾಮದ ಪರಶಿಷ್ಟ ಜಾತಿ ಪರಶಿಷ್ಟ ಪಂಗಡದ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಹಾಗು ಕಾರ್ಯದರ್ಶಿಯ ವಿರುದ್ಧ ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ
ಬೈಲಹೊಂಗಲ ತಾಲೂಕಿನ ಯರಡಾಲ ಗ್ರಾಮದ ರಾಯಪ್ಪ ಶೇಖಪ್ಪ ಪೂಜಾರಿ ಅವರು ಕಂಗ್ರಾಳಿ ಗ್ರಾಮದ ಸಂಘದಲ್ಲಿ ಕುರಿ ಸಾಲಕ್ಕಾಗಿ ಮುಂಗಡವಾಗಿ ೪೦ ಸಾವಿರ ರೂಪಾಯಿಯನ್ನು ಪಾವತಿಸಿದ್ದರು ಆದರೆ ಸಂಘದ ಅದ್ಯಕ್ಷ ಶಿವಾಜಿ ಶಟ್ಯಪ್ಪ ಹರಿಜನ ಹಾಗು ಕಾರ್ಯದರ್ಶಿ ಸಂದೀಪ ಕೋಲಕಾರ ಅವರು ಸಾಲವನ್ನು ಕೊಡದೇ ಪಾವತಿಸಿದ ಹಣ ಕೊಡದೇ ವಂಚನೆ ಮಾಡಿದ್ದಾರೆ ಎಂದು ಯರಡಾಲ ಗ್ರಾಮದ ಪೂಜೇರಿ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ
ಕುರಿ ಸಾಲಕ್ಕಾಗಿ ನಲವತ್ತು ಸಾವಿರ ಕೊಟ್ಟು ಕೈ ಸುಟ್ಟುಕೊಂಡಿರುವ ಯರಡಾಲ ಗ್ರಾಮದ ಈ ಬಡವ ತಾನು ಕೊಟ್ಟ ಹಣ ವಾಪಸ್ ಪಡೆಯಲು ಈಗ ಪರದಾಡುವ ಪರಿಸ್ಥಿತಿ ಬಂದಿದೆ
 ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
				 
		 
						
					 
						
					