ಸವದತ್ತಿಯ ನವಿಲು ತೀರ್ಥ ಜಲಾಶಯದ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಿಗಳೊಂದಿಗೆ ಗುಪ್ತ ಸಭೆ ನಡೆಸಿದರು. ಆಯ್ದ ಅಧಿಕಾರಿಗಳು ಹೊರತಾಗಿ ಉಳಿದವರಿಗೆ ಪ್ರವೇಶ ನೀಡದಂತೆ ಸೂಚನೆ ಇದ್ದರಿಂದ ಪೊಲೀಸರು ಯಾರನ್ನೂ ಒಳ ಬಿಡಲಿಲ್ಲ. ತಡವಾಗಿ ಬಂದ ಅಧಿಕಾರಿಗಳನ್ನು ಸಹ ಹೊರ ನಿಲ್ಲಿಸಿದರು.
ಒಳ ಹೋಗಲು ಯತ್ನಿಸಿದ ರೈತರು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು. ಈ ವೇಳೆ ವ್ಯಕ್ತಿಯೊಬ್ಬ, ನೀವು ಫೋನ್ ಮಾಡಿದಾಗ ಟ್ಯಾಂಕರ್ ನೀರು ತಂದುಕೊಡುತ್ತೇವೆ. ಈಗ ನಮಗೆ ಒಳಗೆ ಬಿಡುವುದಿಲ್ಲವಾ ಎಂದು ಪೊಲೀಸರಿಗೆ ಕೇಳಿದರು. ಅದಕ್ಕೆ ಪೊಲೀಸ್ ಅಧಿಕಾರಿ, ನೀರು ಕೊಡುವುದೇ ಬೇರೆ. ಇದೇ ಬೇರೆ. ಇದು ನನ್ನ ಕೆಲಸದ ಪ್ರಶ್ನೆ ಎಂದು ಉತ್ತರಿಸಿದರು.
ಬೆಳಗಾವಿ ಡಿಡಿಪಿಐ ಅವರು ದಾಖಲೆ ತೆಗೆದುಕೊಂಡು ಹೋಗಲು ಸಭೆಯಿಂದ ಹೊರ ಬಂದು ಮತ್ತೆ ಒಳಹೋಗಬೇಕೆನ್ನುವಾಗ ಪೊಲೀಸರು ಮತ್ತೆ ತಡೆದರು. ಕೊನೆಗೆ ಡಿಡಿಪಿಐ ಒಳಹೋಗಲು ಪ್ರಯಾಸಪಡಬೇಕಾಯಿತು. ಅರ್ಧ ಗಂಟೆಗೂ ಹೆಚ್ಚು ಕಾಲ ಈ ಪ್ರಹಸನ ನಡೆಯಿತು.
ಮಾದ್ಯಮ ಪ್ರತಿನಿಧಿಗಳಿಗೂ ಸಭೆಯಲ್ಲಿ ಪ್ರವೇಶ ನಿಷೇಧಿಸಲಾಗಿತ್ತು ನೀರಾವರಿ ಇಲಾಖೆ,ನೀರು ಸರಬರಾಜು ಮಂಡಳಿಯ ಅಧಿಕಾರಿಗಳು ಸಭೆಯಿಂದ ಹೊರಗುಳಿದರು
ಸುಮಾರು ಒಂದು ಘಂಟೆ ಕಾಲ ಪೋಲೀಸ್ ಅಧಿಕಾರಿಗಳು ಇನ್ನಿತರ ಇಲಾಖೆಗಳ ಅಧಿಕಾರಿಗಳ ಜತೆ ಪರದಾಡಬೇಕಾಯಿತು