ಬೆಳಗಾವಿ- ಚಿಕ್ಕೋಡಿ ಹುಲಿ,ಮೀಸೆ ಮಾವ ಪ್ರಕಾಶ ಹುಕ್ಕೇರಿ ಅವರು ರಾಜಾ ಹುಲಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಎಲ್ಲರ ಗಮನ ಸೆಳೆದಿದ್ದಾರೆ.
ಬೆಳಗಾವಿಯಲ್ಲಿ ಈ ಎರಡೂ ಹುಲಿಗಳ ಭೇಟಿ ಅಚ್ಚರಿ ಬೆಳವಣಿಗೆಗೆ ಕಾರಣವಾಗಿದೆ
ನಿನ್ನೆ ಬೆಳಗಾವಿ ಜಿಲ್ಲಾ ಪ್ರವಾಸದಲ್ಲಿದ್ದ ಸಿಎಂ.
ನಿನ್ನೆಯಿಂದ ಬೆಳಗಾವಿಯ uk27 ಹೋಟೆಲ್ ನಲ್ಲಿ ಉಳಿದುಕೊಂಡಿದ್ದರು
ಇವತ್ತು ಕಾರವಾರ, ಯಲ್ಲಾಪುರ ಮತ್ತ ರಾಣೆಬೆಣ್ಣೂರ ಗೆ ಪ್ರವಾಸ ಬೆಳಸಲಿರುವ ಸಿಎಂ ಅವರನ್ನು ಬೆಳ್ಳಂ ಬೆಳಿಗ್ಗೆ ಪ್ರಕಾಶ ಹುಕ್ಕೇರಿ ಅವರು ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾದರು
ನೆರೆ ಸಂತ್ರಸ್ತರ ಪರಿಹಾರ ವಿಚಾರವಾಗಿ ಮಾತನಾಡಲು ಆಗಮಿಸಿದ್ದೇನೆ ಎಂದು ಮಾದ್ಯಮ ದವರಿಗೆ ಉತ್ತರ ನೀಡಿದ ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ನಗುತ್ತಲೇ ಹೊಟೇಲ್ ಪ್ರವೇಶಿಸಿದರು
ಪ್ರಕಾಶ ಹುಕ್ಕೇರಿ ಅವರ ಭೇಟಿ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಹೊಸ ವ್ಯಾಖ್ಯಾನ ಮಾಡಲಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ