ಬೆಳಗಾವಿ-ಮುಖ್ಯಮಂತ್ರಿ ಯಡಿಯೂರಪ್ಪ ನವರು ಇವತ್ತು ಬೆಳ್ಳಂ ಬೆಳಿಗ್ಗೆ ಬೆಳಗಾವಿಯ ಮಠಗಳಿಗೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.
ಬೆಳಗಾವಿಯ ನಾಗನೂರ ಮಠ,ಹಿರೇಮಠ ಸೇರಿದಂತೆ ವಿವಿಧ ಮಠಗಳಿಗೆ ಸಿಎಂ ಭೇಟಿ ನೀಡಿದರು.ಹುಕ್ಕೇರಿ ಹಿರೇಮಠದಲ್ಲಿ ನಡೆದ,ಧನ್ವಂತರಿ ಸುದರ್ಶನ ಹೋಮದಲ್ಲಿ ಸಿಎಂ ಭಾಗಿಯಾದರು.ಬೆಳಗಾವಿಯ ಹುಕ್ಕೇರಿ ಹಿರೇಮಠದಲ್ಲಿ ಹೋಮ ನಡೆಯುತ್ತಿದೆ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಹೋಮ ನಡೆಯುತ್ತಿದೆ
ವಿದ್ವಾನ್ ಚಂದ್ರಶೇಖರಯ್ಯ, ವಿದ್ವಾನ್ ಸಂಪತ್ ಕುಮಾರಯ್ಯ ಅವರು ಹೋಮ ನಡೆಸುತ್ತಿದ್ದಾರೆ.ಆರೋಗ್ಯ ವೃದ್ಧಿ, ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಹೋಮ ಮಾಡಲಾಗುತ್ತಿದೆ ಲೋಕಕಲ್ಯಾಣಕ್ಕೆ ಪ್ರಾರ್ಥಿಸಿ ಸಿಎಂ ಹೋಮದಲ್ಲಿ ಪಾಲ್ಗೊಂಡರು. ಸಿಎಂಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವ ಜಗದೀಶ್ ಶೆಟ್ಟರ್ ಸಾಥ್ ನೀಡಿದರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ