Breaking News

ಸಿಎಂ ಯಡಿಯೂರಪ್ಪ ಪರವಾಗಿ ಬೆಳಗಾವಿಯಲ್ಲಿ ಭರ್ಜರಿ ಬ್ಯಾಟಿಂಗ್…

ಬೆಳಗಾವಿ-ರಾಜ್ಯದ ಇಬ್ಬರು ಪ್ರಭಾವಿ ಸಚಿವರು ,ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪನವರ ನಡೆಯ ಬಗ್ಗೆ ಅಸಮಾಧಾನ ವ್ಯೆಕ್ತ ಪಡಿಸಿದ್ದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಪರವಾಗಿ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ,ಸಚಿವ ಜಗದೀಶ್ ಶೆಟ್ಟರ್ ಮತ್ತು ಡಿಸಿಎಂ ಗೋವಿಂದ ಕಾರಜೋಳ ಅವರು ಈಶ್ವರಪ್ಪ ಅವರ ನಡೆಯ ಬಗ್ಗೆ ಬೆಳಗಾವಿಯಲ್ಲಿ ಅಸಮಾಧಾನ ವ್ಯೆಕ್ತ ಪಡಿಸಿದ್ದಾರೆ.

ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್ ,ಸಿಎಂ ಬಿಎಸ್‌ವೈ ವಿರುದ್ಧ ರಾಜ್ಯಪಾಲರಿಗೆ ಕೆ.ಎಸ್.ಈಶ್ವರಪ್ಪ ದೂರು ವಿಚಾರ.ಈಶ್ವರಪ್ಪ ಹಿರಿಯ ಸಚಿವರು ಈ ರೀತಿ ಬಹಿರಂಗ ಪತ್ರ ಬರೆಯಬಾರದಿತ್ತು.ಏನಿದ್ದರೂ ರಾಜ್ಯದ ಮುಖ್ಯಮಂತ್ರಿಗಳಿದ್ದಾರೆ.ಅವರ ನಾಯಕತ್ವದಲ್ಲೇ ನಾವೆಲ್ಲಾ ಹೊರಟಿದ್ದೇವೆ.ಸಿಎಂ ಬಿಎಸ್‌ವೈ ಜೊತೆ ಸಮಾಲೋಚನೆ ಮಾಡಬಹುದಿತ್ತು.ಇದನ್ನ ಕ್ಯಾಬಿನೆಟ್‌‌ನಲ್ಲಿ ಪ್ರಸ್ತಾಪಿಸಿ ಎಲ್ಲಾ ಸಚಿವರು ಸೇರಿ ಚರ್ಚಿಸುವುದನ್ನು ಪತ್ರ ಬರೆಯೋದು ಸರಿಯಲ್ಲ.ಎಂದು ಜಗದೀಶ್ ಶೆಟ್ಟರ್ ಅಸಮಾಧಾನ ವ್ಯೆಕ್ತ ಪಡಿಸಿದ್ದಾರೆ.

ಅವರ ಮನಸ್ಸಿನಲ್ಲಿದ್ದನ್ನು ಹೇಳಿದ್ದಾರೆ ಇದು ನಾಲ್ಕು ಗೋಡೆ ಮಧ್ಯೆ ಚರ್ಚೆ ಆಗಬೇಕಿತ್ತು.ಸಚಿವ ಕೆ.ಎಸ್.ಈಶ್ವರಪ್ಪ ಪತ್ರ ಬರೆದಿದ್ದು ಸರಿಯಲ್ಲ.ಆದರೆ ಇದರ ಎಫೆಕ್ಟ್ ಈ ಉಪಚುನಾವಣೆ ಮೇಲೆ ಆಗಲ್ಲ.ಉಪಚುನಾವಣೆಯಲ್ಲಿ ಈ ವಿಷಯ ಚರ್ಚೆ ಆಗಲ್ಲ.ಕಾಂಗ್ರೆಸ್ ಗೆ ಚುನಾವಣೆಯಲ್ಲಿ ಪ್ರಸ್ತಾಪಿಸಲು ಯಾವುದೇ ಇಸ್ಯೂ ಇಲ್ಲ.ಬಿಜೆಪಿ ಬಗ್ಗೆ, ಮೋದಿ ಬಗ್ಗೆ, ನಮ್ಮ ಬಗ್ಗೆ ಮಾತನಾಡಲು ಇಸ್ಯೂ ಇಲ್ಲ.ಹೀಗಾಗಿ ಇಂತಹದ್ದೇನಾದರೂ ಇದ್ರೆ ಅದನ್ನ ದೊಡ್ಡದು ಮಾಡ್ತಾರೆ.ಅದರ ಎಫೆಕ್ಟ್ ಜನರ ಮೇಲೆ ಏನೂ ಆಗಲ್ಲ.ಎಂದು ಜಗದೀಶ್ ಶೆಟ್ಟರ್ ಹೇಳಿದ್ರು

ಉಪಚುನಾವಣೆ ಬಳಿಕ ರಾಜಕೀಯ ಬದಲಾವಣೆ ಎಂಬ ಸತೀಶ್ ಜಾರಕಿಹೊಳಿ‌ ಹೇಳಿಕೆ ವಿಚಾರಕ್ಜೆ ಪ್ರತಿಕ್ರಿಯೆ ನೀಡಿದ ಶೆಟ್ಟರ್ಬಿಎಸ್‌ವೈ ಸಿಎಂ ಆದಾಗಿನಿಂದ ಕಾಂಗ್ರೆಸ್ ನಾಯಕರು ಇದನ್ನೇ ಹೇಳಿಕೊಂಡು ಬಂದಿದಾರೆ.ಸಿಎಂ ಆಗಿ ಬಿಎಸ್‌ವೈ ಮುಂದುವರೀತಾರೆ.ಎಂದುಬೆಳಗಾವಿಯಲ್ಲಿ ಸಚಿವ ಜಗದೀಶ್ ಶೆಟ್ಟರ್ ತಿರಗೇಟು ನೀಡಿದ್ರು.

 

ಡಿಸಿಎಂ ಕಾರಜೋಳ ಹೇಳಿದ್ದು…

ಬೆಳಗಾವಿಯಲ್ಲಿ ಡಿಸಿಎಂ ಗೋವಿಂದ ಕಾರಜೋಳ ಅವರೂ ಮಾದ್ಯಮಗಳ ಜೊತೆ ಮಾತನಾಡಿದ್ರು ಸಚಿವ ಈಶ್ವರಪ್ಪ ಬರೆದಿರುವ ಪತ್ರದ ಬಗ್ಗೆ ಕಾರಜೋಳ ಕೂಡಾ ಅಸಮಾಧಾನ ವ್ಯೆಕ್ತಪಡಿಸಿದರು.ಮುಖ್ಯಮಂತ್ರಿಗಳಿಗೆ ಇರುವ ಪರಮಾಧಿಕಾರವನ್ನ ನಾವು ಯಾರೂ ಪ್ರಶ್ನೆ ಮಾಡುವುದು ಸಾಧುನು ಅಲ್ಲ, ಸೌಜನ್ಯ ವೂ ಅಲ್ಲನಮ್ಮ ಸಚಿವ ಸಂಪುಟದ ಜಸದಸ್ಯರು, ಶಾಸಕರು, ಸಂಸದರು, ಚುನಾಯಿತ ಪ್ರತಿನಿಧಿಗಳು ಯಾರೂ ಕೂಡಾ ಮುಖ್ಯಮಂತ್ರಿ ಪರಮಾಧಿಕಾರ ಪ್ರಶ್ನೆ ಮಾಡುವುದು ಸರಿಯಲ್ಲ ಎಂದು ಕಾರಜೋಳ ಹೇಳಿದ್ರು‌

ಬೆಳಗಾವಿ ಲೋಕಸಭೆ ಚುನಾವಣೆ ಪ್ರಚಾರ ವ್ಯವಸ್ಥಿತವಾಗಿ ನಡೆಯುತ್ತಿದೆ.ನಮ್ಮ ಕಾರ್ಯಕರ್ತರು 8 ಮತಕ್ಷೇತ್ರದಲ್ಲಿ ಕೆಲಸ ಕಾರ್ಯ ಮಾಡುತ್ತಿದ್ದಾರೆ.ಮತದಾರರಿಗೂ ಉತ್ಸಾಹ ಇದೆ.ಬಿಜೆಪಿ ಪಕ್ಷಕ್ಕೆ ಮತಕೊಡಬೇಕು,ಸುರೇಶ್ ಅಂಗಡಿ 20 ಸಂಸದರಾಗಿ, ಮಂತ್ರಿಯಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ,ಅವರ ಧರ್ಮಪತ್ನಿ ಮಂಗಲ ಅಂಗಡಿ ಗೆಲ್ಲಿಸಬೇಕೆಂಬ ಭಾವನೆ ಮತದಾರರಲ್ಲಿ ಇದೆ,ಬೆಳಗಾವಿ ಲೋಕಸಭೆಯಲ್ಲಿ ಖಂಡಿತವಾಗಿಯೂ ಗೆಲ್ಲುತ್ತೇವೆ ಎಂದ ಡಿಸಿಎಂ ಗೋವಿಂದ ಕಾರಜೋಳ ವಿಶ್ವಾದ ವ್ಯೆಕ್ತಪಡಿಸಿದ್ರು.

ಕೆ.ಎಸ.ಈಶ್ವರಪ್ಪನವರಿಗೆ ರಾಜೀನಾಮೆ ಕೊಡುವಂತೆ ಹೈಕಮಾಂಡ್ ಹೇಳಿದೆಯಾ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿ ನಿರ್ದೇಶನದಂತೆ,ಒಮ್ಮತದಿಂದ ಸಚಿವ ಸಂಪುಟ ಕೆಲಸ ಮಾಡುತ್ತಿದೆ.33 ಇಲಾಖೆಗೂ ಮುಖ್ಯಮಂತ್ರಿಗಳು ಅನುದಾನ ಹಂಚಿಕೆ ಮಾಡಿದ್ದಾರೆ.ಸಿಎಂ ಕೊಟ್ಟಿರುವ ಬಜೆಟನಲ್ಲಿ 224 ಮತಕ್ಷೇತ್ರಕ್ಕೂ ಕೇಳಿದಷ್ಟು ಅನುದಾನ ಕೊಡಲು ಸಾಧ್ಯ ಆಗುವುದಿಲ್ಲ.ಹೀಗಾಗಿ ಶಾಸಕರು ,ಸಂಸದರು ನಮ್ಮ ಬಳಿಗೆ ಬಂದಾಗ ಹೇಳ್ತಿವಿ.ನಮಗೆ ಕೊಟ್ಟಿರುವ ಅನುದಾನ ಸಾಕಾಗುವುದಿಲ್ಲ. ಹೆಚ್ಚಿನ ಅನುದಾನ ಬೇಕಾದ್ರೆ ಸಿಎಂ ಅವರನ್ನ ಕೇಳಿ ಅಂತಾ ಹೇಳ್ತಿವಿ,ನಾವೇ ಹತ್ತಾರು ಬಾರಿ ಹೇಳಿದ್ದೇವೆ.ಅದರಂತೆ ಸಿಎಂ ಅವರಿಗೆ ಶಾಸಕರ ಬೇಕು ಬೇಡಗಳನ್ನ ನೋಡಿ ಅನುದಾನ ಕೊಡ್ತಾರೆ ಎಂದು ಡಿಸಿಎಂ ಕಾರಜೋಳ ಹೇಳಿದ್ರು.

ಮುಖ್ಯಮಂತ್ರಿ ಜೊತೆಗೆ ಸಚಿವ ಸಂಪುಟದ ಸದಸ್ಯರು ಒಮ್ಮತದಿಂದ ಕೆಲಸ ಕಾರ್ಯ ಮಾಡಬೇಕು,ಏನೇ ಸಮಸ್ಯೆ ಇದ್ದರು ಸಂಪುಟದ ಕ್ಯಾಬಿನೆಟ್ ಹಾಲಿನಲ್ಲಿ ಚರ್ಚೆ ಮಾಡಿ ಪರಿಹರಿಸಿಕೊಳ್ಳಬೇಕು,ಮುಸುಕಿನ ಗುದ್ದಾಟ ಏನು ಅಲ್ಲಅವರು ಯಾವ ವಿಚಾರ ಇಟ್ಟುಕೊಂಡು ಪತ್ರ ಬರೆದಿರುವುದು ಗೊತ್ತಿಲ್ಲ. ನಾನು ಅವರೊಂದಿಗೆ ಚರ್ಚೆ ಮಾಡಿಲ್ಲ,ಒಂದು ಸರ್ಕಾರ ವಾಗಿ ಒಗ್ಗಟ್ಟಿನಿಂದ, ಒಮ್ಮತದಿಂದ ಕೆಲಸ ಮಾಡಬೇಕು.ಮುಖ್ಯಮಂತ್ರಿ ನಿರ್ದೇಶನದಂತೆ ಕೆಲಸ ಮಾಡಬೇಕು ಎಂದು ಕಾರಜೋಳ ಹೇಳಿದ್ರು

ಕಾಂಗ್ರೆಸನವರಿಗೆ ಬೇರೆ ಮಾಡಲು ಕೆಲಸವಿಲ್ಲ,ಹಗರಣ ಆಗಿದೆ ಎಂದು ಸುಳ್ಳು ಆರೋಪದಿಂದ ಅವರು ಏನು ಸಾಧಿಸಲು ಆಗುವುದಿಲ್ಲ ಎಂದು ಕಾರಜೋಳ ಡಿಕೆಶಿ ಗೆ ಟಾಂಗ್ ಕೊಟ್ಟರು.

Check Also

ಬಸವರಾಜ ಹೊರಟ್ಟಿ ಅವರ ಪಟ್ಟಿಯಲ್ಲಿ ಎಂಈಎಸ್ ನಿಷೇಧದ ವಿಚಾರವೂ ಸೇರಲಿ- ಕರವೇ

ಬೆಳಗಾವಿ -ನಾಳೆಯಿಂದ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ವಾರದಲ್ಲಿ ಎರಡು ದಿನ ಉತ್ತರ ಕರ್ನಾಟಕ ಪ್ರದೇಶದ ಅಭಿವೃದ್ಧಿಯ ಕುರಿತು ಚರ್ಚೆಗೆ …

Leave a Reply

Your email address will not be published. Required fields are marked *