Breaking News

ಸಿಎಂ ಯಡಿಯೂರಪ್ಪನವರಿಗೆ ಈಗ ಡಬಲ್ ಟ್ರಬಲ್…!!!!

ಬೆಳಗಾವಿ- ಈಶ್ವರಪ್ಪನವರು ಬಿಜೆಪಿ ವರಿಷ್ಠರಿಗೆ ಬರೆದಿರುವ ಲವ್ ಲೆಟರ್,ಶಾಸಕ ಬಸನಗೌಡ ಪಾಟೀಲ ಯತ್ನಾಳರ ನಿರಂತರ ವಾಗ್ದಾಳಿ ಗಮನಿಸಿದರೆ ಸಿಎಂ ಬಿ ಎಸ್ ಯಡಿಯೂರಪ್ಪ ಅವರನ್ನು ಬದಲು ಮಾಡುವ,ಅದಲ್ ಬದಲ್ ಕೈಂಚಿ ಕದಲ್ ನಡೆಯುತ್ತಿದೆಯಾ…? ಎನ್ನುವ ಅನುಮಾನ ಈಗ ಶುರುವಾಗಿದೆ..

ಮೇ 2 ರ ನಂತರ ಬಿಜೆಪಿ ನಾಯಕತ್ವ ಬದಲಾವಣೆ ಆಗುತ್ತದೆ ಇದರಲ್ಲಿ ಸಂಶಯವೇ ಇಲ್ಲ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ನೀಡಿದ ಬೆನ್ನಲ್ಲಿಯೇ ಈಶ್ವರಪ್ಪನವರು ಬಿಜೆಪಿ ಹೈಕಮಾಂಡ್ ಗೆ ಬರೆದಿರುವ ಪತ್ರ ಈಗ ಯಡಿಯೂರಪ್ಪನವರ ಸಾಮ್ರಾಜ್ಯದಲ್ಲಿ ಗೂಳಿ ನುಗ್ಗಿದಂತೆ ನುಗ್ಗಿದ್ದು ಬಸನಗೌಡ ಯತ್ನಾಳರ ಹೇಳಿಕೆ ಪುಷ್ಠಿ ನೀಡಿದೆ.

ಉಪ ಚುನಾವಣೆಯ ಬಳಿಕ ಸಿಎಂ ಬಿಎಸ್ ವೈ ಗೆ ಬಿಜೆಪಿ ಹೈಕಮಾಂಡ್ ಟಾಟಾ ಬೈ ಬೈ ಮಾಡಲಿದೆ ಎನ್ನುವ ಸುದ್ಧಿ ಹರಡಿದ್ದು,ಮುಂದಿನ ನಾಯಕ ಯಾರು ? ಎನ್ನುವದಕ್ಕೆ ಬಿಜೆಪಿಯಲ್ಲಿ ಈಗ ಕಿತ್ತಾಟ ಶುರುವಾಗಿದೆ ಎನ್ನುವದು ಪ್ರಚಲಿತ ಬೆಳವಣಿಗೆ ಗಳು ಅದಕ್ಕೆ ಸಾಕ್ಷಿಯಾಗಿವೆ.

ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಕೆಲವು ಶಾಸಕರು,ಸಿಎಂ ಯಡಿಯೂರಪ್ಪ ನವರ ವಿರುದ್ಧ ವಾಗ್ದಾಳಿ ಮಾಡುತ್ತಲೇ ಇದ್ದು ಈಗ ಈಶ್ವರಪ್ಪನವರು ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಮಾಡಿದ್ದಾರೆ.ಆದ್ರೆ ಗೋವಿಂದ ಕಾರಜೋಳ, ಜಗದೀಶ್ ಶೆಟ್ಟರ್ ಸೇರಿದಂತೆ ಇತರ ಬಿಜೆಪಿ ನಾಯಕರು ಸಿಎಂ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಇದೆಲ್ಲ ಬೆಳವಣಿಗಳ ನಡುವೆ ಈಶ್ವರಪ್ಪನವರು ನನ್ನ ಬಳಿಯೂ ಶಾಸಕರಿದ್ದಾರೆ ಎನ್ನುವ ಸಂದೇಶ ರವಾನಿಸಿದ್ದಾರೆ.

ಮುಂದಿನ ನಾಯಕ ಗೋವಿಂದ ಕಾರಜೋಳ ಎನ್ಮುವ ಸುದ್ಧಿ ಹೊಗೆಯಾಡಿದ ಬಳಿಕ ಈಶ್ವರಪ್ಪ ಲೆಟರ್ ಬಾಂಬ್ ಸ್ಪೋಟ ಮಾಡಿದ್ದು,ಬಿಜೆಪಿಯಲ್ಲಿ ನಾಯಕತ್ವದ ಬದಲಾವಣೆಯ ಜೊತೆಗೆ ಮುಂದಿನ ನಾಯಕ ನಾನೇ ಎಂದು ಬಿಂಬಿಸಿಕೊಳ್ಳುವ ಕಾಳಗ ನಡೆದಿರುವದು ಸತ್ಯ….

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *