ಬೆಳಗಾವಿ ವಿಧಾನಸಭೆ ಚುನಾವಣೆಗೆ ಇನ್ನೂ ಒಂದುವರೆ ವರ್ಷ ಬಾಕಿ ಇದೆ. ಆದರೇ ಈಗಿನಿಂದಲೇ ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯ ದೃವೀಕರಣ ಆರಂಭವಾಗಿದೆ. ಪಕ್ಷಾಂತರದ ಗಾಳಿ ಬಿಸುತ್ತಿದೆ. ಒಂದು ಕಾದಲ್ಲಿ ಕಾಂಗ್ರೆಸ್ ಹೈಕಮಾಂಡ್ ಎಂದೇ ಖ್ಯಾತಿಗಳಿಸಿದ್ದ ಎಸ್.ಬಿ. ಸಿದ್ನಾಳ್ ಅವರ ಕುಟುಂಬ ಇದೀಗ ಕಮಲದ ಕಾಂತಕ್ಕೆ ಆಕರ್ಷಿರಾಗಿದ್ದಾರೆ. ಸಿದ್ನಾಳರ ಇಬ್ಬರು ಸುಪುತ್ರರಾದ ಶಿವಕಾಂತ ಮತ್ತು ಶಶಿಕಾಂತ ಇದೀಗ ಭಾರತೀಯ ಜನತಾ ಪಾರ್ಟಿ ಸೇರುವು ತಯಾರಿ ನಡೆಸಿದ್ದಾರೆ. ಎಸ್. ಬಿ ಸಿದ್ನಾಳ್ ಕಾಂಗ್ರೆಸ್ ಪಕ್ಷದಲ್ಲಿ ಅತ್ಯಂತ ಪ್ರಭಾವಿ ನಾಯಕರಾಗಿದ್ದರು. ವಿಜಯ ಸಂಕೇಶ್ವರ ಅವರ ಜತೆಗೆ ಸೇರಿ ಕನ್ನಡ ನಾಡು ಪಕ್ಷ ಕಟ್ಟಿ ಕೈ ಸುಟ್ಟುಕೊಂಡಿದ್ದರು. ಕೆಟ್ಟಿ ಮೇಲೆ ಬುದ್ದಿ ಬಂತು ಎಂದು ಹಳೇಯ ಗಂಡನ ಪಾದವೇ ಗತಿಯೆಂದು ಮತ್ತೆ ಮೂಲ ಪಕ್ಷಕವಾದ ಕಾಂಗ್ರೆಸಗೆ ಸೇರ್ಪಡೆಯಾಗಿದ್ದರು.
ಇದೀಗ ಕಾಂಗ್ರೆಸ್ ಪಕ್ಷದಲ್ಲಿ ಇವರಿಗೆ ಸಿಗಬೇಕಾದ ಗೌರವ ಸಿಗದೇ ಇರೊದರಿಂದ ಬಿಜೆಪಿ ನಾಯಕ ವಿಜಯ ಸಂಕೇಶ್ವರ ಮೂಲಕ ಮಕ್ಕಳನ್ನು ಬಿಜೆಪಿಗೆ ಸೇರಿಸಲು ನಡೆಸಿರುವ ಪ್ರತಯ್ನ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಹಿರಿಯ ಪುತ್ರ ಶಶಿಕಾಂತ್ ನನ್ನು ಬಿಜೆಪಿಯಿಂದ ಬೆಳಗಾವಿ ಉತ್ತರ ಮತಕ್ಷೇತ್ರದಿಂದ ಕಣಕ್ಕೆ ಇಳಿಸುವ ತಂತ್ರವನ್ನು ಜಿಲ್ಲೆಯ ರಾಜಕೀಯ ಹಿರಿಯ ಅಜ್ಜ ಸಿದ್ನಾಳ್ ರೂಪಿಸಿದ್ದಾರೆ. ಒಂದು ಕಡೆ ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ, ಸತೀಶ್ ಜಾರಕಿಹೊಳಿ ಮತ್ತು ಅವರ ಪಡೆ ಜೆಡಿಎಸ್ ಸೇರುವ ತಯಾರಿ ಮಾಡಿಕೊಂಡಿದೆ. ಕಾಲ ಪಕ್ವವಾದಾಗ ಸತೀಶ್ ಜಾರಕಿಹೊಳಿ ಮತ್ತು ಉಮೇಶ್ ಕತ್ತಿ ಗೌಡರ ಪಾಳೆಯದಲ್ಲಿ ಗುರುತಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ರಾಜ್ಯ ರಾಜಕಾರಣದ ದಿಕ್ಸೂಚಿಯನ್ನೆ ಅದಲು ಬದಲು ಮಾಡುವಷ್ಟು ರಾಜಕೀಯ ಶಕ್ತಿ ಹೊಂದಿರುವ ಗಡಿ ನಾಡ ಬೆಳಗಾವಿ ಜಿಲ್ಲೆಯಲ್ಲಿ ಬದಲಾವಣೆಯ ಗಾಳಿ ಬಿಸುತ್ತಿದೆ. ಮುಂದೆ ಇದು ಯಾವ ಮಟ್ಟಕ್ಕೆ ತಿರುಗಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
Check Also
ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ
ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ